ವೋಟರ್ ಐಡಿಗೆ ನಿಮ್ಮ ಫೋನ್ ನಂಬರ್ ಲಿಂಕ್ ಮಾಡಿಕೊಳ್ಳಿ! ಈ ಸುಲಭ ವಿಧಾನ ಅನುಸರಿಸಿ
ಭಾರತದಲ್ಲಿ 18 ವರ್ಷ ತುಂಬಿದ ಎಲ್ಲಾ ಪ್ರಜೆಗಳ ಹತ್ತಿರ ವೋಟರ್ ಐಟಿ ಅಥವಾ ಮತದಾರರ ಗುರುತಿನ ಚೀಟಿ ಇರಬೇಕು. ಇದು ನಮ್ಮೆಲ್ಲರ ಹಕ್ಕು. ವೋಟರ್ ಐಡಿ ಇಲ್ಲದೇ ಯಾವುದೇ ಎಲೆಕ್ಷನ್ ನಡೆದರೂ ಕೂಡ ನಾವು ಮತ ಹಾಕುವುದಕ್ಕೆ ಸಾಧ್ಯ ಆಗುವುದಿಲ್ಲ.
ವೋಟರ್ ಐಡಿಯನ್ನು ನಾವು ಮತ ಹಾಕುವುದಕ್ಕೆ ಮಾತ್ರವಲ್ಲದೇ ಇನ್ನು ಬೇರೆ ಕೆಲಸಗಳಿಗೆ ಕೂಡ ಬಳಸಿಕೊಳ್ಳಬಹುದು. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಬೇಕಾಗುತ್ತದೆ. ಹಾಗಾಗಿ ಇದು ಪ್ರಮುಖವಾದ ದಾಖಲೆ ಆಗಿದೆ.
ಹೊಸ ವೋಟರ್ ಐಡಿ ಗೆ ಈ ರೀತಿ ಅರ್ಜಿ ಸಲ್ಲಿಸಿ:
ಕೆಲವರು ಇನ್ನು ಕೂಡ ವೋಟರ್ ಐಡಿ ಮಾಡಿಸಿಕೊಂಡಿರುವುದಿಲ್ಲ. ಇನ್ನು ಕೆಲವರು ವೋಟರ್ ಐಡಿ ಮಾಡಿಸಿದ್ದರು ಸಹ, ಅದನ್ನು ಕಳೆದುಕೊಂಡಿರುತ್ತಾರೆ. ಅಂಥ ಪರಿಸ್ಥಿತಿಯಲ್ಲಿ ಇರುವವರು ಹೊಸದಾಗಿ ವೋಟರ್ ಐಡಿ ಪಡೆಯಲು ಅರ್ಜಿ ಸಲ್ಲಿಸಬೇಕು. ಸರ್ಕಾರದಿಂದಲೇ ಅಧಿಕೃತವಾಗಿ ನಿಮಗೆ ವೋಟರ್ ಐಡಿಯನ್ನು ಮಾಡಿಕೊಡಲಾಗುತ್ತದೆ. ಒಂದು ವೇಳೆ ನೀವಿನ್ನು ವೋಟರ್ ಐಡಿ ಮಾಡಿಸಿಲ್ಲ ಎಂದರೆ, ಹೇಗೆ ಮಾಡಿಸೋದು ಎಂದು ಇಂದು ತಿಳಿಯೋಣ..
1940ರಲ್ಲಿ ಅಂದ್ರೆ 80 ವರ್ಷದ ಹಿಂದೆ ಎಷ್ಟಿತ್ತು ಗೊತ್ತಾ ವಿದ್ಯುತ್ ಬಿಲ್? ಹಳೆಯ ಕರೆಂಟ್ ಬಿಲ್ ವೈರಲ್
ಈಗ ವೋಟರ್ ಐಡಿ ಮಾಡಿಸುವುದು ಬಹಳ ಸುಲಭ. ಮೊದಲೆಲ್ಲಾ ವೋಟರ್ ಐಡಿ ಮಾಡಿಸಬೇಕು ಎಂದರೆ ಸರ್ಕಾರಿ ಕಛೇರಿಗಳಿಗೆ ಅಲೆದಾಡಬೇಕಿತ್ತು, ಆದರೆ ಈಗ ಆ ರೀತಿ ಇಲ್ಲ. ಸುಲಭವಾಗಿ ಆನ್ಲೈನ್ ಮೂಲಕ ಹೊಸದಾಗಿ ವೋಟರ್ ಐಡಿ ಮಾಡಿಸಲು ಅರ್ಜಿ ಸಲ್ಲಿಸಬಹುದು.
ಹೊಸದಾಗಿ ವೋಟರ್ ಐಡಿ ಮಾಡಿಸಬೇಕು ಎಂದರೆ, WWW.NVSP.IN ಈ ಲಿಂಕ್ ಗೆ ಭೇಟಿ ನೀಡಿ, ನಿಮ್ಮ ಇಮೇಲ್ ಐಡಿ ಮೂಲಕ ಲಾಗಿನ್ ಮಾಡಿ, ಇಲ್ಲಿ ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಬಹುದು.
ಫೋನ್ ನಂಬರ್ ಲಿಂಕ್ ಮಾಡಿ:
ವೋಟರ್ ಐಡಿ ಇದ್ದು, ಫೋನ್ ನಂಬರ್ ಲಿಂಕ್ ಮಾಡಬೇಕು ಎಂದರೆ, ಈ ರೀತಿ ಮಾಡಿ. ಮೇಲೆ ತಿಳಿಸಿರುವ ಲಿಂಕ್ ಓಪನ್ ಮಾಡಿ, ಅದರಲ್ಲಿ ಎಲೆಕ್ಟೊರಲ್ ರೋಲ್ ಸರ್ಚ್ ಎನ್ನುವ ಆಯ್ಕೆ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಬೇಕು ಎಂದರೆ, ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು, ಡೇಟ್ ಆಫ್ ಬರ್ತ್ ಅಥವಾ ಬೇರೆ ಮಾಹಿತಿ ಹಾಕಿ ಚೆಕ್ ಮಾಡಬಹುದು. ಇದೆಲ್ಲಾ ಆದ ನಂತರ EPIC ನಂಬರ್ ಹಾಕಿ, ಕ್ಯಾಪ್ಚ ಕೋಡ್ ಎಂಟರ್ ಮಾಡಿ, ನಿಮ್ಮ ಫೋನ್ ನಂಬರ್ ಹಾಕಿ, ಈಗ ನಿಮ್ಮ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ.
ಓಟಿಪಿ ಹಾಕಿದ ಬಳಿಕ, ನಿಮ್ಮ ವೈಯಕ್ತಿಕ ಮಾಹಿತಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದರೆ ಅದನ್ನು ಮಾಡಬಹುದು. ವೋಟರ್ ಐಡಿ ಪಡೆಯುವುದಕ್ಕೆ ಆ ವ್ಯಕ್ತಿಗೆ ಕಡ್ಡಾಯವಾಗಿ 18 ವರ್ಷ ತುಂಬಿರಬೇಕು.
ಅರ್ಜಿ ಹಾಕುವ ವ್ಯಕ್ತಿ, ಕರ್ನಾಟಕದಲ್ಲಿ ಹುಟ್ಟಿ ಬೆಳೆದವರೇ ಆಗಿರಬೇಕು, ವಯಸ್ಸನ್ನು ಖಚಿತಪಡಿಸುವುದಕ್ಕೆ 10ನೇ ತರಗತಿ ಮಾರ್ಕ್ಸ್ ಕಾರ್ಡ್ ಕೊಡಬೇಕು. 18 ವರ್ಷ ತುಂಬಿದ ಬಳಿಕ ವೋಟರ್ ಐಡಿ ಪಡೆದುಕೊಳ್ಳಲೇಬೇಕು.
Link your phone number to Voter ID, Follow this easy method