5,8,9 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ! ಪರೀಕ್ಷೆ ಯಾವಾಗ ಗೊತ್ತಾ?

5,8, 9ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ

ಹೊಸ ವರ್ಷ (New year) ಆರಂಭವಾಗುತ್ತಿದ್ದಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯು (Department of Primary and Secondary Education) 5,8,9 ನೇ ತರಗತಿ ವಾರ್ಷಿಕ ಪರೀಕ್ಷಾ (board exam) ವೇಳಾಪಟ್ಟಿ ಪ್ರಕಟಿಸಿದೆ.

ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗಲು ಅನುಕೂಲವಾಗಿದೆ. ಅಲ್ಲದೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ, ಬೌದ್ಧಿಕವಾಗಿ ಪರೀಕ್ಷೆಗೆ ಸಿದ್ಧಪಡಿಸಲು ಶಿಕ್ಷಕರಿಗೂ ಅನುಕೂಲವಾಗಿದೆ.

ಕನ್ನಡ ಮಾತಾಡೋಕೆ ಬಂದ್ರೆ ಸಾಕು ಸಿಗುತ್ತೆ ಸರ್ಕಾರಿ ಕೆಲಸ! 28,000 ಸಂಬಳ

5,8,9 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ! ಪರೀಕ್ಷೆ ಯಾವಾಗ ಗೊತ್ತಾ? - Kannada News

ಶಿಕ್ಷಣ ಇಲಾಖೆಯು (education department) ಈ ಕುರಿತು ಸುತ್ತೋಲೆ ಹೊರಡಿಸಿದೆ. ಈ ಕುರಿತು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಎಲ್ಲರೂ ತಿಳಿದುಕೊಳ್ಳುವುದು ಉತ್ತಮ. ಸದ್ಯ 5,8,9 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿ (exam time table) ಬಿಟುಗಡೆಯಾಗಿದ್ದು, ಶಿಕ್ಷಣ ಇಲಾಖೆ ವೆಬ್ಸೈಟ್ನಲ್ಲೂ ಇದರ ಮಾಹಿತಿ ಲಭ್ಯ ಇದೆ.

ಪರೀಕ್ಷಾ ವೇಳಾ ಪಟ್ಟಿ ಪ್ರಕಟ: (exam time table released)

ರಾಜ್ಯ ಪಠ್ಯ ಕ್ರಮ ಬೋಧಿಸುವ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ 5,8 ಹಾಗೂ 9 ನೇ ತರಗತಿ ವಿದ್ಯಾರ್ಥಿಗಳಿಗೆ 2023-24 ನೇ ಸಾಲಿನ ಸಂಕಲಾತ್ಮಕ ಮೌಲ್ಯಮಾಪನಕ್ಕಾಗಿ ತಾತ್ಕಾಲಿಕ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ (https://kseeb.karnataka.gov.in/). ಇದೀಗ ಶಿಕ್ಷಣ ಇಲಾಖೆಯು ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ! ಹೊಸ ಅರ್ಜಿ, ತಿದ್ದುಪಡಿ ಮಾಡಿಕೊಳ್ಳಿ

Exam Time Table5ನೇ ತರಗತಿ ವೇಳಾಪಟ್ಟಿ

ಮಾರ್ಚ್ 11 ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಉರ್ದು, ಮರಾಠಿ, ತೆಲುಗು, ತಮಿಳು
ಮಾರ್ಚ್ 12 ರಂದು ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ,
ಮಾರ್ಚ್ 13ರಂದು ಪರಿಸರ ಅಧ್ಯಯನ,
ಮಾರ್ಚ್ 14 ರಂದು ಗಣಿತ ವಿಷಯದ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ.

ಯುವ ನಿಧಿ ಯೋಜನೆ ಅಪ್ಡೇಟ್; ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸೂಚನೆ

8ನೇ ತರಗತಿ ವೇಳಾ ಪಟ್ಟಿ

ಮಾರ್ಚ್ 11 ರಂದು ಪ್ರಥಮ ಭಾಷೆ: ಕನ್ನಡ, ಇಂಗ್ಲೀಷ್, ಉರ್ದು, ತಮಿಳು, ಮರಾಠಿ, ತೆಲುಗು, ಇಂಗ್ಲೀಷ್ (ಎನ್ಎಸ್ಇಆರ್ಟಿ)
ಮಾರ್ಚ್ 12 ರಂದು ದ್ವಿತೀಯ ಭಾಷೆ: ಇಂಗ್ಲೀಷ್, ಕನ್ನಡ,
ಮಾರ್ಚ್ 13 ರಂದು ತೃತೀಯ ಭಾಷೆ: ಹಿಂದಿ, ಹಿಂದಿ (ಎನ್ಎಸ್ಇಆರ್ಟಿ),ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಶಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು,
ಮಾರ್ಚ್ 14 ರಂದು ಗಣಿತ,
ಮಾರ್ಚ್ 15ರಂದು ವಿಜ್ಞಾನ,
ಮಾರ್ಚ್ 16 ರಂದು ಸಮಾಜ ವಿಜ್ಞಾನ
ಮಾರ್ಚ್ 18 ದೈಹಿಕ ಶಿಕ್ಷಣ ವಿಷಯದ ಪರೀಕ್ಷೆಗಳು ನಡೆಯಲಿವೆ.

ಫ್ರೀ ಕರೆಂಟ್ ಖುಷಿಯಲ್ಲಿದ್ದವರಿಗೆ ಬೇಸರದ ಸುದ್ದಿ! ಮತ್ತೆ ವಿದ್ಯುತ್ ದರ ಹೆಚ್ಚಳ

9ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ

ಮಾರ್ಚ್ 11 ರಂದು ಪ್ರಥಮ ಭಾಷೆ: ಕನ್ನಡ, ಇಂಗ್ಲೀಷ್, ಇಂಗ್ಲೀಷ್ (ಎನ್ಎಸ್ಇಆರ್ಟಿ), ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ
ಮಾರ್ಚ್ 12 ರಂದು ದ್ವಿತೀಯ ಭಾಷೆ: ಕನ್ನಡ, ಇಂಗ್ಲೀಷ್,
ಮಾರ್ಚ್ 14 ರಂದು ಗಣಿತ
ಮಾರ್ಚ್ 15 ರಂದು ವಿಜ್ಞಾನ
ಮಾರ್ಚ್ 16 ರಂದು ಸಮಾಜ ವಿಜ್ಞಾನ
ಮಾರ್ಚ್ 18 ರಂದು ದೈಹಿಕ ಶಿಕ್ಷಣ ವಿಷಯದ ಪರೀಕ್ಷಗಳು ನಡೆಯಲಿವೆ.

ವಿದ್ಯಾರ್ಥಿಗಳು ಈ ವೇಳಾಪಟ್ಟಿಯ ಅನ್ವಯ ಅಧ್ಯಯನ ಮಾಡಿಕೊಂಡು ಎಕ್ಸಾಮ್ ಅನ್ನು ಧೈರ್ಯದಿಂದ ಎದುರಿಸಬೇಕು ಎಂದು ಸರ್ಕಾರ ವಿದ್ಯಾರ್ಥಿಗಳಿಗೆ ತಿಳಿಸಿದೆ.

5th, 8th, 9th class Board exam Time Table

Follow us On

FaceBook Google News

5th, 8th, 9th class Board exam Time Table