ಇಂತಹವರು ಕೂಡಲೇ ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಇಲ್ಲದೆ ಇದ್ರೆ ಕಠಿಣ ಕ್ರಮ

ಅಂತ್ಯೋದಯ ಕಾರ್ಡ್ (antyodaya card) ಬಿಪಿಎಲ್ ಕಾರ್ಡ್ (BPL card) ಹಾಗೂ ಎಪಿಎಲ್ ಕಾರ್ಡ್ (APL Card) ಎಂದು ಮೂರು ವಿಭಾಗಗಳಾಗಿ ಮಾಡಿ ಆಯಾ ವರ್ಗದ ಜನತೆಗೆ ವಿತರಣೆ ಮಾಡಲಾಗಿದೆ.

ಪಡಿತರ ಚೀಟಿ (ration card) ಯನ್ನು ಅಂತ್ಯೋದಯ ಕಾರ್ಡ್ (antyodaya card) ಬಿಪಿಎಲ್ ಕಾರ್ಡ್ (BPL card) ಹಾಗೂ ಎಪಿಎಲ್ ಕಾರ್ಡ್ (APL Card) ಎಂದು ಮೂರು ವಿಭಾಗಗಳಾಗಿ ಮಾಡಿ ಆಯಾ ವರ್ಗದ ಜನತೆಗೆ ವಿತರಣೆ ಮಾಡಲಾಗಿದೆ.

ಆದರೆ ಇಲ್ಲಿ ಬಡತನ ರೇಖೆಗಿಂತ ಕೆಳಗಿನವರು (below poverty line) ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವುದಕ್ಕಿಂತಲೂ ಉಳ್ಳವರು ಈ ಪಡಿತರ ಕಾರ್ಡ್ ಹೊಂದಿರುವುದೇ ಹೆಚ್ಚು. ಇದನ್ನು ಸರ್ಕಾರ ಈಗ ಗಂಭೀರವಾಗಿ ಪರಿಗಣಿಸಿದೆ.

ಹೌದು, ಪಡಿತರ ಚೀಟಿ ಇರುವವರು ಸರ್ಕಾರದಿಂದ ಸಿಗುವ ಉಚಿತ ಪಡಿತರ ವಸ್ತುಗಳನ್ನು ಪಡೆದುಕೊಳ್ಳಬಹುದು ಜೊತೆಗೆ ಸರ್ಕಾರದಿಂದ ಲಭ್ಯವಾಗುವ ಹಲವು ಯೋಜನೆಗಳನ್ನು (government schemes) ಕೂಡ ಸುಲಭವಾಗಿ ತಮ್ಮದಾಗಿಸಿಕೊಳ್ಳಲು ಸಾಧ್ಯವಿದೆ

ಇಂತಹವರು ಕೂಡಲೇ ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಇಲ್ಲದೆ ಇದ್ರೆ ಕಠಿಣ ಕ್ರಮ - Kannada News

ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್! 4ನೇ ಕಂತಿನ ಹಣ ಬಿಡುಗಡೆ ಆಗೋಲ್ವಾ?

ಆದರೆ ನಿಜವಾಗಿ ಯಾರಿಗೆ ಪಡಿತರ ಸಲ್ಲಬೇಕು. ಅವರಿಗಿಂತಲೂ ಸರ್ಕಾರದ ಮಾನದಂಡಗಳ ಒಳಗೆ ಬರದವರೇ ಪಡಿತರ ಚೀಟಿ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಡಿಸೆಂಬರ್ 31 2023ರ ಒಳಗೆ ಅನರ್ಹರು ತಮ್ಮ ಪಡಿತರ ಚೀಟಿಯನ್ನು ಆಹಾರ ಇಲಾಖೆಗೆ ಹಿಂತಿರುಗಿಸಬೇಕು. ಇಲ್ಲವಾದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಘೋಷಿಸಿದೆ.

ಅಂತ್ಯೋದಯ ಕಾರ್ಡ್ ಹೊಂದಿರುವವರು ತಕ್ಷಣ ಸರೆಂಡರ್ ಮಾಡಿ! (Surrender your antyodaya card)

PHH / ಅಂತ್ಯೋದಯ ಕಾರ್ಡ್ ಅನ್ನು ಸಾಕಷ್ಟು ಜನ ಹೊಂದಿದ್ದಾರೆ ಆದರೆ ನಿಜವಾಗಿ ಯಾರು ಈ ಕಾರ್ಡ್ ಪ್ರಯೋಜನ ಪಡೆದುಕೊಳ್ಳಬೇಕು. ಅವರಿಗಿಂತಲೂ ಹೆಚ್ಚಾಗಿ ಸರ್ಕಾರದ ಮಾನದಂಡದ ಅಡಿಯಲ್ಲಿ ಬರದವರು ಕಾರ್ಡ್ ಹೊಂದಿದ್ದಾರೆ ಈಗಾಗಲೇ ಸರ್ಕಾರ ಅಂಥವರು ತಮ್ಮ ಪಡಿತರ ಚೀಟಿ, ಸರೆಂಡರ್ ಮಾಡಬೇಕು ಎಂದು ತಿಳಿಸಿತ್ತು.

ಆದರೂ ಗೋಧಿ, ಅಕ್ಕಿ ಮೊದಲಾದ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ಡಿಸೆಂಬರ್ 31 ವರೆಗೆ ತಮ್ಮ ಕಾರ್ಡ್ ಸರೆಂಡರ್ ಮಾಡಲು ಸರ್ಕಾರ ಕೊನೆಯ ಗಡುವು ನೀಡಿದೆ.

ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಕೆಲಸ! ಪಿಯುಸಿ ಪಾಸಾಗಿದ್ರೆ ಸಾಕು ಅಪ್ಲೈ ಮಾಡಿ

BPL Ration Cardಪಿಡಿಎಸ್ ಡೀಲರ್ (PDS dealer) ಗಳು, ಮರಣ ಹೊಂದಿರುವ ಹಾಗೂ ಸ್ಥಳಾಂತರಗೊಂಡಿರುವ ಕುಟುಂಬದವರು ಕೂಡ ಈ ಕಾರ್ಡ್ ನ ಪ್ರಯೋಜನ ಈಗಲೂ ಪಡೆದುಕೊಳ್ಳುತ್ತಿದ್ದಾರೆ. ಅನರ್ಹರಾದವರು ಕಾರ್ಡ್ ಹಿಂತಿರುಗಿಸುವಲ್ಲಿ ವಿಳಂಬವಾದರೆ ಕಟ್ಟುನಿಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಗೃಹಲಕ್ಷ್ಮಿ ಹಣ ಒಂದೇ ದಿನದಲ್ಲಿ ಜಮಾ! ಈ ಖಾತೆ ತೆರೆದವರಿಗೆ ತಕ್ಷಣ ಹಣ ಬಂದಿದೆ

ನ್ಯಾಯಬೆಲೆ ಅಂಗಡಿಯವರು ಮಾಹಿತಿ ನೀಡಬೇಕು!

ಅನರ್ಹರು ಕೂಡ ಪಡಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿರುವುದು ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳ ಗಮನಕ್ಕೆ ಬಂದರೆ ಅದನ್ನು ತಕ್ಷಣ ಸರ್ಕಾರಕ್ಕೆ ತಿಳಿಸಬೇಕು. ಇಲ್ಲವಾದರೆ ನ್ಯಾಯಬೆಲೆ ಅಂಗಡಿ ಡೀಲರ್ಶಿಪ್ ರದ್ದುಪಡಿಸಲಾಗುವುದು (dealership will be canceled). ನ್ಯಾಯಬೆಲೆ ಅಂಗಡಿಯನ್ನು ಮುಚ್ಚಬಹುದು ಎಂದು ಸರ್ಕಾರ ತಿಳಿಸಿದೆ. ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳು ಇದನ್ನು ಗಂಭೀರವಾಗಿ ಪರಿಗಣಿಸದೆ ಮಾಹಿತಿ ಇಲಾಖೆಗೆ ವಿವರಗಳನ್ನು ನೀಡದೆ ಇದ್ದಲ್ಲಿ ಬಾರಿ ಪ್ರಮಾಣದ ದಂಡ ತೆರಬೇಕಾಗಬಹುದು.

ಉಚಿತ ಅಕ್ಕಿ, ಗೃಹಲಕ್ಷ್ಮಿ ಹಣ ಪಡೆಯೋಕೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿ!

ಅನರ್ಹರು ಪಡಿತರ ಚೀಟಿಯನ್ನು ಎಲ್ಲಿ ಸಲ್ಲಿಸಬೇಕು? (Where to surrender ration card)

ಯಾರಿಗೆ ಪಡಿತರ ಚೀಟಿಯ ಅಗತ್ಯ ಇಲ್ಲವೋ, ಪಡಿತರದ ಬದಲಾಗಿ ಕೇವಲ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಬಳಸಿಕೊಳ್ಳುತ್ತಿದ್ದಾರೋ ಅಂತವರು ಸ್ವಯಂ ಪ್ರೇರಿತರಾಗಿ ತಮ್ಮ ಪಡಿತರ ಕಾರ್ಡ್ ಅನ್ನು ತಕ್ಷಣವೇ ಸರೆಂಡರ್ ಮಾಡಬೇಕು.

ಅನರ್ಹರು ತಮ್ಮ ಪಡಿತರ ಕಾರ್ಡ್ ಅನ್ನು, ಬ್ಲಾಕ್ ಪೂರೈಕೆ ಅಧಿಕಾರಿ, ಮಾರುಕಟ್ಟೆ ಅಧಿಕಾರಿ, ಜಿಲ್ಲಾ ಸರಬರಾಜು ಕಛೇರಿ, ರಾಂಚಿ ಇಲ್ಲಿಗೆ ಹಿಂತಿರುಗಿಸಬೇಕು ಎಂದು ತಿಳಿಸಲಾಗಿದೆ.

ಕೇವಲ ರಾಂಚಿಯಲ್ಲಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಅನರ್ಹರು ಪಡಿತರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅರ್ಹರಿಗೆ ಹೊಸ ಪಡಿತರ ಕಾರ್ಡ್ ವಿತರಣೆ ಮಾಡುವ ಸಲುವಾಗಿ ಅನರ್ಹರಿಂದ ಪಡಿತರ ಕಾರ್ಡ್ ಹಿಂತಿರುಗಿ ಪಡೆದು ಅದನ್ನು ಅಗತ್ಯ ಇರುವವರಿಗೆ ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹಾಗಾಗಿ ಯಾರಿಗೆ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ನ ಅಗತ್ಯ ಇಲ್ಲವೋ ಅವರು ತಕ್ಷಣವೇ ಸರ್ಕಾರಕ್ಕೆ ನಿಮ್ಮ ಕಾರ್ಡ್ ಅನ್ನು ಸ್ವಯಂ ಪ್ರೇರಣೆಯಿಂದ ಹಿಂತಿರುಗಿಸಿ.

ಉಚಿತ ಮನೆ ಪಡೆದುಕೊಳ್ಳಲು ಈಗಲೇ ಅರ್ಜಿ ಹಾಕಿ! ಸರ್ಕಾರದಿಂದ ಹೊಸ ಯೋಜನೆ

Such people should immediately surrender the ration card

Follow us On

FaceBook Google News

Such people should immediately surrender the ration card