Karnataka NewsBangalore News

ಯುವ ನಿಧಿ ಯೋಜನೆ ಅಪ್ಡೇಟ್; ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸೂಚನೆ

ಕಾಂಗ್ರೆಸ್ ಸರ್ಕಾರ ( Congress government) ದ 5ನೇ ಗ್ಯಾರಂಟಿ ಯೋಜನೆ ಯುವ ನಿಧಿ ಯೋಜನೆ. ಈ ಯೋಜನೆಗೆ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದ್ದು ಡಿಸೆಂಬರ್ ಕೊನೆಯ ವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಯುವಕ ಯುವತಿಯರು ಯುವ ನಿಧಿ ಯೋಜನೆ (Yuva Nidhi scheme) ಯ ಮೂಲಕ ನಿರುದ್ಯೋಗ ಭತ್ಯೆ (unemployed allowance) ಪಡೆದುಕೊಳ್ಳಬಹುದು.

A new update from the government about the Karnataka yuva Nidhi scheme

ಫ್ರೀ ಕರೆಂಟ್ ಖುಷಿಯಲ್ಲಿದ್ದವರಿಗೆ ಬೇಸರದ ಸುದ್ದಿ! ಮತ್ತೆ ವಿದ್ಯುತ್ ದರ ಹೆಚ್ಚಳ

ಯುವ ನಿಧಿ ಯೋಜನೆ ಬಗ್ಗೆ ಸರ್ಕಾರದ ಅಪ್ಡೇಟ್? (Yuva Nidhi scheme update)

ಡಿಸೆಂಬರ್ 26 ನೇ ತಾರೀಖಿನಿಂದ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯ ಮೂಲಕ ಮುಂದಿನ ಎರಡು ವರ್ಷಗಳ ಕಾಲ 2022 – 23ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ, ಪದವೀಧರರು ಹಾಗೂ ಡಿಪ್ಲೋಮಾ ತರಗತಿ ಮುಗಿಸಿರುವವರು ಕ್ರಮವಾಗಿ 3000 ಹಾಗೂ 1,500 ನಿರುದ್ಯೋಗ ಭತ್ಯೆಯಾಗಿ ಪಡೆದುಕೊಳ್ಳಲಿದ್ದಾರೆ. ಶಿಕ್ಷಣ ಮುಗಿಸಿ ಕಳೆದ ಆರು ತಿಂಗಳಿನಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಈ ಅವಕಾಶ ಲಭ್ಯವಿದೆ.

ಅರ್ಜಿ ಸಲ್ಲಿಸಿದ ಯಾರಿಗೆ ಜಮಾ ಆಗಲಿದೆ ನಿರುದ್ಯೋಗ ಭತ್ಯೆ? (Is all applicant gets money?)

2022 – 23ನೇ ಸಾಲಿನಲ್ಲಿ ಪದವಿ ಕೋರ್ಸ್ (degree) ಹಾಗೂ ಡಿಪ್ಲೋಮಾ ಕೋರ್ಸ್ (diploma courses) ಮುಗಿಸಿರುವವರಿಗೆ ನಿರುದ್ಯೋಗ ಭತ್ಯೆ ಸಿಗುತ್ತದೆ.

ಯೋಜನೆಯ ಅವಧಿ ಎರಡು ವರ್ಷಗಳು. ಎರಡು ವರ್ಷಗಳ ಒಳಗೆ ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಿರುವ ಅಭ್ಯರ್ಥಿ ಕೆಲಸ ಸಿಕ್ಕರೆ ತಕ್ಷಣ ಅದನ್ನು ಸರ್ಕಾರದ ಗಮನಕ್ಕೆ ತರಬೇಕು. ಅಲ್ಲಿಂದ ಮಾಸಿಕ ವೇತನ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಸರ್ಕಾರಿ ಜಾಗದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ! ಹಕ್ಕುಪತ್ರ ವಿತರಣೆ

Yuva Nidhi Yojana - Yuva Nidhi Schemeಇಂಥವರು ಅರ್ಜಿ ಸಲ್ಲಿಸಿದರು ಮಾಸಿಕ ಭತ್ಯೆ ಸಿಗುವುದಿಲ್ಲ!

* ಪದವಿ ಅಥವಾ ಡಿಪ್ಲೋಮೋ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣ (higher education) ಕ್ಕಾಗಿ ಕೆಲಸ ಮಾಡದೆ ಶಿಕ್ಷಣ ಮುಂದುವರೆಸುವವರು.

*ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವವರು.

*ಅಪ್ರೆಂಟಿಸ್ಗಳಾಗಿದ್ದು ತಿಂಗಳ ವೇತನ ಪಡೆಯುತ್ತಿರುವವರು.

*ಸ್ವಂತ ಉದ್ಯೋಗ ಮಾಡುತ್ತಿರುವವರು

*ಸರ್ಕಾರದ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವವರು

ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋರಾತ್ರಿ ಹೊಸ ಬದಲಾವಣೆ! ಇನ್ಮುಂದೆ ಹೊಸ ರೂಲ್ಸ್

ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕೆಲಸ ಸಿಕ್ಕರೆ ಅದನ್ನು ಸರ್ಕಾರದ ಗಮನಕ್ಕೆ ತರಬೇಕು. ಒಂದು ವೇಳೆ ಇದನ್ನು ಹೇಳದೆ ಹಾಗೆ ಮುಚ್ಚಿಟ್ಟರೆ ಸರ್ಕಾರ ಅಭ್ಯರ್ಥಿಗೆ ದೊಡ್ಡ ಪ್ರಮಾಣದಲ್ಲಿ ದಂಡ (penalty) ವಿಧಿಸಬಹುದು.

ಸರ್ಕಾರ ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಜನವರಿ 12 ರಿಂದ 20ನೇ ತಾರೀಖಿನ ಒಳಗೆ ಯುವ ನಿಧಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗಲಿದೆ.

Yuva Nidhi Yojana Update, Notice to apply Before this date

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories