ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋರಾತ್ರಿ ಹೊಸ ಬದಲಾವಣೆ! ಇನ್ಮುಂದೆ ಹೊಸ ರೂಲ್ಸ್
Gruha Lakshmi Scheme : ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಬಿಡುಗಡೆ ಆಗುತ್ತಿದೆ. ಆದರೆ ಮಹಿಳೆಯರ ಖಾತೆಗೆ ತಲುಪುವಲ್ಲಿ ಮಾತ್ರ ಸಾಕಷ್ಟು ವಿಳಂಬವಾಗುತ್ತಿದೆ
Gruha Lakshmi Scheme : ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಬಿಡುಗಡೆ ಆಗುತ್ತಿದೆ. ಆದರೆ ಮಹಿಳೆಯರ ಖಾತೆಗೆ ತಲುಪುವಲ್ಲಿ ಮಾತ್ರ ಸಾಕಷ್ಟು ವಿಳಂಬವಾಗುತ್ತಿದೆ. ಇದಕ್ಕೆ ತಾಂತ್ರಿಕ ದೋಷಗಳು ಕಾರಣ ಎಂದು ಸರ್ಕಾರ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರ (state government) ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ನಾಲ್ಕು ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅತಿ ಹೆಚ್ಚು ಅನುದಾನ ಹೊಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಸಾಕಷ್ಟು ಮಹಿಳೆಯರ ಖಾತೆಗೆ (Bank Account) ತಲುಪಿದೆ.
ರೇಷನ್ ಕಾರ್ಡ್ ಇಲ್ಲದವರಿಗೆ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ
ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಾಲ್ಕನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್ (update) ನೀಡಿದ್ದಾರೆ. ಹಣ ಜಮಾ ಆಗಲು ವಿಳಂಬವಾಗುತ್ತಿದೆ ಎನ್ನುವ ಕಾರಣವನ್ನು ಕೂಡ ತಿಳಿಸಿದ್ದಾರೆ. ಒಂದು ವೇಳೆ ನಿಮ್ಮ ಖಾತೆಗೆ ಜನವರಿ ತಿಂಗಳಿನ ಆರಂಭದಲ್ಲಿಯೇ ಹಣ ಜಮಾ ಆಗದೇ ಇದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ, ಸದ್ಯದಲ್ಲಿಯೇ ಪ್ರತಿಯೊಬ್ಬರ ಖಾತೆಗೂ ಕೂಡ ನಾಲ್ಕನೇ ಕಂತಿನ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
26 ಜಿಲ್ಲೆಗಳಿಗೆ ಜಮಾ ಆಗಿದೆ ನಾಲ್ಕನೇ ಕಂತಿನ ಹಣ! (4th installment released for 26 district)
ಡಿಸೆಂಬರ್ ಕೊನೆಯ ವಾರದಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿತ್ತು. ಆದರೆ ಆಗ ಕೇವಲ 15 ಜಿಲ್ಲೆಗಳಿಗೆ ಮಾತ್ರ ಹಣ ವರ್ಗಾವಣೆ (DBT) ಮಾಡಲಾಗಿತ್ತು. ಇದೀಗ ಜನವರಿ 3 2024, ಈ ದಿನಾಂಕದಂದು 26 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಜಮಾ ಮಾಡಲಾಗಿದೆ.
ಸಂಪೂರ್ಣ ಫಲಾನುಭವಿಗಳ ಖಾತೆಗೆ ಇದೇ ಬರುವ ಶನಿವಾರ ಅಂದರೆ 7 ಜನವರಿ 2024ರಂದು ಫಲಾನುಭವಿಗಳ ಖಾತೆಗೂ ಕೂಡ ಹಣ ಜಮಾ (Money Deposit) ಆಗಲಿದೆ. ಹಾಗಾಗಿ ಮಹಿಳೆಯರು ಶನಿವಾರ ಅಥವಾ ಸೋಮವಾರದ ದಿನ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಬಹುದು.
ಕೇವಲ 1 ಲಕ್ಷಕ್ಕೆ ಸ್ವಂತ ಮನೆ ಮಾಡಿಕೊಳ್ಳಿ, ಸರ್ಕಾರದ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ
ಗೃಹ ಲಕ್ಷ್ಮಿ ಶಿಬಿರ ಯಶಸ್ವಿ! (Successful Gruha lakshmi camp)
ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಯಾರಿಗೆ ಸಮಸ್ಯೆ ಇದೆಯೋ ಯಾರ ಖಾತೆಗೆ ಹಣ ಜಮಾ ಆಗಿಲ್ಲವೋ ಅಂತವರಿಗಾಗಿ ಗ್ರಾಮೀಣ ಮಟ್ಟದಲ್ಲಿ ಮೂರು ದಿನಗಳ ಶಿಬಿರ ಆಯೋಜನೆ ಮಾಡಲಾಗಿತ್ತು.
ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಹಿಳೆಯರ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ. ಸುಮಾರು ನಾಲ್ಕು ಲಕ್ಷ ಮಹಿಳೆಯರು ಈ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಮುಂದೆ ಯಾವ ಮಹಿಳೆಯರು ಕೂಡ ತಮ್ಮ ಖಾತೆಯಲ್ಲಿ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಹಣ ಪಡೆಯದೆ ಇರಲು ಸಾಧ್ಯವೇ ಇಲ್ಲ. ಈ ಬಗ್ಗೆ ಬ್ಯಾಂಕ್ ಗಳು (Banks) ಕೂಡ ಮುತುವರ್ಜಿ ವಹಿಸಲಿದ್ದು ಕೆ ವೈ ಸಿ (E-KYC ) ಆಗದೆ ಇರುವ ಖಾತೆಯನ್ನು ಪತ್ತೆ ಹಚ್ಚಿ ಅಂತಹ ಮಹಿಳೆಯರ ಖಾತೆಗೆ ಜವಾಬ್ದಾರಿಯನ್ನು ಹೊತ್ತಿವೆ ಎಂದು ಸರ್ಕಾರ ತಿಳಿಸಿದೆ.
ಭೂ ರಹಿತ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ
ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಚೆಕ್ ಮಾಡಿ! (Check Your DBT status)
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು 15 ರಿಂದ 20ನೇ ತಾರೀಕಿನ ಒಳಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಆದರೆ ಈಗ ಸರ್ಕಾರ ನೀಡಿರುವ ಹೊಸ ಅಪ್ಡೇಟ್ ಪ್ರಕಾರ, ತಿಂಗಳಿನ 30 ದಿನಗಳ ಅವಧಿಯಲ್ಲಿ ಯಾವುದೇ ದಿನ ನಿಮ್ಮ ಖಾತೆಗೆ ಹಣ ಬರಬಹುದು, ತಾಂತ್ರಿಕ ದೋಷ (technical issues) ಗಳಿಂದಾಗಿ ಇದೇ ದಿನ ಹಣ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಹಾಗಾಗಿ ಪ್ರತಿ ಕಂತಿನ ಹಣ ಒಂದು ತಿಂಗಳ ಅವಧಿಯಲ್ಲಿ ಯಾವ ದಿನ ಬೇಕಾದರೂ ಮಹಿಳೆಯರ ಖಾತೆಗೆ ವರ್ಗಾವಣೆ ಆಗಬಹುದು. ನಾಲ್ಕನೇ ಕಂತಿನ ಹಣವು ಕೂಡ ಕೆಲವರ ಖಾತೆಗೆ ತಲುಪಲು ಜನವರಿ 30ರವರೆಗೂ ಅವಕಾಶವಿದೆ.
ಡಿ ಬಿ ಟಿ ಕರ್ನಾಟಕ (DBT Karnataka) ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.
ಗೃಹಲಕ್ಷ್ಮಿ 4ನೇ ಕಂತಿನ ಪೆಂಡಿಂಗ್ ಹಣ ಬಿಡುಗಡೆ! ಇಲ್ಲಿದೆ ಜಿಲ್ಲಾವಾರು ಪಟ್ಟಿ
ಐದನೇ ಕಂತಿನ ಹಣದ ಬಗೆಗೂ ಮಾಹಿತಿ ನೀಡಿದೆ ಸರ್ಕಾರ!
ನಾಲ್ಕನೇ ಕಂತಿನ ಹಣ ಜಮಾ ಆಗುತ್ತಿರುವ ಹಿನ್ನೆಲೆಯಲ್ಲಿ ಐದನೇ ಕಂತಿನ ಹಣವನ್ನು ಕೂಡ ಮಹಿಳೆಯರ ಖಾತೆಗೆ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ, ಜನವರಿ 30ನೇ ತಾರೀಖಿನ ಒಳಗೆ ಐದನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗುವುದು. ಹಾಗಾಗಿ ಬಹುತೇಕ ಮಹಿಳೆಯರ ಖಾತೆಗೆ ನಾಲ್ಕು ಮತ್ತು ಐದನೇ ಕಂತಿನ ಹಣ ಒಟ್ಟಾರೆಯಾಗಿ ರೂ.4,000 ಒಟ್ಟಿಗೆ ಬರುವ ಸಾಧ್ಯತೆ ಇದೆ.
A new changes in in the Gruha lakshmi Scheme, Here is the Update