ಯುವ ನಿಧಿ ಯೋಜನೆಗೆ ಜನವರಿ 12ರಂದು ಚಾಲನೆ! ಈ ದಾಖಲೆಗಳು ಕಡ್ಡಾಯವಂತೆ
ವಿಧಾನಸಭೆ ಚುನಾವಣೆಗೂ (Vidhana sabha election) ಮುನ್ನ ಕಾಂಗ್ರೆಸ್ 5 ಗ್ಯಾರಂಟಿ (Congress guarantee schemes) ಯೋಜನೆಗಳನ್ನು ಘೋಷಣೆ ಮಾಡಿತ್ತು, ಅದೇ ರೀತಿ 5 ಯೋಜನೆಗಳು ಕೂಡ ಯಶಸ್ವಿಯಾಗಿ ಜನರಿಗೆ ಸಿಕ್ಕಿದೆ. ಇದೀಗ ಕೊನೆಯ ಯೋಜನೆ ಯುವ ನಿಧಿ ಯೋಜನೆಯ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಜನವರಿ ತಿಂಗಳಿನಲ್ಲಿ ಯುವ ನಿಧಿ ಯೋಜನೆಗೆ ಚಾಲನೆ (Yuva Nidhi scheme)
ಐದನೇ ಗ್ಯಾರಂಟಿ ಭರವಸೆ ಯೋಜನೆಯನ್ನು ಸರ್ಕಾರ ಜನವರಿ 12ಕ್ಕೆ ಚಾಲನೆ ನೀಡಲಿದೆ. ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಜನವರಿ 12ರಂದು ಯೋಜನೆಗೆ ಚಾಲನೆ ಸಿಗಲಿದೆ. ಡಿಸೆಂಬರ್ 26ರಿಂದ ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬಹುದು.

ರಾಜ್ಯದ ಶಾಲಾ ಮಕ್ಕಳಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ
ಯುವ ನಿಧಿ ಯೋಜನೆಯಿಂದ ಪ್ರಯೋಜನ ಏನು? (Benefits of Yuva Nidhi scheme)
ರಾಜ್ಯದಲ್ಲಿ ನಿರುದ್ಯೋಗ (unemployment problems) ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆಗೆ ಚಾಲನೆ ನೀಡಲಿದೆ.
20223ರ ಸಾಲಿನಲ್ಲಿ ಪದವಿ (degree) ಡಿಪ್ಲೋಮೋ (Diploma) ಅಥವಾ ವೃತ್ತಿಪರ ಕೋರ್ಸ್ (professional courses) ಗಳನ್ನು ಮುಗಿಸಿ ಆರು ತಿಂಗಳವರೆಗೆ ಉದ್ಯೋಗ ಸಿಗದೇ ಇರುವ ಯುವಕ ಯುವತಿಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಾರೆ.
ಮುಂದಿನ 24 ತಿಂಗಳ ವರೆಗೆ ಪದವಿ ಮುಗಿಸಿದ ಯುವಕ ಯುವತಿಯರಿಗೆ ತಲಾ 3 ಸಾವಿರ ರೂಪಾಯಿಗಳು ಹಾಗೂ ಡಿಪ್ಲೋಮೋ ಕೋರ್ಸ್ ಮುಗಿಸಿದವರಿಗೆ 1,500 ರೂ. ಪ್ರತಿ ತಿಂಗಳು ನಿರುದ್ಯೋಗ ಭತ್ಯೆ (unemployment allowance) ಆಗಿ ನೀಡಲಿದೆ.
ಉದ್ಯೋಗ ಸಿಕ್ಕ ತಕ್ಷಣ ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಅಂಥವರಿಗೆ ಈ ಸೌಲಭ್ಯವನ್ನು ಕೂಡಲೇ ಸ್ಥಗಿತಗೊಳಿಸಲಾಗುವುದು. ರಾಜ್ಯದಲ್ಲಿ ಒಟ್ಟು ಐದು ಲಕ್ಷ ಯುವಕ ಯುವತಿಯರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಯೋಜನೆಗೆ ಸರ್ಕಾರ ಪ್ರಸಕ್ತ ವರ್ಷದಲ್ಲಿ 250 ರಿಂದ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದೆ ಹಾಗೂ ಮುಂದಿನ ವರ್ಷ ಈ ಯೋಜನೆಯ ಅಡಿಯಲ್ಲಿ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಮುಲಾಜಿಲ್ಲದೆ ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದು! ಸರ್ಕಾರ ಖಡಕ್ ನಿರ್ಧಾರ
ಅರ್ಜಿ ಸಲ್ಲಿಸಲು ಬೇಕಾಗಿರುವ ಮಾನದಂಡಗಳು!
*ಕರ್ನಾಟಕದಲ್ಲಿಯೇ ವಾಸಿಸುವ ಕನ್ನಡಿಗರಿಗೆ ಮಾತ್ರ ಅವಕಾಶ
2022 23ರ ಸಾಲಿನಲ್ಲಿ ತೇರ್ಗಡೆಯಾದ ಪದವೀದರರು ಹಾಗೂ ಡಿಪ್ಲೋಮಾ ಮುಗಿಸಿದವರು ಉದ್ಯೋಗ ಸಿಗದೇ ಆರು ತಿಂಗಳು ಕಳೆದಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ.
ಯೋಜನೆ ಎರಡು ವರ್ಷಗಳ ವರೆಗೆ ಮಾತ್ರ ಲಭ್ಯವಿದ್ದು ಅದರ ಒಳಗೆ ಕೆಲಸ ಪಡೆದುಕೊಳ್ಳುವುದು ಯುವಕ ಯುವತಿಯರ ಜವಾಬ್ದಾರಿ.
ಸೇವಾ ಸಿಂಧು ಪೋರ್ಟಲ್ (seva Sindhu web portal) ಮೂಲಕ ಅರ್ಜಿ ಸಲ್ಲಿಸಬಹುದು, ನಿರುದ್ಯೋಗ ಭತ್ಯೆಯನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುವುದು.
ಉದ್ಯೋಗ ಪಡೆದ ನಂತರವೂ ಉದ್ಯೋಗ ಸಿಕ್ಕಿರುವ ವಿಷಯವನ್ನು ಹೇಳದೆ ಇದ್ದರೆ ಅಂತವರಿಗೆ ಬಾರಿ ಪ್ರಮಾಣದ ದಂಡ ವಿಧಿಸಲಾಗುವುದು.
ಈ ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಸಿಗೋಲ್ಲ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ನಿರುದ್ಯೋಗಿ ಎನ್ನುವ ಸ್ವಯಂ ಘೋಷಣಾ ಪತ್ರ
ಪದವಿ ಅಥವಾ ಡಿಪ್ಲೋಮಾ ಅಭ್ಯರ್ಥಿಗಳು ತಮ್ಮ ವಿಶ್ವವಿದ್ಯಾಲಯದ ಅಥವಾ ಪ್ರಮಾಣಿಕೃತ ಸಂಸ್ಥೆಯಿಂದ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ ಒದಗಿಸಬೇಕು
ಆಧಾರ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ (Bank Account Details)
ಯಾವುದೇ ಅಪ್ರೆಂಟಿಸ್ (apprentice) ಹುದ್ದೆಯಲ್ಲಿ ಇರುವವರು ವೇತನ ಪಡೆದುಕೊಳ್ಳುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಪದವಿ ಮುಗಿಸಿ ಉನ್ನತ ಅಭ್ಯಾಸ ಮಾಡುತ್ತಿರುವವರು ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಇದೇ ಬರುವ 26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಯುವಕ ಯುವತಿಯರು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
ಗೃಹಲಕ್ಷ್ಮಿ ಹಣ ಇನ್ಮುಂದೆ ಯಾವುದೇ ಕಾರಣಕ್ಕೂ ಮಿಸ್ ಆಗೋಲ್ಲ; ಹೀಗೆ ಮಾಡಿ ಸಾಕು
Yuva Nidhi Yojana launched on January 12, Here is the official information