ರೈತರಿಗೆ ಬೆಳೆ ಪರಿಹಾರ ಧನ ಬಿಡುಗಡೆ; ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ
ಈ ಬಾರಿ ಮುಂಗಾರು ಕೈ ಕೊಟ್ಟಿದ್ದರಿಂದ ರೈತರ (farmer) ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳೆಲ್ಲ ನಾಶವಾಗಿದೆ. ಈ ಬಾರಿ ರೈತ ಉತ್ತಮ ಮಳೆ ಆಗಬಹುದು ಎನ್ನುವ ಆಶಾಭಾವನೆಯಿಂದಲೇ ಸಾಲ ಸೋಲ (Bank Loan) ಮಾಡಿ ಬೀಜ, ಗೊಬ್ಬರ ಎಲ್ಲವನ್ನು ತಂದು ಭಿತ್ತನೆ ಮಾಡಿದ್ದ. ಆದರೆ ಮುಂಗಾರು ತೀರಾ ದುರ್ಬಲವಾದ ಕಾರಣ ಭಿತ್ತಿದ ಬೀಜಗಳು ಮೊಳಕೆಯೊಡೆಯಲೇ ಇಲ್ಲ. ಇದರಿಂದ ರೈತರಿಗೆ ತುಂಬಾನೆ ನಷ್ಟವಾಗಿದೆ.
ಬೆಳೆ ಕೈಗೆ ಬಾರದಿರುವುದರಿಂದ ಜೀವನ ಮಾಡುವುದು ಹೇಗೆ ಎನ್ನುವ ಚಿಂತೆ ರೈತ ವರ್ಗವನ್ನು ಕಾಡುತ್ತಿದೆ. ಇದರ ಜೊತೆ ಬೀಜ ಗೊಬ್ಬರ ಇತರೆ ಖರ್ಚುಗಳಿಗಾಗಿ ಮಾಡಿದ್ದ ಸಾಲವನ್ನು (Loan) ತೀರಿಸಬೇಕಿದೆ.
ಯುವನಿಧಿ ಯೋಜನೆ ಹಣ ಪಡೆಯೋಕೆ ಮೊಬೈಲ್ ನಲ್ಲೇ 5 ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ!
ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಳೆ ಪರಿಹಾರ ನಿಧಿ (Crop Relief Fund) ಬಿಡುಗಡೆ ಮಾಡಿದರೆ ರೈತರಿಗೆ ಸ್ವಲ್ಪ ಮಟ್ಟಿಗಾದರೂ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ ಎನ್ನುವುದು ಎಲ್ಲರ ಭಾವನೆಯಾಗಿದೆ.
ಬೆಳೆ ಪರಿಹಾರ (compensation) ನಿಧಿ ಬಿಡುಗಡೆಗಾಗಿ ರಾಜ್ಯ ಸರ್ಕಾರವು ಈಗಾಗಲೇ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿ ರಾಜ್ಯದ ಬರಪೀಡಿತವೆಂದು ಘೋಷಣೆಯಾದ 236 ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.
ಹಾಗಾಗಿ ಕೇಂದ್ರ ಸರ್ಕಾರವು ಆದಷ್ಟು ಶೀಘ್ರ ಬರ ಪರಿಹಾರ ನಿಧಿ ಬಿಡುಗಡೆ ಮಾಡಬಹುದು ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ. ಕೇಂದ್ರ ಸರ್ಕಾರವು ಎನ್ಡಿಆರ್ಎಫ್ನಿಂದ (NDRF) ಬರ ಪರಿಹಾರ ನಿಧಿ ಬಿಡುಗಡೆ ಮಾಡಬೇಕು.
ರಾಜ್ಯ ಸರ್ಕಾರವು ಕೂಡ ಕೇಂದ್ರದ ನೆರವಿಗಾಗಿ ಕಾದು ಕುಳಿತಿದೆ. ಆದರೆ ರೈತರು ರಾಜ್ಯ ಸರ್ಕಾರವು (state government) ಕೇಂದ್ರ ಸರ್ಕಾರದ ನೆರವಿಗಾಗಿ ಕಾಯದೆ ಕೂಡಲೆ ಬರ ಪರಿಹಾರ ನಿಧಿ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಬಗ್ಗಿರುವ ರಾಜ್ಯ ಸರ್ಕಾರವು ರೈತರಿಗೆ ಸಮಾಧಾನಕರ ಸುದ್ದಿ ನೀಡಿದೆ.
ಗೃಹಲಕ್ಷ್ಮಿ ಹಣ ಬರುವಂತೆ ಮಾಡಿಕೊಳ್ಳಲು ಇಂದೇ ಕೊನೆ! ಹಣ ಬಾರದವರಿಗೆ ಸೂಚನೆ
ಅದೇನು ಎಂದು ಕೇಳಿದರೆ ಕಳೆದ ವಾರವಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಕಂದಾಯ ಸಚಿವ ಕೃಷ್ಣಾ ಬೈರೇ ಗೌಡ ಅವರು ಖುದ್ದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬರ ಪರಿಹಾರ ನಿಧಿ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಬರ ಪರಿಸ್ಥಿತಿ ಅರಿವಿರುವ ಕೇಂದ್ರ ಸರ್ಕಾರ (central government) ವು ಆದಷ್ಟು ಶೀಘ್ರ ಬರ ಪರಿಹಾರ ನಿಧಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ. ಹಾಗಾಗಿ ರಾಜ್ಯ ಸರ್ಕಾರವೂ ಕೂಡ ಸಿದ್ಧತೆ ನಡೆಸಿದೆ. ಈ ಬಾರಿ ಫ್ರೂಟ್ಸ್ ಐಡಿ (FRUITS ID) ಬಳಕೆ ಮಾಡಿ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ. ಹಾಗಾಗಿ ಪ್ರತಿಯೊಬ್ಬ ರೈತರು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬರ ಪರಿಹಾರ ನಿಧಿಯ ಹಣ ಸಿಗುವುದಿಲ್ಲ.
ಇಂತಹ ರೇಷನ್ ಕಾರ್ಡುಗಳು ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಟೇಟಸ್ ಈ ರೀತಿ ಚೆಕ್ ಮಾಡಿ
ಫ್ರೂಟ್ಸ್ ಐಡಿಯ ಮೂಲಕ ನೇರವಾಗಿ ರೈತರ ಖಾತೆಗೆ (Bank Account) ಹಣ (DBT) ಜಮಾ ಮಾಡಲಾಗುತ್ತದೆ. ಹೀಗಾಗಿ ಯಾವುದೇ ಮಧ್ಯವರ್ತಿಗಳ (no middle man) ಕಾಟವಿಲ್ಲದೆ ನೀವು ಹಣ ಪಡೆದುಕೊಳ್ಳಬಹದು.
ರಾಜ್ಯ ಸರ್ಕಾರವು ಹಣ ಬಿಡುಗಡೆ ಆದ ಕೂಡಲೇ ರಾಜ್ಯದ ಒಂದು ತಾಲೂಕಿನಲ್ಲಿ ಈ ರೀತಿ ಪರೀಕ್ಷೆ ಮಾಡಿ ಅದು ಯಶಸ್ವಿ ಆದಲ್ಲಿ ರಾಜ್ಯದಾದ್ಯಂತ ಫ್ರೂಟ್ಸ್ ಐಡಿ ಬಳಕೆ ಮಾಡಿ ಹಣ ವರ್ಗಾವಣೆ ಮಾಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
Release of crop compensation funds to farmers
Our Whatsapp Channel is Live Now 👇