ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಮೂಲಕ ಪ್ರತಿ ತಿಂಗಳು ಫಲಾನುಭವಿ ಮಹಿಳೆಯರ ಖಾತೆಗೆ (Bank Account) 2,000 ರೂ. ಜಮಾ ಮಾಡಲಾಗುತ್ತಿದೆ. ಪ್ರತಿಯೊಂದು ಮಹಿಳೆಯ ತಿಂಗಳ ಸಣ್ಣಪುಟ್ಟ ಖರ್ಚುಗಳಿಗಾಗಿ ಈ ಹಣ ನಿಜಕ್ಕೂ ಬಹಳ ಪ್ರಯೋಜನಕಾರಿಯಾಗಿದೆ ಎನ್ನಬಹುದು.

ಈಗಾಗಲೇ ನಾಲ್ಕು ಕಂತಿನ ಹಣ ಬಿಡುಗಡೆ ಮಾಡಲಾಗಿದೆ, 20% ನಷ್ಟು ಮಹಿಳೆಯರ ಖಾತೆಗೆ ಹಣ ಬಾರದೆ ಇದ್ದರೂ 80% ನಷ್ಟು ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ, ಸ್ವಲ್ಪ ವಿಳಂಬವಾಗಿಯಾದರೂ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ (Money Deposit) ಆಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.

Gruha Lakshmi pending money is also deposited for the women of this district

ಬಡವರಿಗೆ ಮನೆ ಭಾಗ್ಯ! ಕೇವಲ 1 ಲಕ್ಷ ಪಾವತಿಸಿದರೆ ಸಿಗುತ್ತೆ ಸರ್ಕಾರದಿಂದ ಮನೆ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಹೊಸ ಅಪ್ಡೇಟ್ (new update) ಅನ್ನು ಸರ್ಕಾರ ಕೊಟ್ಟಿದೆ, ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಪ್ರತಿ ತಿಂಗಳು ಮಹಿಳೆಯರು ಇನ್ನು ಮುಂದೆ ಮಾಹಿತಿ ಪಡೆದುಕೊಳ್ಳಲು ಕಷ್ಟ ಪಡಬೇಕಾಗಿಲ್ಲ, ಯಾವ ಬ್ಯಾಂಕ್ ಹೋಗಬೇಕಾಗಿಲ್ಲ ಇದೊಂದು ಕಾರ್ಡ್ ಅವರ ಬಳಿ ಇದ್ದರೆ ಸುಲಭವಾಗಿ ಮೊಬೈಲ್ ನಲ್ಲಿಯೂ ಕೂಡ ಹಣದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಪಿಂಕ್ ಕಾರ್ಡ್ ವಿತರಣೆ! (Pink card distribution)

ಗೃಹಲಕ್ಷ್ಮಿ ಯೋಜನೆ ಆರಂಭದಲ್ಲಿ ಮಹಿಳೆಯರಿಗೆ ಪಿಂಕ್ ಕಾರ್ಡ್ ವಿತರಣೆ ಮಾಡುವುದಾಗಿ ಸರ್ಕಾರ ಘೋಷಿಸಿತ್ತು, ಆದರೆ ಇದೆಲ್ಲ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಜಾರಿಗೆ ತರುವಲ್ಲಿ ಆಗಿರುವ ಸಾಕಷ್ಟು ಗೊಂದಲ ಪರಿಹರಿಸಿಕೊಳ್ಳುವುದರಲ್ಲಿಯೇ ರಾಜ್ಯ ಸರ್ಕಾರಕ್ಕೆ ಇಷ್ಟು ದಿನ ಪಿಂಕ್ ಕಾರ್ಡ್ ವಿತರಣೆ ಮಾಡಲು ಸಾಧ್ಯವಾಗಿಲ್ಲ, ಆದರೆ ಇನ್ನೂ ಕೆಲವೇ ದಿನಗಳಲ್ಲಿ ಫಲಾನುಭವಿಗಳಿಗೆ ಪಿಂಕ್ ಕಾರ್ಡ್ ವಿತರಣೆ ಮಾಡಲಾಗುವುದು.

ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನೀಡಲಿರುವ ಪಿಂಕ್ ಕಾರ್ಡ್ ನಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM Sivakumar) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ( minister Lakshmi hebbalkar) ಈ ಮೂವರ ಫೋಟೋವನ್ನು ಕೂಡ ಕಾಣಬಹುದು. ಯೋಜನೆಯ ಹೆಸರು ಹಾಗೂ 2,000 ರೂಪಾಯಿ ಎಂದು ಬರೆಯಲಾಗುವ ಕಾರ್ಡ್ ಇದಾಗಿದ್ದು ಪಿಂಕ್ ಅಥವಾ ಗುಲಾಬಿ ಬಣ್ಣದಲ್ಲಿ ಇರುತ್ತದೆ.

ರೇಷನ್ ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್; ಕಾರ್ಡ್ ವಿತರಣೆ ಬಗ್ಗೆ ಹೊಸ ಅಪ್ಡೇಟ್

ಪಿಂಕ್ ಕಾರ್ಡ್ ನಿಂದ ಆಗುವ ಪ್ರಯೋಜನ ಏನು? (Usage of pink card)

Gruha Lakshmi Yojana ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ತಮ್ಮ ಬಳಿ ಪಿಂಕ್ ಕಾರ್ಡ್ (Pink Card) ಇಟ್ಟುಕೊಂಡರೆ, ಪ್ರತಿ ತಿಂಗಳು ಜಮಾ ಆಗುವ ಹಣದ ಬಗ್ಗೆ ಮಾಹಿತಿ ಪಡೆಯಬಹುದು.

ಈ ಕಾರ್ಡ್ ನಲ್ಲಿ ಒಂದು ಕ್ಯೂಆರ್ ಕೋಡ್ (QR code) ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದ್ರೆ ಖಾತೆಯಲ್ಲಿ ಇರುವ ಹಣದ ಬಗ್ಗೆ ಮಾಹಿತಿ ಸಿಗುತ್ತದೆ, ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹೊಸ ಅಪ್ಡೇಟ್ ತಿಳಿದುಕೊಳ್ಳಬಹುದು. ಅಲ್ಲದೆ ಪ್ರೆಸೆಂಟ್ ಸ್ಟೇಟಸ್ ಚೆಕ್ (present status check) ಎನ್ನುವ ಆಯ್ಕೆಯನ್ನು ಕಾಣಬಹುದು.

ವಸತಿ ಯೋಜನೆ! ಮನೆ ಇಲ್ಲದವರಿಗೆ ಸರ್ಕಾರವೇ ನೀಡುತ್ತೆ ಮನೆ; ಸರ್ಕಾರದಿಂದ ಸಿಹಿ ಸುದ್ದಿ

ಪಿಂಕ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬೇಕೇ? (Should we apply for pink card?)

ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಬರುವಂತೆ ಮಾಡಿಕೊಳ್ಳಲು ಸಾಕಷ್ಟು ಮಹಿಳೆಯರು ಕಷ್ಟಪಟ್ಟಿದ್ದಾರೆ. ಹೀಗಾಗಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಮತ್ತೆ ಅರ್ಜಿ ಸಲ್ಲಿಸಬೇಕೆಂದು ಮಹಿಳೆಯರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ

ನೀವು ಅರ್ಜಿ ಸಲ್ಲಿಸಲು ಎಲ್ಲಿಯೂ ಹೋಗಬೇಕಾಗಿಲ್ಲ ಸ್ವತಹ ನಿಮ್ಮ ಮನೆ ಬಾಗಿಲಿಗೆ ಬಂದು ಈ ಕಾರ್ಡ್ ವಿತರಣೆ ಮಾಡುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಗೃಹಲಕ್ಷ್ಮಿ ಹಣ ಬ್ಯಾಂಕ್ ಲೋನ್‌ಗೆ ಮನ್ನಾ! ಬಿಗ್ ಅಪ್ಡೇಟ್; ಇನ್ಮುಂದೆ ಹೊಸ ನಿಯಮ

ಪಿಂಕ್ ಕಾರ್ಡ್ ಇಲ್ಲದವರಿಗೆ ಹಣ ಜಮಾ ಆಗುವುದಿಲ್ಲವೇ?

ಪಿಂಕ್ ಕಾರ್ಡ್ ಅನ್ನು ಸರ್ಕಾರ ನೀಡುತ್ತಿರುವುದು ಗೃಹಿಣಿಯರು ತಮ್ಮ ಖಾತೆಗೆ ಜಮಾ ಆಗಿರುವ ಹಣದ ಸ್ಟೇಟಸ್ ತಿಳಿದುಕೊಳ್ಳುವ ಸಲುವಾಗಿ. ಹಾಗಾಗಿ ಸದ್ಯ ಪಿಂಕ್ ಕಾರ್ಡ್ ಇಲ್ಲದೆ ಇರುವವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಮಂಜೂರು ಆಗುತ್ತೆ.

ಆದರೆ ಮುಂದಿನ ದಿನಗಳಲ್ಲಿ ಪಿಂಕ್ ಕಾರ್ಡ್ ಬಳಕೆ ಕಡ್ಡಾಯ ಆಗುವ ಸಾಧ್ಯತೆ ಇದೆ, ಹಾಗಾಗಿ ಮನೆ ಬಾಗಿಲಿಗೆ ಆಶಾ ಕಾರ್ಯಕರ್ತೆಯರು ಪಿಂಕ್ ಕಾರ್ಡ್ ತೆಗೆದುಕೊಂಡು ಬಂದಾಗ ಅದನ್ನು ಪಡೆದುಕೊಂಡು ಜೋಪಾನವಾಗಿ ಎತ್ತಿಡಿ.

From now on you need to have a pink card to get Gruha Lakshmi Yojana money