ಉಚಿತ ಮನೆ ಪಡೆದುಕೊಳ್ಳಲು ಈಗಲೇ ಅರ್ಜಿ ಹಾಕಿ! ಸರ್ಕಾರದಿಂದ ಹೊಸ ಯೋಜನೆ
ರಾಜ್ಯದಲ್ಲಿ ವಾಸಿಸುವ ವಸತಿ ರಹಿತ (homeless) ಜನರಿಗೆ ಸ್ವಂತ ಸೂರು (own house) ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ, ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಯೋಜನೆಯ ಅಡಿಯಲ್ಲಿ ರಾಜ್ಯದ ಜನತೆಗೆ ಉಚಿತವಾಗಿ ಮನೆ ನಿರ್ಮಿಸಿ (Housing Scheme) ಕೊಡುವ ಕಾರ್ಯವನ್ನು ಮಾಡಲಾಗುತ್ತಿದೆ.
ದುಡಿಯುವುದು ಜೀವನ ಸಾಗಿಸುವುದಕ್ಕೆ ಸಾಕಾಗಿರುವಾಗ ಹೋಮ್ ಲೋನ್ (Home Loan) ಅಂತಹ ಯೋಜನೆಯೊಂದಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಆದರೂ ಯಾವುದೇ ಆರ್ಥಿಕ ಆದಾಯ ಇಲ್ಲದೆ ಬ್ಯಾಂಕ್ ಗಳು ಹೋಮ್ ಲೋನ್ (Home Loan) ನೀಡುವುದು ಇಲ್ಲ.
ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಹೊಸ ಆದೇಶ
ರಾಜೀವ್ ಗಾಂಧಿ ವಸತಿ ಯೋಜನೆ!
ಸಮಾಜದಲ್ಲಿ ಸಾಕಷ್ಟು ಬಡ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದವರು ವಾಸಿಸುತ್ತಿದ್ದಾರೆ, ಇಂಥವರಿಗೆ ಬಾಡಿಗೆ ಮನೆಯಲ್ಲಿ (Rent House) ಅಥವಾ ಸಣ್ಣಪುಟ್ಟ ಗುಡಿಸಲುಗಳಲ್ಲಿ ಉಳಿದುಕೊಳ್ಳುವಂತಹ ಪರಿಸ್ಥಿತಿ ಇದೆ
ಹೀಗಾಗಿ ಬಡ ಕುಟುಂಬದವರು ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯಕ ಆಗುವಂತೆ ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಯನ್ನು ಆರಂಭಿಸಲಾಗಿದೆ
ಇದು ಬಹಳ ಹಿಂದಿನ ಯೋಜನೆಯಾಗಿದ್ದರೂ ಕೂಡ ಈ ಯೋಜನೆಯ ಅಡಿಯಲ್ಲಿ ನನ್ನ ಮನೆ ಎನ್ನುವ ಹೆಸರಿನಲ್ಲಿ ಬಡವರಿಗೆ ಕನಸಿನ ಮನೆ ನಿರ್ಮಾಣ ಮಾಡಿ ಕೊಡಲು ನಿರ್ಧರಿಸಿದೆ.
ರಾಜ್ಯ ಸರ್ಕಾರ ಬಡವರಿಗೆ ಮನೆ ನಿರ್ಮಾಣ ಮಾಡಿಕೊಡಲು ಅನುದಾನ ಒದಗಿಸುತ್ತಿದೆ. ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಉಚಿತ ಮನೆ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು? ಯಾರಿಗೆ ಮನೆ ಭಾಗ್ಯ ಇದೆ? ಎಲ್ಲದ್ರ ಬಗ್ಗೆ ಇಲ್ಲಿದೆ ಮಾಹಿತಿ.
ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡೋ ರೈತರು ಆ ಭೂಮಿ ಸ್ವಂತವಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ
RGHCL ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)
ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಪಡಿತರ ಚೀಟಿ
ಬ್ಯಾಂಕ್ ಖಾತೆಯ ವಿವರ ( ಕೆವೈಸಿ ಆಗಿರುವುದು ಕಡ್ಡಾಯ)
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ವಾಸವಾಗಿದ್ದೇವೆ ಎಂದು ಸಾಬೀತುಪಡಿಸುವ ದೃಢೀಕರಣ ಪತ್ರ ನೀಡಬೇಕು
ವಿಕಲಚೇತನರಾಗಿದ್ದರೆ ಗುರುತಿನ ಚೀಟಿ ಒದಗಿಸಬೇಕು
ನೀವು ಆರಂಭಿಸಿ ಕರ್ನಾಟಕ ಒನ್ ಸೇವಾ ಕೇಂದ್ರ; ಸರ್ಕಾರದಿಂದ ಪ್ರಾಂಚೈಸಿ ಪಡೆದು ಹಣ ಗಳಿಸಿ
ಅರ್ಜಿ ಸಲ್ಲಿಸುವುದು ಹೇಗೆ! (How to apply)
ಕರ್ನಾಟಕ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅಧಿಕೃತ ವೆಬ್ಸೈಟ್ https://ashraya.karnataka.gov.in/nannamane/index.aspx ಭೇಟಿ ನೀಡಿ.
ಬಳಿಕ ಆನ್ಲೈನ್ ಅರ್ಜಿ ಸಲ್ಲಿಸಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ನಂತರ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ತಾಲೂಕು ಹಾಗೂ ಹೋಬಳಿ ಎಲ್ಲಾ ವಿವರಗಳನ್ನು ನೀಡಬೇಕು. ಮುಂದುವರೆದಂತೆ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಮುಂದುವರೆಸಿ ಎಂದು ಕ್ಲಿಕ್ ಮಾಡಿದರೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
SSLC, PUC ಮುಗಿಸಿದ ವಿದ್ಯಾರ್ಥಿಗಳಿಗೆ ಸಿಗುತ್ತೆ ಉಚಿತ ಲ್ಯಾಪ್ ಟಾಪ್! ಹೀಗೆ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ (contact for more details)
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ, 8 /9 ನೆ ಫ್ಲೋರ್
ಈ ಬ್ಲಾಕ್, ಕ. ಮಂ ಕಟ್ಟಡ ಕೆಂಪೇಗೌಡ ರಸ್ತೆ
ಬೆಂಗಳೂರು 560 009
Phone number – 91 080 23118888
Apply now to Get free home, Housing scheme from Govt
Our Whatsapp Channel is Live Now 👇