ರಾಜ್ಯದಲ್ಲಿ ಸರಿ ಸುಮಾರು 4.30 ಕೋಟಿ ಜನರು ಸರ್ಕಾರದ ಉಚಿತ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ, ಅದರಲ್ಲಿ ಸುಮಾರು 1.16 ಕೋಟಿ ಜನರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳುತ್ತಿದ್ದಾರೆ.

ಇಷ್ಟೆಲ್ಲ ಯೋಜನೆಯ (Government scheme benefits) ಪ್ರಯೋಜನಗಳು ಜನರಿಗೆ ಸಿಗುತ್ತಿದ್ದರು, ಕೂಡ ಪೂರ್ಣ ಪ್ರಮಾಣದಲ್ಲಿ ಸರ್ಕಾರದ ಯೋಜನೆಗಳು ಯಶಸ್ವಿಯಾಗಿವೆಯೇ ಎನ್ನುವ ಪ್ರಶ್ನೆಗೆ ಉತ್ತರ ‘ಇಲ್ಲ’! ಯಾಕೆಂದರೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಪ್ರತಿ ತಿಂಗಳು ಎಲ್ಲಾ ಫಲಾನುಭವಿಗಳ ಖಾತೆಯನ್ನು (Bank Account) ಸೇರುತ್ತಿಲ್ಲ.

Gruha Lakshmi Yojana funds have been released, Check the women of this district

ಈ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಿಗೋಲ್ಲ ಉಚಿತ ರೇಷನ್! ಹೊಸ ವರ್ಷಕ್ಕೆ ಹೊಸ ರೂಲ್ಸ್

ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ ಆಗುವುದು ಖಚಿತ!

ರಾಜ್ಯದ್ಯಂತ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸುಮಾರು 1.17 ಕೋಟಿಗಿಂತಲೂ ಹೆಚ್ಚಿನ ಜನರು ಅರ್ಜಿ (application) ಸಲ್ಲಿಸಿದ್ದರು. ಇವುಗಳಲ್ಲಿ ಬಹುತೇಕ ಎಲ್ಲಾ ಮಹಿಳೆಯರ ಖಾತೆಗೂ ಹಣ ವರ್ಗಾವಣೆ (DBT) ಆಗಿದೆ.

ಆದರೆ ಕೆಲವು ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ (Bank Account) ಇರುವ ದೋಷಗಳಿಂದಾಗಿ ಅಂತವರ ಖಾತೆಗೆ ಹಣ ತಲುಪುತ್ತಿಲ್ಲ. ಮುಂದಿನ ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ (Money Deposit) ಆಗಬೇಕು ಎಂದು ಸರ್ಕಾರ ಈಗಾಗಲೇ ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಇತ್ತೀಚಿಗೆ ನಡೆದ ಗೃಹಲಕ್ಷ್ಮಿ ಕ್ಯಾಂಪ್ (Gruha lakshmi camp) ಬಹುತೇಕ ಯಶಸ್ವಿಯಾಗಿದೆ ಎನ್ನಬಹುದು.

ರೈತರಿಗೆ ಸರ್ಕಾರದ ಕೃಷಿ ಭಾಗ್ಯ, ಸಿಗಲಿದೆ 90% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ ಕ್ಯಾಂಪ್ ಮೂಲಕ ಮಹಿಳೆಯರಿಗೆ ಪರಿಹಾರ!

Gruha Lakshmi Yojanaಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯತ್ (Gram Panchayat) ನೇತೃತ್ವದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಅನ್ನು ಪ್ರತಿಯೊಂದು ಜಿಲ್ಲೆಯ, ಪ್ರತಿಯೊಂದು ತಾಲೂಕಿನ, ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ನಡೆಸಲಾಗಿತ್ತು. ಡಿಸೆಂಬರ್ 27ರಿಂದ 29ನೇ ತಾರೀಖಿನ ವರೆಗೆ ಗೃಹಲಕ್ಷ್ಮಿ ಕ್ಯಾಂಪ್ ನಡೆಸಲಾಗಿದ್ದು, ಇದರಲ್ಲಿ ಉಪಸ್ಥಿತರಿದ್ದ ಸಿಬ್ಬಂದಿಗಳ ಮೂಲಕ ಮಹಿಳೆಯರ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರವನ್ನು ಸೂಚಿಸಲಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ (Aadhaar link to bank account), ಹೊಸ ಬ್ಯಾಂಕ್ ಖಾತೆ ತೆರೆಯುವುದು, ಬ್ಯಾಂಕ್ ಖಾತೆಗೆ ಕೆವೈಸಿ (KYC) ಮಾಡಿಸಿಕೊಳ್ಳುವುದು ಮೊದಲಾದ ಸಮಸ್ಯೆಗಳನ್ನು ಕ್ಯಾಂಪ್ ಮೂಲಕ ಪರಿಹರಿಸಲಾಗಿದೆ.

ಗೃಹಲಕ್ಷ್ಮಿ ಹಣ ಪಡೆಯೋಕೆ ಇ-ಕೆವೈಸಿ ಕಡ್ಡಾಯ; ಹಾಗಾದ್ರೆ ಮಾಡಿಸೋದು ಹೇಗೆ ಗೊತ್ತಾ?

ಗೃಹಲಕ್ಷ್ಮಿ ಯೋಜನೆಯ ನಾಲ್ಕು ಕಂತಿನ ಹಣ ಬಿಡುಗಡೆ ಆಗಿದೆ. ಇವುಗಳಲ್ಲಿ ಒಂದು ಕಂತಿನ ಹಣವನ್ನು ಕೂಡ ಪಡೆಯದೆ ಇರುವ ಫಲಾನುಭವಿ ಮಹಿಳೆಯರಿಗೆ ಈ ಶಿಬಿರದ ಮೂಲಕ ಹಣ ಪಡೆದುಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ್ದಾರೆ.

Gruha Lakshmi Schemeಮೊದಲು ನೀವು ಎಲ್ಲಿ ಅರ್ಜಿ ಸಲ್ಲಿಸಿದ್ದೀರೋ ಅದೇ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಪರಿಶೀಲಿಸಿ ನಂತರ ಸ್ಟೇಟಸ್ ಚೆಕ್ (status check) ಮಾಡಿದಾಗ ಬ್ಯಾಂಕ್ ನ ಖಾತೆಯಲ್ಲಿ ಸಮಸ್ಯೆ ಇರುವುದು ಕಂಡು ಬಂದರೆ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಅಕೌಂಟ್ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಇಂಥವರಿಗೆ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ!

ಸರ್ಕಾರದ ಯಾವುದೇ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು, ಅದಕ್ಕೆ ಸರ್ಕಾರ ವಿಧಿಸಿರುವ ಮಾನದಂಡಗಳ ಅಡಿಯಲ್ಲಿ ಬರುವವರು ಮಾತ್ರ ಪ್ರಯೋಜನ ಪಡೆಯಬಹುದು. ಸರ್ಕಾರದ ನಿಯಮವನ್ನು ಮೀರಿ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರ ಕಾರ್ಡ್ ಅನ್ನು ಈಗಾಗಲೇ ರದ್ದುಪಡಿಸಲಾಗಿದೆ. ಹಾಗಾಗಿ ಅಂತಹ ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಸೇರಿದ ಮಹಿಳೆಯರಿಗೆ ಇನ್ನೂ ಮುಂದಿನ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಇಂತಹವರಿಗೆ ಡಿಸೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಸಿಗೋದಿಲ್ಲ?

ಗೃಹಲಕ್ಷ್ಮಿ ಹಣ ಬಿಡುಗಡೆ ಸ್ಟೇಟಸ್ ಚೆಕ್ ಮಾಡಿ (Check your Gruha lakshmi status)

Check Gruha Lakshmi Yojana Money Credited to your Bank Accountಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಹೊಂದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಲು, DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ (mobile application) ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.

ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಕಳುಹಿಸಲಾಗುತ್ತಿದೆ. ಅದನ್ನು ನಮೂದಿಸಿ ಲಾಗಿನ್ ಆಗಿ.

ಬಳಿಕ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಇಲ್ಲಿ ನೀಡಬೇಕು. ಹೆಸರು ಜನ್ಮ ದಿನಾಂಕ, ವಾಸ ಸ್ಥಳ ಮೊದಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು. ನಂತರ ಕ್ರಿಯೇಟ್ mPIN ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

ನಾಲ್ಕು ಅಂಕೆಗಳ mPIN ಕ್ರಿಯೇಟ್ ಮಾಡಿ ಲಾಗ್ ಇನ್ (login) ಆಗಿ. ನಂತರ ನೀವು ಗೃಹಲಕ್ಷ್ಮಿ ಯೋಜನೆಯ ಹಣ ಅಥವಾ ಇತರ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ (Money Transfer) ಆಗಿದ್ದರೆ ಅದರ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಆಗಿದ್ದರೆ ಬಹುತೇಕ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ಬಂದೇ ಬರುತ್ತದೆ. https://ahara.kar.nic.in/Home/EServices ಈ ವೆಬ್ಸೈಟ್ನಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಿಕೊಂಡರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗುವುದೋ ಇಲ್ಲವೋ ಎಂಬುದನ್ನು ತಿಳಿಯಬಹುದು.

Gruha Lakshmi Scheme New Update, New list Released