Vastu Tips: ಡೈನಿಂಗ್ ಟೇಬಲ್ ಮೇಲೆ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಇಡಬೇಡಿ! ವಾಸ್ತು ದೋಷಕ್ಕೆ ಕಾರಣವಾಗಬಹುದು

Story Highlights

Vastu Tips: ಡೈನಿಂಗ್ ಟೇಬಲ್‌ಗೆ ಸಂಬಂಧಿಸಿದ ಕೆಲವು ತಪ್ಪುಗಳು ಮನೆಯ ವಾಸ್ತು ದೋಷಗಳನ್ನು ಹೆಚ್ಚಿಸಬಹುದು ಮತ್ತು ಕುಟುಂಬ ಸದಸ್ಯರನ್ನು ಅನಾರೋಗ್ಯಕ್ಕೆ ಒಳಪಡಿಸಬಹುದು.

Vastu Tips: ಡೈನಿಂಗ್ ಟೇಬಲ್‌ಗೆ (Dining Table) ಸಂಬಂಧಿಸಿದ ಕೆಲವು ತಪ್ಪುಗಳು ಮನೆಯ ವಾಸ್ತು ದೋಷಗಳನ್ನು (Vastu Dosh) ಹೆಚ್ಚಿಸಬಹುದು ಮತ್ತು ಕುಟುಂಬ ಸದಸ್ಯರನ್ನು ಅನಾರೋಗ್ಯಕ್ಕೆ ಒಳಪಡಿಸಬಹುದು. ಅದಕ್ಕಾಗಿಯೇ ಊಟ ಮಾಡುವಾಗ ಕೆಲವು ವಿಶೇಷ ವಿಷಯಗಳನ್ನು ನೋಡಿಕೊಳ್ಳಬೇಕು, ಇದರಿಂದ ಡೈನಿಂಗ್ ಟೇಬಲ್ ವಾಸ್ತು ದೋಷಗಳಿಂದ (Dining Table Vastu) ಮುಕ್ತವಾಗಿರುತ್ತದೆ.

ಹೌದು ಸ್ನೇಹಿತರೆ, ಮನೆಯ ಡೈನಿಂಗ್ ಟೇಬಲ್ ಮೇಲೆ ಇಟ್ಟಿರುವ ಕೆಲವು ವಸ್ತುಗಳು ಮನೆಯ ವಾಸ್ತುವನ್ನು ಕೆಡಿಸುತ್ತವೆ, ಇದರಿಂದಾಗಿ ಮನೆಯ ಸದಸ್ಯರು ಅನೇಕ ಬಾರಿ ಆರೋಗ್ಯ, ಆರ್ಥಿಕ ಸ್ಥಿತಿ, ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಹಾಗಾದ್ರೆ ಡೈನಿಂಗ್ ಟೇಬಲ್ ಮೇಲೆ ಏನನ್ನು ಇಡಬೇಕು ಮತ್ತು ಏನನ್ನು ಇಡಬಾರದು ಎಂದು ತಿಳಿಯೋಣ?

ಔಷಧಗಳು

ಮನೆಯ ಡೈನಿಂಗ್ ಟೇಬಲ್ ಮೇಲೆ ಔಷಧಗಳನ್ನು ಇಡಬಾರದು. ಊಟದ ಮೇಜಿನ ಮೇಲೆ ದೀರ್ಘಕಾಲ ಇಡುವ ಔಷಧಿಗಳು ಅನಾರೋಗ್ಯದ ವ್ಯಕ್ತಿ ಮತ್ತು ಮನೆಯ ಇತರ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಮತ್ತು ವ್ಯಕ್ತಿಯು ರೋಗಗಳಿಂದ ಬಳಲುತ್ತಾರೆ.

ಕೃತಕ ಹಣ್ಣಿನ ಬುಟ್ಟಿ

ನೀವು ಊಟದ ಮೇಜಿನ ಮೇಲೆ ತಾಜಾ-ಹಣ್ಣಿನ ಬುಟ್ಟಿಯನ್ನು ಇರಿಸಬಹುದು. ಡೈನಿಂಗ್ ಟೇಬಲ್ ಮೇಲೆ ಕೃತಕ ಹಣ್ಣಿನ ಬುಟ್ಟಿಯನ್ನು ಎಂದಿಗೂ ಇಡಬೇಡಿ ಮತ್ತು ತಾಜಾ ಹಣ್ಣುಗಳನ್ನು ಮಾತ್ರ ಬುಟ್ಟಿಯಲ್ಲಿ ಇಡಲು ಪ್ರಯತ್ನಿಸಿ. ಇದರಿಂದ ಮನೆಯಲ್ಲಿ ಸುಖ-ಶಾಂತಿ ಹೆಚ್ಚುತ್ತದೆ.

Vastu Tipsಬಟ್ಟೆ ಹಾಗೂ ವಸ್ತುಗಳು

ಡೈನಿಂಗ್ ಟೇಬಲ್ ಮೇಲೆ ಎಂದಿಗೂ ಹಳೆಯ ಬಟ್ಟೆ, ಕಬ್ಬಿಣದ ವಸ್ತುಗಳನ್ನು ಇಡಬೇಡಿ, ಇವು ನಮ್ಮ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ಊಟ ಮಾಡುವ ಸ್ಥಳವಾದ್ದರಿಂದ ಆದಷ್ಟೂ ಸ್ವಚ್ಛವಾಗಿಡಲು ಪ್ರಯತ್ನಿಸಿ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯ ಮೇಲೆ, ಅದು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಅವುಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಪಟ್ಟ ಕ್ಷೇತ್ರದ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.

Some mistakes related to the dining table can increase the vastu defects

Related Stories