ವಸತಿ ಯೋಜನೆ! ಮನೆ ಇಲ್ಲದವರಿಗೆ ಸರ್ಕಾರವೇ ನೀಡುತ್ತೆ ಮನೆ; ಸರ್ಕಾರದಿಂದ ಸಿಹಿ ಸುದ್ದಿ

Housing Scheme : ನಿಮಗೆ ವಾಸಿಸಲು ಸ್ವಂತ ಮನೆ ಇಲ್ವಾ? ಹಾಗಾದ್ರೆ ಸರ್ಕಾರವೇ ನೀಡುತ್ತೆ ಮನೆ; ವಸತಿ ರಹಿತರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

Housing Scheme : ಮನೆ ನಿರ್ಮಾಣ (own house) ಮಾಡಿಕೊಂಡು ನಮ್ಮ ಕುಟುಂಬದವರ ಜೊತೆ ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕನಸಾಗಿರುತ್ತದೆ.

ಆದರೆ ಆರ್ಥಿಕ ಸಮಸ್ಯೆಗಳಿಂದಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಉಳ್ಳವರು ಅಥವಾ ಉತ್ತಮ ನೌಕರಿ ಜನರು ಹೇಗೋ ಹೋಮ್ ಲೋನ್ (Home Loan) ಪಡೆದು ಮನೆ ನಿರ್ಮಾಣ ಮಾಡಿಕೊಳ್ಳುತ್ತಾರೆ, ಆದ್ರೆ ಎಲ್ಲರಿಗೂ ಹೋಮ್ ಲೋನ್ (Home Loan) ಸಿಗುವುದಿಲ್ಲ. ಇದನ್ನು ಅರಿತ ರಾಜ್ಯ ಸರ್ಕಾರವು ವಸತಿ ರಹಿತರಿಗೆ ಮನೆ ನಿರ್ಮಾಣ ಮಾಡಿಕೊಡಲು ಮುಂದಾಗಿದೆ.

ನರ್ಸರಿ ಹಾಗೂ ಇತರ ಕೃಷಿ ಚಟುವಟಿಕೆಗೆ ಸರ್ಕಾರದಿಂದ ಸಿಗುತ್ತೆ 50% ಸಬ್ಸಿಡಿ! ಅರ್ಜಿ ಸಲ್ಲಿಸಿ

ವಸತಿ ಯೋಜನೆ! ಮನೆ ಇಲ್ಲದವರಿಗೆ ಸರ್ಕಾರವೇ ನೀಡುತ್ತೆ ಮನೆ; ಸರ್ಕಾರದಿಂದ ಸಿಹಿ ಸುದ್ದಿ - Kannada News

ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೆ ಮೂಲ ಸೌಕರ್ಯ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಅದರಲ್ಲಿ ವಸತಿಯೂ ಒಂದಾಗಿದೆ. ಕೆಲದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರವು ಬಸವ ವಸತಿ (basava vasati Yojana) ಯೋಜನೆಯಡಿ ಸಾವಿರಕ್ಕೂ ಅಧಿಕ ಮನೆ ನಿರ್ಮಾಣಕ್ಕೆ ಮುಂದಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದೆ ಇದೆ.

ಇದೀಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸ್ಲಂ ನಿವಾಸಿಗಳು, ವಸತಿ ರಹಿತರಿಗೆ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ (CM Siddaramaiah) ಅವರು ಒಪ್ಪಿಗೆ ನೀಡಿದ್ದಾರೆ.

ಹಾಗಾದರೆ ಯಾರೆಲ್ಲ ಈ ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಪಡೆದುಕೊಳ್ಳಬಹುದು, ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ವಿವರಗಳು ಇಲ್ಲಿವೆ.

ಗೃಹಲಕ್ಷ್ಮಿ ಹಣ ಬ್ಯಾಂಕ್ ಲೋನ್‌ಗೆ ಮನ್ನಾ! ಬಿಗ್ ಅಪ್ಡೇಟ್; ಇನ್ಮುಂದೆ ಹೊಸ ನಿಯಮ

ವಸತಿ ಯೋಜನೆ ಫಲಾನುಭವಿಯಾಗಲು ಇರುವ ಅರ್ಹತೆಗಳು: eligibility

ಅರ್ಜಿದಾರರು ಕರ್ನಾಟಕದ (Karnataka) ಖಾಯಂ ನಿವಾಸಿಯಾಗಿರಬೇಕು. ಬಡತನ ರೇಖೆಗಿಂತ ಕೆಳಗಿರುವವರರು, ಬಿಪಿಎಲ್ (BPL card holders) ಕಾರ್ಡ್ದಾರರು ಮಾತ್ರ ಅರ್ಜಿ ಸಲ್ಲಿಸಬಹುದು.

ಕುಟುಂಬದ ಆದಾಯ 87 ಸಾವಿರ ರೂ.ಗಳಿಗಿಂತ ಕಡಿಮೆ ಇರಬೇಕು. ಅರ್ಜಿದಾರರು ಬೆಂಗಳೂರಿನಲ್ಲಿ (Bengaluru) ಕನಿಷ್ಟ 5 ವರ್ಷಗಳಿಂಗಿಂತ ಹೆಚ್ಚಿನ ಕಾಲ ವಾಸವಾಗಿರಬೇಕು. ಅರ್ಜಿದಾರರ ಹೆಸರಿನಲ್ಲಿ ಎಲ್ಲಿಯೂ ಸ್ವಂತ ಮನೆ (Own House) ಇರಬಾರದು.

ಯುವ ನಿಧಿ ಯೋಜನೆಗೆ ಜನವರಿ 12ರಂದು ಚಾಲನೆ! ಈ ದಾಖಲೆಗಳು ಕಡ್ಡಾಯವಂತೆ

housing schemeಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: documents

ವಾಸಸ್ಥಳ ಪ್ರಮಾಣ ಪತ್ರ, ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ, ಪಾನ್ ಕಾರ್ಡ್, ಅರ್ಜಿದಾರರ ಭಾವಚಿತ್ರ, ಬ್ಯಾಂಕ್ ಖಾತೆಯ ವಿವರಗಳು.

ರಾಜ್ಯದ ಶಾಲಾ ಮಕ್ಕಳಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಅರ್ಜಿ ಸಲ್ಲಿಸುವ ವಿಧಾನ: how to apply

ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ http://ashraya.karnataka.gov.in/ ಭೇಟಿ ನೀಡಬೇಕು. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ವೆಬ್ಸೈಟ್ಗೆ ಭೇಟಿ ನೀಡಿ ವಸತಿ ಯೋಜನೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. ಅರ್ಜಿ ಸಲ್ಲಿಕೆಗೆ ಇರುವ ಪ್ರತ್ಯೇಕ ಲಿಂಕ್ ಅಲ್ಲಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಫಾರಂ ನಿಮಗೆ ಕಾಣಿಸುತ್ತದೆ. ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಅಲ್ಲಿ ಕೇಳಲಾಗಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಈ ವೆಬ್ಸೈಟ್ನಲ್ಲಿ ಎಲ್ಲಿ ಎಷ್ಟು ಚದರ ಅಡಿ ಸೈಟ್ ಇದೆ, ಯಾವ ರೀತಿಯ ಸೈಟ್ ಇದೆ ಎಲ್ಲ ಮಾಹಿತಿಯೂ ನಿಮಗೆ ಸಿಗಲಿದೆ.

ಈ ರೀತಿ ಸರ್ಕಾರದ ನೆರವಿನಿಂದ ಮನೆ ಖರೀದಿಸುವವರಿಗೆ ಸರ್ಕಾರವು ರಿಯಾಯತಿ ದರದಲ್ಲಿ ಮನೆಯನ್ನು ನೀಡಲಿದೆ. ಜೊತೆಗೆ ಮನೆಗೆ ಬೇಕಾದ ಸಾಲ ಸೌಲಭ್ಯ (Loan), ಸರ್ಕಾರಿ ಅನುದಾನವನ್ನು ನಿಮಗೆ ನೀಡಲಿದೆ.

ಮುಲಾಜಿಲ್ಲದೆ ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದು! ಸರ್ಕಾರ ಖಡಕ್ ನಿರ್ಧಾರ

Housing Scheme, The government gives houses to the homeless

Follow us On

FaceBook Google News

Housing Scheme, The government gives houses to the homeless