ಯುವ ನಿಧಿ ಯೋಜನೆಗೆ ಅಪ್ಲೈ ಮಾಡಿ ಹಣ ಪಡೆಯೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಜಾರಿ; ಯುವಕರು ನಿರುದ್ಯೋಗ ಭತ್ಯೆಗಾಗಿ ಇಂದೇ ಅರ್ಜಿ ಸಲ್ಲಿಸಿ!

ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು (guarantee schemes) ಫಲಪ್ರದವಾಗಿವೆ. ನಿನ್ನೆ ತನ್ನ ಅಧಿಕೃತ ಟ್ವಿಟರ್ (X) ಖಾತೆಯಲ್ಲಿ ಮಾನ್ಯ ಸಿದ್ದರಾಮಯ್ಯ ಅವರು ಹೇಳಿಕೊಂಡಿರುವಂತೆ, ಯುವಕರು ದೇಶದ ಆಸ್ತಿ ಅದನ್ನು ಕಾಪಾಡುವುದು ನಮ್ಮ ಕರ್ತವ್ಯ ಈ ಹಿನ್ನೆಲೆಯಲ್ಲಿ ಯುವಕರಿಗೆ ಕೆಲಸ ಸಿಗುವವರೆಗೂ ಸರ್ಕಾರದಿಂದ ನಿರುದ್ಯೋಗ ಭತ್ಯೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಯುವನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು? (Who can apply for your Nidhi scheme?)

ಡಿಸೆಂಬರ್ 26, 2023 ಮಂಗಳವಾರ ಯುವ ನಿಧಿ ಯೋಜನೆಗೆ ಅರ್ಜಿ (application process) ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪದವಿ (degree) ಮುಗಿಸಿರುವ ಡಿಪ್ಲೋಮೋ (diploma) ಕೋರ್ಸ್ ಆಗಿರುವ ಯಾವುದೇ ಯುವಕ ಯುವತಿ, ಕಳೆದ ಆರು ತಿಂಗಳಿನಿಂದ ಕೆಲಸ ಸಿಗದೇ ಇದ್ದಲ್ಲಿ ಅಂತವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆ (unemployment alliance) ನೀಡಲಾಗುವುದು.

ಸರ್ಕಾರಿ ಕೆಲಸ! ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ

ಯುವ ನಿಧಿ ಯೋಜನೆಗೆ ಅಪ್ಲೈ ಮಾಡಿ ಹಣ ಪಡೆಯೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ - Kannada News

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

*ಕರ್ನಾಟಕದಲ್ಲಿಯೇ ಶಿಕ್ಷಣ ಮುಗಿಸಿರಬೇಕು.

*ಕಳೆದ 6 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು.

*ಪದವಿ ಶಿಕ್ಷಣ ಮುಗಿಸಿರುವವರು ತಾವು ಕರ್ನಾಟಕದವರು ಎಂದು ಸಾಬೀತುಪಡಿಸಲು 10ನೇ ತರಗತಿಯ ಮಾರ್ಕ್ಸ್ ಕಾರ್ಡ್, ಪಿಯುಸಿ ಮಾರ್ಕ್ಸ್ ಕಾರ್ಡ್ ಒದಗಿಸಬೇಕು.

*ಡಿಪ್ಲೋಮಾ ಮುಗಿಸಿರುವವರು 8 9ನೇ ತರಗತಿಯ ಮಾರ್ಕ್ಸ್ ಕಾರ್ಡ್ ಒದಗಿಸಬೇಕು.

*ಡಿಪ್ಲೋಮೋ ಹಾಗೂ ಪದವಿ ಕೋರ್ಸ್ ಮುಗಿಸಿರುವವರು 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿ ಒದಗಿಸುವುದು ಕಡ್ಡಾಯವಾಗಿದೆ.

*ಆಧಾರ್ ಕಾರ್ಡ್ (Aadhaar Card)

*ಬ್ಯಾಂಕ್ ಖಾತೆಯ ವಿವರ (Bank Account Details)

ಗೃಹಲಕ್ಷ್ಮಿ ಯೋಜನೆ ಹಣ ಸಿಗದವರಿಗೆ ರಾತ್ರೋ-ರಾತ್ರಿ ಬಿಗ್ ಅಪ್ಡೇಟ್! ಹೊಸ ಆದೇಶ

ಅರ್ಜಿ ಸಲ್ಲಿಸುವುದು ಹೇಗೆ? (How to apply)

Yuva Nidhi Yojana - Yuva Nidhi Scheme
ಯುವ ನಿಧಿ ಯೋಜನೆ ಅಡಿಯಲ್ಲಿ ಪದವಿ ಶಿಕ್ಷಣ ಮುಗಿಸಿರುವವರಿಗೆ ರೂ. 3,000 ಹಾಗೂ ಡಿಪ್ಲೋಮೋ ಶಿಕ್ಷಣ ಮುಗಿಸಿರುವವರಿಗೆ ರೂ. 1,500 ಗಳನ್ನು ಪ್ರತಿ ತಿಂಗಳು ಎರಡು ವರ್ಷಗಳ ಅವಧಿಗೆ ನೀಡಲಾಗುವುದು. ಯೋಚನೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆಫ್ಲೈನ್ (offline) ಮೂಲಕ ಅರ್ಜಿ ಸಲ್ಲಿಸುವುದಾದರೆ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್ ಬಾಪೂಜಿ ಕೇಂದ್ರ, ಗ್ರಾಮ ಒನ್, ಮೊದಲಾದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಇಂತಹವರು ಕೂಡಲೇ ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಇಲ್ಲದೆ ಇದ್ರೆ ಕಠಿಣ ಕ್ರಮ

ಇನ್ನು ಆನ್ಲೈನ್ (online) ಮೂಲಕ ಅರ್ಜಿ ಸಲ್ಲಿಸುವುದಾದರೆ, https://sevasindhugs.karnataka.gov.in/ ಸೇವಾ ಸಿಂಧು ಅಧಿಕೃತ ವೆಬ್ಸೈಟ್ನಲ್ಲಿ ಲಾಗ್ ಇನ್ ಆಗಬೇಕು. ಒಂದು ವೇಳೆ ನೀವು ಹೊಸ ಬಳಕೆದಾರರಾಗಿದ್ದರೆ ಸೇವಾ ಸಿಂಧು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಆಗಿ ಐಡಿ ನಂಬರ್ ಪಡೆದುಕೊಳ್ಳಬೇಕಾಗುತ್ತದೆ.

ಅದೇ ರೀತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿವರಗಳನ್ನು ದೃಢಪಡಿಸುವ ಸಲುವಾಗಿ https://nad.karnataka.gov.in/#/YuvaNidhi ಈ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಮ್ಮ ದಾಖಲೆಗಳನ್ನು ಸಲ್ಲಿಸಿ ಶಿಕ್ಷಣ ದೃಢೀಕರಣ ಪಡೆದುಕೊಳ್ಳಬೇಕಾಗುತ್ತದೆ. ಬಳಿಕ ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಅರ್ಜಿ ಪ್ರಕ್ರಿಯೆ ಕಂಪ್ಲೀಟ್ ಮಾಡಬಹುದು.

ಜನವರಿ 12, 2024 ಯುವ ನಿಧಿ ಯೋಜನೆಯ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಇದುವರೆಗೆ ಸರ್ಕಾರ ತಿಳಿಸಿಲ್ಲ. ಹಾಗಾಗಿ ನೀವು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ ನಿರುದ್ಯೋಗ ಭತ್ಯೆ ಪಡೆದುಕೊಳ್ಳಿ.

ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್! 4ನೇ ಕಂತಿನ ಹಣ ಬಿಡುಗಡೆ ಆಗೋಲ್ವಾ?

How to apply for Yuva Nidhi Yojana and get money, Complete Details

Follow us On

FaceBook Google News