ಕೇವಲ 1 ಲಕ್ಷಕ್ಕೆ ಸ್ವಂತ ಮನೆ ಮಾಡಿಕೊಳ್ಳಿ, ಸರ್ಕಾರದ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಸ್ವಂತ ಮನೆ ನಿರ್ಮಾಣ (own house built) ಮಾಡಿಕೊಳ್ಳುವ ಕನಸು ಹೊಂದಿರುವ ಲಕ್ಷಾಂತರ ಫಲಾನುಭವಿಗಳು ಇಂದು ಪ್ರಧಾನಮಂತ್ರಿ ಆವಾಸ್ ಯೋಜನೆಯ (PM aawas Yojana) ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಿದೆ.
ಎಲ್ಲರೂ ಕೂಡ ಸುಲಭವಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಅಥವಾ ಎಲ್ಲರಿಗೂ ಹೋಮ್ ಲೋನ್ (Home Loan) ಪಡೆದು ಕಟ್ಟಿಕೊಳ್ಳಲು ಆಗೋಲ್ಲ, ಅಥವಾ ಹೋಮ್ ಲೋನ್ (Home Loan) ಸಿಗುವುದಿಲ್ಲ.
ಇದೀಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜೊತೆಗೆ, ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಯ ಅನುದಾನವು ಕೂಡ ಬಿಡುಗಡೆ ಆಗಿದ್ದು ರಾಜ್ಯದಲ್ಲಿ ಒಟ್ಟು 52,189 ಮನೆಗಳು ಸಿದ್ಧವಾಗಿವೆ.
ಭೂ ರಹಿತ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ
ಕೇವಲ ಒಂದು ಲಕ್ಷಕ್ಕೆ ಪಡೆಯಿರಿ ಸ್ವಂತ ಮನೆ! (Get own house for just one lakh rupees)
ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ರಾಜೀವ್ ಗಾಂಧಿ ಆವಾಸ ಯೋಜನೆಯ ಅಡಿಯಲ್ಲಿ ಸುಮಾರು 52,189 ಮನೆಗಳು ನಿರ್ಮಾಣವಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅವಾಸ್ ಯೋಜನೆ ಅಡಿಯಲ್ಲಿ ಒಂದು ಮನೆಯ ವೆಚ್ಚ 7.5 ಲಕ್ಷ ರೂಪಾಯಿಗಳು ಇದರಲ್ಲಿ ಕೇಂದ್ರ ಸರ್ಕಾರದಿಂದ 3.5 ಲಕ್ಷಗಳನ್ನು ನೀಡಲಾಗುತ್ತದೆ ಹಾಗೂ ರಾಜ್ಯ ಸರ್ಕಾರದಿಂದ 3 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಅಲ್ಲಿಗೆ ಫಲಾನುಭವಿಗಳು ಕೇವಲ ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟು ಮನೆ ತಮ್ಮದಾಗಿಸಿಕೊಳ್ಳಬಹುದು.
ಗೃಹಲಕ್ಷ್ಮಿ 4ನೇ ಕಂತಿನ ಪೆಂಡಿಂಗ್ ಹಣ ಬಿಡುಗಡೆ! ಇಲ್ಲಿದೆ ಜಿಲ್ಲಾವಾರು ಪಟ್ಟಿ
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!
ಅರ್ಜಿದಾರರು ಮಹಿಳೆಯೇ ಆಗಿರಬೇಕು. ಹಿರಿಯ ನಾಗರಿಕರಾಗಿದ್ದರೆ ಪುರುಷರು ಅರ್ಜಿ ಸಲ್ಲಿಸಬಹುದು. ಮಾಜಿ ಯೋಧರು, ವಿಧುರರು, ಅಂಗವಿಕಲರು ಅರ್ಜಿ ಸಲ್ಲಿಸಬಹುದು.
ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 32,000ಗಳನ್ನು ಮೀರುವಂತಿಲ್ಲ.
ಶಿಥಿಲಗೊಂಡಿರುವ ಅಥವಾ ಗುಡಿಸಿಲಿನಲ್ಲಿ (Hut) ವಾಸಿಸುವ ಕುಟುಂಬದವರು ಅರ್ಜಿ ಸಲ್ಲಿಸಬಹುದು ಆದರೆ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಸುಸ್ಥಿರ ಮನೆ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.
ಮನೆ ನಿರ್ಮಾಣಕ್ಕಾಗಿ ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು, ಅದಕ್ಕೆ ದಾಖಲೆ ಇರಬೇಕು.
ಈ ಹಿಂದೆ ಆವಾಸ್ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಂಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.
ನಿಮ್ಮ ರೇಷನ್ ಕಾರ್ಡ್ಗೆ ಅನ್ನಭಾಗ್ಯ ಹಣ ವರ್ಗಾವಣೆ ಆಗಿದ್ಯಾ? ಚೆಕ್ ಮಾಡಿಕೊಳ್ಳಿ
ಒಂದು ಲಕ್ಷಕ್ಕೆ ಮನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ?
https://ashraya.karnataka.gov.in/nannamane/index.aspx ಈ ವೆಬ್ ಸೈಟಿಗೆ ಭೇಟಿ ನೀಡಿ. ಮುಖಪುಟದಲ್ಲಿಯೇ ಕ್ಷೇತ್ರ ಮತ್ತು ಪ್ರದೇಶ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅದನ್ನು ಆಯ್ದುಕೊಳ್ಳಿ.
ನಂತರ ನಿಮ್ಮ ಆಧಾರ್ ಕಾರ್ಡ್ (Aadhaar Card) ನಿಂದ ಹಿಡಿದು ರೇಷನ್ ಕಾರ್ಡ್ ಹಾಗೂ ಇತರ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಬೇಕು. ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಸಲ್ಲಿಸಿದ ನಂತರ ಪೇಮೆಂಟ್ ಆಯ್ಕೆ ಇರುತ್ತದೆ, ನೀವು ಅಲ್ಲಿ ಕೊಡಲಾಗಿರುವ ಮೊತ್ತವನ್ನು ಆನ್ ಲೈನ್ ಮೂಲಕವೇ ಪಾವತಿ ಮಾಡಬಹುದು.
ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ವಸತಿ ಯೋಜನೆಯಲ್ಲಿ ಸ್ವಂತ ಮನೆ ಮಾಡಿಕೊಳ್ಳಿ
Get your own house for just 1 lakh, apply for the new scheme of Govt
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು!






