50 ವರ್ಷದ ಅಂಕಲ್ ಜೊತೆ 18 ವರ್ಷದ ಹುಡುಗಿ ಪರಾರಿ! 40 ದಿನಗಳಿಂದ ನಾಪತ್ತೆ
50ರ ವಯಸ್ಸಿನ ವ್ಯಕ್ತಿ ಹುಡುಗಿಯನ್ನು ಅಪರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ, 18 ವರ್ಷದ ಹುಡುಗಿ ಜೊತೆ ಪರಾರಿ ಆಗಿರುವ ಘಟನೆ ನಡೆದಿದೆ
- 50 ವರ್ಷದ ವ್ಯಕ್ತಿ 18 ವರ್ಷದ ಹುಡುಗಿಯನ್ನು ಅಪಹರಿಸಿರುವ ಆರೋಪ
- ಈ ಲವ್ವಿ ಡವ್ವಿ ತಪ್ಪಿಸಲು ಹುಡುಗಿಯನ್ನು ಬೇರೆ ಊರಿಗೆ ಕಳಿಸಿದ್ದರು
- ಇದೀಗ ಹುಡುಗಿ ನಾಪತ್ತೆಯಾಗಿದ್ದು, ಪೋಷಕರು ಹುಡುಕಾಟ
ಹುಬ್ಬಳ್ಳಿಯ ಚಾಲುಕ್ಯ ನಗರ ನಿವಾಸಿ ಪ್ರಕಾಶ್ (50) ಎಂಬ ವ್ಯಕ್ತಿ 18 ವರ್ಷದ ಹುಡುಗಿಯನ್ನು ಪ್ರೀತಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹುಡುಗಿಯ ಕುಟುಂಬದವರು ಪೂರ್ವದಲ್ಲಿಯೇ ಆತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿದ್ದರು. ಆದರೆ ಹುಡುಗಿಯನ್ನು ಹೇಗೋ ಪುಸಲಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ರೈಲ್ವೆ ನಿಲ್ದಾಣದ ಬಳಿ ಮಹಿಳೆ ಮುಖದ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ
ಅಜ್ಜಿ ಮನೆಯಿಂದ ಹುಡುಗಿ ನಾಪತ್ತೆ
ಕುಟುಂಬದವರು ಮಗಳ ಭವಿಷ್ಯದ ಕುರಿತಾಗಿ ಆತಂಕಗೊಂಡು, ಆಕೆಯನ್ನು ಕೊಲ್ಲಾಪುರದಲ್ಲಿರುವ ಅಜ್ಜಿ ಮನೆಯಲ್ಲಿ ಇಡಲು ನಿರ್ಧರಿಸಿದರು. ಅಲ್ಲಿಯೇ ವಾಸವಿದ್ದ ಹುಡುಗಿ, ಜನವರಿ 3 ರಂದು ನಾಪತ್ತೆಯಾಗಿದ್ದಾಳೆ. ಪೋಷಕರು ಕೆಲ ದಿನಗಳಿಂದ ಕಣ್ಣೀರು ಹಾಕುತ್ತಾ ಮಗಳಿಗಾಗಿ ಬೀದಿಬೀದಿಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿ, ಜಾನುವಾರು ಹುಡುಕಲು ಹೋಗಿದ್ದ ಮಹಿಳೆ ಸಾವು
ಪ್ರಕರಣದ ತನಿಖೆ ಮತ್ತು ಪೊಲೀಸರು ನೀಡಿದ ಮಾಹಿತಿ
ಸದ್ಯ ಈ ಪ್ರಕರಣ ಹುಬ್ಬಳ್ಳಿಯ ಕೇಶಾಪುರ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕುಟುಂಬದವರು ಹುಡುಗಿಯನ್ನು ಒತ್ತಾಯಪೂರ್ವಕವಾಗಿ ಅಪಹರಿಸಿ ಮದುವೆಯಾಗಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದಾರೆ
50-Year-Old Man Allegedly Elopes with 18-Year-Old Girl
Our Whatsapp Channel is Live Now 👇