ಫ್ರೀ ಬಸ್ ಅಂತ ಬೇಕಾಬಿಟ್ಟಿ ಪ್ರಯಾಣಿಸುವಂತಿಲ್ಲ; ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ
ಇನ್ನು ಮುಂದೆ ಬಸ್ ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಈ ಕೆಲಸ ಮಾಡಬೇಕು; ಸಾರಿಗೆ ಇಲಾಖೆಯ ಮಹತ್ವದ ಆದೇಶ
ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಬಸ್ನಲ್ಲಿ ಪ್ರಯಾಣ ಮಾಡುವವರಿಗೆ ಮಹತ್ವದ ಸೂಚನೆ ಒಂದನ್ನು ನೀಡಿದ್ದಾರೆ, ಇನ್ನು ಮುಂದೆ ಬಸ್ಸಿನಲ್ಲಿ ಪ್ರಯಾಣ ಮಾಡುವವರು ಈ ನಿಯಮವನ್ನು ಪಾಲನೆ ಮಾಡುವುದು ಕಡ್ಡಾಯ ಎನ್ನಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ covid-19 ಎನ್ನುವ ಮಹಾಮಾರಿ ದೇಶಾದ್ಯಂತ ಆವರಿಸಿಕೊಂಡು ಜನರನ್ನ ಎಷ್ಟು ಕಾಡಿತ್ತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ.
ಇಡೀ ದೇಶದಲ್ಲಿ ಯಾವುದೇ ಯುದ್ಧವೂ ನಡೆಯದೆ ಲಕ್ಷಗಟ್ಟಲೆ ಜನ ಪ್ರಾಣ ಕಳೆದುಕೊಂಡ ಸಂದರ್ಭ ಅದು. ಇಂತಹ ಸಂದರ್ಭ ಮತ್ತೆ ಬರಬಾರದು ಎನ್ನುವ ಕಾರಣಕ್ಕೆ ಈಗಲೂ ಕೂಡ ಕೆಲವು ಮುತುವರ್ಜಿಯನ್ನು ಸರ್ಕಾರವಹಿಸಿಕೊಂಡು ಬಂದಿದೆ, ಇದನ್ನು ಸಾರ್ವಜನಿಕರು ಕೂಡ ಪಾಲನೆ ಮಾಡುವುದು ಅನಿವಾರ್ಯವಾಗಿದೆ.
ಇಂತಹ ರೈತರಿಗೆ ಸರ್ಕಾರಿ ಜಮೀನು ಮಂಜೂರು! ಸಿಗಲಿದೆ ಹಕ್ಕು ಪತ್ರ; ಆಪ್ ಮೂಲಕ ಭೂಮಿ ಸರ್ವೆ
ಮತ್ತೆ ಕೋವಿಡ್ ಅಕ್ರಮಣ ( Covid-19)
ಜೆಎನ್ 1 ಸೋಂಕು ಮತ್ತೆ ಬೇರೆ ಬೇರೆ ರೂಪಾಂತರಗಳಲ್ಲಿ ಹುಟ್ಟಿಕೊಂಡಿದೆ, ಈ ಬಗ್ಗೆ ಈಗಾಗಲೇ ವಿಶ್ವಾದ್ಯಂತ ಚರ್ಚೆ ನಡೆಯುತ್ತಿದೆ. ಸಾಕಷ್ಟು ಜನ ಅನಾರೋಗ್ಯ ಸಮಸ್ಯೆ (health issues) ಅನುಭವಿಸುವಂತೆ ಆಗಿದೆ, ಆದರೆ ಇದು ಹೆಚ್ಚು ದೊಡ್ಡ ಸಮಸ್ಯೆ ಆಗಬಾರದು.. ಯಾರಿಗೂ ಸೋಂಕು ಮತ್ತೆ ಹರಡಬಾರದು ಎನ್ನುವ ಕಾರಣಕ್ಕೆ ಸರ್ಕಾರ ಕೆಲವು ಪ್ರಮುಖ ನಿಯಮಗಳನ್ನ ರಾಜ್ಯದ ಜನತೆಗೆ ತಿಳಿಸಿದೆ.
ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು! (Do not break these rules while travelling)
ಇನ್ನು ಮುಂದೆ ಬಸ್ ನಲ್ಲಿ ಪ್ರಯಾಣಿಸುವವರು 60 ವರ್ಷ ಮೇಲ್ಪಟ್ಟವರಾಗಿದ್ದರೆ ಮಾಸ್ಕ್ (mask mandatory) ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಅದೇ ರೀತಿ ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲಿ ಜನರು ಹೆಚ್ಚಾಗಿ ಸೇರುವ ಸ್ಥಳದಲ್ಲಿ ಇರುವವರು ಮಾಸ್ಕ ಧರಿಸುವುದು ಸ್ಯಾನಿಟೈಸೇಷನ್ (sanitization) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಸರ್ಕಾರಿ ಕೆಲಸ, 10ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು! ಜಿಲ್ಲಾ ಕೋರ್ಟ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
ಸರ್ಕಾರದ ನಿಯಮ ಪಾಲಿಸದೆ ಇದ್ರೆ ಅಪಾಯ ಗ್ಯಾರಂಟಿ!
ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಹೊಸ ಪ್ರಕರಣಗಳು ರಾಜ್ಯದಲ್ಲಿಯೂ ಕೂಡ ಪಟ್ಟಿಯಾಗುತ್ತಿವೆ. ಹಾಗಾಗಿ ಜನರು ಹೆಚ್ಚು ಮುತುವರ್ಜಿಯಿಂದ ನಡೆದುಕೊಳ್ಳುವುದು ಮುಖ್ಯ, ಅವರ ಆರೋಗ್ಯಕ್ಕೆ ಅವರೇ ಜವಾಬ್ದಾರರು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಬಸ್ (government bus) ಗಳನ್ನು ಬಳಸಿ ಪ್ರಯಾಣಿಸುವವರು ಮಾಸ್ಕ್ ಧರಿಸಲೇಬೇಕು ಎಂದು ಕಡ್ಡಾಯ ನಿಯಮವನ್ನು ಹೊರಡಿಸಿದೆ. ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ, ಅದರಲ್ಲೂ ವಿಶೇಷವಾಗಿ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು
ಗೃಹಲಕ್ಷ್ಮಿ ಯೋಜನೆ ಅನರ್ಹರ ಪಟ್ಟಿ ಬಿಡುಗಡೆ; ಇವರಿಗೆ ಸಿಗೋಲ್ಲ 2,000 ರೂಪಾಯಿ
ಸರ್ಕಾರದ ಕೋವಿಡ್ ಮಾರ್ಗಸೂಚಿಯಲ್ಲಿ ಏನಿದೆ?
ಶೀತ ಜ್ವರ ಉಸಿರಾಟದ ಸಮಸ್ಯೆ ಇರುವವರು ತಕ್ಷಣವೇ ಕೋವಿಡ್ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು..
ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಹೊಂದಿಕೊಂಡಿರುವಂತಹ ಪ್ರದೇಶದಲ್ಲಿ ವಾಸಿಸುವವರು ಕೆಮ್ಮು ಶೀತ ನೆಗಡಿ ಅಥವಾ ಜ್ವರದ ಲಕ್ಷಣಗಳಿದ್ದರೆ ಕಡ್ಡಾಯವಾಗಿ ಕೋವಿಡ್ ತಪಾಸಣೆ ( Covid test) ಮಾಡಿಸಿಕೊಳ್ಳಬೇಕು ಹಾಗೂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.
ವೈಯಕ್ತಿಕ ಸ್ವಚ್ಛತೆ ಬಗ್ಗೆ ಎಲ್ಲರೂ ಜಾಗರೂಕತೆಯಿಂದ ಇರಬೇಕು, ಆಗಾಗ ಕೈ ತೊಳೆಯುವುದು ಸ್ವಚ್ಛವಾಗಿ ಇರುವುದು ಬಹಳ ಮುಖ್ಯ ಎಂದು ಸಚಿವರು ತಿಳಿಸಿದ್ದಾರೆ.
ಗಡಿ ಜಿಲ್ಲೆಗಳಲ್ಲಿ ಕೋವಿಡ್ ತಪಾಸಣಾ ವರದಿಯನ್ನು ಜಿಲ್ಲಾಡಳಿತ ಕಚೇರಿಗೆ ತಲುಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸರ್ಕಾರದ ಈ ನಿಯಮಗಳನ್ನ ಪಾಲಿಸುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ನೀವು ನಿಮ್ಮ ಸುರಕ್ಷತೆಗಾಗಿ ಹಾಗೂ ನಿಮ್ಮ ಕುಟುಂಬದವರ ಸುರಕ್ಷತೆಗಾಗಿ ಕೋವಿಡ್ ಬಗ್ಗೆ ಎಚ್ಚರಿಕೆವಹಿಸಿ. ಮಾಸ್ಕ್ ಧರಿಸುವುದು ಸ್ಯಾನಿಟೈಸರ್ ಬಳಸುವುದನ್ನು ಮರೆಯಬೇಡಿ.
ಈ ಕೆಲಸ ಮಾಡಿ! ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ
Covid Guidelines implemented for bus travel