ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡೋ ರೈತರು ಆ ಭೂಮಿ ಸ್ವಂತವಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ
ಅದು ಸ್ವಾತಂತ್ರ್ಯ ನಂತರದ (after independence) ಕಾಲ, ಸುಮಾರು 1980ನೇ ಇಸವಿಯಲ್ಲಿ ದೇಶದಲ್ಲಿ ಆಗುತ್ತಿರುವ ಇತರ ಹಲವು ಬದಲಾವಣೆಗಳ ಜೊತೆಗೆ ಕೃಷಿ ಕ್ಷೇತ್ರದಲ್ಲಿಯೂ (agriculture field) ಕೂಡ ಮಹತ್ವದ ಬದಲಾವಣೆಗಳನ್ನು ಮಾಡಲಾಗಿತ್ತು
ಈ ಸಂದರ್ಭದಲ್ಲಿ ಜಮೀನುಗಳನ್ನು ಜಮೀನು ಇಲ್ಲದೆ ಇರುವವರಿಗೆ ಸಾಗುವಳಿ ಮಾಡಿಕೊಳ್ಳುವ ಸಲುವಾಗಿ ತಲ ಎರಡು ಎಕರೆಗಳಂತೆ ವಿತರಣೆ ಮಾಡಲು ಅಂದಿನ ಸರ್ಕಾರ ಆದೇಶ ಹೊರಡಿಸಿತ್ತು.
ನೀವು ಆರಂಭಿಸಿ ಕರ್ನಾಟಕ ಒನ್ ಸೇವಾ ಕೇಂದ್ರ; ಸರ್ಕಾರದಿಂದ ಪ್ರಾಂಚೈಸಿ ಪಡೆದು ಹಣ ಗಳಿಸಿ
ಸಾಕಷ್ಟು ರೈತರು ಇದರ ಪ್ರಯೋಜನವನ್ನು ಪಡೆದುಕೊಂಡರು. ಇದೇ ಯೋಜನೆ ಮುಂದುವರೆದ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಕೂಡ ಸೃಷ್ಟಿಸಿತು ಎಲ್ಲ ರೈತರಿಗೂ ಜಮೀನು (Agriculture Land) ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ, ಆ ಹಿನ್ನೆಲೆಯಲ್ಲಿ ರೈತರು ಸಿಕ್ಕ ಸಿಕ್ಕ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಅಲ್ಲಿ ಜೀವನ ನಡೆಸಲು ಆರಂಭಿಸಿದರು.
ಬಗರ್ ಹುಕುಂ ಅಕ್ರಮ ಸಕ್ರಮ ನಿಯಮ ಜಾರಿ (bagair Hukum scheme)
ಮುಂದಿನ ದಿನಗಳಲ್ಲಿ ಬಗರ್ ಹುಕುಂ ಯೋಜನೆಯ ಮೂಲಕ ಸರ್ಕಾರಿ ಭೂಮಿಯಲ್ಲಿ ಸಾಕಷ್ಟು ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಆ ಜಮೀನಿನ ಹಕ್ಕು ಪತ್ರ (ಹಕ್ಕು ಪತ್ರ) ನೀಡಲು ಸರ್ಕಾರ ನಿರ್ಧರಿಸಿತು.
15 ವರ್ಷಗಳ ಅವಧಿಯಲ್ಲಿ ಯಾವ ರೈತ ಉಳುಮೆ ಮಾಡುತ್ತಾನೋ ಅಂತವರಿಗೆ ಹಕ್ಕು ಪತ್ರ ನೀಡಿ ಆ ಜಮೀನು ಅವರದ್ದೇ ಎಂದು ತೀರ್ಮಾನಿಸಲಾಯಿತು. ಸರ್ಕಾರದ ಜಮೀನಿನಲ್ಲಿ ರೈತರು ಎಷ್ಟೇ ವರ್ಷದಿಂದ ಕೆಲಸ ಮಾಡಿಕೊಂಡು ಬಂದಿದ್ದರು ಕೂಡ ಅವರಿಗೆ ಹಕ್ಕು ಪತ್ರ ನೀಡದೆ ಇದ್ದಲ್ಲಿ ಸರ್ಕಾರದ ಯಾವುದೇ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಭೂಮಿಯ ಪತ್ರವೇ ಇರುವುದಿಲ್ಲ ಹಾಗಾಗಿ ಇದರ ಆಧಾರದ ಮೇಲೆ ಸಾಲ ಸೌಲಭ್ಯಗಳು (Loan) ಸಿಗುವುದಿಲ್ಲ. ರೈತರ ಈ ಸಂಕಷ್ಟವನ್ನು ಮತ್ತೊಮ್ಮೆ ಮನಗಂಡಿರುವ ರಾಜ್ಯ ಸರ್ಕಾರ ಇದೀಗ ಮತ್ತೆ ಹಕ್ಕು ಪತ್ರ ವಿತರಣೆಗೆ ಮುಂದಾಗಿದೆ.
SSLC, PUC ಮುಗಿಸಿದ ವಿದ್ಯಾರ್ಥಿಗಳಿಗೆ ಸಿಗುತ್ತೆ ಉಚಿತ ಲ್ಯಾಪ್ ಟಾಪ್! ಹೀಗೆ ಅರ್ಜಿ ಸಲ್ಲಿಸಿ
ರೈತರು ಭೂ ಸಾಗುವಳಿ ಹಕ್ಕು ಪತ್ರ ಪಡೆದುಕೊಳ್ಳಲು ಕಾನೂನುಗಳು ಜಾರಿಯಲ್ಲಿ ಇವೆ.
1991 – ಕರ್ನಾಟಕ ಭೂ ಕಂದಾಯ ಕಾಯಿದೆ ನಮೂನೆ 50 ಅರ್ಜಿ ಸ್ವೀಕಾರ
1999ರಲ್ಲಿ ನಮೂನೆ 53 ಅರ್ಜಿ ಸ್ವೀಕಾರ
2018 ರಲ್ಲಿ ನಮೂನೆ 57 ಅಡಿಯಲ್ಲಿ ರೈತರಿಂದ ಅರ್ಜಿ ಸ್ವೀಕಾರ.
ಇನ್ನೂ ಗ್ರಹಲಕ್ಷ್ಮಿ ಹಣ ಪಡೆಯದವರಿಗಾಗಿ ಹೊಸ ಮಾರ್ಗಸೂಚಿ ಪ್ರಕಟ! ಇಲ್ಲಿದೆ ಮಾಹಿತಿ
ಡಿಜಿಟಲ್ ಹಕ್ಕು ಪತ್ರ ವಿತರಣೆ! (Digital hakku Patra distribution)
ರಾಜ್ಯ ಕಂದಾಯ ಇಲಾಖೆ ರೈತರಿಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ವಿತರಣೆ ಬಗ್ಗೆ ಚಿಂತನೆ ನಡೆಸಿದ್ದು ಕಳೆದ 15 ವರ್ಷಗಳಿಗಿಂತಲೂ ಅಧಿಕ ಸಮಯದ ವರೆಗೆ ಒಂದೇ ಭೂಮಿಯಲ್ಲಿ ಉಳುಮೆ ಮಾಡಿ ಹಕ್ಕು ಪತ್ರಕ್ಕಾಗಿ ಅರ್ಜಿ (application) ಸಲ್ಲಿಸುವ ರೈತರ ಅರ್ಜಿಗಳನ್ನು ತಂತ್ರಜ್ಞಾನ (technology) ವನ್ನು ಬಳಸಿ ಪರಿಶೀಲಿಸಲಾಗುವುದು
ಪರಿಶೀಲಿಸಿ ದ ನಂತರ ಫಲಾನುಭವಿಗಳಿಗೆ ಡಿಜಿಟಲ್ ಹಕ್ಕು ಪತ್ರ ವಿತರಣೆ ಮಾಡಲಾಗುವುದು. ನಮೂನೆ 50 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ಸ್ಥಳ ಪರಿಶೀಲನೆ ಮಾಡಿ ತಂತ್ರಜ್ಞಾನದ ಮೂಲಕ ಜಿಪಿಎಸ್ ಇಮೇಜ್ ಪಡೆದುಕೊಂಡು ನಿಜಕ್ಕೂ ರೈತ ಸಾಗುವಳಿ ಮಾಡುತ್ತಿದ್ದಾನೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ, ಮಾಹಿತಿ ಸರಿಯಾಗಿ ಇದ್ದರೆ ಅಂತಹ ರೈತರಿಗೆ ಡಿಜಿಟಲ್ ಹಕ್ಕು ಪತ್ರ ಸದ್ಯದಲ್ಲಿಯೇ ವಿತರಣೆ ಮಾಡಲಾಗುವುದು ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ರೇಷನ್ ಕಾರ್ಡ್ ಅಕ್ರಮ ತಡೆಯಲು ಮಾಸ್ಟರ್ ಪ್ಲಾನ್! ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್
ಪ್ರಯೋಗಾತ್ಮಕವಾಗಿ ಹೊಸ ತಂತ್ರಜ್ಞಾನವನ್ನು ಬಳಸಿ ಸಾಗುವಳಿ ಭೂಮಿಯ ಬಗ್ಗೆ ಮಾಹಿತಿ ತಿಳಿಯಲಾಗುವುದು, ಕೆಲವು ತಾಲೂಕುಗಳಲ್ಲಿ ಈ ಪ್ರಯೋಗ ಆರಂಭವಾಗಿದ್ದು ಇದು ಯಶಸ್ವಿಯಾದರೆ ರಾಜ್ಯದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
Farmers cultivating on government land apply for land ownership
Our Whatsapp Channel is Live Now 👇