ಈ ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಸಿಗೋಲ್ಲ
ರ್ಕಾರ ಎಷ್ಟೇ ಪ್ರಯತ್ನ ಪಟ್ಟರು ಕೂಡ ಕೆಲವು ತಾಂತ್ರಿಕ ದೋಷ (technical issue) ಗಳಿಂದಾಗಿ ಮಹಿಳೆಯರ ಖಾತೆಗೆ (Bank Account) ಹಣ ಮಾತ್ರ ವರ್ಗಾವಣೆ ಆಗುತ್ತಿಲ್ಲ
ಗೃಹಲಕ್ಷ್ಮಿ (Gruha lakshmi scheme) ಹಾಗೂ ಅನ್ನಭಾಗ್ಯ (Annabhagya scheme) ಯೋಜನೆ ಆರಂಭವಾಗಿ ಸುಮಾರು ನಾಲ್ಕರಿಂದ ಐದು ತಿಂಗಳುಗಳೆ ಕಳೆದಿವೆ. ಈಗಾಗಲೇ ತಲಾ ನಾಲ್ಕು ಕಂತುಗಳನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದ್ದು ಸಾಕಷ್ಟು ಮಹಿಳೆಯರು ಸರ್ಕಾರದಿಂದ ಹಣವನ್ನು ಪಡೆದುಕೊಂಡಿದ್ದಾರೆ
ಆದರೂ ಕೂಡ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯ ಪ್ರಯೋಜನ ಸಿಕ್ಕಿದೆಯಾ ಎಂದು ಪ್ರಶ್ನಿಸಿದರೆ? ಇಲ್ಲ ಎಂದೇ ಹೇಳಬೇಕು..
ಗೃಹಲಕ್ಷ್ಮಿ ಹಣ ಇನ್ಮುಂದೆ ಯಾವುದೇ ಕಾರಣಕ್ಕೂ ಮಿಸ್ ಆಗೋಲ್ಲ; ಹೀಗೆ ಮಾಡಿ ಸಾಕು
ಯಾಕೆಂದರೆ ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರು ಕೂಡ ಕೆಲವು ತಾಂತ್ರಿಕ ದೋಷ (technical issue) ಗಳಿಂದಾಗಿ ಮಹಿಳೆಯರ ಖಾತೆಗೆ (Bank Account) ಹಣ ಮಾತ್ರ ವರ್ಗಾವಣೆ ಆಗುತ್ತಿಲ್ಲ, ಬೇರೆ ಬೇರೆ ಉಪಕ್ರಮಗಳನ್ನು ಕೂಡ ಕೈಗೊಂಡಿದ್ದು ಇವುಗಳ ಮೂಲಕ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ (Money Deposit) ಮಾಡಲು ಪ್ರಯತ್ನಿಸಲಾಗುತ್ತಿದೆ.
ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ ಯಾಕೆ!
ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಉಚಿತ ಅಕ್ಕಿಯ ಬದಲು 5 ಕೆಜಿ ಅಕ್ಕಿಯ ಹಣವನ್ನು ಸರ್ಕಾರ ನೇರವಾಗಿ ಖಾತೆಗೆ ವರ್ಗಾವಣೆ (Money Transfer) ಮಾಡುತ್ತಿದ್ದು, ಸದ್ಯದಲ್ಲಿಯೇ ಅಕ್ಕಿಯ ದುಡ್ಡು ವರ್ಗಾವಣೆಯನ್ನು ನಿಲ್ಲಿಸಿ ಅಕ್ಕಿಯ ಬದಲು ಬೇರೆ ಧಾನ್ಯಗಳನ್ನಾದರೂ ಕೊಡಲು ಪ್ರಯತ್ನಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ಅಪ್ಡೇಟ್ ಇಲ್ಲ, ಈಗಲೂ ಪ್ರತಿ ತಿಂಗಳು ಜನರ ಖಾತೆಗೆ ಹಣವೇ ವರ್ಗಾವಣೆ ಆಗುತ್ತಿದೆ.
ಇನ್ಮುಂದೆ ಈ ರೈತರು ತಮ್ಮ ಜಮೀನು, ಆಸ್ತಿ ಮಾರಾಟ ಮಾಡುವಂತಿಲ್ಲ! ಖಡಕ್ ಸೂಚನೆ
ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂಬುದನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ನೇರವಾಗಿ ಸ್ಟೇಟಸ್ ಚೆಕ್ ಮಾಡಬಹುದು. ನೆನಪಿರಲಿ ಮನೆಯ ಯಜಮಾನ ಅಥವಾ ಯಜಮಾನಿಯ ಖಾತೆಗೆ ಕೆವೈಸಿ ಆಗದೆ ಇದ್ದರೆ ಅನ್ನಭಾಗ್ಯ ಯೋಜನೆ ಹಣ ಬರಲು ಸಾಧ್ಯವೇ ಇಲ್ಲ.
ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲ ಯಾಕೆ!
ಇದಕ್ಕೆ ಕಾರಣಗಳನ್ನು ಹುಡುಕಲು ಸರ್ಕಾರ ಪ್ರಯತ್ನಿಸುತ್ತಿದೆ, ಆದರೆ ತಾಂತ್ರಿಕ ದೋಷಗಳು, ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವ ಈ ಕೆಲವು ವಿಚಾರಗಳಿಂದಾಗಿ ಸಾಕಷ್ಟು ಮಹಿಳೆಯರಿಗೆ ಇದುವರೆಗೆ ಹಣ ಬಂದಿಲ್ಲ.
ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಇದಕ್ಕೆ ಪರಿಹಾರವನ್ನು ಸೂಚಿಸಲು ಗೃಹಲಕ್ಷ್ಮಿ ಅದಾಲತ್ ಕೂಡ ನಡೆಸುತ್ತಿದ್ದು, ಮಹಿಳೆಯರು ಖಾತೆಗೆ ಹಣ ಬರದೆ ಇದ್ದರೆ ಗ್ರಾಮ ಪಂಚಾಯತ್ ನಲ್ಲಿ ದೂರು ಸಲ್ಲಿಸಲು ಅವಕಾಶವಿದೆ.
ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ? ಈ ಬಾರಿ ಒಟ್ಟಿಗೆ ಸಿಗುತ್ತೆ ₹8,000 ರೂಪಾಯಿ
ಇನ್ನು ಈಗಾಗಲೇ ಸರ್ಕಾರ ಘೋಷಿಸಿರುವಂತೆ 27 – 29 ಗ್ರಾಮೀಣಮಟ್ಟದಲ್ಲಿ ಕ್ಯಾಂಪ್ (camp) ಕೂಡ ನಡೆಸಲಾಗುತ್ತಿದ್ದು ಮಹಿಳೆಯರು ಈ ಕ್ಯಾಂಪ್ನಲ್ಲಿ ಭಾಗವಹಿಸಿ ತಮ್ಮ ಖಾತೆಯಲ್ಲಿ ಇರುವ ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಿಕೊಳ್ಳಬಹುದು ಇಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಲಿದ್ದಾರೆ ಹಾಗಾಗಿ ಮಹಿಳೆಯರು ಈ ಕ್ಯಾಂಪ್ನಲ್ಲಿ ಭಾಗವಹಿಸಿದರೆ ಅವರ ಖಾತೆಗೆ ಹಣ ಬರಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಅನರ್ಹರ ಪಟ್ಟಿ ಪ್ರಕಟ!
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರವಲ್ಲವೇ ಎಪಿಎಲ್ ಕಾರ್ಡ್ ( APL Card) ಹೊಂದಿರುವವರು ಕೂಡ ಪಡೆದುಕೊಳ್ಳಬಹುದು. ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಮುಂದಿನ ತಿಂಗಳು ಎಲ್ಲರ ಖಾತೆಗೆ ಬರುವ ಸಾಧ್ಯತೆ ಇಲ್ಲ, ಯಾಕೆಂದರೆ ಸಾಕಷ್ಟು ಜನ ರೇಷನ್ ಕಾರ್ಡ್ ಕಳೆದುಕೊಂಡಿದ್ದಾರೆ.
ನಕಲಿ ರೇಷನ್ ಕಾರ್ಡ್ ಬಳಸುವವರು, ಕಳೆದ ಆರು ತಿಂಗಳಿನಿಂದ ರೇಷನ್ ಬಳಸದೆ ಇರುವವರು ಹಾಗೂ ಮತ್ತಿತರ ಕಾರಣಕ್ಕೆ ಸಾಕಷ್ಟು ಜನರ ರೇಷನ್ ಕಾರ್ಡ್ ರದ್ದು ಪಡಿಸಲಾಗಿದೆ.
ಅರ್ಹ ರೇಷನ್ ಕಾರ್ಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಶೀಘ್ರದಲ್ಲೇ ಹೊಸ ಕಾರ್ಡ್ ವಿತರಣೆ
ಈ ಹಿನ್ನೆಲೆಯಲ್ಲಿ ನಿಮ್ಮ ಹೆಸರು ಅನರ್ಹರ ಪಟ್ಟಿಯಲ್ಲಿ ಇದಿಯೋ ಇಲ್ವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಅನರ್ಹರ ಪಟ್ಟಿಯಲ್ಲಿ ಯಾರ ಹೆಸರು ಇದೆಯೋ ಅಂತವರಿಗೆ ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಬರುವುದಿಲ್ಲ.
ಅನರ್ಹರ ಪಟ್ಟಿ ಚೆಕ್ ಮಾಡುವುದು ಹೇಗೆ?
https://ahara.com/ ಮೊದಲಿಗೆ ಈ ವೆಬ್ಸೈಟ್ ಗೆ ಹೋಗಿ ಈ ಸರ್ವಿಸ್ ವಿಭಾಗದಲ್ಲಿ ಎಡ ಭಾಗದಲ್ಲಿ ಕಾಣುವ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ರದ್ದುಪಡಿಸಲಾಗಿರುವ ಅಥವಾ ತಡೆ ಹಿಡಿಯಲಾಗಿರುವ ರೇಷನ್ ಕಾರ್ಡ್ ಪಟ್ಟಿ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ, ನೀವು ಅಲ್ಲಿ ನಿಮ್ಮ ಡಿಸ್ಟ್ರಿಕ್ಟ್ ಹೋಬಳಿ, ಯಾವ ತಿಂಗಳು ಯಾವ ವರ್ಷ ಎನ್ನುವ ಆಯ್ಕೆಯನ್ನು ಮಾಡಿ ಗೋ ಎನ್ನುವ ಬಟನ್ ಕ್ಲಿಕ್ ಮಾಡಿ, ಈಗ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ
If your name is in this ineligible list, you will not get Gruha lakshmi and Annabhagya money