ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ; ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ ಖಾತೆಗೆ ಜಮಾ!
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ವಾಸಿಸುವ ಬಡ ಕುಟುಂಬದವರಿಗೆ ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಒದಗಿಸುವ ಸಲುವಾಗಿ ಪಡಿತರ ಚೀಟಿ ವಿತರಣೆ ಮಾಡಿದೆ.
ರಾಜ್ಯ ಆಹಾರ ಮತ್ತು ಸರಬರಾಜು ಇಲಾಖೆ (food and civil supply and consumer affairs Government of Karnataka) ಹೊಸ ವರ್ಷದ ಅಂದರೆ ಜನವರಿ ತಿಂಗಳಿನ ಪಡಿತರ ಚೀಟಿ ಲಿಸ್ಟ್ (new ration card list released) ಬಿಡುಗಡೆ ಮಾಡಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಿ.
ಕೃಷಿ ಮಾಡೋ ರೈತರಿಗೆ 5 ರಿಂದ 50 ಲಕ್ಷ ರೂಪಾಯಿ ಸಹಾಯಧನ! ಇಂದೇ ಅಪ್ಲೈ ಮಾಡಿ
ದೇಶದಲ್ಲಿ ವಾಸಿಸುವ ಸಾಮಾನ್ಯ ನಾಗರಿಕರಿಗೆ ಅವರ ಅರ್ಹತೆಯ ಆಧಾರದ ಮೇಲೆ ಬಿಪಿಎಲ್ ಕಾರ್ಡ್ (BPL card) , ಅಂತ್ಯೋದಯ ಕಾರ್ಡ್ (antyodaya card) ಹಾಗೂ ಎಪಿಎಲ್ ಕಾರ್ಡ್ (APL card) ವಿತರಣೆ ಮಾಡಲಾಗುತ್ತದೆ.
ಅದರಂತೆಯೇ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರು ಸರ್ಕಾರದಿಂದ ಉಚಿತ ಪಡಿತರ ವಸ್ತುಗಳನ್ನು ಕೂಡ ಪಡೆಯಬಹುದಾಗಿದೆ.
2024ರ ಪಡಿತರ ಚೀಟಿ ಲಿಸ್ಟ್ ಬಿಡುಗಡೆ! (Ration card list 2024 released)
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ (Karnataka government guarantee schemes) ಗಳನ್ನು ಘೋಷಿಸಿದ ನಂತರ ಪಡಿತರ ಚೀಟಿಯ ಮೌಲ್ಯವು ಕೂಡ ಹೆಚ್ಚಿದೆ ಎನ್ನಬಹುದು. ಇದೇ ಕಾರಣಕ್ಕೆ ಈಗಾಗಲೇ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರು ಹೊಸ ಪಡಿತರ ವಿತರಣೆಗಾಗಿ ಕಾದು ಕುಳಿತಿದ್ದಾರೆ.
ಸದ್ಯದಲ್ಲಿಯೇ ಫಲಾನುಭವಿಗಳಿಗೆ ಪಡಿತರ ಚೀಟಿ, ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ಸಾಕಷ್ಟು ರೇಷನ್ ಕಾರ್ಡ್ ರದ್ದು ಪಡಿ ಕೂಡ ಮಾಡಲಾಗಿದೆ.
ನಿಮ್ಮ ಹೊಲ, ಗದ್ದೆ, ಜಮೀನಿಗೆ ದಾರಿ ಇದಿಯೋ ಇಲ್ವೋ ಮೊಬೈಲ್‌ನಲ್ಲೇ ತಿಳಿದುಕೊಳ್ಳಿ
ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹೇಗೆ?
*ಪಡಿತರ ಚೀಟಿ ಲಿಸ್ಟ್ ನಲ್ಲಿ ಹೆಸರು ಪರಿಶೀಲನೆ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
*ಇಲ್ಲಿ ನಿಮ್ಮ ರಾಜ್ಯದ ಹೆಸರನ್ನು ಆಯ್ಕೆ ಮಾಡಬೇಕು.
*ಈಗ ಮುಖಪುಟದ ತುದಿಯಲ್ಲಿ 2024ರ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತಿದೆ ಅದರ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಜಿಲ್ಲೆ ಗ್ರಾಮ ಹೋಬಳಿ ಮೊದಲಾದ ವಿವರಗಳನ್ನು ಭರ್ತಿ ಮಾಡಬೇಕು.
*ಸಬ್ಮಿಟ್ ಎನ್ನುವ ಬಟನ್ ಕ್ಲಿಕ್ ಮಾಡಿದರೆ ಹೊಸ ಲಿಸ್ಟ್ ಕಾಣಿಸುತ್ತದೆ.
*ಈಗ ಪಡಿತರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು.
ಗೃಹಲಕ್ಷ್ಮಿ ಹಣ ಒಟ್ಟಾರೆ 8,000 ಜಮಾ! ಇನ್ನೂ ಹಣ ಸಿಗದ ಮಹಿಳೆಯರಿಗೆ ಹೊಸ ಅಪ್ಡೇಟ್
ಈ ರೀತಿಯಾಗಿ ಆನ್ಲೈನ್ ಮೂಲಕವೇ ಪಡಿತರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದ್ಯೋ, ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ನೀವು ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ನಿಮಗೆ ಹೊಸ ಪಡಿತರ ಚೀಟಿ ಮಂಜೂರಾಗಿದೆಯಾ ಎಂಬುದನ್ನು ಆನ್ಲೈನ್ ಮೂಲಕವೇ ಪರಿಶೀಲಿಸಿಕೊಳ್ಳಬಹುದು.
Release of Ration Card List, Only if the name is on the list, they get money