ಅಡುಗೆಮನೆಗೆ ಸಂಬಂಧಿಸಿದ ಈ ಸರಳ ವಾಸ್ತು ಸಲಹೆಗಳು ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು! ವಾಸ್ತು ಪ್ರಕಾರ ಅಡುಗೆ ಮನೆ ಹೇಗಿರಬೇಕು ಗೊತ್ತಾ?

Vastu Tips for Kitchen : ಸಾಮಾನ್ಯವಾಗಿ ಅಡುಗೆಮನೆಗೆ ಸಂಬಂಧಿಸಿದ ಕೆಲವು ವಸ್ತುಗಳು ಮನೆಯಲ್ಲಿ ವಾಸ್ತು ದೋಷಗಳಿಗೆ ಕಾರಣವಾಗುತ್ತವೆ. ಇಂದು ನಾವು ನಿಮಗೆ ಅಡುಗೆಮನೆಗೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳನ್ನು ಹೇಳುತ್ತಿದ್ದೇವೆ, ಅದನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.

Bengaluru, Karnataka, India
Edited By: Satish Raj Goravigere

Vastu Tips for Kitchen : ಸಾಮಾನ್ಯವಾಗಿ ಅಡುಗೆಮನೆಗೆ ಸಂಬಂಧಿಸಿದ ಕೆಲವು ವಸ್ತುಗಳು ಮನೆಯಲ್ಲಿ ವಾಸ್ತು ದೋಷಗಳಿಗೆ ಕಾರಣವಾಗುತ್ತವೆ. ಇಂದು ನಾವು ನಿಮಗೆ ಅಡುಗೆಮನೆಗೆ (Kitchen) ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳನ್ನು (Vastu Tips) ಹೇಳುತ್ತಿದ್ದೇವೆ, ಅದನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಅದೃಷ್ಟವನ್ನು (Luck) ಬದಲಾಯಿಸಬಹುದು.

ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಕೆಲವೊಮ್ಮೆ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಕೆಲವು ಸಮಸ್ಯೆಗಳು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ.

These Vastu Tips related to kitchen can change your luck

ಅನೇಕ ಬಾರಿ ಸಮಸ್ಯೆಗಳಿಗೆ ಪರಿಹಾರ ವ್ಯಕ್ತಿಯ ಕೈಯಲ್ಲಿರುತ್ತದೆ ಆದರೆ ಅವನ ಗಮನವು ಆ ಕಡೆ ಹೋಗುವುದಿಲ್ಲ. ವಾಸ್ತು ಪ್ರಕಾರ ಅಡುಗೆ ಮನೆಯ ವ್ಯವಸ್ಥೆ ಬಗ್ಗೆಯೂ ಗಮನ ಹರಿಸಬೇಕು.

ಅಡುಗೆ ಮನೆ ನಮ್ಮ ಮನೆಯ ಬಹುಮುಖ್ಯ ಭಾಗ. ಅದನ್ನು ಸರಿಯಾದ ರೀತಿಯಲ್ಲಿ ಮಾಡಿದರೆ, ನಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ ಇತ್ಯಾದಿಗಳು ಬರುತ್ತವೆ. ಹಾಗಾದರೆ ಅಡುಗೆ ಮನೆ ಹೇಗಿರಬೇಕು.

1. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಒಲೆ (Gas Stove) ಪೂರ್ವ ದಿಕ್ಕಿನಲ್ಲಿರಬೇಕು. ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಪೂರ್ವ ದಿಕ್ಕಿಗೆ ಒಲೆ ಇಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

2. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮಾಡುವಾಗ ಅಡುಗೆ ಮಾಡುವ ಮಹಿಳೆಯ ಮುಖ ಪೂರ್ವ ದಿಕ್ಕಿಗಿರಬೇಕು.

3. ನೀರಿನ ವ್ಯವಸ್ಥೆ: ಸಿಂಕ್ ಮತ್ತು ವಾಟರ್ ಫಿಲ್ಟರ್ (Water Filter) ಉತ್ತರ ಭಾಗದಲ್ಲಿರಬೇಕು. ವಾಸ್ತು ಪ್ರಕಾರ ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುವುದಿಲ್ಲ.

4. ವಾಸ್ತು ಪ್ರಕಾರ, ಫ್ರಿಡ್ಜ್ (Refrigerator) ಅಡುಗೆಮನೆಯ ವಾಯುವ್ಯದಲ್ಲಿರಬೇಕು.

Kitchen Vastu Tips5. ಓವರ್ ಹೆಡ್ ಕ್ಯಾಬಿನೆಟ್‌ಗಳು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿರಬೇಕು.

6. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಚಲ್ಲಾಪಿಲ್ಲಿಯಾಗಿ ಇಡಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಅವುಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಪಟ್ಟ ಕ್ಷೇತ್ರದ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.

These Vastu Tips related to kitchen can change your luck