ಇಂತಹ ರೇಷನ್ ಕಾರ್ಡುಗಳು ಕ್ಯಾನ್ಸಲ್! ನಿಮ್ಮ ಕಾರ್ಡ್ ಸ್ಟೇಟಸ್ ಈ ರೀತಿ ಚೆಕ್ ಮಾಡಿ

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ (annabhagya scheme) ಇರಬಹುದು, ಗೃಹಲಕ್ಷ್ಮಿ ಯೋಜನೆ (Gruha lakshmi scheme) ಇರಬಹುದು ಎಲ್ಲದಕ್ಕೂ ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ.

ಸರ್ಕಾರ (government) ಜನರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅದು ರಾಜ್ಯ ಸರ್ಕಾರ ಇರಬಹುದು ಅಥವಾ ಕೇಂದ್ರ ಸರ್ಕಾರ ಇರಬಹುದು, ಕೇಂದ್ರ ಸರ್ಕಾರದಿಂದ ಜಾರಿಗೆ ಬಂದ ಯೋಜನೆಗಳನ್ನು ರಾಜ್ಯ ಸರ್ಕಾರದಲ್ಲಿಯೂ ಕೂಡ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನೀಡಲಾಗುತ್ತದೆ, ಇಂತಹ ಯೋಜನೆಗಳಲ್ಲಿ ಪಡಿತರ ಚೀಟಿ (ration card distribution) ವಿತರಣೆ ಕೂಡ ಒಂದು.

ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂದು ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ (ration card) ಎನ್ನುವುದು ಬಹಳ ಮಹತ್ವವನ್ನು ಪಡೆದುಕೊಂಡಿದೆ ಎಷ್ಟರಮಟ್ಟಿಗೆ ಅಂದ್ರೆ ನಮ್ಮ ಬಳಿ ಆಧಾರ್ ಕಾರ್ಡ್ (Aadhaar Card) ಇರುವುದು ಎಷ್ಟು ಮುಖ್ಯವೋ ಅಷ್ಟೇ ಪಡಿತರ ಚೀಟಿ ಹೊಂದಿರುವುದು ಕೂಡ.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ (annabhagya scheme) ಇರಬಹುದು, ಗೃಹಲಕ್ಷ್ಮಿ ಯೋಜನೆ (Gruha lakshmi scheme) ಇರಬಹುದು ಅಥವಾ ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿರುವ ಕಿಸಾನ್ ಯೋಜನೆಗಳೆ ಇರಬಹುದು. ಎಲ್ಲದಕ್ಕೂ ರೇಷನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ.

BPL Ration Card

ಇಂದಿನಿಂದ ಗೃಹಲಕ್ಷ್ಮಿ ಸಮಸ್ಯೆ ಬಂದ್! ಹಣ ಸಿಗದವರಿಗೆ ಸ್ಪಾಟ್ ಅಲ್ಲೇ ಪರಿಹಾರ

ಕೇಂದ್ರ ಸರ್ಕಾರ ಯಾರಿಗೆ ನೀಡಿದೆ ಗೊತ್ತಾ ರೇಷನ್ ಕಾರ್ಡ್?

ರೇಷನ್ ಕಾರ್ಡ್ ನಲ್ಲಿ ಬಿಪಿಎಲ್ ಕಾರ್ಡ್ (BPL card) , ಅಂತ್ಯೋದಯ ಕಾರ್ಡ್ (Antyodaya Card) ಹಾಗೂ ಎಪಿಎಲ್ ಕಾರ್ಡ್ (APL Card) ಎನ್ನುವ ಮೂರು ವಿಭಾಗಗಳನ್ನು ಕಾಣಬಹುದು. ಮೊದಲ ಎರಡು ಕಾರ್ಡ್ ಗಳಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು (below poverty line family) ಉಚಿತ ಪಡಿತರ ಹಾಗೂ ಉಚಿತವಾಗಿ ಸರ್ಕಾರದಿಂದ ಸಿಗುವ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಇದು ಗೊತ್ತಿರುವ ವಿಚಾರವೇ. ಆದರೆ ಪಡಿತರ ಚೀಟಿಯನ್ನು ವಿತರಣೆ ಮಾಡಿದ ನಂತರ ಅದನ್ನು ನಿಜವಾಗಿ ಫಲಾನುಭವಿಗಳು ಮಾತ್ರ ಪಡೆದುಕೊಂಡಿದ್ದಾರಾ? ಅಗತ್ಯ ಇರುವವರಿಗೆ ಮಾತ್ರ ಪಡಿತರ ವಸ್ತುಗಳು ವಿತರಣೆ ಆಗುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಯಾಕಂದ್ರೆ ಇಂದು ಉಳ್ಳವರು ಕೂಡ ಅಂದರೆ ಅನುಕೂಲ ಸ್ಥಿತಿಯಲ್ಲಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಇನ್ಮುಂದೆ ಯಾರಿಗೂ ಸಿಗಲ್ಲ ಬಿಪಿಎಲ್ ಕಾರ್ಡ್; ಸರ್ಕಾರದಿಂದ ಹೊರಬಿತ್ತು ಆದೇಶ

ಸರ್ಕಾರ ಕೈಗೊಂಡಿದೆ ಕಟ್ಟುನಿಟ್ಟಿನ ಕ್ರಮ!

ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ (guarantee schemes) ಅತಿ ಹೆಚ್ಚು ಹಣವನ್ನು ಅನುದಾನವಾಗಿ ನೀಡಿದೆ ಈ ಹಿನ್ನೆಲೆಯಲ್ಲಿ ಈ ಯೋಜನೆಗಳು ಇನ್ನೂ ಮುಂದುವರೆಯಬೇಕು ಅಂದ್ರೆ ಅದಕ್ಕೆ ಇನ್ನಷ್ಟು ಕೋಟ್ಯಂತರ ರೂಪಾಯಿಗಳನ್ನು ಮೀಸಲಿಡಬೇಕು.

ಇದರಿಂದ ರಾಜ್ಯದ ಬೊಕ್ಕಸ ಬರಿದಾಗುತ್ತಿರುವುದು ಸುಳ್ಳಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಈಗ ಕಟ್ಟುನಿಟ್ಟಿನ ಕ್ರಮ ಒಂದನ್ನು ಕೈಗೊಂಡಿದ್ದು ಅನರ್ಹರು ಕೂಡ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ್ರೆ ಅಂತವರನ್ನು ಗುರುತಿಸಿ ಅವರು ತಮ್ಮ ಕಾರ್ಡ್ ಗಳನ್ನು ಸರ್ಕಾರಕ್ಕೆ ಹಿಂತಿರುಗಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಯುವ ನಿಧಿ ಯೋಜನೆಗೆ ಅಪ್ಲೈ ಮಾಡಿ ಹಣ ಪಡೆಯೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

BPL Ration Cardಹಿಂತಿರುಗಿಸದೆ ಇದ್ರೆ ಶಿಕ್ಷೆ ಗ್ಯಾರಂಟಿ!

ಸರ್ಕಾರ ಈಗಾಗಲೇ ತಿಳಿಸಿರುವ ಪ್ರಕಾರ ಯಾರು ಸರಕಾರದ ಮಾನದಂಡಗಳ ಒಳಗೆ ಬರುತ್ತಾರೋ ಅಂತವರು ತಮ್ಮ ಬಳಿ ಇರುವ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಅನ್ನು ಹಿಂತಿರುಗಿಸಿ ಕೊಡಬೇಕು ಸ್ವಯಂಪ್ರೇರಿತವಾಗಿ ಸೆರೆಂಡರ್ (surrender your ration card) ಮಾಡಿದರೆ ಅಂತವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗುವುದಿಲ್ಲ.

ಒಂದು ವೇಳೆ ಸರ್ಕಾರದ ಆದೇಶ ಕಿವಿಗೆ ಬಿದ್ದ ನಂತರ ವಸ್ತುಗಳನ್ನು ಪಡೆದುಕೊಳ್ಳುತ್ತಾ, ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರೆ ಅಂತವರ ಕಾರ್ಡ್ ರದ್ದಾಗುವುದು ಮಾತ್ರವಲ್ಲದೆ ಶಿಕ್ಷೆಗೂ (penalty) ಕೂಡ ಗುರಿಯಾಗ ಬೇಕಾಗಬಹುದು.

ರಾಜ್ಯದಲ್ಲಿ ಕೋಟ್ಯಂತರ ಕುಟುಂಬಗಳು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ್ದಾರೆ. ಆದರೆ ಇವುಗಳಲ್ಲಿ ನಿಜಕ್ಕೂ ಅರ್ಹತೆ ಉಳ್ಳವರಿಗಿಂತ ಅರ್ಹತೆ ಇಲ್ಲದವರು ಪಡಿತರ ಚೀಟಿ ಪ್ರಯೋಜನ ಪಡೆದುಕೊಳ್ಳುತ್ತಿರುವುದು ಹೆಚ್ಚು. ಸರ್ಕಾರ ತಾನು ಘೋಷಿಸಿರುವ ಒಂದೊಂದೇ ಮಾನದಂಡಗಳನ್ನು ಪರಿಶೀಲಿಸಿ, ಅದರ ಅಡಿಯಲ್ಲಿ ಬಾರದೆ ಇರುವವರ ಕಾರ್ಡ್ ರದ್ದುಮಾಡಲು ಮುಂದಾಗಿದೆ.

ಪಿಯುಸಿ ಪಾಸಾಗಿದ್ರೆ ಸಿಗುತ್ತೆ ಸರ್ಕಾರಿ ನೌಕರಿ! ಅರಣ್ಯ ಇಲಾಖೆಯಿಂದ ಅರ್ಜಿ ಆಹ್ವಾನ

ವೈಟ್ ಬೋರ್ಡ್ ಕಾರು ಇದ್ರೆ ರೇಷನ್ ಕಾರ್ಡ್ ಇರೋದಿಲ್ಲ!

ಬಹಳ ಹಿಂದೆಯೇ ಸರ್ಕಾರದಿಂದ ಜಾರಿಯಾಗಿರುವ ನಿಯಮ ಇದು, ಯಾರ ಬಳಿ ವೈಟ್ ಬೋರ್ಡ್ ಕಾರ್ (white board car) ಇದೆಯೋ ಅಂತವರು ಬಿಪಿಎಲ್ ಕಾರ್ಡ್ ಹೊಂದಿರುವಂತಿಲ್ಲ. ಒಂದು ವೇಳೆ ಎಲ್ಲೋ ಬೋರ್ಡ್ ಹೊಂದಿದ್ದು ಟ್ಯಾಕ್ಸಿ (taxi) ಗಾಗಿ ಕಾರು ಬಳಕೆಯಾಗುತ್ತಿದ್ದರೆ ಅಂತವರು ಬಿಪಿಎಲ್ ಕಾರ್ಡ್ ಹೊಂದಬಹುದು.

ವೈಟ್ ಬೋರ್ಡ್ ಕಾರು ಇದೆ ಎಂದರೆ ಅದು ಅವರ ಸ್ವಂತ ಬಳಕೆಗೆ ಮಾತ್ರ. ಹಾಗಾಗಿ ಇಂಥವರನ್ನು ಅನುಕೂಲಸ್ಥರು ಎಂದು ಗುರುತಿಸಿರುವ ಸರ್ಕಾರ ಹೊಂದಿರುವವರ ಪಡಿತರ ಚೀಟಿಯನ್ನು ರದ್ದುಗೊಳಿಸಲು ನಿರ್ಧರಿಸಿದೆ.

ಕುಟುಂಬದಲ್ಲಿ ತಂದೆಯ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದು, ಮಗನ ಹೆಸರಿನಲ್ಲಿ ಕಾರು ಇದ್ದರೂ ಕೂಡ ಅಂತಹ ಕುಟುಂಬಕ್ಕೆ ಇನ್ನು ಮುಂದೆ ರೇಷನ್ ಕಾರ್ಡ್ ಪ್ರಯೋಜನ ಸಿಗುವುದಿಲ್ಲ. ಸರ್ಕಾರದಿಂದ ಶಿಕ್ಷೆಗೆ ಗುರಿಯಾಗಬಾರದು ಎಂದಾದರೆ ಕೂಡಲೇ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಬಳಕೆ ಮಾಡುತ್ತಿದ್ದರೆ ತಕ್ಷಣವೇ ಅದನ್ನು ಆಹಾರ ಇಲಾಖೆಗೆ ಹಿಂತಿರುಗಿಸಿ.

ಗೃಹಲಕ್ಷ್ಮಿ ಯೋಜನೆ ಹಣ ಸಿಗದವರಿಗೆ ರಾತ್ರೋ-ರಾತ್ರಿ ಬಿಗ್ ಅಪ್ಡೇಟ್! ಹೊಸ ಆದೇಶ

Check your Ration card status like this

Related Stories