ಇನ್ಮುಂದೆ ಇಂತಹವರಿಗೆ ಅನ್ನಭಾಗ್ಯ ಯೋಜನೆ ಹಣ ಸಿಗೋಲ್ಲ! ಸರ್ಕಾರದ ದೃಢ ನಿರ್ಧಾರ
ರಾಜ್ಯಾದ್ಯಂತ ಪಡಿತರ ಚೀಟಿ ಹೊಂದಿರುವವರಿಗೆ (ration card holders) ಸರ್ಕಾರದಿಂದ ಉತ್ತಮವಾಗಿರುವ ಯೋಜನೆಗಳನ್ನು ಪರಿಚಯಿಸಿ ಅದರ ಪ್ರಯೋಜನ ನೀಡಲಾಗುತ್ತಿದೆ.
ಅದರಲ್ಲೂ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ (Antyodaya card) ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯ (Annabhagya scheme) ಮೂಲಕ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 170ಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಜಮಾ ಮಾಡುತ್ತಿದೆ.
ಗೃಹಲಕ್ಷ್ಮಿಯರಿಗೆ ಸಿಗಲಿದೆ ₹90,000! ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ
ಸರ್ಕಾರ ಅನ್ನಭಾಗ್ಯ ಯೋಜನೆಯ ಮೂಲಕ ಜನರಿಗೆ ಅಕ್ಕಿಯನ್ನು ನೀಡುವ ಬದಲು ಹಣವನ್ನು ಖಾತೆಗೆ ವರ್ಗಾವಣೆ (DBT) ಮಾಡುತ್ತಿರುವುದು, ಕಳೆದ ಜುಲೈ ತಿಂಗಳಿನಿಂದ ನಡೆದು ಬಂದಿದೆ.
ಇದುವರೆಗೆ ರಾಜ್ಯದಲ್ಲಿ ಫಲಾನುಭವಿಗಳ ಕುಟುಂಬಕ್ಕೆ ಕೊಡುವಷ್ಟು ಹೆಚ್ಚುವರಿ ಅಕ್ಕಿಯನ್ನು ಹೊಂದಿಸಲು ರಾಜ್ಯ ಸರ್ಕಾರ (state government) ಕ್ಕೆ ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಈಗಲೂ ಕೂಡ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ (Money Deposit) ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ಇಂಥವರ ಖಾತೆಗೆ ಒಂದು ರೂಪಾಯಿ ಹಣವನ್ನು ಕೂಡ ಸರ್ಕಾರ ಹಾಕುವುದಿಲ್ಲ.
ಕೆವೈಸಿ ಆಗದೆ ಇದ್ದರೆ ಜಮಾ ಆಗುವುದಿಲ್ಲ ಅನ್ನಭಾಗ್ಯ ಯೋಜನೆಯ ಹಣ! (E-KYC mandatory)
ಫಲಾನುಭವಿ ಕುಟುಂಬದ ಸದಸ್ಯರ ಖಾತೆಗೆ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿಯ ಹಣ ಜಮಾ ಆಗಬೇಕು ಅಂದ್ರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ (Aadhaar Card link mandatory) ಎಂದು ಸರ್ಕಾರ ತಿಳಿಸಿದೆ. ಆದರೆ ಇದುವರೆಗೆ ಕೂಡ ಸಾಕಷ್ಟು ಜನ ಈಕೆವೈಸಿ ಮಾಡಿಸಿಕೊಳ್ಳದೆ ಇರುವುದರಿಂದ ಅಂತವರ ಖಾತೆಗೆ (Bank Account) ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.
ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಸಿಗುತ್ತೆ 5 ಲಕ್ಷ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ಬೆನಿಫಿಟ್!
ನಿಮ್ಮ ಖಾತೆಯಲ್ಲಿ ಇರುವ ಲೋಪ ದೋಷಗಳನ್ನು ತಕ್ಷಣ ಸರಿಪಡಿಸಿಕೊಳ್ಳಿ!
ಮನೆಯ ಯಜಮಾನನ ಅಥವಾ ಯಜಮಾನೀಯ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಆ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಹಾಗೂ ಬ್ಯಾಂಕ್ ನಲ್ಲಿ ಇರುವ ಹೆಸರು ಒಂದಕ್ಕೊಂದು ಮ್ಯಾಚ್ ಆಗಬೇಕು.
ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಕೂಡ ಲಿಂಕ್ ಆಗಿರಬೇಕು. ಈ ರೀತಿ ಮಾಡಿಕೊಳ್ಳದೆ ಖಾತೆಯಲ್ಲಿ ಸಮಸ್ಯೆ ಉಳಿಸಿಕೊಂಡಿದ್ದರೆ ಅಂತಹವರ ಖಾತೆಗೆ ಹಣ ಬರಲು ಸಾಧ್ಯವೇ ಇಲ್ಲ.
ಅನ್ನಭಾಗ್ಯ ಯೋಜನೆ ಹಣ ಕಳೆದ ನಾಲ್ಕು ತಿಂಗಳುಗಳಿಂದಲೂ ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ನಿಮ್ಮ ಖಾತೆಗೆ ಒಂದೇ ಒಂದು ಕಂತಿನ ಹಣವು ಬಾರದೇ ಇದ್ದರೆ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆ ಇದಕ್ಕೆ ಕಾರಣವಾಗಿರುತ್ತದೆ.
ಗೃಹಲಕ್ಷ್ಮಿ ಹೊಸ ಅಪ್ಡೇಟ್! ಈ ಪಟ್ಟಿಯಲ್ಲಿ ಹೆಸರು ಇದ್ರೆ ಮಾತ್ರ ಮುಂದಿನ ಕಂತಿನ ಹಣ
ಹಾಗಾಗಿ ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. https://uidai.gov.in/aadhaar_dashboard/ekyc_trend.php ಈ ಅಧಿಕೃತ ವೆಬ್ಸೈಟ್ನಲ್ಲಿ ನೀವು ಈ KYC ಚೆಕ್ ಮಾಡಿಕೊಳ್ಳಬಹುದು. ಲಿಂಕ್ ಆಗಿದ್ದರೆ ನಿಮ್ಮ ಬ್ಯಾಂಕ್ ನ ವಿವರಗಳನ್ನು ಇಲ್ಲಿ ನೋಡಬಹುದು. ಲಿಂಕ್ ಆಗದೆ ಇದ್ದರೆ ತಕ್ಷಣವೇ ಬ್ಯಾಂಕ್ ಗೆ ಹೋಗಿ ಈ ಕೆಲಸ ಮಾಡಿಕೊಳ್ಳಿ.
ಇನ್ನೂ ಕಳೆದ ಕೆಲವು ತಿಂಗಳುಗಳಿಂದ ಪಡಿತರ ಪಡೆದುಕೊಳ್ಳದೆ ಇರುವ ಕುಟುಂಬಕ್ಕೂ ಕೂಡ ಅನ್ನಭಾಗ್ಯ ಯೋಜನೆಯ ಹಣ ಜಮಾ ಮಾಡುವುದಿಲ್ಲ ಎಂದು ಆಹಾರ ಇಲಾಖೆ ಸಚಿವರು ಈಗಾಗಲೇ ತಿಳಿಸಿದ್ದಾರೆ. 4 ರಿಂದ 5 ತಿಂಗಳುಗಳಲ್ಲಿ ಒಮ್ಮೆಯೂ ಪಡಿತರ ಪಡೆದುಕೊಳ್ಳದೆ ಇದ್ದರೆ ಈ ತಿಂಗಳಿನಿಂದ ಪಡಿತರ ತೆಗೆದುಕೊಳ್ಳಿ ಇಲ್ಲವಾದರೆ ನಿಮಗೆ ಹಣ ಜಮಾ ಆಗದೆ ಇರುವುದು ಮಾತ್ರವಲ್ಲ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗುವ ಸಾಧ್ಯತೆ ಇದೆ.
Annabhagya Yojana Money will not Deposit for such people from now on