ಗೃಹಲಕ್ಷ್ಮಿ ಹಣ ಒಟ್ಟಾರೆ 8,000 ಜಮಾ! ಇನ್ನೂ ಹಣ ಸಿಗದ ಮಹಿಳೆಯರಿಗೆ ಹೊಸ ಅಪ್ಡೇಟ್

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳ ಖರ್ಚು ನಿಭಾಯಿಸಲು ಸರ್ಕಾರ ಉಚಿತವಾಗಿ 2,000 ಸಾವಿರ ರೂಪಾಯಿಗಳನ್ನು ನೀಡುತ್ತಿದ್ದು, ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ನಾಲ್ಕನೇ ಕಂತಿನ (4th installment) ಹಣವು ಕೂಡ ಕೆಲವು ಜಿಲ್ಲೆಗಳಿಗೆ ತಲುಪಿದ್ದು, ಹಂತ ಹಂತವಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಯನ್ನು (Bank Account) ತಲುಪಲಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಸಾಕಷ್ಟು ಜನರ ಖಾತೆಯನ್ನು ಸೇರಿದರು ಕೂಡ ಇನ್ನೂ ಕೆಲವು ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎನ್ನಬಹುದು. ಆದರೆ ನೀವು ನಿಮ್ಮ ಖಾತೆಯಲ್ಲಿ ಇರುವ ಈ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ನಿಮ್ಮ ಖಾತೆಗೆ ಹಣ ಬರುವುದರಲ್ಲಿ (Money Deposit) ಡೌಟೇ ಇಲ್ಲ.

ರೇಷನ್‌ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸಲು ಅವಕಾಶ! ಇಲ್ಲಿದೆ ಸುಲಭ ವಿಧಾನ

ಈ ಕೆ ವೈ ಸಿ ಕಡ್ಡಾಯ! (E-KYC mandatory)

ರಾಜ್ಯದ್ಯಂತ ಗ್ರಾಮೀಣ ಭಾಗದಲ್ಲಿ ಈಗಾಗಲೇ ಗೃಹಲಕ್ಷ್ಮಿಯರಿಗೆ ಮೂರು ದಿನಗಳ ಶಿಬಿರ (Camp) ವನ್ನು ಕೂಡ ಸರ್ಕಾರ ಆ ಯೋಜನೆ ಮಾಡಿತ್ತು. ಈ ಮೂಲಕ ಮಹಿಳೆಯರಿಗೆ ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ನೀಡಲಾಗಿದೆ.

ಸರ್ಕಾರ ಈಗಾಗಲೇ ತಿಳಿಸಿರುವಂತೆ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar Card link) ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ಕೆಲಸ ಆಗದೇ ಇದ್ದರೆ ತಕ್ಷಣ ಬ್ಯಾಂಕಿಗೆ ಹೋಗಿ ಲಿಂಕ್ ಮಾಡಿಸಿ. ಬಳಿಕ ನಿಮ್ಮ ಖಾತೆಗೆ ಮಿಸ್ ಆಗದಂತೆ ಹಣ ಮಂಜೂರಾಗುತ್ತದೆ.

ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ ಎಲೆಕ್ಟ್ರಿಸಿಟಿ ಬಿಲ್ ಮತ್ತೆ ಹೆಚ್ಚಾಗುವ ಸಾಧ್ಯತೆ

Gruha Lakshmi Yojanaಸಿಡಿಪಿಓ ಅಧಿಕಾರಿಗಳನ್ನು ಭೇಟಿ ಮಾಡಿ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ (CDPO officers) ಗಳನ್ನು ಭೇಟಿ ಮಾಡಿದರೆ ನಿಮ್ಮ ಖಾತೆಯಲ್ಲಿ ಯಾವುದೇ ದೋಷ ಇದ್ದರೂ ಕೂಡ ಅವರು ಅದಕ್ಕೆ ಸೂಕ್ತ ಪರಿಹಾರವನ್ನು ಸೂಚಿಸುತ್ತಾರೆ, ಹಾಗಾಗಿ ಗೃಹಲಕ್ಷ್ಮಿಯರು ಸ್ಥಳೀಯ ಸಿಡಿಪಿಓ ಕಚೇರಿಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿ ಅರ್ಜಿ ಪರಿಶೀಲನೆ ಮಾಡಿಸಿಕೊಳ್ಳಬಹುದು.

ಕೃಷಿ ಭೂಮಿ ಇಲ್ಲದ ರೈತರು ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳೋ ಅವಕಾಶ! ಅರ್ಜಿ ಸಲ್ಲಿಸಿ

ನಾಲ್ಕನೇ ಕಂತಿನ ಹಣ ಬಿಡುಗಡೆ! (Gruha lakshmi 4th installment released)

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವನ್ನು ಕೂಡ ಸರ್ಕಾರ ಬ್ಯಾಂಕುಗಳಿಗೆ ವರ್ಗಾವಣೆ (Bank Transfer) ಮಾಡಿದೆ. ಬ್ಯಾಂಕುಗಳಲ್ಲಿ ನಿಮ್ಮ ಖಾತೆ ಸರಿಯಾಗಿ ಇದ್ದರೆ, ಅಂದರೆ ನಿಮ್ಮ ಖಾತೆ ಆಧಾರ್ ಸೀಡಿಂಗ್ (Aadhaar seeding with Bank Account) ಆಗಿದ್ದರೆ ಹಾಗೂ ಬ್ಯಾಂಕ್ ಖಾತೆ ಆಕ್ಟಿವ್ ಆಗಿದ್ದರೆ ತಕ್ಷಣ ಆ ಹಣ ನಿಮ್ಮ ಖಾತೆಯನ್ನು ತಲುಪಲಿದೆ.

ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಮೈಸೂರು, ಮಂಡ್ಯ, ರಾಯಚೂರು, ಚಾಮರಾಜನಗರ ಮೊದಲಾದ 15 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಜಮಾ ಆಗಿದೆ. ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ಕೂಡ ಈ ಹಣ ತಲುಪಲಿದೆ.

ಉಚಿತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು! ಈ ದಾಖಲೆಗಳು ಇದ್ದವರು ಅರ್ಜಿ ಸಲ್ಲಿಸಿ

ಫಲಾನುಭವಿ ಮಹಿಳೆಯರು ಇದುವರೆಗೆ ಗೃಹಲಕ್ಷ್ಮಿ ಯೋಜನೆಯ ಒಂದೇ ಒಂದು ಕಂತಿನ ಹಣವನ್ನು ಸ್ವೀಕರಿಸದೆ ಇದ್ದರೆ, ಗೃಹಲಕ್ಷ್ಮಿಯ ಹಣ ತಮ್ಮ ಖಾತೆಯನ್ನು ತಲುಪಲು ಈ ಮೇಲಿನ ಕೆಲವು ಸಣ್ಣ ಕೆಲಸಗಳನ್ನು ಮಾಡಿಕೊಂಡರೆ ಹೊಸ ವರ್ಷಕ್ಕೆ 8,000ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಹಾಗಾಗಿ ತಕ್ಷಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಸರ್ಕಾರ ಸೂಚಿಸಿದೆ.

Gruha lakshmi scheme money together 8,000 deposit, New update for women

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories