ನ್ಯೂ ಯಾರ್ಕ್: ಲುಸ್ಟಿನ್ ಇಮ್ಯಾನುಯೆಲ್ (28) ಅಮೆರಿಕದ ನ್ಯೂಯಾರ್ಕ್ ನಗರದವರು. ಜುಲೈ 31ರಂದು ಏಕಕಾಲಕ್ಕೆ 10 ಯುವತಿಯರನ್ನು ವಿವಾಹವಾಗಿದ್ದಾರೆ. ಲುಸ್ಟಿನ್ ಸಮುದ್ರತೀರದಲ್ಲಿ ಈ ವಿವಾಹ ಸಮಾರಂಭವನ್ನು ಆಚರಿಸಿದರು.
ಹೌದು, ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ (Social Media) ಫೋಟೋಗಳು ಮತ್ತು ಸುದ್ದಿಯನ್ನು ನೋಡಿದ ಯುವಕರು, ಏನಪ್ಪಾ ನಮಗೆ ಒಂದೊಂದು ಮದುವೆ ಆಗೋಕೆ ಹುಡುಗಿ ಸಿಗ್ತಾಯಿಲ್ಲ, ಈ ಪುಣ್ಯಾತ್ಮ ಒಂದೇ ಸಲ ಹತ್ತು ಯುವತಿಯರನ್ನು ಮದುವೆ (Marriage) ಆಗಿದ್ದಾನೆ ಎಂದು ಕೊರಗುತ್ತಿದ್ದಾರೆ.
ಇಮ್ಯಾನ್ಯುಯೆಲ್ ತಮ್ಮ ಮದುವೆ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಇಂದು ನಾನು ಹತ್ತು ಮಹಿಳೆಯರನ್ನು ಮದುವೆಯಾಗಿದ್ದೇನೆ.. ಎಲ್ಲರೂ ನನ್ನ ಹೆಂಡತಿಯರು” ಎಂಬ ಶೀರ್ಷಿಕೆಯೊಂದಿಗೆ ಸಂತಸ ಹಂಚಿಕೊಂಡಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ನೋಡಿದ ಕೆಲವರು ಹತ್ತು ಜನರನ್ನು ಮದುವೆ ಆಗ್ತಾಯಿದಿಯಾ, ನನಗೊಂದು ಅಂತ ಕೇಳಿದ್ರೆ, ನಾನು ಮದುವೆ ಆಗಬೇಕು ಅಂತ ಕಾಮೆಂಟ್ ಮಾಡುತ್ತಿದ್ದಾರೆ
ಒಂಬತ್ತು ಸೆಕೆಂಡುಗಳ ವೀಡಿಯೊದಲ್ಲಿ ಒಂಬತ್ತು ವಧುಗಳು ತಮ್ಮ ವರನನ್ನು ಸುತ್ತುವರೆದಿದ್ದಾರೆ. ಹುಡುಗಿಯರು ಆಕರ್ಷಕ, ಸಣ್ಣ, ಬಿಳಿ ಉಡುಪುಗಳನ್ನು ಧರಿಸಿದ್ದಾರೆ. ಅವರ ಕೈಯಲ್ಲಿ ಪುಷ್ಪಗುಚ್ಛ ಕೂಡ ಕಾಣಿಸುತ್ತಿದೆ. ಲುಸ್ಟಿನ್‌ನ ಮಡಿಲಲ್ಲಿ ಸಹ ವಧು ಕುಳಿತಿರುವುದನ್ನು ಕಾಣಬಹುದು.
ಲಸ್ಟಿನ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯ ವ್ಯಕ್ತಿ. ಅವರು ಮಹಿಳೆಯರಿಗೆ ಮಸಾಜ್ ಥೆರಪಿಸ್ಟ್ ಕೂಡ. ಆತ ಟಿಕ್‌ಟಾಕ್‌ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ.
ಸದ್ಯ ಆತನ ಮದುವೆಯ ವಿಡಿಯೋ 5,81,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೊತೆಗೆ ಆತ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಲವು ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾನೆ.
This man married 10 women at once, Photos Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.