ಗೃಹಲಕ್ಷ್ಮಿ ಹಣ ಪಡೆಯೋಕೆ ಇ-ಕೆವೈಸಿ ಕಡ್ಡಾಯ; ಹಾಗಾದ್ರೆ ಮಾಡಿಸೋದು ಹೇಗೆ ಗೊತ್ತಾ?

ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಪೂರ್ವದಲ್ಲಿ ನೀಡಿದ ಮಾತಿನಂತೆ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ.

ಈ ಐದು ಗ್ಯಾರಂಟಿಯಲ್ಲಿ ಅನ್ನಭಾಗ್ಯ (Annabhagya Scheme) ಹಾಗೂ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಫಲಾನುಭವಿಯಾಗಲು ಬಿಪಿಎಲ್ ರೇಶನ್ ಕಾರ್ಡ್ (Ration Card) ಕಡ್ಡಾಯವಾಗಿದೆ. ರೇಶನ್ ಕಾರ್ಡ್ನಲ್ಲಿ ಮನೆಯ ಯಜಮಾನನ ಹೆಸರು ಇರುವ ಜಾಗದಲ್ಲಿ ಮಹಿಳೆಯ ಹೆಸರು ಇದ್ದರೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ ಎಂದು ಮೊದಲು ತಿಳಿಸಲಾಗಿತ್ತು.

ಇಂತಹವರಿಗೆ ಡಿಸೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಸಿಗೋದಿಲ್ಲ?

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ೫ ಕೆ.ಜಿ. ಅಕ್ಕಿಯ ಬದಲು ಹಣವನ್ನು ನೀಡಲಾಗುತ್ತಿದೆ. ಇನ್ಮುಂದೆ ಈ ಎರಡು ಯೋಜನೆಗಳ ಲಾಭ ಪಡೆಯಲು ನೀವು ಪಡಿತರ ಚೀಟಿ ಇ-ಕೆವೈಸಿ (E-KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಇಲ್ಲದಿದ್ದರೆ ನಿಮಗೆ ಇನ್ಮುಂದೆ ಗೃಹ ಲಕ್ಷ್ಮಿ ಹಣ ಬರುವುದಿಲ್ಲ. ಹಾಗಾದರೆ ನಿಮ್ಮ ಪಡಿತರ ಚೀಟಿಯ ಇ-ಕೆವೈಸಿ ಆಗಿದೆಯೇ ಇಲ್ಲವೋ ಎನ್ನುವುದನ್ನು ನೀವು ಪರೀಕ್ಷಿಸಿಕೊಳ್ಳಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

ನಿಮ್ಮ ಜಮೀನು ಒತ್ತುವರಿ ಆಗಿದೆಯಾ? ಹಾಗಾದ್ರೆ ಹೀಗೆ ಮಾಡಿ ವಾಪಸ್ ಪಡೆಯಿರಿ

ಇ-ಕೆವೈಸಿ ಪರಶೀಲನೆ ಹೀಗೆ ಮಾಡಿ

Gruha Lakshmi Yojanaಮೊದಲು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.

ಅಲ್ಲಿ ಎಡಭಾಗದ ಮೆನುವಿನಲ್ಲಿ ಇ-ಸ್ಟೇಟಸ್ ಎನ್ನುವ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಈ ವೇಳೆ ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಲಿಂಕ್ ಒಂದು ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ.

ಈಗ ನಿಮ್ಮ ಮುಂದೆ ಮತ್ತೊಂದು ಪೇಜ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ನೀವು ಪಡಿತರ ವಿವರ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈಗ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಎರಡು ಆಯ್ಕೆಗಳು ಇರುತ್ತದೆ. ಮೊದಲನೆಯದು ವಿತ್ ಓಟಿಪಿ, ಇನ್ನೊಂದು ವಿತೌಟ್ ಓಟಿಪಿ. ಈಗ ವಿತೌಟ್ ಓಟಿಪಿ ಆಯ್ಕೆ ಮಾಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ನಮೂದು ಮಾಡಿ. ನಂತರ ಗೋ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈಗ ರೇಶನ್ ಕಾರ್ಡ್ ಸ್ಟೇಟಸ್ ಇಂಟರ್ ಫೇಸ್ ಓಪನ್ ಆಗುತ್ತದೆ. ಅದರ ಎಡಭಾಗದಲ್ಲಿ ನಿಮ್ಮ ಪಡಿತರ ಚೀಟಿಯ ವಿವರ ಇರುತ್ತದೆ. ಬಲ ಭಾಗದಲ್ಲಿ ಪ್ರತಿ ತಿಂಗಳು ಪಡೆಯುವ ಪಡಿತರದ ವಿವರ ಇರುತ್ತದೆ.

ರೈತರಿಗೆ ಬೆಳೆ ಪರಿಹಾರ ಧನ ಬಿಡುಗಡೆ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ಹಾಗೆಯೇ ಮಧ್ಯದಲ್ಲಿ ಪಡಿತರ ಚೀಟಿಯಲ್ಲಿ ಇರುವವರ ಹೆಸರು ಕಾಣಿಸುತ್ತದೆ. ಅದರಲ್ಲಿ ಎಷ್ಟು ಜನರ ಇ-ಕೆವೈಸಿ ಆಗಿದೆ, ಎಷ್ಟು ಜನರ ಇ-ಕೆವೈಸಿ ಬಾಕಿಯಿದೆ ಎನ್ನುವ ವಿವರ ನಿಮಗೆ ಕಾಣುತ್ತದೆ.

ಉದಾಹರಣೆಗೆ ಪಡಿತರ ಚೀಟಿಯಲ್ಲಿ ನಾಲ್ಕು ಜನರ ಹೆಸರು ಇದ್ದು, ನಾಲ್ಕು ಜನರದ್ದು ಇ-ಕೆವೈಸಿ ಆಗಿದೆ ಎಂದು ತೋರಿಸಿದರೆ ಏನು ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಒಬ್ಬರು ಅಥವಾ ಇಬ್ಬರದು ಮಾತ್ರ ಆಗಿದೆ ಎಂದು ತೋರಿಸಿದರೆ ಮಾತ್ರ ಉಳಿದವರ ಇ-ಕೆವೈಸಿ ಮಾಡಿಸಬೇಕು.

ಆಗ ನೀವು ಯಾರ ಇ-ಕೆವೈಸಿ ಆಗಿಲ್ಲ ಎಂದು ಕುಲಂಕೂಷವಾಗಿ ಪರಿಶೀಲನೆ ಮಾಡಬೇಕು.

ಮತ್ತೆ ನೀವು ಮೇನ್ ಮೆನುವಿಗೆ ಬಂದು ಇ-ಪಡಿತರ ಚೀಟಿ ಆಯ್ಕೆಯಲ್ಲಿ ಲಿಂಕ್ ವಿತ್ ಯುಐಡಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಜಿಲ್ಲಾವಾರು ಲಿಂಕ್ ಇರುತ್ತದೆ. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಲಿಂಕ್ ಮಾಡಬೇಕು.

ಈಗ ಮತ್ತೊಂದು ಪುಟ ನಿಮ್ಮೆದುರು ತೆರೆದುಕೊಳ್ಳುತ್ತದೆ. ಅಲ್ಲಿ ಯುಐಡಿ ಲಿಂಕಿಂಗ್ ವಿತ್ ಆರ್ಸಿ ಮೆಂಬರ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಯುವನಿಧಿ ಯೋಜನೆ ಹಣ ಪಡೆಯೋಕೆ ಮೊಬೈಲ್ ನಲ್ಲೇ 5 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ!

ಇಲ್ಲಿ ನಿಮಗೆ ಆಧಾರ್ ನಂಬರ್ ಮತ್ತು ವರ್ಚುವಲ್ ಐಡಿ ಎನ್ನುವ ಎರಡು ಆಯ್ಕೆಗಳು ಇರುತ್ತದೆ. ಆಧಾರ್ ನಂಬರ್ ಆಯ್ಕೆ ಮಾಡಿ. ನಂತರ ನಿಮ್ಮ ಆಧಾರ್ ಸಂಖ್ಯೆ ಹಾಕಿ ಗೋ ಎನ್ನುವ ಆಯ್ಕೆ ಕ್ಲಿಕ್ ಮಾಡಿ.

ಈ ವೇಳೆ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿ ಎಂಟ್ರಿ ಮಾಡಿ ಗೋ ಕ್ಲಿಕ್ ಮಾಡಿ. ನಂತರ ಪಡಿತರ ಚೀಟಿ ಸಂಖ್ಯೆ ನಮೂದಿಸಿ ಗೋ ಎನ್ನುವ ಆಯ್ಕೆ ಕ್ಲಿಕ್ ಮಾಡಿ.

ಈಗ ಸ್ಟೇಟಸ್ ಆಫ್ ರೇಶನ್ ಕಾರ್ಡ್ ಇಂಟರ್ ಫೇಸ್ ಓಪನ್ ಆಗುತ್ತದೆ. ಮೊದಲ ರೀತಿಯಲ್ಲಿಯೇ ಎಡ ಭಾಗದಲ್ಲಿ ಪಡಿತರ ಚೀಟಿಯ ವಿವರ, ಬಲ ಭಾಗದಲ್ಲಿ ಪಡಿತರ ತೆಗೆದುಕೊಂಡಿದ್ದರ ವಿವರ, ಮಧ್ಯಭಾಗದಲ್ಲಿ ಪಡಿತರ ಚೀಟಿಯಲ್ಲಿ ಇರುವವರ ಹೆಸರು ಕಾಣಿಸುತ್ತದೆ. ಈಗ ಸದಸ್ಯರ ಹೆಸರು, ಆಧಾರ್ ನಂಬರ್ನ ಕೊನೆಯ ನಾಲ್ಕು ಅಂಕಿಗಳು ಮತ್ತು ಇ-ಕೆವೈಸಿ ಆಗಿದ್ದರೆ ಎಸ್ ಎಂದು ಬರುತ್ತದೆ.

E-KYC is mandatory to get Gruha Lakshmi Scheme money, know how to do it

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories