ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟೋದು ಏಕೆ ಗೊತ್ತ ?

You Know Why tying Lemon Chilli Coal to Doors | Kannada Corner

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟೋದು ಏಕೆ ಗೊತ್ತ

  • ನಾವು ಕೆಲವೊಂದು ಆಚಾರಗಳನ್ನು ಗೊತ್ತಿಲ್ಲದೇ ಮಾಡುತ್ತೇವೆ.
  • ಹಿರಿಯರು ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅದನ್ನು ನಾವೂ..
  • ಹಾಗೆ ಈ ನಿಂಬೆ ವಿಚಾರ, ಯಾವತ್ತಾದರೂ ಈ ಬಗ್ಗೆ ಯೋಚಿಸಿದ್ದೀರಾ.

 ಕನ್ನಡ ಕಾರ್ನರ್ : ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ : ನಮ್ಮ ಹಿರಿಯರು ಪಾಲಿಸಿಕೊಂಡು ಬಂದ , ನಮಗೆ ಹೇಳಿಕೊಟ್ಟ ಹಲವು ವಿಷಯಗಳಿಗೆ ಅರ್ಥವಿದೆ. ಅವು ಇಂದಿಗೂ ಚಾಲನೆಯಲ್ಲಿವೆ ಆದರೇ ಅವುಗಳಲ್ಲಿ ನಾವು ಪಾಲಿಸುವ ಹಲವು ಆಚಾರಗಳು , ಏಕೆ ? ಎಂಬುದು ನಮಗೆ ಗೊತ್ತೇ ಇರುವುದಿಲ್ಲ.ಅಂತಹುಗಳ ಸಾಲಿನಲ್ಲಿ ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ  ಕೂಡ ವಿಶೇಷ.

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ಕ್ಕೆ ಎರಡು ರೀತಿಯ ವಿಚಾರಗಳಿವೆ.ಅದು ಪೌರಾಣಿಕ ಹಾಗೂ ವೈಜ್ಞಾನಿಕ .ಮೊದಲಿಗೆ ಪುರಾಣದ ಕಥೆ ಅಥವಾ ಕಾರಣವನ್ನು ನೋಡೋಣ.

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಏಕೆ – ಪುರಾಣ ಕಥೆ ಹಾಗೂ ನಂಬಿಕೆ

ನಮ್ಮ ಧಾರ್ಮಿಕತೆಯಲ್ಲಿ ಹುಟ್ಟಿರುವ ಕಥೆ : ಲಕ್ಷ್ಮಿಯನ್ನು ಪೂಜಿಸದೇ ಇರುವವರುಂಟೆ , ಬಡವನಿಂದ ಕೋಟ್ಯಾದಿಪತಿಯ ತನಕ ಲಕ್ಷ್ಮಿಯನ್ನು ಆರಾಧಿಸುತ್ತಾರೆ , ಕಾರಣ ಅವಳು ನಮಗೆ ನಮ್ಮ ಕುಟುಂಬಕ್ಕೆ ಸಂವೃದ್ದಿಯನ್ನು ಕೊಡುತ್ತಾಳೆ.

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟೋದು ಏಕೆ ಗೊತ್ತ ? - Kannada News

ಆದರೆ ಇವಳ ಸಹೋದರಿ ಇದೇ ಸಂವೃದ್ದಿಯನ್ನು ಕಿತ್ತುಕೊಳ್ಳುವ ಉಗ್ರ ದೇವತೆ ” ಅಲಕ್ಷ್ಮಿ ” ( ಉಗ್ರದೇವತೆ, ಕಾಳಿ , ದುರದೃಷ್ಟದ ದೇವತೆ , ಇನ್ನೂ ಹಲವು ಹೆಸರುಗಳಿಂದ ಕರೆಯಲಾಗುತ್ತದೆ ).

ಈ ಅಲಕ್ಷ್ಮಿಯು ನಮ್ಮ ಮನೆಯಲ್ಲಿನ ಸಂವೃದ್ದಿಗೆ ದಕ್ಕೆತರುವವಳು , ಅವಳನ್ನು ಒಲಿಸಲು , ಮಾಡುವುದೇ ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ .

ಅಲಕ್ಷ್ಮಿಗೆ ಬಿಸಿ, ಹುಳಿ , ಖಾರ ಎಂದರೆ ಬಹಳ ಇಷ್ಟ , ಇಂತಹವುಗಳಿಗೆ ಅವಳು ಬೇಗನೆ ಒಲಿಯಿತ್ತಾಳೆ.

ಇದೇ ಕಾರಣಕ್ಕೆ , ಜನರು ನಿಂಬೆಹಣ್ಣು ( ಹುಳಿ) , ಮೆಣಸಿನಕಾಯಿ ( ಖಾರ ) , ಇಜ್ಜಲು ( ಬಿಸಿ ) ಯನ್ನು ಬಾಗಿಲಿಗೆ , ತಾವು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಕಟ್ಟುತ್ತಾರೆ.

ಅವಳ ವಕ್ರದೃಷ್ಟಿ ಬೀಳಬಾರದು ಎಂದು ಬೇಡುತ್ತಾರೆ. ಇದು ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ದ ಪುರಾಣ.You Know Why tying Lemon Chilli Coal to Doors-its Kannada

 ಮನೆ ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ – ಹಿರಿಯರ ಪಾಲನೆ

ಇನ್ನು ಇದೆ ವಿಚಾರವನ್ನು ನಮ್ಮ ಹಿರಿಯರು ಏಕೆ ಪಾಲಿಸುತ್ತಿದ್ದರು ಎಂದು ನೋಡುವುದಾದರೆ ,  ಆಗಿನ ಕಾಲದಲ್ಲಿ  ಈ ನಿಂಬೆ ಮೆಣಸಿನಕಾಯಿ ಇಜ್ಜಲನ್ನು ಎತ್ತಿನಗಾಡಿಗೆ ಕಟ್ಟುತ್ತಿದ್ದರು , ಕಾರಣವನ್ನು ವಿಶ್ಲೇಷಿಸಿದರೆ , ನಮ್ಮ ಹಿರಿಯರು ಅದೇ ಎತ್ತಿನಗಾಡಿಯನ್ನು ತಮ್ಮ  ವಾಹನವನ್ನಾಗಿ   ಉಪಯೋಗಿಸುತ್ತಿದ್ದುದು  ನಮಗೆಲ್ಲಾ ಗೊತ್ತೇಯಿದೆ.

ಕಾಡು-ಮೇಡೆನ್ನದೆ ಎತ್ತಿನಗಾಡಿಯಲ್ಲಿಯೇ ಸಂಚರಿಸುತ್ತಿದ್ದರು , ದಾರಿಮದ್ಯ ಯಾವುದಾದರು ವಿಷಕಾರಿ ಜಂತುಗಳು , ಹಾವು, ಚೇಳುಗಳು ಕಚ್ಚಿದರೆ , ಇದೇ ನಿಂಬೆ ಮೆಣಸಿನಕಾಯಿ ಇಜ್ಜಲನ್ನು ಮದ್ದಾಗಿ ಬಳಸುತ್ತಿದ್ದರು.

ಅಕಸ್ಮಾತಾಗಿ ಯಾವುದಾದರು ವಿಷಕಾರಿ ಜಂತು ಕಚ್ಚಿದಾಗ , ಈ   ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನಾಲಗೆಯ  ಮೇಲೆ ಸವರಿಕೊಂಡು ನಾಲಗೆಗೆ ಖಾರದ ಅನುಭವವಾದರೆ ಕಚ್ಚಿರುವುದು ವಿಷಕಾರಿಯಲ್ಲ, ಖಾರದ  ಅನುಭವ ಆಗದೆ ಇದ್ದಾರೆ , ಕಚ್ಚಿರುವುದು ವಿಷಕಾರಿ ಎಂದು ಗುರುತಿಸುತ್ತಿದ್ದರು.

ಪುರಾಣದ ಕಥೆ ಹಾಗು ನಮ್ಮ ಹಿರಿಯರ ಬಳಕೆಯ ಬಗೆಗೆ ತಿಳಿದಿದ್ದಾಯಿತು, ಇನ್ನು ಇದೇ ವಿಚಾರವಾಗಿ ವೈಜ್ಞಾನಿಕ ,ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ನೋಡೋಣ.ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟೋದು ಏಕೆ ಗೊತ್ತ-You Know Why tying Lemon Chilli Coal to Doors

ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ – ವೈಜ್ಞಾನಿಕ 

ಈ ನಂಬಿಕೆಯ ಹಿಂದಿರುವ ವಿಜ್ಞಾನ ಬಹುಶಃ ಸಂಸ್ಕೃತಿಯಿಂದ ಉಂಟಾಗಿದೆ, ನಿಂಬೆ ಮತ್ತು ಮೆಣಸಿನಕಾಯಿ ಗುಣಗಳು ಅವುಗಳ ಬಳಕೆಯನ್ನು ಪ್ರೋತ್ಸಾಹಿಸುತ್ತವೆ. ಈ ಎರಡರಲ್ಲೂ ಸಹ “ಸಿ” ವಿಟಮಿನ್ ಸಮೃದ್ಧವಾಗಿದೆ,

ಆದ್ದರಿಂದ ನಿಂಬೆ ಮತ್ತು ಮೆಣಸಿನಕಾಯಿಯೊಂದಿಗೆ ಸೂಜಿಯನ್ನು ಚುಚ್ಚಿದಾಗ, ಇದರ ವಿಟಮಿನ್ ಗಳು ಕ್ರಮೇಣ ಗಾಳಿಯಲ್ಲಿ ಆವಿಯಾಗುತ್ತದೆ. ಈ ಗಾಳಿಯನ್ನು ನಾವು ಉಸಿರಾಡುತ್ತೇವೆ .

ನಮ್ಮ ಆರೋಗ್ಯ ಪ್ರಯೋಜನಕ್ಕಾಗಿ ಅವುಗಳ ಗುಣಗಳನ್ನು ಬಳಸುತ್ತೇವೆ.

ನಮ್ಮ ದೈನಂದಿನ ಜೀವನದಲ್ಲಿ  ಬಳಸಲಾಗುವ ಕೆಲವು ವಿಚಾರಗಳನ್ನು, ನಿಧಾನವಾಗಿ ಮೂಢನಂಬಿಕೆಯಾಗಿ ಬದಲಾಯಿಸಿಕೊಳ್ಳುತ್ತೇವೆ. ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟುವ ಕಾರಣ ಗಳು ಇವಿಷ್ಟು.

ತಮಾಷೆಯೆಂದರೆ ಕೇವಲ ಮನೆ , ಅಂಗಡಿ ಅಲ್ಲದೆ – BMW , AUDI ಕಾರುಗಳವರೆಗೂ ಇದು ಪಾಲಿಸಲಾಗುತ್ತಿದೆ.////

ಈ ಮಾಹಿತಿ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ , ನಮ್ಮನ್ನು ಬೆಂಬಲಿಸಿ .

WebTitle : ಬಾಗಿಲಿಗೆ ನಿಂಬೆ ಮೆಣಸಿನಕಾಯಿ ಇಜ್ಜಲು ಕಟ್ಟೋದು ಏಕೆ ಗೊತ್ತ-You Know Why tying Lemon Chilli Coal to Doors

>>> ಕ್ಲಿಕ್ಕಿಸಿ : Kannada Corner | Latest Kannada News

Follow us On

FaceBook Google News

Read More News Today