ನಿಮ್ಮ ರೇಷನ್ ಕಾರ್ಡ್‌ಗೆ ಅನ್ನಭಾಗ್ಯ ಹಣ ವರ್ಗಾವಣೆ ಆಗಿದ್ಯಾ? ಚೆಕ್ ಮಾಡಿಕೊಳ್ಳಿ
ಅನ್ನಭಾಗ್ಯ ಹಣ ಬಾರದೆ ಇದ್ದರೆ ದೂರು ಸಲ್ಲಿಸಬಹುದು ಅಥವಾ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ (ration card cancellation) ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಸರ್ಕಾರಕ್ಕೆ ಈಗಲೂ ಕೂಡ ಹೆಚ್ಚುವರಿ ಅಕ್ಕಿ (free rice) ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿಯ ಬದಲು ಹಣವನ್ನು ವರ್ಗಾವಣೆ (Money Deposit) ಮಾಡಲಾಗುತ್ತಿದೆ.
ಇದೀಗ ಅನ್ ಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣವು (4th installment released) ಬಿಡುಗಡೆ ಆಗಿದ್ದು ಫಲಾನುಭವಿಗಳು ತಕ್ಷಣ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು.
ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ವಸತಿ ಯೋಜನೆಯಲ್ಲಿ ಸ್ವಂತ ಮನೆ ಮಾಡಿಕೊಳ್ಳಿ
ಇಲ್ಲಿಯವರೆಗೆ ಬಿಡುಗಡೆ ಆಗಿದ್ದ ಕಂತಿನ ಹಣ ನಿಮ್ಮ ಖಾತೆಗೆ (Bank Account) ಬಂದಿದ್ಯಾ? ಅಂತೆಯೇ ಈ ತಿಂಗಳ ಹಣ ನಿಮ್ಮ ಖಾತೆಗೆ ಬಾರದೇ ಇದ್ದರೆ ನೀವು ಇದಕ್ಕೆ ಸಂಬಂಧಪಟ್ಟ ಹಾಗೆ ದೂರು ಸಲ್ಲಿಸಬಹುದು ಅಥವಾ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ (ration card cancellation) ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಅನ್ನಭಾಗ್ಯ ಹಣದ ಡಿಬಿಟಿ ಸ್ಟೇಟಸ್ ಚೆಕ್ ಮಾಡಿ! (Check your DBT status)
ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ; ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ ಖಾತೆಗೆ ಜಮಾ!
https://ahara.kar.nic.in/lpg/ ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಸಂಬಂಧಪಟ್ಟ ಬೇರೆ ಬೇರೆ ಲಿಂಕ್ ಗಳು ಇರುತ್ತವೆ. ಆ ಲಿಂಕ್ ಗಳ ಅಡಿಯಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವುದನ್ನು ಪರಿಶೀಲಿಸಿಕೊಳ್ಳಿ. ಬಳಿಕ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ಸ್ಟೇಟಸ್ ಆಫ್ ಡಿಬಿಟಿ (status of DBT) ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನೀವು ವರ್ಷ, ತಿಂಗಳು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಂಬರ್ ಹಾಕಿ GO ಎಂದು ಕ್ಲಿಕ್ ಮಾಡಿ.
ಈಗ ನಿಮ್ಮ DBT ಸ್ಟೇಟಸ್ ನಿಮ್ಮ ಕಣ್ಣೆದುರು ಕಾಣಿಸುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಮಂಜೂರಾಗಿದೆ. ಎಷ್ಟು ಸದಸ್ಯರು ಇದ್ದಾರೆ ಎಲ್ಲಾ ವಿವರಗಳನ್ನು ಕೂಡ ಇಲ್ಲಿ ಕಾಣಬಹುದು.
ನಿಮ್ಮ ಹೊಲ, ಗದ್ದೆ, ಜಮೀನಿಗೆ ದಾರಿ ಇದಿಯೋ ಇಲ್ವೋ ಮೊಬೈಲ್‌ನಲ್ಲೇ ತಿಳಿದುಕೊಳ್ಳಿ
ಒಂದು ವೇಳೆ ನಿಮಗೆ ಅನ್ನಭಾಗ್ಯ ಯೋಜನೆಯ ಈ ಕಂತಿನ ಹಣ ಬಿಡುಗಡೆ ಆಗದೆ ಇದ್ದರೆ, ಪ್ರೋಸೆಸಿಂಗ್ (processing) ಎನ್ನುವ ಸಂದೇಶ ಕಾಣಿಸಿದರೆ ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ಅರ್ಥ.
ಇದನ್ನು ಹೊರತುಪಡಿಸಿ ಆಧಾರ್ ಸೀಡಿಂಗ್ ಆಗಿಲ್ಲ ಅಥವಾ ಇತರ ಯಾವುದೇ ರೀತಿಯ ಸಂದೇಶಗಳು ಕಂಡುಬಂದರು ನೀವು ನಿಮ್ಮ ಬ್ಯಾಂಕ್ ಖಾತೆಗೆ ಹೋಗಿ ಈಕೆ ವೈ ಸಿ ಪರಿಶೀಲಿಸಿ.
Annabhagya money transferred to your ration card or Not, Check Status