ಗೃಹಲಕ್ಷ್ಮಿ ಹಣ ಇನ್ಮುಂದೆ ಯಾವುದೇ ಕಾರಣಕ್ಕೂ ಮಿಸ್ ಆಗೋಲ್ಲ; ಹೀಗೆ ಮಾಡಿ ಸಾಕು
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಸರ್ಕಾರ ಜಾರಿಗೆ ತಂದ ಮೇಲೆ ಅದರ ಸಕ್ಸಸ್ ಅನುಭವಿಸುವುದಕ್ಕಿಂತಲೂ ಹೆಚ್ಚಾಗಿ ಎಲ್ಲರ ಖಾತೆಗೆ ಹಣ ಜಮಾ ಆಗ್ತಿಲ್ವಲ್ಲ ಯಾಕೆ ಅಂತ ತಲೆ ಕೆಡಿಸಿಕೊಳ್ಳುತ್ತಿರುವುದೇ ಹೆಚ್ಚು,
ಯಾಕೆಂದರೆ ಎಲ್ಲಾ ಮಹಿಳೆಯರು ಸರ್ಕಾರದ ನಿಯಮದ ಅನುಸಾರ ತಮ್ಮ ಖಾತೆಗೆ ಆಧಾರ್ ಸೀಡಿಂಗ್ (Aadhaar seeding ) ಇಂದ ಹಿಡಿದು ರೇಷನ್ ಕಾರ್ಡ್ (Ration Card) ನಲ್ಲಿ ಹೆಸರು ಬದಲಾವಣೆವರೆಗೆ ಎಲ್ಲ ಕೆಲಸವನ್ನು ಮಾಡಿದ್ದಾರೆ. ಅಷ್ಟಾಗಿಯೂ ಸಾಕಷ್ಟು ಮಹಿಳೆಯರ ಖಾತೆಗೆ (Bank Account) ಮಾತ್ರ ಗೃಹಲಕ್ಷ್ಮಿ ಹಣ ಬಂದಿಲ್ಲ.
ಇನ್ಮುಂದೆ ಈ ರೈತರು ತಮ್ಮ ಜಮೀನು, ಆಸ್ತಿ ಮಾರಾಟ ಮಾಡುವಂತಿಲ್ಲ! ಖಡಕ್ ಸೂಚನೆ
ಗೃಹಲಕ್ಷ್ಮಿ ನಾಲ್ಕನೇ ಕಂತು ಬಿಡುಗಡೆ! (4th installment released)
ಮೊದಲ ಎರಡು ಕಂತನ್ನು ಬಿಡುಗಡೆ ಮಾಡಿದಷ್ಟು ವೇಗವಾಗಿ ಮೂರು ಮತ್ತು ನಾಲ್ಕನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ, ಅದರಲ್ಲೂ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗುವಲ್ಲಿ ಸಾಕಷ್ಟು ವಿಳಂಬ ಆಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿದ್ದರೂ ಕೂಡ ಎಲ್ಲಾ ಮಹಿಳೆಯರ ಖಾತೆಯನ್ನು ತಲುಪಿಲ್ಲ, ಬಹುಶಹ ಡಿಸೆಂಬರ್ ಕೊನೆಯೊಳಗೆ ಪ್ರತಿಯೊಬ್ಬರ ಖಾತೆಗೂ ಹಣ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಆಧಾರ್ ಅಪ್ಡೇಟ್ ಮಾಡಿಸಿದ್ದೀರಾ? (Do Aadhaar update)
ಇದುವರೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಲ್ಲಿ ಶೇಕಡ 80ರಷ್ಟು ಮಹಿಳೆಯರ ಖಾತೆಗೆ ಹಣ ಸಂದಾಯವಾಗಿದ್ದು ಇನ್ನೂ 20% ನಷ್ಟು ಮಹಿಳೆಯರು ಒಂದು ಕಂತಿನ ಹಣವನ್ನು ಕೂಡ ಪಡೆದಿಲ್ಲ..
ಇದಕ್ಕೆ ತಾಂತ್ರಿಕ ದೋಷ (technical error) ಗಳು ಹಾಗೂ ಇತರ ಸಾಕಷ್ಟು ಕಾರಣಗಳು ಕೂಡ ಇವೆ. ಇದೆಲ್ಲದರ ನಡುವೆ ನೀವು ಬಳಸುತ್ತಿರುವ ಆಧಾರ್ ಕಾರ್ಡ್ ಬಹಳ ಹಿಂದಿನದ್ದಾಗಿದ್ದರೆ ಅಂದರೆ ಸುಮಾರು 10 ವರ್ಷಗಳಷ್ಟು ಹಳೆಯ ಆಧಾರ್ ಕಾರ್ಡ್ ಬಳಸುತ್ತಿದ್ದರೆ ಅದನ್ನು ಅಪ್ಡೇಟ್ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ
ಇಲ್ಲವಾದರೆ ಹಣ ಮಾತ್ರವಲ್ಲ ಸರ್ಕಾರದಿಂದ ಸಿಗುವ ಇತರ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡ್ದೆ ಇದ್ರೆ ಬ್ಯಾಂಕ್ ನಲ್ಲಿ ಕೆವೈಸಿ ಮಾಡಿಸಲು ಸಾಧ್ಯವಿಲ್ಲ.
ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ? ಈ ಬಾರಿ ಒಟ್ಟಿಗೆ ಸಿಗುತ್ತೆ ₹8,000 ರೂಪಾಯಿ
ಈ ಕಾರಣದಿಂದಾಗಿ ಆಧಾರ್ ಅಪ್ಡೇಟ್ ಎನ್ನುವುದು ಬಹಳ ಮುಖ್ಯವಾಗಿದೆ, ನೀವು ಆಧಾರ್ ಕಾರ್ಡ್ ನಲ್ಲಿ ಬೇಕಾಗಿರುವ ಎಲ್ಲಾ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ ಹೀಗೆ ಎಲ್ಲ ವಿವರಗಳನ್ನು ಮಾಡಿಕೊಳ್ಳಬಹುದು. ಒಂದು ವೇಳೆ ಯಾವುದೇ ಬದಲಾವಣೆಯನ್ನು ಮಾಡಿಕೊಳ್ಳುವ ಅಗತ್ಯ ಇಲ್ಲದೆ ಇರುವಾಗ POA ಅಥವಾ POI ಮಾಡಿಸಿಕೊಳ್ಳಬಹುದು.
ಗ್ರಾಮ ಪಂಚಾಯತ್ ಕ್ಯಾಂಪ್ ನಲ್ಲಿ ಭಾಗವಹಿಸಿ! (Gruha lakshmi camp)
ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಯಾಕೆ ಜಮಾ ಆಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಹೋದಾಗ ಸಿಕ್ಕುವ ಉತ್ತರವೇ ತಾಂತ್ರಿಕ ದೋಷ ಎನ್ನುವುದು, ಹಾಗಾಗಿ ನಿಜಕ್ಕೂ ಮಹಿಳೆಯರ ಖಾತೆಯಲ್ಲಿ ಎಲ್ಲಿ ಸಮಸ್ಯೆ ಇದೆ? ಯಾಕಾಗಿ ಹಣ ಜಮಾ ಆಗುತ್ತಿಲ್ಲ ಎಂದು ಸರ್ಕಾರ ಪರಿಹಾರವನ್ನು ಕಂಡು ಹಿಡಿಯುವ ಸಲುವಾಗಿ ಒಂದು ಮಹತ್ತರ ಪ್ಲಾನ್ ಮಾಡಿದೆ, ಅದುವೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಯಾಂಪ್ ಒಂದನ್ನು ನಡೆಸುವುದು.
ಅರ್ಹ ರೇಷನ್ ಕಾರ್ಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಶೀಘ್ರದಲ್ಲೇ ಹೊಸ ಕಾರ್ಡ್ ವಿತರಣೆ
ಗ್ರಾಮ ಪಂಚಾಯತ್ ಸಿಬ್ಬಂದಿಗಳು (Gram Panchayat officer) ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಈ ಕ್ಯಾಂಪ್ ನಡೆಸಲಾಗುತ್ತದೆ, ಇದೇ ಬರುವ ಡಿಸೆಂಬರ್ 27ರಿಂದ 29ನೇ ತಾರೀಕಿನವರೆಗೆ ಕ್ಯಾಂಪ್ ನಡೆಸಲಾಗುವುದು.
ಬೆಳಿಗ್ಗೆ 9:00 ಯಿಂದ ಸಂಜೆ 5:00 ವರೆಗೆ ಈ ಕ್ಯಾಂಪ್ ಮೂಲಕ ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ತಮಗೂ ಹಣ ಬರುವಂತೆ ಮಾಡಿಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಿಕೊಟ್ಟಿದೆ ಸರ್ಕಾರ.
ಫಲಾನುಭವಿ ಮಹಿಳೆಯರ ಖಾತೆಗೆ ಹಣ ಬಾರದೆ ಇದ್ದಾಗ ಕರೆದುಕೊಂಡು ಬರುವ ಕೆಲಸ ಅಂಗನವಾಡಿ ಸಹಾಯಕಿಯರದ್ದು, ಸ್ವತಹ ತಾವೇ ಹೋಗಿ ಕ್ಯಾಂಪ್ ಬಗ್ಗೆ ಅರಿವು ಮೂಡಿಸಿ ಮಹಿಳೆಯರನ್ನ ಕರೆದುಕೊಂಡು ಬರಬೇಕು.
ಅದೇ ರೀತಿ ಗ್ರಾಮ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಧ್ಯಮಗಳಲ್ಲಿ ಜಾಹೀರಾತು (advertisement) ನೀಡುವುದರ ಮೂಲಕ ಮಹಿಳೆಯರಿಗೆ ಕ್ಯಾಂಪ್ ಬಗ್ಗೆ ತಿಳಿಸಬೇಕು. ಅಷ್ಟೇ ಅಲ್ಲದೆ ಕ್ಯಾಂಪ್ ನಡೆಯುವ ಬಗ್ಗೆ ಮಹಿಳೆಯರಿಗೆ ಎಸ್ಎಂಎಸ್ ಕೂಡ ಕಳುಹಿಸಬೇಕು.
ಫ್ರೀ ಬಸ್ ಅಂತ ಬೇಕಾಬಿಟ್ಟಿ ಪ್ರಯಾಣಿಸುವಂತಿಲ್ಲ; ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ
ಸರ್ಕಾರ ನಡೆಸಿರುವ ಈ ಮೂರು ದಿನದ ಬೃಹತ್ ಕ್ಯಾಂಪ್ನಲ್ಲಿ ಮಹಿಳೆಯರು ಯಾವ ಬ್ಯಾಂಕ್ ನಲ್ಲಿ ಖಾತೆ ತೆರೆದಿರುತ್ತಾರೋ ಆ ಎಲ್ಲಾ ಬ್ಯಾಂಕುಗಳ ತಲಾ ಒಬ್ಬ ಸಿಬ್ಬಂದಿಗಳಾದರು ಇರಲೇಬೇಕು. ಇದರ ಜೊತೆಗೆ ಪೋಸ್ಟ್ ಆಫೀಸ್ (post office) ಸಿಬ್ಬಂದಿ ಸೇವಾ ಕೇಂದ್ರಗಳ ಸಿಬ್ಬಂದಿ ಹಾಗೂ ಈ ಯೋಜನೆಗೆ ಸಂಬಂಧಪಟ್ಟ ಇತರ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಇನ್ನು ಈ ಕ್ಯಾಂಪ್ ನಿಂದ ಮಹಿಳೆಯರಿಗೆ ಏನಪ್ಪಾ ಪ್ರಯೋಜನ ಎಂದು ನೋಡುವುದಾದರೆ ಮಹಿಳೆಯರೂ ಸ್ಥಳದಲ್ಲಿಯೇ ತಮಗೆ ಬೇಕಿದ್ದರೆ ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಅದಕ್ಕೆ ಕೆವೈಸಿ ಮಾಡಿಸಿಕೊಳ್ಳಬಹುದು ಹಾಗೂ ಈ ಖಾತೆಗೆ ಗೃಹಲಕ್ಷ್ಮಿಯ ಹಣ ಬರುವಂತೆ ಮಾಡಿಕೊಳ್ಳಬಹುದು.
ಇಲ್ಲಿ ಮಹಿಳೆಯರ ಗೃಹಲಕ್ಷ್ಮಿ ಅರ್ಜಿ ಸ್ಥಿತಿ ಪರಿಶೀಲನೆ ಮಾಡಲಾಗುತ್ತೆ. ಬ್ಯಾಂಕೆ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ತಕ್ಷಣವೇ ಮಾಡಿಸಿಕೊಡಲಾಗುತ್ತೆ. ಮಹಿಳೆಯರ ಖಾತೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನ ಪರಿಹರಿಸಿ ಅವರ ಖಾತೆಗೆ 100 ಪ್ರತಿಶತದಷ್ಟು ಹಣ ಬರುವಂತೆ ಮಾಡುವ ಕೆಲಸವನ್ನ ಸರ್ಕಾರ ಕೈಗೊಂಡಿದೆ.
ಇದರಿಂದಾಗಿ 100%ದಷ್ಟು ಮಹಿಳೆಯರ ಖಾತೆಗೆ ಡಿಸೆಂಬರ್ ತಿಂಗಳ ಕೊನೆಯೊಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
Gruha Lakshmi money will not be missed for any reason henceforth