ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್! 4ನೇ ಕಂತಿನ ಹಣ ಬಿಡುಗಡೆ ಆಗೋಲ್ವಾ?
ಪ್ರತಿ ತಿಂಗಳು 15ರಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಪ್ರತಿ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಅದರಂತೆ ನಾಲ್ಕನೇ ಕಂತಿನ (fourth installment released) ಹಣ ಬಿಡುಗಡೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ
ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ ಆಗಿದೆ, ಯಾರ ಖಾತೆಗೆ ಹಣ ಬಂದಿದೆ ಹಾಗೂ ಈ ಹಣ ಬಾರದೆ ಇದ್ರೆ ಏನು ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಕೆಲಸ! ಪಿಯುಸಿ ಪಾಸಾಗಿದ್ರೆ ಸಾಕು ಅಪ್ಲೈ ಮಾಡಿ
ಎಷ್ಟು ಜನರಿಗೆ ಸಿಕ್ಕಿದೆ ನಾಲ್ಕನೇ ಕಂತಿನ ಹಣ?
ರಾಜ್ಯ ಸರ್ಕಾರದಿಂದ ಘೋಷಿಸಲ್ಪಟ್ಟ ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿ (success) ಯಾಗಿದೆ, ಮೊದಲ ಎರಡನೆಯ ಹಾಗೂ ಮೂರನೆಯ ಕಂತಿನ ಹಣ ಪಡೆದು ಕೊಂಡವರಿಗೆ ಮತ್ತೊಂದು ಗುಡ್ ನ್ಯೂಸ್ ಅಂದ್ರೆ ಈಗ ನಾಲ್ಕನೇ ಕಂತಿನ ಹಣ ಕೂಡ ಬಿಡುಗಡೆ ಮಾಡಲಾಗಿದೆ.
ಮೊದಲ ಹಾಗೂ ಎರಡನೇ ಕಂತಿನ ಹಣ ಸ್ವಲ್ಪ ಬೇಗ ಬಿಡುಗಡೆ ಆಗಿತ್ತು. ಆದರೆ ನಾಲ್ಕನೇ ಕಂತಿನ ಹಣ ಕೆಲವು ತಾಂತ್ರಿಕ ದೋಷ (technical issues) ಗಳ ಪರಿಣಾಮವಾಗಿ ಸ್ವಲ್ಪ ವಿಳಂಬ ಆಗಿದೆ ಎಂದೇ ಹೇಳಬಹುದು. ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದಿಂದ ಹಣ ಬಿಡುಗಡೆ ಆಗಿದೆ ಎಂದ ತಕ್ಷಣ ಪ್ರತಿಯೊಬ್ಬರ ಖಾತೆಗೂ ಅದೇ ದಿನ ಹಣ ಜಮಾ ಆಗುತ್ತದೆ ಎಂದು ಅರ್ಥವಲ್ಲ. ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ದಿನ ಹಣ ಸಂದಾಯ ಆಗಬಹುದು ದಿನಕ್ಕೆ ನಾಲ್ಕರಿಂದ ಐದು ಲಕ್ಷ ಜನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಿದೆ.
ಅಂದರೆ ಸಂಪೂರ್ಣವಾಗಿ 100% ನಷ್ಟು ಪ್ರತಿಯೊಬ್ಬ ಮಹಿಳೆಯರ ಖಾತೆಗೂ ನಾಲ್ಕನೇ ಕಂತಿನ ಹಣ ಸಂದಾಯವಾಗಬೇಕು ಅಂದ್ರೆ ಕನಿಷ್ಠ ಜನವರಿ ಮೊದಲ ವಾರದವರೆಗೂ ನೀವು ಕಾಯ ಬೇಕಾಗಬಹುದು.
ಗೃಹಲಕ್ಷ್ಮಿ ಹಣ ಒಂದೇ ದಿನದಲ್ಲಿ ಜಮಾ! ಈ ಖಾತೆ ತೆರೆದವರಿಗೆ ತಕ್ಷಣ ಹಣ ಬಂದಿದೆ
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅಪ್ಡೇಟ್
ಗೃಹಲಕ್ಷ್ಮಿ ಯೋಜನೆ ನಾಲ್ಕು ಕಂತಿನ ಹಣ ಜಮಾ ಆಗಿದ್ದರು ಕೂಡ ಒಂದೇ ಒಂದು ಕಂತಿನ ಹಣವನ್ನು ಪಡೆಯದೆ ಇರುವವರು ಇದ್ದಾರೆ, ಇದಕ್ಕೆ ಕೆಲವು ತಾಂತ್ರಿಕ ದೋಷ ಗಳು ಕಾರಣ ಎಂದು ಹೇಳಲಾಗುತ್ತೆ
ಆದರೆ ನಾಲ್ಕನೇ ಕಂತಿನ ಹಣ ಬಿಡುಗಡೆ ಆದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (minister Lakshmi hebbalkar) ವಿಳಂಬವಾದರೂ ಸರಿ ಮೊದಲ ವಾರದಲ್ಲಿ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ನಾಲ್ಕನೇ ಕಂತಿನ ಹಣ ಬಂದು ಸೇರುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಉಚಿತ ಅಕ್ಕಿ, ಗೃಹಲಕ್ಷ್ಮಿ ಹಣ ಪಡೆಯೋಕೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿ!
ಗೃಹಲಕ್ಷ್ಮಿ ಯೋಜನೆ ಹಣ ಬಾರದೆ ಇದ್ರೆ ಕ್ಯಾಂಪ್ ಗೆ ಹೋಗಿ! (Visit gruha lakshmi camp)
ಗೃಹಲಕ್ಷ್ಮಿ ಯೋಜನೆಗಾಗಿ 1.17 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಇದರಲ್ಲಿ ಸುಮಾರು ನಾಲ್ಕರಿಂದ ಐದು ಲಕ್ಷ ಮಹಿಳೆಯರ ಖಾತೆಗೆ ಹಣ ಸಂದಾಯ ಆಗಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಯಾವ ಪ್ರದೇಶದಲ್ಲಿ ಯಾವ ಮಹಿಳೆಯರ ಖಾತೆಗೆ ಹಣ ಬಂದಿಲ್ಲವೋ ಅದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಕ್ಯಾಂಪ್ನಲ್ಲಿ ಆ ಮಹಿಳೆಯರು ಭಾಗವಹಿಸುವಂತೆ ಕೋರಲಾಗಿದೆ.
ಜಮೀನು, ಆಸ್ತಿ ಖರೀದಿ ಮಾಡುವವರಿಗೆ ಹೊಸ ನಿಯಮ! ನೋಂದಣಿಗೆ ಹೊಸ ರೂಲ್ಸ್
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 27ರಿಂದ 29 ರವರೆಗೆ ನಡೆಯಲಿದೆ ಕ್ಯಾಂಪ್! (Gruha Lakshmi camp will be held at Gram Panchayat)
ಯಾವುದೇ ಮಹಿಳೆಯರು ತಮಗೆ ಯಾವುದೇ ಕಂತಿನ ಹಣ ಬಾರದೆ ಇದ್ದರೆ ತಕ್ಷಣವೇ ನೀವು ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಪ್ರತಿ ಹಾಗೂ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಬ್ಯಾಂಕ್ ಖಾತೆಯ ವಿವರ ಮೊದಲದ ದಾಖಲೆಗಳನ್ನು ಹಿಡಿದುಕೊಂಡು 27 28 29 ಡಿಸೆಂಬರ್ 2023, ಈ ಮೂರು ದಿನಗಳ ಅವಧಿಯಲ್ಲಿ ನಡೆಯುವ ಕ್ಯಾಂಪ್ನಲ್ಲಿ ಭಾಗವಹಿಸಿ
ಈ ಸಂದರ್ಭದಲ್ಲಿ ಸಾಕಷ್ಟು ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಬ್ಯಾಂಕ್ನ ಸಿಬ್ಬಂದಿಗಳು, ಸೇವಾ ಕೇಂದ್ರದ ಸಿಬ್ಬಂದಿಗಳು ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಪ್ರತಿಯೊಬ್ಬರೂ ಕೂಡ ಈ ಕ್ಯಾಂಪ್ನಲ್ಲಿ ಭಾಗವಹಿಸಲಿದ್ದಾರೆ
ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಹೊಸ ಆದೇಶ
ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ತಾವು ಯಾವ ಬ್ಯಾಂಕ್ ಖಾತೆಯಲ್ಲಿ ಗೃಹಲಕ್ಷ್ಮಿ ಹಣ ಬರುವಿಕೆಗಾಗಿ ಕಾಯುತ್ತಿದ್ದೀರೋ ಆ ಬ್ಯಾಂಕ್ ಖಾತೆಯನ್ನು ಇಲ್ಲಿ ಇರುವ ಸಿಬ್ಬಂದಿಗಳಿಗೆ ತೋರಿಸಿ, ಈಕೆವೈಸಿ ಇದ್ದರೆ ತಕ್ಷಣವೇ ಮಾಡಿಸಿಕೊಡಲಾಗುತ್ತದೆ.
ಇದರ ಜೊತೆಗೆ ಹೊಸ ಬ್ಯಾಂಕು ಖಾತೆ ತೆರೆಯುವುದು ರೇಷನ್ ಕಾರ್ಡ್ ನಲ್ಲಿ ಸಮಸ್ಯೆ ಇದ್ದರೆ ಅದನ್ನು ಪರಿಹರಿಸುವುದು ಹೀಗೆ ಎಲ್ಲಾ ರೀತಿಯಲ್ಲಿ ಪರಿಶೀಲಿಸಿ ಮಹಿಳೆಯರ ಖಾತೆಗೆ ಹಣ ಬರುವಂತೆ ಮಾಡಲಾಗುವುದು.
ಹಾಗಾಗಿ ಇದುವರೆಗೆ ಹಣ ಬಾರದೆ ಇರುವವರು ಅಥವಾ ಒಂದೆರಡು ಕಂತಿನ ಹಣ ಮಾತ್ರ ಬಾಕಿ ಇರುವವರು ಕೂಡ ಹೋಗಿ ಕ್ಯಾಂಪ್ ನಲ್ಲಿ ಭಾಗವಹಿಸಬಹುದಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದೆ ತಪ್ಪದೆ ನಿಮ್ಮ ಖಾತೆ ಸೇರುವಂತೆ ಮಾಡಿಕೊಳ್ಳಿ.
Big Update on Gruha Lakshmi Yojana, 4th installment will be released