ಜಮೀನು, ಆಸ್ತಿ ಖರೀದಿ ಮಾಡುವವರಿಗೆ ಹೊಸ ನಿಯಮ! ನೋಂದಣಿಗೆ ಹೊಸ ರೂಲ್ಸ್

ಇನ್ನು ಮುಂದೆ ಆಸ್ತಿ ನೋಂದಣಿ ಸುಲಭವಾದರೂ ಕೂಡ ನೋಂದಣಿ (Property registration) ಮಾಡಿಕೊಳ್ಳುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು

ಇತ್ತೀಚಿನ ದಿನಗಳಲ್ಲಿ ಆಸ್ತಿ ಖರೀದಿ (property purchase) ಮಾರಾಟ ಹಾಗೂ ನೋಂದಣಿ (property registration) ವಿಚಾರದಲ್ಲಿ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿದೆ. ದೇಶಾದ್ಯಂತ ಸಾಕಷ್ಟು ಕಡೆ ಸರ್ಕಾರಿ ಜಮೀನನ್ನು (government land) ಖಾಸಗಿ ಆಸ್ತಿ ಎಂದು ಸುಳ್ಳು ದಾಖಲೆ (fake documents) ಗಳನ್ನು ನೀಡಿ ಆಸ್ತಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ, ಬಯೋಮೆಟ್ರಿಕ್ ಮಾದರಿಯಲ್ಲಿಯೂ ಕೂಡ ಆಸ್ತಿ ವಂಚನೆ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಆಸ್ತಿ ಮಾರಾಟ ಹಾಗೂ ನೋಂದಣಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯ ವಂಚನೆ ನಡೆಯಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ (Central government) ಆಸ್ತಿ ನಿಯಮಗಳನ್ನು ಬದಲಾಯಿಸಿದೆ.

ಉಚಿತ ಮನೆ ಪಡೆದುಕೊಳ್ಳಲು ಈಗಲೇ ಅರ್ಜಿ ಹಾಕಿ! ಸರ್ಕಾರದಿಂದ ಹೊಸ ಯೋಜನೆ

Big update for those who have a house in government land

ಇನ್ನು ಮುಂದೆ ಆಸ್ತಿ ನೋಂದಣಿ ಸುಲಭವಾದರೂ ಕೂಡ ನೋಂದಣಿ (Property registration) ಮಾಡಿಕೊಳ್ಳುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು, ಯಾವುದೇ ದಾಖಲೆ ಸರಿ ಇಲ್ಲ ಎಂದು ತಿಳಿದ ಹಂತದಲ್ಲಿ ಆಸ್ತಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬಾರದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿ ಆಸ್ತಿ ನೋಂದಣಿ! (Property registration in Delhi)

ಇತ್ತೀಚಿಗೆ ರಾಜಧಾನಿ ದೆಹಲಿಯಲ್ಲಿಯೂ ಕೂಡ ಆಸ್ತಿ ನೋಂದಣಿಗೆ ಸಂಬಂಧಪಟ್ಟ ಹಾಗೆ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅರ್ಜಿ ನೊಂದಣಿ ನಿಯಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ.

ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಹೊಸ ಆದೇಶ

ದೆಹಲಿಯ ಯಾವುದೇ ಭಾಗದಲ್ಲಿ ಆಸ್ತಿ ನೋಂದಣಿಗೆ ಅವಕಾಶ!

Property Documentsಸಾಮಾನ್ಯವಾಗಿ ಆಸ್ತಿ ನೋಂದಣಿ ಎಂದರೆ ಸಬ್ ರಿಜಿಸ್ಟ್ರಾರ್ (sab registrar office) ಕಚೇರಿಗೆ ಹೋಗಿ ಮಾಡಿಸಬೇಕು. ನೀವು ಯಾವ ಸಬ್ ರಿಜಿಸ್ಟ್ರಾರ್ (ನೋಟರಿ) ಕಚೇರಿ ವ್ಯಾಪ್ತಿಯಲ್ಲಿ ಬರುತ್ತಿರು ಅದೇ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳಬೇಕಿತ್ತು, ಇದಕ್ಕಾಗಿ ಹಲವು ಸಲ ಹೆಚ್ಚು ಸಮಯ ಕಾಯಬೇಕಿತ್ತು.

ಜೊತೆಗೆ ಬಡವರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣ ಮಾಡುವುದು ಕೂಡ ಕಷ್ಟವಾಗುತ್ತಿತ್ತು. ಆದರೆ ಈಗ ಈ ನಿಯಮಗಳನ್ನು ಬದಲಾಯಿಸಲಾಗಿದ್ದು, ದೆಹಲಿಯಲ್ಲಿ ಇರುವ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ

ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡೋ ರೈತರು ಆ ಭೂಮಿ ಸ್ವಂತವಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ

ಇದಕ್ಕಾಗಿ ಆನ್ಲೈನ್ ನಲ್ಲಿ ಮೊದಲಿಗೆ ಅಪಾಯಿಂಟ್ಮೆಂಟ್ (book appointment in online) ಬುಕ್ ಮಾಡಿಕೊಳ್ಳಬೇಕು, ನಂತರ ಹತ್ತಿರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಆಸ್ತಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ರಾಜಧಾನಿ ದೆಹಲಿಯಲ್ಲಿ ಮಾತ್ರವಲ್ಲದೆ ಇಡೀ ದೇಶಾದ್ಯಂತ ಈ ಹೊಸ ನಿಯಮ ಜಾರಿಗೆ ಬರಲಿದೆ. ಹಾಗಾಗಿ ರಾಜ್ಯದಲ್ಲಿಯೂ ಕೂಡ ಜನರು ಆಸ್ತಿ ನೋಂದಣಿಗಾಗಿ ಇನ್ನು ಮುಂದೆ ಅಷ್ಟು ಕಷ್ಟ ಪಡಬೇಕಾಗಿಲ್ಲ.

ರಾಜ್ಯದಲ್ಲಿ ಆಸ್ತಿ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ತಂದ ಸರ್ಕಾರ!

ಇತ್ತೀಚಿನ ದಿನಗಳಲ್ಲಿ ಭೂಮಿಯ ಮಾರಾಟ ಮತ್ತು ಖರೀದಿ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತದೆ. ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ತುಂಡು ಜಮೀನಿಗೂ ಕೂಡ ಕೋಟ್ಯಾಂತರ ರೂಪಾಯಿ ಕೊಡಬೇಕಾದ ಪರಿಸ್ಥಿತಿ ಇದೆ.

ಆಸ್ತಿ ನೋಂದಣಿ ಮಾಡುವ ಪ್ರಕ್ರಿಯೆ ಮೊದಲಿಗಿಂತಲೂ 50% ನಷ್ಟು ಹೆಚ್ಚಾಗಿದ್ದು ಜನರು ತುರ್ತಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಲು ರಿಜಿಸ್ಟ್ರಾರ್ ಕಚೇರಿಯಲ್ಲಿ ತುಂಬಿ ತುಳುಕುತ್ತಿದ್ದಾರೆ.

ನೀವು ಆರಂಭಿಸಿ ಕರ್ನಾಟಕ ಒನ್ ಸೇವಾ ಕೇಂದ್ರ; ಸರ್ಕಾರದಿಂದ ಪ್ರಾಂಚೈಸಿ ಪಡೆದು ಹಣ ಗಳಿಸಿ

ಇದೇ ಕಾರಣಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚುರುಕಿನ ನೋಂದಣಿ ಕೆಲಸ ನಡೆಸುವ ಸಲುವಾಗಿ ಮುದ್ರಾಂಕ ಶುಲ್ಕವನ್ನು ಹೆಚ್ಚಿಸಲಾಗಿದೆ ,ಇದರಿಂದ ಸರ್ಕಾರಿ ಯೋಜನೆಗಳಿಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಮೊದಲಿಗಿಂತಲೂ ಅರ್ಧದಷ್ಟು ಮುದ್ರಾಂಕ ಶುಲ್ಕ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ.

New rules for land and property buyers, New Rules for Registration

Related Stories