ರೈತರಿಗೆ ಸರ್ಕಾರದ ಕೃಷಿ ಭಾಗ್ಯ, ಸಿಗಲಿದೆ 90% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ

ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲು ಸಹಾಯಧನವನ್ನು ಘೋಷಿಸಿದೆ.

ರಾಜ್ಯ ಸರ್ಕಾರ ಕೃಷಿ ಭಾಗ್ಯ (Krushi Bhagya scheme) ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ರೈತರು (farmers) ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು.

ಕೃಷಿ ಹೊಂಡ ನಿರ್ಮಾಣದಿಂದ ಹಿಡಿದು ಇತರ ಕೃಷಿ ಚಟುವಟಿಕೆಗಳಿಗೆ (agriculture activities) ಬೇಕಾಗಿರುವ ಉಪಕರಣಗಳನ್ನು ಖರೀದಿ ಮಾಡುವುದರ ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಲು ಇಚ್ಚಿಸುವವರು ತಕ್ಷಣ ಅರ್ಜಿ ಸಲ್ಲಿಸಿ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಕೃಷಿ ಹೊಂಡ ನಿರ್ಮಾಣ, ಪಾಲಿಥಿನ್ ಹೊದಿಕೆ, ಡೀಸೆಲ್ ಪೆಟ್ರೋಲ್ ಹಾಗೂ ಸೋಲಾರ್ ಪಂಪ್ ಖರೀದಿ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ ಮೊದಲಾದವುಗಳಿಗೆ ಸರ್ಕಾರದಿಂದ 90% ವರೆಗೆ ಸಿಗಲಿದೆ ಸಹಾಯಧನ.

ರೈತರಿಗೆ ಸರ್ಕಾರದ ಕೃಷಿ ಭಾಗ್ಯ, ಸಿಗಲಿದೆ 90% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ - Kannada News

ಗೃಹಲಕ್ಷ್ಮಿ ಹಣ ಪಡೆಯೋಕೆ ಇ-ಕೆವೈಸಿ ಕಡ್ಡಾಯ; ಹಾಗಾದ್ರೆ ಮಾಡಿಸೋದು ಹೇಗೆ ಗೊತ್ತಾ?

ಕೃಷಿ ಭಾಗ್ಯ ಯೋಜನೆ ಘೋಷಣೆ (Krushi Bhagya scheme)

ರಾಜ್ಯ ಕೃಷಿ ಇಲಾಖೆ (state Agriculture department), ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲು ಸಹಾಯಧನವನ್ನು ಘೋಷಿಸಿದೆ.

ಕೃಷಿ ಹೊಂಡ ನಿರ್ಮಾಣ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಪಂಪ್ ಸೆಟ್ ಅಳವಡಿಕೆ, ಫಾಲಿಥಿನ್ ಹೊದಿಕೆ ದಿನದ ಚಟುವಟಿಕೆಗಳಿಗೆ ಆಯ್ದ ರೈತರಿಗೆ 90% ಸಹಾಯಧನ ನೀಡಲಾಗುತ್ತಿದೆ. ಯಾವ ರೈತರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸುವ ರೀತಿ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯಾದ್ಯಂತ ಮಳೆಯಾಶ್ರಿತ ಕೃಷಿ ಅವಲಂಬಿಸಿರುವ ರೈತರ ಸಂಖ್ಯೆ ಸಾಕಷ್ಟಿದೆ. ರಾಜ್ಯದ ಒಟ್ಟು ಹಿಡುವಳಿ ಭೂಮಿಯಲ್ಲಿ 64% ನಷ್ಟು ಸಾಗುವಳಿ ಭೂಮಿ ಮಳೆಯಾಶ್ರಿತ ಭೂಮಿ ಆಗಿದೆ. ಇವುಗಳಲ್ಲಿ 55% ನಷ್ಟು ಸಾಗುವಳಿ ಭೂಮಿಯಲ್ಲಿ ಆಹಾರ ಧಾನ್ಯಗಳನ್ನು ಹಾಗೂ 75% ನಷ್ಟು ಭೂಮಿಯಲ್ಲಿ ಎಣ್ಣೆ ಕಾಳುಗಳನ್ನು ಬೆಳೆಯಲಾಗುತ್ತದೆ.

ಹೀಗಾಗಿ ಈ ಬಾರಿ ಅಂತೂ ಮಳೆ ಸರಿಯಾಗಿ ಬಾರದೆ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾಕಷ್ಟು ಪ್ರದೇಶಗಳನ್ನು ಬರ ಪೀಡಿತ ಪ್ರದೇಶ ಎಂದು ಕೂಡ ಘೋಷಿಸಲಾಗಿದೆ. ಇದೀಗ ರೈತರ ಸುಸ್ಥಿರ ಕೃಷಿ ಅಭಿವೃದ್ಧಿಗಾಗಿ ಕೃಷಿ ಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.

ಇಂತಹವರಿಗೆ ಡಿಸೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಸಿಗೋದಿಲ್ಲ?

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

ಈ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಸಿಗುವ ಸಹಾಯಧನ ಪಡೆದುಕೊಳ್ಳಲು ರೈತರು ತಮ್ಮ ಹತ್ತಿರದ ಹೋಬಳಿ ಕೃಷಿ ಕಚೇರಿಗೆ ಹೋಗಿ ಸಂಬಂಧ ಪಟ್ಟ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ https://raitamitra.karnataka.gov.in/ ಅಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.Krushi Bhagya

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ಅರ್ಜಿ ನಮೂನೆ (ರೈತ ಸಂಪರ್ಕ ಕೇಂದ್ರದಲ್ಲಿಯೇ ಪಡೆದುಕೊಳ್ಳಿ)
ಆಧಾರ್ ಕಾರ್ಡ್ (Aadhaar Card)
ಖಾತೆಯ ವಿವರ (Bank Account Details)
ಪಹಣಿ ಪತ್ರ
ರೇಷನ್ ಕಾರ್ಡ್ (Ration Card)
ಜಾತಿ ಪ್ರಮಾಣ
ಅರ್ಜಿದಾರರ ಫೋಟೋ

ಡಿಸೆಂಬರ್ ತಿಂಗಳಿನಲ್ಲಿ ರೇಷನ್ ಕಾರ್ಡ್ ರದ್ದಾದವರ ಹೊಸ ಲಿಸ್ಟ್ ಬಿಡುಗಡೆ! ಚೆಕ್ ಮಾಡಿಕೊಳ್ಳಿ

ಎಷ್ಟು ಸಿಗಲಿದೆ ಸಹಾಯಧನ? (Subsidy)

ಕೃಷಿ ಹೊಂಡ ನಿರ್ಮಾಣ ಮಾಡಿ ಅದರ ದಾಖಲೆಗಳನ್ನು ಸಲ್ಲಿಸಿ ನಂತರ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಲು 75% ನಷ್ಟು ಸಹಾಯಧನ ಪಡೆಯಬಹುದು.

ಕೃಷಿ ಹೊಂಡದ ಪಾಲಿಥಿನ್ ಹೊದಿಕೆಗೆ, ರೈತರಿಗೆ ಪಾಲಿಥಿನ್ ಹೊದಿಕೆಗೆ ನೇರವಾದ ಸಂಸ್ಥೆಗೆ ಸರ್ಕಾರ ನೇರವಾಗಿ ಹಣ ಜಮಾ ಮಾಡಲಿದೆ.

ಸಣ್ಣ ನೀರಾವರಿ ಗೆ ಅನುಕೂಲವಾಗಲು ಪಂಪ್ ಸೆಟ್ (pump set) ನಿರ್ಮಾಣಕ್ಕಾಗಿ 30 ಸಾವಿರ ರೂಪಾಯಿಗಳನ್ನು ಘಟಕ ವೆಚ್ಚವಾಗಿ ಸರ್ಕಾರದಿಂದ ಪಡೆಯಬಹುದು.

ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಳ್ಳಲು ಇಂದೇ ಕೊನೆ! ಹಣ ಬಾರದವರಿಗೆ ಸೂಚನೆ

Farmers will get 90 Percent subsidy on Krushi Bhagya

Follow us On

FaceBook Google News

Farmers will get 90 Percent subsidy on Krushi Bhagya