ಹೀಗೂ ಉಂಟೆ, ಬೆರಗಾಗುವ ಮಹಿಳೆಯ ಕೂದಲಿನ ವಿಷಯಗಳು
Things about a womans hair
ಹೀಗೂ ಉಂಟೆ, ಬೆರಗಾಗುವ ಮಹಿಳೆಯ ಕೂದಲಿನ ವಿಷಯಗಳು
ಕನ್ನಡ ಕಾರ್ನರ್ : ನಮ್ಮ ಹಿರಿಯರು ,ತಮಗೆ ತಿಳಿದು ಆಚರಣೆ ಮಾಡುತ್ತಿದ್ದರೋ ಅಥವಾ ತಿಳಿಯದೇ ಆಚರಣೆ ಮಾಡುತ್ತಿದ್ದರೋ ಗೊತ್ತಿಲ್ಲ , ಆದರೆ ಅವರ ಎಲ್ಲಾ ಆಚರಣೆಗಳು ವೈಜ್ಞಾನಿಕವಾಗಿ ನಮಗೆ ತುಂಬಾ ಹತ್ತಿರವಾಗಿರುವುದಂತು ಸತ್ಯ.
ಅಂತಹ ಕೆಲವು ಆಚರಣೆಗಳನ್ನು ನಾವು ಕೇಳಿರುತ್ತೇವೆ, ನೋಡಿರುತ್ತೇವೆ , ಅಲ್ಲದೆ ಇಂದಿಗೂ ಆಚರಿಸುತ್ತಿರುತ್ತೇವೆ. ಅಂಥಹ ಕೆಲವು ವಿಚಾರಗಳನ್ನು ನಿಮ್ಮ ಮುಂದೆ ಇಡಲಿದ್ದೇವೆ.
ಅಂತಹ, ಮಹಿಳೆಯ ಕೂದಲಿನ ವಿಷಯಗಳು – ಏನು ?
ಮಹಿಳೆಯ ಅಂದ ಹೆಚ್ಚುವುದು ಅವಳ ಕೇಶವಿನ್ಯಾಸದಿಂದ, ಕೇಶವಿನ್ಯಾಸವು ಸೌಂದರ್ಯಗಳಲ್ಲಿ ಒಂದು. ಶಾಸ್ತ್ರಗಳಲ್ಲಿ ಕೂದಲು ಬಗೆಗೆ ಅನೇಕ ಗ್ರಹಿಕೆಗಳು ಇವೆ. ಅದರ ಪ್ರಕಾರ, ಹಲವು ನಿಬಂಧನೆಗಳು , ಆಚಾರಗಳು ಪಾಲಿಸಲಾಗುತ್ತದೆ.
ಆ ಬಗ್ಗೆ ಹೇಳುವುದಾದರೆ ಮಹಿಳೆಯರು ಕೂದಲನ್ನು ಕಟ್ಟಬೇಕು. ಕೂದಲು ಬಿಡುವುದು ಶೋಕಾಚರಣೆಯ ಚಿಹ್ನೆಯೆಂದು ಪರಿಗಣಿಸಲಾಗುತ್ತದೆ. ರಾತ್ರಿಯಲ್ಲಿ ಕೂದಲನ್ನು ಬಾಚಬಾರದು. ದೇವಾಲಯಕ್ಕೆ ಹೋಗುವಾಗ ಕೂದಲನ್ನು ತೆರೆಯುವುದು ದುರದೃಷ್ಟಕರವೆಂದು ಪರಿಗಣಿಸಲಾಗಿದೆ.
ದೇಸ್ಥಾನಕ್ಕೆ ಹೋಗುವಾಗ ಹೆಂಗಳೆಯರು ತಮ್ಮ ಕೂದಲನ್ನು ಬಾಚದೇ ದೇವಸ್ಥಾನಕ್ಕೆ ಹೋಗುತ್ತಾರೆ. ಅದು ಒಳ್ಳೆಯದಲ್ಲ ಎನ್ನುತ್ತದೆ ಶಾಸ್ತ್ರ. ಬನ್ನಿ ಇನ್ನೂ ಹಲವು ಮಹಿಳೆಯ ಕೂದಲಿನ ವಿಷಯಗಳು ಯಾವುವು ತಿಳಿಯೋಣ.
ಮಹಿಳೆಯ ಕೂದಲಿನ ವಿಷಯಗಳು
ಮಹಿಳೆಯ ಕೂದಲಿನ ವಿಷಯಗಳು – ಏನು ಎಂಬುದು ಇಲ್ಲಿ ನೀಡಲಾಗಿದೆ.
- ಸೂರ್ಯಾಸ್ತದ ನಂತರ ಕೂದಲು ಬಾಚುವುದು ದುಃಖಕರ ವಿಷಯವನ್ನು ತಂದು ಕೊಡುತ್ತದೆ. ಹಾಗೂ ಸೂರ್ಯಾಸ್ತದ ನಂತರ, ದುಷ್ಟ ಆತ್ಮಗಳು ಸುತ್ತುತ್ತವೆ , ಅವು ಕೇಡನ್ನು ಉಂಟುಮಾಡಬಹುದು. ಆ ವೇಳೆ ತಲೆಬಾಚುವ ಮಹಿಳೆಯರ ಮೇಲೆ ಅವುಗಳ ಕೆಟ್ಟದೃಷ್ಟಿ ಬೀಳಬಹುದು. ತಮ್ಮ ಕೂದಲನ್ನು ತೆರೆದಿರುವ ಮಹಿಳೆಯರು, ಅವುಗಳ ಬೇಟೆಗೆ ಗುರಿಯಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ ರಾತ್ರಿ ಕೂದಲನ್ನು ಬಾಚಿಕೊಳ್ಳಬಾರದು ಎಂದು ನಂಬಲಾಗಿದೆ.
- ರಾತ್ರಿಯ ಸಮಯ , ಮಲಗುವ ವೇಳೆ ಮಹಿಳೆಯು ತಮ್ಮ ಕೂದಲನ್ನು ತೆರೆಯುವುದು ಕಷ್ಟಕ್ಕೆ ಸಮನಾಗಿರುತ್ತದೆ. ರಾತ್ರಿಯಲ್ಲಿ ಕೂದಲನ್ನು ಗಟ್ಟಿಯಾಗಿ ಬಿಗಿಮಾಡಿ ಮಲಗಬೇಕು. ರಾತ್ರಿಯಲ್ಲಿ ಕೂದಲನ್ನು ತೆರೆಯುವುದರಿಂದ ಕುಟುಂಬದ ಸಮೃದ್ದಿ ನಾಶಕ್ಕೆ ಕಾರಣವಾಗುತ್ತದೆಂದು ಪರಿಗಣಿಸಲಾಗುತ್ತದೆ.
- ಸೂರ್ಯಾಸ್ತದ ನಂತರ ಅಥವಾ ರಾತ್ರಿ ಮಲಗುವ ವೇಳೆಯಲ್ಲಿ ಕೂದಲನ್ನು ಬಿಡುವುದರ ಜೊತೆಗೆ , ರಾತ್ರಿಯಲ್ಲಿ ಮಹಿಳೆಯರು ತಮ್ಮ ಮುರಿದ ಕೂದಲನ್ನು ಎಸೆಯಬಾರದು. ದುಷ್ಟ ಶಕ್ತಿಗಳು ಆ ಕೂದಲನ್ನು ಕೆಟ್ಟ ಕೆಲಸಗಳಿಗೆ , ಹಾಗೂ ನಮಗೆ ಕೇಡು ಉಂಟುಮಾಡಲು ಬಳಸುತ್ತವೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ನಿಮ್ಮ ಕೂದಲನ್ನು ಸೂರ್ಯಾಸ್ತದ ಮೊದಲು ಬಾಚಬೇಕು ಹಾಗು ಸಂಗ್ರಹಿಸಬೇಕು ಮತ್ತು ಸರಿಯಾದ ಸ್ಥಳದಲ್ಲಿ ಎಸೆಯಬೇಕು.
- ಪುರಾಣಗಳ ಪ್ರಕಾರ, ಹುಣ್ಣಿಮೆಯ ರಾತ್ರಿ ಕೂದಲನ್ನು ಒಯ್ಯುವುದು ದುಷ್ಟಶಕ್ತಿಗಳಿಗೆ ಆಮಂತ್ರಣವನ್ನು ನೀಡುವಂತೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ತಮ್ಮ ಕೂದಲನ್ನು ತೊಳೆಯಬಾರದು. ದೈಹಿಕ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.
- ಕೂದಲನ್ನು ಒಗ್ಗೂಡಿಸುವಾಗ ಬಾಚಣಿಗೆ ಕೈಯಿಂದ ಬೀಳಬಾರದು , ಒಂದು ವೇಳೆ ಕೈಜಾರಿ ಕೆಳಬಿದ್ದರೆ ಅದು ದುರದೃಷ್ಟಕರವಾಗಿ ಪರಿಗಣಿಸಲ್ಪಡುತ್ತದೆ. ಈ ರೀತಿ ಸಂಭವಿಸಿದಲ್ಲಿ ನಾವು ಶೀಘ್ರದಲ್ಲೇ ಕೆಟ್ಟ ಸುದ್ದಿ ಕೇಳುತ್ತೇವೆ. ಎನ್ನಲಾಗುತ್ತದೆ.
ಫೋಟೋ ಕೃಪೆ : ಗೂಗಲ್ - ಮುಂಜಾನೆ , ಹಾಸಿಗೆಯಿಂದ ಎದ್ದ ಕೂಡಲೇ ಅಡುಗೆ ಕೋಣೆಗೆ ಹೋಗದೆ , ತಲೆ ಕೂದಲನ್ನು ಬಿಗಿಮಾಡಿ ಆ ನಂತರ ದಿನದ ಕಾರ್ಯ ಶುರುಮಾಡುವುದು ಒಳಿತು. ಇಲ್ಲವಾದರೆ ಲಕ್ಷ್ಮಿಯು ಇಷ್ಟಪಡುವುದಿಲ್ಲ.
- ಹಬ್ಬ-ಹರಿದಿನಗಳಲ್ಲಿ ತಲೆ ಸ್ನಾನ ಮಾಡಿ , ತಲೆ ಒಣಗಿಸದೆ , ಪೂಜಕರ್ಯದಲ್ಲಿ ತೊಡಗಬಾರದು , ಇದು ಶುಭಾಸೂಚಕವಲ್ಲ.
- ತಲೆಯ ಕೂದಲನ್ನು , ಬಾಚಿದ ಮೇಲೆ ತಮ್ಮ ಕೈಗಳನ್ನು ಶುದ್ದಿಗೊಳಿಸಿಕೊಳ್ಳಬೇಕು , ಇಲ್ಲದಿದ್ದಲೀ ಅದು ಶ್ರೇಯಸ್ಸಲ್ಲ ಎಂದು ಪರಿಗಣಿಸಲಾಗುತ್ತದೆ.
- ಬಾಜಿದ ತಲೆ ಕೂದಲನ್ನು ಯಾರು ತುಳಿಯದ ಜಾಗದಲ್ಲಿ ಎಸೆಯಬೇಕು , ಹಾಗು ತಲೆ ಕೂದಲನ್ನು ಎಂದೂ ದೇವರ ಕೊನೆ , ಅಡುಗೆ ಕೋಣೆಗಳಲ್ಲಿ ಬಾಚಬಾರದು.
- ಪ್ರಯಾಣ ಹಾಗೂ ಮನೆಯಿಂದ ಹೊರ ಹೋಗುವ ಸಮಯದಲ್ಲಿ ತಪ್ಪದೇ ತಲೆ ಬಾಚಬೇಕು , ಬಾಚದೇ ಇರುವುದು ಶೋಕದ ಸಂಕೇತ ಎನ್ನಲಾಗುತ್ತದೆ. ////
WebTitle : ಹೀಗೂ ಉಂಟೆ, ಬೆರಗಾಗುವ ಮಹಿಳೆಯ ಕೂದಲಿನ ವಿಷಯಗಳು-Things about a womans hair
>>> ಕ್ಲಿಕ್ಕಿಸಿ : ಕನ್ನಡ ನ್ಯೂಸ್ । Kannada Corner । Latest Kannada News
Follow us On
Google News |