1940ರಲ್ಲಿ ಅಂದ್ರೆ 80 ವರ್ಷದ ಹಿಂದೆ ಎಷ್ಟಿತ್ತು ಗೊತ್ತಾ ವಿದ್ಯುತ್ ಬಿಲ್? ಹಳೆಯ ಕರೆಂಟ್ ಬಿಲ್ ವೈರಲ್
ಇದೀಗ 1940ರ ವಿದ್ಯುತ್ ಬಿಲ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಹೋಟೆಲ್ ಬಿಲ್ (Hotel Bill), ಚಿನ್ನದ ಬಿಲ್ (Gold Purchase), ಸೈಕಲ್ ಬಿಲ್ ವೈರಲ್ ಆಗಿತ್ತು
ಸೋಷಿಯಲ್ ಮೀಡಿಯಾದಲ್ಲಿ ಈಗ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ನಮ್ಮ ದೇಶದಲ್ಲಿ ದಿನನಿತ್ಯ ಬಳಕೆ ಮಾಡುವ ವಸ್ತುಗಳು ಹಾಗು ಎಲ್ಲಾ ವಸ್ತುಗಳ ಬೆಲೆ ಕೂಡ ಏರಿಕೆ ಆಗುತ್ತಲೇ ಇರುವ ಕಾರಣ, ಹೆಚ್ಚಿನ ಜನರು ಜೀವನ ನಡೆಸುವುದಕ್ಕೆ ಕಷ್ಟ ಪಡುವ ಹಾಗೆ ಆಗಿದೆ ಎಂದರೂ ತಪ್ಪಲ್ಲ.
ರಾಜ್ಯದಲ್ಲಿ ಈಗ ಗೃಹಜ್ಯೋತಿ ಯೋಜನೆ (Gruha Jyothi Yojana) ಜಾರಿಗೆ ಬಂದು, ವಿದ್ಯುತ್ ಉಚಿತವಾಗಿದೆ. ಆದರೆ ಎಲ್ಲರೂ ಕೂಡ ಈ ಯೋಜನೆಗೆ ಅರ್ಹತೆ ಹೊಂದಿಲ್ಲ. ಹಲವರು ಈಗಲೂ ವಿದ್ಯುತ್ ಬಿಲ್ (Electricity Bill) ಕಟ್ಟುತ್ತಿದ್ದಾರೆ.
ವಿದ್ಯುತ್ ಬೆಲೆ ಕೂಡ ಜಾಸ್ತಿ ಆಗಿರುವ ಕಾರಣ ಇದು ಒಂದು ರೀತಿ ಜನರಿಗೆ ಹೊರೆಯೇ ಆಗಿದೆ. ಈಗೇನೋ ವಿದ್ಯುತ್ ಬಿಲ್ ಇಷ್ಟು ಜಾಸ್ತಿ ಆಗಿದೆ. ಆದರೆ 1940ರಲ್ಲಿ ಅಂದರೆ 83 ವರ್ಷಗಳ ಹಿಂದೆ, ಸ್ವಾತಂತ್ಯ್ರ ಪೂರ್ವ ಕಾಲದಲ್ಲಿ ವಿದ್ಯುತ್ ಬಿಲ್ (Electricity Bill) ಎಷ್ಟಿತ್ತು ಗೊತ್ತಾ?
1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಚಾಕಲೇಟ್ ಬೆಲೆ! ವೈರಲ್ ಆಯ್ತು ಚಿನ್ನ ಖರೀದಿ ಬಿಲ್
ಇದೀಗ 1940ರ ವಿದ್ಯುತ್ ಬಿಲ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಹೋಟೆಲ್ ಬಿಲ್ (Hotel Bill), ಚಿನ್ನದ ಬಿಲ್ (Gold Purchase), ಸೈಕಲ್ ಬಿಲ್ ವೈರಲ್ ಆಗಿತ್ತು. ಇದೀಗ 1940ರ ವಿದ್ಯುತ್ ಬಿಲ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈಗ ಗೃಹಜ್ಯೋತಿ ಯೋಜನೆ (Free Electricity) ಜಾರಿಯಲ್ಲಿದ್ದರು ಸಹ ಎಲ್ಲರಿಗೂ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಹಲವಾರು ಜನರು ಸರ್ಕಾರದ ಲಿಮಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಕಾರಣ ಅವರುಗಳು ವಿದ್ಯುತ್ ಬಿಲ್ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ.
ಈಗಿನ ಕಾಲದಲ್ಲಿ ಎಸಿ, ಫ್ರಿಜ್ ಹೀಗೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ಕಾರಣ ವಿದ್ಯುತ್ ಬಿಲ್ 1000 ಇಂದ 2000 ವರೆಗೂ ಬರುತ್ತಿದೆ. ಬೇಸಿಗೆ ಕಾಲದಲ್ಲಿ ವಿದ್ಯುತ್ ಬಿಲ್ ಜಾಸ್ತಿಯೇ ಇರುತ್ತದೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ಜನರು ಈಗ ಹೆಚ್ಚು ವಿದ್ಯುತ್ ಬಿಲ್ ಪಾವತಿ ಮಾಡುತ್ತಿದ್ದಾರೆ.
1934ರ ಸೈಕಲ್ ಬಿಲ್ ವೈರಲ್! ಆಗ ಬೆಲೆ ಎಷ್ಟಿತ್ತು ಗೊತ್ತಾ? ಆಗಿನ ಕಾಲವೇ ಚೆನ್ನಾಗಿತ್ತು ಅಂತೀರ!
ಆದರೆ ಹಿಂದಿನ ಕಾಲದಲ್ಲಿ ವಿದ್ಯುತ್ ಗೆ ಇಷ್ಟೊಂದು ಬೆಲೆ ಇರಲಿಲ್ಲ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ, 1940ರ ಸಮಯದ ವಿದ್ಯುತ್ ಬಿಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಡೀ ತಿಂಗಳು ವಿದ್ಯುತ್ ಬಳಕೆ ಮಾಡಿರುವುದಕ್ಕೆ ಆಗಿನ ಕಾಲದಲ್ಲಿ ಬಂದಿರುವ ವಿದ್ಯುತ್ ಬಿಲ್ ಕೇವಲ 5 ರೂಪಾಯಿಗಳು.
ಈ ವಿದ್ಯುತ್ ಬಿಲ್ ನ ಮೊತ್ತ ನೋಡಿ ನೆಟ್ಟಿಗರು ಆಶ್ಚರ್ಯಪಟ್ಟಿದ್ದು, 83 ವರ್ಷಗಳ ಹಿಂದೆ ಇಷ್ಟು ಕಡಿಮೆ ಹಣಕ್ಕೆ ವಿದ್ಯುತ್ ಲಭ್ಯವಿತ್ತಾ ಎಂದು ಶಾಕ್ ಆಗಿದ್ದಾರೆ.
ಅಷ್ಟಕ್ಕೂ ಈ ಬಿಲ್ ಉತ್ತರ ಭಾರತದ ಮಹಾರಾಷ್ಟ್ರ ರಾಜ್ಯದ ಬಾಂಬೆಗೆ ಸೇರಿದ್ದಾಗಿದ್ದು, ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾಮ್ ವೇ ಕಂಪನಿ ಲಿಮಿಟೆಡ್ ಇಲ್ಲಿಗೆ ಸೇರಿದ ಬಿಲ್ ಇದಾಗಿದೆ. ಈ ಬಿಲ್ ನಲ್ಲಿ ಇಡೀ ತಿಂಗಳಿಗೆ 3.10 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ, ಇಷ್ಟು ವಿದ್ಯುತ್ ಗೆ 5.2% ಟ್ಯಾಕ್ಸ್ ಸೇರಿಸಲಾಗಿದೆ.
ಹಾಗೆಯೇ ಈ ಬಿಲ್ ಗಳನ್ನು ಕೈಯಲ್ಲಿ ಬರೆಯುತ್ತಿದ್ದರು ಎನ್ನುವುದು ಮತ್ತೊಂದು ವಿಶೇಷ ಆಗಿದೆ. ಈಗ ಮಶಿನ್ ನಲ್ಲಿ ಬಿಲ್ ಬರುತ್ತಿದೆ. ಆದರೆ ಆಗ ಕೈಯಲ್ಲೇ ಬರೆಯುತ್ತಿದ್ದರು. ಹಲವು ರೀತಿಯಲ್ಲಿ ವಿಭಿನ್ನವಾಗಿರುವ ಈ ಬಿಲ್ ಈಗ ಸಿಕ್ಕಾಪಟ್ಟೆ ವೈರಲ್ (Goes viral) ಆಗಿದೆ.
Do you know how much electricity bill was in 1940, the Old electricity bill Goes viral