ರೇಷನ್ ಕಾರ್ಡ್ ಅಕ್ರಮ ತಡೆಯಲು ಮಾಸ್ಟರ್ ಪ್ಲಾನ್! ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್

Story Highlights

ಇಂಥವರಿಗೆ ಆಹಾರ ಇಲಾಖೆಯ ಕೊನೆಯ ಎಚ್ಚರಿಕೆ; ರೇಷನ್ ಕಾರ್ಡ್ ರದ್ದಾಗುವುದು ಮಾತ್ರವಲ್ಲದೆ ದಂಡ ಅಥವಾ ಶಿಕ್ಷೆಯನ್ನು ಸಹ ಅನುಭವಿಸಬೇಕಾಗುತ್ತದೆ

ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನೀವಾಗಿಯೇ ನಿಮ್ಮ ರೇಷನ್ ಕಾರ್ಡ್ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅಥವಾ ನಿಮ್ಮ ರೇಷನ್ ಕಾರ್ಡ್ ಅನ್ನು ಬೇರೆಯವರಿಗೆ ಕೊಟ್ಟು ಅವರು ಅದನ್ನ ತಪ್ಪಾಗಿ ಬಳಸಿಕೊಳ್ಳುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಇಲ್ಲವಾದರೆ ಮುಂದೆ ಆಗಬಹುದಾದ ತೊಂದರೆಗೆ ನೀವೇ ನೇರವಾಗಿ ಜವಾಬ್ದಾರರಾಗುತ್ತೀರಿ!

ಸ್ನೇಹಿತರೆ, ಇಂದು ರೇಷನ್ ಕಾರ್ಡ್ (Ration Card) ಎನ್ನುವುದು ಬಹಳ ಮುಖ್ಯವಾಗಿರುವಂತಹ ಒಂದು ದಾಖಲೆ ಎನ್ನುವುದು ನಿಮಗೂ ಗೊತ್ತು. ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಸರ್ಕಾರದ ಯೋಜನೆಯ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ

ಅನ್ನಭಾಗ್ಯ ಯೋಜನೆಯ ₹680 ರೂಪಾಯಿ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಆದರೆ ಸರ್ಕಾರದಿಂದಲೇ ಸಿಗುತ್ತಿರುವ ಈ ಪ್ರಯೋಜನವನ್ನು ಅಕ್ರಮ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ಈ ಹಿನ್ನೆಲೆಯಲ್ಲಿ ಕೆಲವರ ರೇಷನ್ ಕಾರ್ಡ್ ರದ್ದಾಗುವ (ration card cancellation) ಎಲ್ಲಾ ಸಾಧ್ಯತೆಗಳು ಇವೆ.

ನೀವು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ, ಇಲ್ಲವಾದರೆ ರೇಷನ್ ಕಾರ್ಡ್ ರದ್ದಾಗುವುದು ಮಾತ್ರವಲ್ಲದೆ ದೊಡ್ಡ ಮೊತ್ತದ ದಂಡ ತೆರಬೇಕಾಗಬಹುದು, ಜೊತೆಗೆ ಶಿಕ್ಷೆಯನ್ನು ಅನುಭವಿಸ ಬೇಕಾಗಬಹುದು!

ರೇಷನ್ ಕಾರ್ಡ್ ಅಕ್ರಮಕ್ಕೆ ಸರ್ಕಾರದ ಕ್ರಮ!

ಬಿಪಿಎಲ್ ಕಾರ್ಡ್ ವಿತರಣೆ ಮಾಡಿರುವುದೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ (below poverty line family) ಗಳು ಉಚಿತವಾಗಿ ಪಡಿತರ ಪಡೆದುಕೊಂಡು ತಮ್ಮ ಹಸಿವನ್ನು ನೀಗಿಸಿಕೊಳ್ಳಲಿ ಎನ್ನುವ ಕಾರಣಕ್ಕೆ.

ಆದರೆ ದುರಾದೃಷ್ಟಕ್ಕೆ ನಿಜವಾಗಿ ಫಲಾನುಭವಿಗಳ ಬಳಿ ಈ ರೇಷನ್ ಕಾರ್ಡ್ ಇರುವುದಕ್ಕಿಂತ ಯಾರಿಗೆ ಅಗತ್ಯ ಇಲ್ಲವೋ ಅವರ ಬಳಿ ಇರುವುದೇ ಜಾಸ್ತಿ. ಅಷ್ಟೇ ಅಲ್ಲ ರೇಷನ್ ಕಾರ್ಡ್ ಹೊಂದಿರುವ ಸಾಕಷ್ಟು ಜನ ಉಚಿತವಾಗಿ ಪಡಿತರ ಪಡೆದುಕೊಂಡು ಅದನ್ನು ಇತರ ಅಂಗಡಿಗಳಲ್ಲಿ ಅಥವಾ ಬೇರೆ ವ್ಯಕ್ತಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಘಟನೆಗಳು ಕೂಡ ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಅಕ್ರಮವನ್ನು ತಡೆಗಟ್ಟುವುದಕ್ಕೆ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ ಇನ್ಮುಂದೆ ನಿಮ್ಮ ಬಳಿ ಇರಬೇಕು ಪಿಂಕ್ ಕಾರ್ಡ್!

ಇನ್ನು ಮುಂದೆ ಯಾವುದೇ ಕಾರಣಕ್ಕೂ ಉಚಿತ ಪಡಿತರ ತೆಗೆದುಕೊಂಡು ಅದನ್ನು ಬೇರೆಲ್ಲೂ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ನೀವು ಹೀಗೆ ಮಾಡಿದ್ದು ಸರ್ಕಾರದ ಗಮನಕ್ಕೆ ಬಂದ್ರೆ ಕ್ಷಣಮಾತ್ರದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ.

ಇಂತಹ ತಪ್ಪುಗಳನ್ನು ಸರ್ಕಾರಕ್ಕೆ ಕಂಡು ಹಿಡಿಯುವುದು ಕೂಡ ಕಷ್ಟವಲ್ಲ ಹಾಗಾಗಿ ಅಕ್ರಮವಾಗಿ ಪಡಿತರ ಚೀಟಿ ಬಳಸಿಕೊಳ್ಳುತ್ತಿರುವವರು ತಮ್ಮ ರೇಷನ್ ಕಾರ್ಡ್ ರದ್ದಾಗಬಹುದು ಎನ್ನುವುದರ ಬಗ್ಗೆ ಗಮನಹರಿಸಲೇಬೇಕು.

BPL Ration Cardರೇಷನ್ ಕಾರ್ಡ್ ಗೆ ಕೆ ವೈ ಸಿ ಕಡ್ಡಾಯ! (KYC mandatory for ration card)

ರೇಷನ್ ಕಾರ್ಡ್ ನಲ್ಲಿ ನಡೆಯುವ ವಂಚನೆಯನ್ನು ತಪ್ಪಿಸುವ ಸಲುವಾಗಿ ಪಡಿತರ ಅಂಗಡಿಯಲ್ಲಿ ನೀವು ರೇಷನ್ ಕಾರ್ಡ್ ಪಡೆದುಕೊಳ್ಳುವಾಗ ಬಯೋಮೆಟ್ರಿಕ್ (biometric) ದಾಖಲೆಯನ್ನು ಕೊಡಲೇಬೇಕು, ನಿಮ್ಮ ಬೆರಳಚ್ಚು ತೆಗೆದುಕೊಂಡ ನಂತರವೇ ನಿಮಗೆ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ

ಅಷ್ಟು ಮಾತ್ರ ಅಲ್ಲದೆ ಪಡಿತರ ಚೀಟಿ ಹೊಂದಿರುವವರು ಇನ್ನು ಮುಂದೆ ಕೆ ವೈ ಸಿ ಮಾಡಿಸಿಕೊಳ್ಳಲೇಬೇಕು, ಇದಕ್ಕೆ ಸರ್ಕಾರ ಕೊಟ್ಟಿರುವ ಗಡುವು ಡಿಸೆಂಬರ್ 30ರ ವರೆಗೆ ಮಾತ್ರ.

ಬಡವರಿಗೆ ಮನೆ ಭಾಗ್ಯ! ಕೇವಲ 1 ಲಕ್ಷ ಪಾವತಿಸಿದರೆ ಸಿಗುತ್ತೆ ಸರ್ಕಾರದಿಂದ ಮನೆ

ನೀವೇನಾದ್ರೂ ಡಿಸೆಂಬರ್ ಅಂತ್ಯದ ಒಳಗೆ ಈ ಕೆಲಸ ಮಾಡಿಕೊಳ್ಳದೆ ಇದ್ದಲ್ಲಿ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪಡಿತರ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ನ್ಯಾಯಬೆಲೆ ಅಂಗಡಿಯಲ್ಲಿಯೇ ಪಡಿತರ ಕಾರ್ಡ್ ಗೆ ಈಕೆ ವೈ ಸಿ ಮಾಡಿಸಿಕೊಳ್ಳಬಹುದು.

ಈ ಕೆವೈಸಿ ಮಾಡಿಸಿಕೊಂಡರೆ ಪಡಿತರದಲ್ಲಿ ನಡೆಯುವಂತಹ ಯಾವುದೇ ಅಕ್ರಮವನ್ನು ಕೂಡ ಸುಲಭವಾಗಿ ಪತ್ತೆ ಹಚ್ಚಬಹುದು ಹಾಗಾಗಿ ಇಂತಹ ಪ್ರಕರಣಗಳು ಕೂಡ ಇನ್ನು ಮುಂದೆ ಕಡಿಮೆ ಆಗಬಹುದು ಎಂದು ಸರ್ಕಾರದ ನಿರೀಕ್ಷೆ.

ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇದ್ದರೂ ಕಾರ್ಡ್ ಅಮಾನತ್ತು!

ಇಲ್ಲಿ ಸರ್ಕಾರ ಮೊದಲೇ ಹೇಳಿದಂತೆ ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದೆ ಇರುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು, ಆದರೆ ಇಲ್ಲಿನ ಸಣ್ಣ ಬದಲಾವಣೆ ಎಂದರೆ ಆರು ತಿಂಗಳವರೆಗೆ ಯಾರು ಪಡಿತರ ವಸ್ತುಗಳನ್ನು ತೆಗೆದುಕೊಂಡಿಲ್ಲವೋ ಅಂತವರ ಕಾರ್ಡ್ ರದ್ದುಪಡಿಸಲಾಗುವುದು ಎನ್ನುವ ಮಾಹಿತಿ ಇತ್ತು.

ಈಗ ಬಂದಿರುವ ಮಾಹಿತಿಯ ಪ್ರಕಾರ ಇಂತಹ ಕಾರ್ಡ್ ಹೊಂದಿರುವವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕಾರಣವನ್ನು ತಿಳಿದುಕೊಳ್ಳುತ್ತಾರೆ ಒಂದು ವೇಳೆ ನೀವು ಕೊಟ್ಟಿರುವ ಕಾರಣ ಸರಿ ಎನಿಸಿದರೆ ನಿಮಗೆ ಪುನಃ ರೇಶನ್ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತೆ, ಅಲ್ಲಿಯವರೆಗೂ ರೇಷನ್ ಕಾರ್ಡ್ ಅಮಾನತ್ತುಗೊಳಿಸಲಾಗುತ್ತದೆ ಹೊರತು ನೇರವಾಗಿ ರದ್ದುಪಡಿಸಲಾಗುವುದಿಲ್ಲ.

ರೇಷನ್ ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್; ಕಾರ್ಡ್ ವಿತರಣೆ ಬಗ್ಗೆ ಹೊಸ ಅಪ್ಡೇಟ್

ಎಎಷ್ಟೋ ಮನೆಗಳಲ್ಲಿ ಒಬ್ಬ ಸದಸ್ಯ ಮಾತ್ರ ಇರಬಹುದು ಅಥವಾ ಅನಾರೋಗ್ಯದಿಂದ ಬಳಲುತ್ತಿರಬಹುದು ಅಥವಾ ಬೇರೆ ಕಡೆಗೆ ವಲಸೆ ಹೋಗಿರಬಹುದು ಹಾಗಾಗಿ ಇಂತಹ ಕೆಲವು ನಿಜವಾದ ಕಾರಣಗಳು ಇದ್ದರೆ ಅಂತವರಿಗೆ ಮುಂದಿನ ದಿನಗಳಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಕಾರಣಗಳನ್ನು ಹೊರತುಪಡಿಸಿ ಕೇವಲ ಗುರುತಿನ ಚೀಟಿಗಾಗಿ ಅಥವಾ ಸರ್ಕಾರದ ಇತರ ಉಚಿತ ಯೋಜನೆಯ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ರೆ ಅಂಥವರ ಕಾರ್ಡ್ ಅನ್ನು ಮಾತ್ರ ತಕ್ಷಣಕ್ಕೆ ರದ್ದು ಪಡಿಸಲಾಗುವುದು.

Master plan to prevent ration card illegality, Cancel the ration card of such people

Related Stories