ನರ್ಸರಿ ಹಾಗೂ ಇತರ ಕೃಷಿ ಚಟುವಟಿಕೆಗೆ ಸರ್ಕಾರದಿಂದ ಸಿಗುತ್ತೆ 50% ಸಬ್ಸಿಡಿ! ಅರ್ಜಿ ಸಲ್ಲಿಸಿ

ರಾಜ್ಯದ ಎಲ್ಲ ಕೃಷಿ ವಿಶ್ವ ವಿದ್ಯಾನಿಲಯಗಳ (agriculture universities) ಸಹಯೋಗದಲ್ಲಿ ಕೃಷಿ ಇಲಾಖೆಯಿಂದ (Agriculture department) ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ ಮಾಡಲಾಗಿದೆ.

Bengaluru, Karnataka, India
Edited By: Satish Raj Goravigere

ಕೃಷಿಯು (agriculture) ಭಾರತದ ಜೀವಾಳವಾಗಿದೆ. ಭಾರತದಲ್ಲಿ ರೈತರೇ ದೇಶದ ಜೀವಾಳವಾಗಿದ್ದಾರೆ. ನಮ್ಮ ದೇಶದಲ್ಲಿ ಈಗ ಯುವಕರು ಕೃಷಿಯನ್ನು ಸಹ ಉದ್ಯಮದ ರೀತಿಯಲ್ಲಿ ಮಾಡಲು ಮುಂದೆ ಬರುತ್ತಿದ್ದಾರೆ.

ಕೋವಿಡ್ (after covid-19) ನಂತರದ ದಿನಗಳಲ್ಲಿ ಇದು ಹೆಚ್ಚಾಗಿದೆ ಎಂದರೆ ತಪ್ಪಾಗುವುದಿಲ್ಲ. ಈ ರೀತಿ ಕೃಷಿ ಕಾರ್ಯ ಕೈಗೊಳ್ಳಲು ಸರ್ಕಾರವು ಸಹ ಸಹಾಯಧನ (subsidy for agriculture activities) ನೀಡುತ್ತಿದೆ.

Nursery and other agricultural activities get 50% subsidy from the government

ಪ್ರಸ್ತುತ ವರ್ಷದಿಂದ ಕೃಷಿ ಹಾಗೂ ಕೃಷಿಗೆ ಸಂಬಂಧಪಟ್ಟ ಉಪಕಸುಬುಗಳನ್ನು ಕೈಗೊಳ್ಳಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಎನ್ನುವ ಹೊಸ ವಿಭಾಗವನ್ನು ಆರಂಭಿಸಲಾಗಿದೆ.

ಗೃಹಲಕ್ಷ್ಮಿ ಹಣ ಬ್ಯಾಂಕ್ ಲೋನ್‌ಗೆ ಮನ್ನಾ! ಬಿಗ್ ಅಪ್ಡೇಟ್; ಇನ್ಮುಂದೆ ಹೊಸ ನಿಯಮ

ಇದು ಕೃಷಿ ಕಾರ್ಯ ಮಾಡುವವರಿಗೆ ಉತ್ತೇಜನವನ್ನು ನೀಡುತ್ತದೆ. ಈ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ ಶೇ.50ರಷ್ಟು ಸಬ್ಸಿಡಿ ಪಡೆದು ಕೃಷಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ರೈತರು ಕೃಷಿಯಲ್ಲಿ ಲಾಭಗಳಿಸಲು ಏಕ ಬೆಳೆ ಸೂಕ್ತವಲ್ಲ. ಇದರ ಜೊತೆ ಅದಕ್ಕೆ ಸಂಬಂಧಪಟ್ಟ ಉಪಕಸುಬುಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಏಕೆಂದರೆ ಒಂದೇ ಬೆಳೆ ಅಥವಾ ಒಂದೇ ಆದಾಯದ ಮೂಲವಾಗಿದ್ದರೆ ಲಾಭ ಗಳಿಕೆ ಕಷ್ಟಸಾಧ್ಯವಾಗಲಿದೆ. ಮಾರುಕಟ್ಟೆ ಎರಿಳಿತ, ಬೆಳೆಗಳಿಗೆ ರೋಗಬಾಧೆ ಹೀಗೆ ಹಲವು ವಿಧದಲ್ಲಿ ನಷ್ಟ ಉಂಟಾಗುವ ಸಾಧ್ಯತೆಗಳಿವೆ.

ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ:

ಕೃಷಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು, ಮಂಡಳಿಗಳು ಮತ್ತು ರಾಜ್ಯದ ಎಲ್ಲ ಕೃಷಿ ವಿಶ್ವ ವಿದ್ಯಾನಿಲಯಗಳ (agriculture universities) ಸಹಯೋಗದಲ್ಲಿ ಕೃಷಿ ಇಲಾಖೆಯಿಂದ (Agriculture department) ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ ಮಾಡಲಾಗಿದೆ.

ಇದರ ಮೂಲಕ ಶೇ.50ರ ಸಹಾಯಧನದಲ್ಲಿ ಈ ಕೆಳಗೆ ನಾವು ತಿಳಿಸಲಾಗುವ ಯೋಜನೆ ಅನುಷ್ಠಾನ ಮಾಡಲಾಗಿದೆ. ಆಸಕ್ತಿ ಇರುವವರು ಈ ಯೋಜನೆ ಲಾಭ ಪಡೆದುಕೊಳ್ಳಬಹುದು.

ಯುವ ನಿಧಿ ಯೋಜನೆಗೆ ಜನವರಿ 12ರಂದು ಚಾಲನೆ! ಈ ದಾಖಲೆಗಳು ಕಡ್ಡಾಯವಂತೆ

subsidy for agriculture activitiesಯಾವ ಯಾವ ಯೋಜನೆಗೆ ಅನ್ವಯ:

ಸಾವಯವ ಗೊಬ್ಬರ ತಯಾರಿಕೆ, ಎರೆಹುಳ ಗೊಬ್ಬರ ತಯಾರಿಕೆ, ಜೈವಿಕ ಗೊಬ್ಬರ ತಯಾರಿಕೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ತೋಟಗಾರಿಕೆ ಹೂ, ಹಣ್ಣುಗಳ ನರ್ಸರಿ, ನೀರು, ಮಣ್ಣು ಪರೀಕ್ಷಾ ಘಟಕ, ಪಶು ಆಹಾರ ಮತ್ತು ಮೇವು ತಯಾರಿಕಾ ಘಟಕ, ಹೂ,ಹಣ್ಣು, ಸಾಂಬಾರ ಪದಾರ್ಥಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ತಲುಪಿಸುವ ಘಟಕ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತಿದೆ.

ರಾಜ್ಯದ ಶಾಲಾ ಮಕ್ಕಳಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಉಪ್ಪಿನಕಾಯಿ ತಯಾರಿಕಾ ಘಟಕ, ಜಾಮ್ ಅರಿಶಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಕಾ ಘಟಕ, ಜೇನು ಸಾಕಾಣಿಕೆ, ಅಣಬೆ ಬೇಸಾಯ, ಅಡಿಕೆ, ತೆಂಗು, ಬಿದಿರು ಸೇರಿದಂತೆ ನಾರಿನ ಉದ್ಯಮ ಸ್ಥಾಪನೆ, ಅಲೋವೆರಾ ಉತ್ಪನ್ನಗಳ ತಯಾರಿಕೆ, ರೇಷ್ಮೆ ಉತ್ಪನ್ನಗಳ ತಯಾರಿಕೆ, ಹೊಸ ತಳಿಯ ಕುರಿಮರಿ, ಹೋರಿ ಸಾಕಾಣಿಕೆ, ಅತ್ತಿಬೆಳೆಯ ಉಳಿದ ಉತ್ಪನ್ನಗಳ ತಯಾರಿಕೆ, ಬಯೋಗ್ಯಾಸ್ ಉತ್ಪದನಾ ಘಟಕ, ಅಡಿಕೆ ಹಾಳೆ ಉತ್ಪಾದನಾ ಘಟಕ, ಜೀವಾಮೃತ ತಯಾರಿಕಾ ಘಟಕ ಸ್ಥಾಪನೆಗೂ ಸಹಾಯದ ಧನ ಸಿಗಲಿದೆ.

ಅರ್ಜಿ ಸಲ್ಲಿಕೆ ಹೇಗೆ: (how to apply)

ಆಸಕ್ತ ರೈತರು ಸೂಕ್ತ ದಾಖಲಾತಿಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು:

ಪಹಣಿ ಪತ್ರಿಕೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ನಕಲು ಪ್ರತಿ, ಎರಡು ಭಾವ ಚಿತ್ರ ನೀಡಬೇಕಾಗುತ್ತದೆ.

ಮುಲಾಜಿಲ್ಲದೆ ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದು! ಸರ್ಕಾರ ಖಡಕ್ ನಿರ್ಧಾರ

Nursery and other agricultural activities get 50% subsidy from the government