ಉಚಿತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು! ಈ ದಾಖಲೆಗಳು ಇದ್ದವರು ಅರ್ಜಿ ಸಲ್ಲಿಸಿ

ಮನೆ ನಿರ್ಮಾಣಕ್ಕೆ ಸರ್ಕಾರದಿಂದ ನೆರವು; ಗ್ರಾಮೀಣ ನಗರ ಪ್ರದೇಶ ಎರಡು ಕಡೆ ಮನೆ ನಿರ್ಮಾಣಕ್ಕೆ ಅವಕಾಶ

ಸ್ವಂತ ಸೂರು (own house) ನಿರ್ಮಾಣ ಮಾಡಿಕೊಳ್ಳಲು ರಾಜ್ಯ ಸರ್ಕಾರ (state government);ಅವಕಾಶ ಮಾಡಿ ಕೊಡುತ್ತಿದೆ, ಇದಕ್ಕಾಗಿ ನೀವು ಆನ್ಲೈನ್ (online application) ನಲ್ಲಿಯೇ ಅರ್ಜಿ ಸಲ್ಲಿಸಬಹುದು

ಗ್ರಾಮೀಣ ಭಾಗದಲ್ಲಿ ವಾಸಿಸುವವರು ಹಾಗೂ ನಗರ ಭಾಗದಲ್ಲಿ ವಾಸಿಸುವವರು ಕೂಡ ರಾಜ್ಯ ಸರ್ಕಾರದ ಉಚಿತ ವಸತಿ ಯೋಜನೆಯ (Housing Scheme) ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಅಂತೂ ಬಿಡುಗಡೆ ಆಯ್ತು 4ನೇ ಕಂತಿನ ಗೃಹಲಕ್ಷ್ಮಿ ಹಣ; ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ

ಉಚಿತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು! ಈ ದಾಖಲೆಗಳು ಇದ್ದವರು ಅರ್ಜಿ ಸಲ್ಲಿಸಿ - Kannada News

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme – RGRHS) ಅಡಿಯಲ್ಲಿ ರಾಜ್ಯ ಸರ್ಕಾರ ಇದೀಗ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ ನಗರ ಭಾಗದಲ್ಲಿ ವಾಸಿಸುವವರಿಗೂ ಕೂಡ ಸ್ವಂತ ಸೂರು ನಿರ್ಮಿಸಿಕೊಳ್ಳಲು ಅನುದಾನ ಬಿಡುಗಡೆ ಮಾಡಿದೆ.

ಬೆಂಗಳೂರು ನಗರ (Bengaluru City) ಪ್ರದೇಶಗಳಲ್ಲಿ ಈ ಯೋಜನೆ ಸದ್ಯ ಲಭ್ಯವಿದ್ದು ಬಹು ಮಹಡಿ ಕಟ್ಟಡ ಯೋಜನೆಯ ಅಡಿಯಲ್ಲಿ ಒಂದು ಕೊಠಡಿಯ ಮನೆ (1BHK) ಹಾಗೂ ಎರಡು ಕೊಠಡಿಗಳ ಮನೆ (2BHK) ನಿರ್ಮಾಣಕ್ಕೆ ಅರ್ಜಿ ಹಾಕಬಹುದು.

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi vasati Yojana)

ಬಹಳ ವರ್ಷಗಳಿಂದ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಲಕ್ಷಾಂತರ ಕುಟುಂಬಗಳು ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶ ನೀಡಿದೆ.

ಬಡತನ ರೇಖೆಗಿಂತ ಕೆಳಗಿರುವವರು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ರಾಜೀವ್ ಗಾಂಧಿ ವಸತಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ (loan with less interest) ಸೌಲಭ್ಯ ಒದಗಿಸುವುದು ಮಾತ್ರವಲ್ಲದೆ ಇಂತಹ ಸಾಲಗಳಲ್ಲಿ (Loan) ಅರ್ಧದಷ್ಟು ಸರ್ಕಾರವೇ ಭರಿಸುತ್ತದೆ.

ವಸತಿ ಯೋಜನೆ ಸೌಲಭ್ಯವನ್ನು ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮಾತ್ರ ವಾಸಿಸುವ ಜನರಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದೀಗ ನಗರ ಭಾಗದಲ್ಲಿ ವಾಸಿಸುವವರು ಕೂಡ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು.

ಹೊಸ ರೇಷನ್ ಕಾರ್ಡ್ ವಿತರಣೆ! ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡಿದ ಸರ್ಕಾರ

ರಾಜೀವ್ ಗಾಂಧಿ ವಸತಿ ಯೋಜನೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

housing schemeಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ
ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ
ಬೆಂಗಳೂರು ನಗರ ಅಥವಾ ಗ್ರಾಮೀಣ ಭಾಗದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ವಾಸವಾಗಿ ಇರುವುದಕ್ಕೆ ದಾಖಲೆ
ಬ್ಯಾಂಕ್ ಖಾತೆಯ ವಿವರ
ದಿವ್ಯಂಗ ಚೇತನರಾಗಿದ್ದರೆ ಪ್ರಮಾಣ ಪತ್ರ
ಈ ಮೊದಲಾದ ಮೂಲಭೂತ ದಾಖಲೆಗಳನ್ನು ನೀವು ನೀಡಬೇಕು.

ಇನ್ಮುಂದೆ ಇಂತಹವರಿಗೆ ಅನ್ನಭಾಗ್ಯ ಯೋಜನೆ ಹಣ ಸಿಗೋಲ್ಲ! ಸರ್ಕಾರದ ದೃಢ ನಿರ್ಧಾರ

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ (Jamir Ahmad Khan) ಖಾನ್ ಬೆಂಗಳೂರಿನಲ್ಲಿ ವಾಸಿಸುವ ಬಡವರಿಗೆ ಮನೆ ನಿರ್ಮಾಣ ಮಾಡಿಕೊಡಲು ಅನುದಾನ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ

ಈ ಹಿನ್ನೆಲೆಯಲ್ಲಿ ಈಗಾಗಲೇ ಬಡವರಿಗಾಗಿ ಕಟ್ಟಿಸುತ್ತಿರುವ ಕಟ್ಟಡಗಳಲ್ಲಿ ಸ್ವಂತ ಮನೆ ಹೊಂದಲು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಮೊದಲು ಕರ್ನಾಟಕ ರಾಜ್ಯ ಸರ್ಕಾರದ ವಸತಿ ವೆಬ್ಸೈಟ್ https://ashraya.karnataka.gov.in/cm_onelakh_2bhk/CM_Onelakh_2BHK_Public.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಸತಿ ಯೋಜನೆಯ ಪುಟ ತೆರೆದುಕೊಳ್ಳುತ್ತದೆ. ಮೊದಲಿಗೆ ಬೆಂಗಳೂರಿನಲ್ಲಿ ವಾಸಿಸುವವರಾಗಿದ್ದರೆ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಬೇಕು. ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದೀರೋ ಅಥವಾ ಗ್ರಾಮೀಣ ಪ್ರದೇಶವು ಎನ್ನುವುದನ್ನು ಏರಿಯಾ ಎನ್ನುವ ಕಾಲಂನಲ್ಲಿ ಭರ್ತಿ ಮಾಡಿ.

ಈಗ ಬೆಂಗಳೂರಿನಲ್ಲಿ ನಿಮ್ಮ ಪ್ರಸ್ತುತ ವಿಳಾಸವನ್ನು ನಮೂದಿಸಬೇಕು. ಬಳಿಕ ನಿಮ್ಮ ಆಧಾರ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವ ಸರಿಯಾದ ಹೆಸರನ್ನು ನಮೂದಿಸಬೇಕು.

ಬಳಿಕ ಮತ್ತೊಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಹಾಗೂ ಅದರಲ್ಲಿ ವಸತಿಗೆ ಸಂಬಂಧಪಟ್ಟ ಕೇಳಿರುವ ಎಲ್ಲಾ ವಿವರಗಳನ್ನು ನೀಡಿ. ಫಲಾನುಭವಿ ಕುಟುಂಬಕ್ಕೆ ಸರ್ಕಾರವೇ ಅರ್ಜಿಗಳನ್ನು ಪರಿಶೀಲಿಸಿ ಮನೆ ಮಂಜೂರು ಮಾಡುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವಸತಿ ಇಲಾಖೆಯನ್ನು ಸಂಪರ್ಕಿಸಿ.

Financial assistance from the government to build a free house

Follow us On

FaceBook Google News

Financial assistance from the government to build a free house