ಯಾವುದೇ ರಸ್ತಗಳಲ್ಲಿ ವಾಹನ ಚಲಿಸುವಾಗ ಬಹಳ ಹುಷಾರಾಗಿ ಇರಬೇಕು. ಅದರಲ್ಲೂ ರಾತ್ರಿ ವೇಳೆ, ನೀವು ಹುಷಾರಾಗಿಯೇ ವಾಹನ (Vehicle) ಓಡಿಸುತ್ತಿದ್ದರು, ಮುಂದಿರುವ ವಾಹನಗಳ ಚಾಲನೆ ಸರಿ ಇಲ್ಲ ಎಂದರೆ, ಅದರಿಂದ ನಿಮಗೆ ತೊಂದರೆ ಆಗಬಹುದು. ಅದೊಂದೆ ಅಲ್ಲದೇ, ಬೀದಿ ನಾಯಿಗಳ ಸಮಸ್ಯೆ ಕೂಡ ಇದೆ..
ಕೆಲವೊಮ್ಮೆ ನೀವೇನು ಮಾಡಿಲ್ಲ ಅಂದರು ಕೂಡ ಬೀದಿ ನಾಯಿಗಳು ನಿಮ್ಮ ಬೈಕ್ ಅಥವಾ ಸ್ಕೂಟರ್ ಗಳನ್ನು (Bike and Scooter) ಓಡಿಸಿಕೊಂಡು ಬರುತ್ತದೆ, ಅವುಗಳಿಂದ ತಪ್ಪಿಸಿಕೊಳ್ಳಲು ಸ್ಪೀಡ್ ಆಗಿ ಓಡಿಸಬೇಕು ಎಂದು ಪ್ರಯತ್ನಪಡುವ ನಿಟ್ಟಿನಲ್ಲಿ ನಿಮಗೇ ನೀವು ಸಮಸ್ಯೆ ಮಾಡಿಕೊಳ್ಳಬಹುದು.
ಅದರಲ್ಲೂ ಈಗ ಬೀದಿನಾಯಿಗಳ ಸಮಸ್ಯೆ ಜಾಸ್ತಿಯೇ ಆಗಿದೆ ಎಂದರೂ ತಪ್ಪಲ್ಲ. ನಿಮ್ಮ ಹಿಂದೆ ಅಟ್ಟಿಸಿಕೊಂಡು ಬರುವ ನಾಯಿಗೆ ಕೈಗೆ ಸಿಕ್ಕಿಕೊಂಡರೆ, ನಿಮ್ಮ ಬಟ್ಟೆಗೆ ಬಾಯಿ ಹಾಕಿ ಕಚ್ಚುವ ಸಾಧ್ಯತೆ ಕೂಡ ಇರುತ್ತದೆ. ಅತ್ಯಂತ ಪ್ರೀತಿ ಕೊಡುವ, ನಿಯತ್ತಿನ ಪ್ರಾಣಿಗಳಾದ ನಾಯಿಗಳು (Dogs) ಈ ರೀತಿ ವರ್ತನೆ ಮಾಡೋದು ಯಾಕೆ? ಇದಕ್ಕೆ ವಿಜ್ಞಾನಿಗಳು ತಜ್ಞರು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.
ಅವರ ಮಾತಿನ ಅನುಸಾರ, ನಾಯಿಗಳಿಗೆ ನಿಮ್ಮಿಂದ ಯಾವುದೇ ಸಮಸ್ಯೆ ಇರುವುದಿಲ್ಲ, ಆದರೆ ನಿಮ್ಮ ವಾಹನದಲ್ಲಿರುವ ಟೈರ್ (Tyre) ಇಂದ ಬರುವ ಸ್ಮೆಲ್ ಅವುಗಳಿಗೆ ಇಷ್ಟ ಆಗುವುದಿಲ್ಲ. ಟೈರ್ ಸ್ಮೆಲ್ ನಾಯಿಗಳು ಓಡುವ ಹಾಗೆ ಮಾಡುತ್ತದೆ, ನಾಯಿಗಳು ವಾಸನೆಯನ್ನು ಬಹಳ ಬೇಗ ಗ್ರಹಿಸುತ್ತದೆ ಎನ್ನುವುದು ಕೂಡ ಗೊತ್ತಿರುವ ವಿಷಯ ಆಗಿದೆ.
ಇನ್ನೊಂದು ಮುಖ್ಯವಾದ ವಿಷಯ ಏನು ಎಂದರೆ, ನೀವು ಎಲ್ಲಾದರೂ ಗಾಡಿ ನಿಲ್ಲಿಸಿದ್ದಾಗ, ಬೇರೆ ನಾಯಿಗಳು ನಿಮ್ಮ ಗಾಡಿಯ ಟೈರ್ ಮೇಲೆ ಮೂತ್ರ ವಿಸರ್ಜನೆ ಮಾಡಿರಬಹುದು, ಇದರ ವಾಸನೆಯನ್ನು ನಾಯಿಗಳು ಗ್ರಹಿಸುತ್ತದೆ.
ಅವುಗಳು ಹೇಗೆ ಎಂದರೆ, ನಾಯಿಗಳು ತಮ್ಮ ಜಾಗಕ್ಕೆ ಬೇರೆ ಜಾಗದ ನಾಯಿಗಳು ಬರುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಬೇರೆ ನಾಯಿಯ ಮೂತ್ರ ವಿಸರ್ಜನೆಯನ್ನು ಗ್ರಹಿಸಿ, ಅದರಿಂದ ಕೋಪಗೊಂಡು ಈ ರೀತಿ ವರ್ತಿಸುತ್ತವೆ ಎಂದು ವಿಜ್ಜಾನಿಗಳು ತಿಳಿಸಿದ್ದಾರೆ.
ಈ ಕಾರಣಗಳಿಂದ ಬೇರೆ ನಾಯಿಗಳ ವಾಸನೆಯನ್ನು ಗ್ರಹಿಸುವ ಬೀದಿ ನಾಯಿಗಳು ನಿಮ್ಮ ವಾಹನದ ಹಿಂದೆ ಜೋರಾಗಿ ಓಡಿ ಬರುವುದಕ್ಕೆ ಶುರು ಮಾಡುತ್ತದೆ. ತಮ್ಮ ಎಲ್ಲಾ ಶಕ್ತಿಯನ್ನು ಹಾಕಿ, ಸ್ಪೀಡ್ ಆಗಿ ಓಡಿಬರುತ್ತದೆ.
ನಾಯಿಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನೀವು ಭಯದಿಂದ, ಗಾಬರಿಯಿಂದ ಇನ್ನು ಸ್ಪೀಡ್ ಆಗಿ ವಾಹನ ಚಲಾಯಿಸಲು ಹೋಗಿ, ಅದರಿಂದ ಅಪಘಾತ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಗಾಡಿ ಓಡಿಸುವಾಗ ನೀವು ತುಂಬಾ ಹುಷಾರಾಗಿ ಇರಬೇಕು.
ಇನ್ನೊಂದು ಕಾರಣ, ಕೆಲವೊಮ್ಮೆ ರೋಡ್ ಆಕ್ಸಿಡೆಂಟ್ ಗಳಲ್ಲಿ ನಾಯಿಗಳು ಮರಣ ಹೊಂದುವುದನ್ನು ನೋಡುತ್ತೇವೆ. ಆ ವೇಳೆಯಲ್ಲಿ ನಾಯಿಗಳು ವಾಹನ ನೋಡಿದ್ದರೆ, ತಮ್ಮ ಜೊತೆಗಿರುವ ನಾಯಿಗೆ ಆಕ್ಸಿಡೆಂಟ್ ಮಾಡಿದ, ವಾಹನವನ್ನು ಚೇಸ್ ಮಾಡಿಕೊಂಡು, ಕೋಪದಲ್ಲಿ ಆ ವಾಹನದ ಹಿಂದೆ ಓಡಬಹುದು.
ಬೇರೆ ಏರಿಯಾದ ವಾಹನಗಳು ಆ ಏರಿಯಾಗೆ ಬಂದರೆ, ಹೊಸದಾಗಿ ಬಂದಿರುವ ಕಾರಣ ಓಡಿ ಬರಬಹುದು. ಈ ಎಲ್ಲಾ ಕಾರಣಗಳನ್ನು ವಿಜ್ಞಾನಿಗಳು ಮತ್ತು ತಜ್ಞರು ತಿಳಿಸಿದ್ದಾರೆ.
Why do stray dogs chase cars and bikes, Here is the reason
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.