Karnataka NewsBangalore News

ಇಂತಹ ರೈತರಿಗೆ ಸರ್ಕಾರಿ ಜಮೀನು ಮಂಜೂರು! ಸಿಗಲಿದೆ ಹಕ್ಕು ಪತ್ರ; ಆಪ್ ಮೂಲಕ ಭೂಮಿ ಸರ್ವೆ

ತಮ್ಮದೇ ಆಗಿರುವ ಸ್ವಂತ ಕೃಷಿ ಭೂಮಿ (agriculture land) ಇಲ್ಲದೆ ಇದ್ದರೂ ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಸರ್ಕಾರವು ಇದೀಗ ಗುಡ್ ನ್ಯೂಸ್ ನೀಡಿದೆ. ಇಂತಹ ರೈತರಿಗೆ ಡಿಜಿಟಲ್ ಹಕ್ಕು ಪತ್ರ ನೀಡಲು ಸರ್ಕಾರ ಮುಂದಾಗಿದೆ.

ಡಿಜಿಟಲ್ ಹಕ್ಕು ಪತ್ರ ವಿತರಣೆ (digital hakku Patra distribution)

ರಾಜ್ಯದಲ್ಲಿ ಸಾಕಷ್ಟು ರೈತರು ತಮ್ಮ ಸ್ವಂತ ಜಮೀನು (own agriculture land) ಇಲ್ಲದಿದ್ದರೂ ಸರ್ಕಾರದ ಭೂಮಿ (government land) ಯನ್ನೇ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು ಅದರಲ್ಲಿ ಸಾಕಷ್ಟು ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದಾರೆ

Wrong name on your land Documents, Change easily like this

ಇಂಥವರು ತಮ್ಮ ಹೆಸರಿಗೆ ಜಮೀನು ಪಡೆದುಕೊಳ್ಳಲು ಅರ್ಜಿಯನ್ನು ಸರ್ಕಾರ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿ ರೈತರಿಗೆ ಡಿಜಿಟಲ್ ಹಕ್ಕು ಪತ್ರ ನೀಡುವುದಾಗಿ ಸರ್ಕಾರ ತಿಳಿಸಿದೆ.

ಸರ್ಕಾರಿ ಕೆಲಸ, 10ನೇ ಕ್ಲಾಸ್ ಪಾಸ್ ಆಗಿದ್ರೆ ಸಾಕು! ಜಿಲ್ಲಾ ಕೋರ್ಟ್ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

ಕಂದಾಯ ಇಲಾಖೆ ಸಚಿವರ ಸ್ಪಷ್ಟನೆ!

ಕಂದಾಯ ಇಲಾಖೆ (revenue department) ಬಹಳ ವೇಗವಾಗಿ ಕೃಷಿಕರಿಗೆ ಜಮೀನು ವಿತರಣೆ ಮಾಡುವ ವಿಚಾರದಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಸರ್ಕಾರಿ ಭೂಮಿಯನ್ನು (Government Land) ಅಕ್ರಮವಾಗಿ ಸಾಗುವಳಿ ಮಾಡುವವರನ್ನು ಗುರುತಿಸಿ ಅವರು ಅರ್ಹರಾಗಿದ್ದರೆ ಅವರಿಗೆ ಡಿಜಿಟಲ್ ಹಕ್ಕು ಪತ್ರ ನೀಡುವ ಸಲುವಾಗಿ ಬಗೆರ್ ಹುಕುಂ ಮೊಬೈಲ್ ಅಪ್ಲಿಕೇಶನ್ (Mobile App) ಅನ್ನು ಸರ್ಕಾರ ಬಿಡುಗಡೆ ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಅನರ್ಹರ ಪಟ್ಟಿ ಬಿಡುಗಡೆ; ಇವರಿಗೆ ಸಿಗೋಲ್ಲ 2,000 ರೂಪಾಯಿ

Agriculture Landಬಗೇರ್ ಹುಕುಂ ಅಪ್ಲಿಕೇಶನ್ ನ ಪ್ರಯೋಜನ ಏನು? (Bagair Hukum application benefits)

ಅಕ್ರಮ ಜಮೀನುಗಳನ್ನು ಸಕ್ರಮ ಮಾಡುವ ಬಗೇರ್ ಹುಕುಂ ಯೋಜನೆಯನ್ನು ಸರ್ಕಾರ ಬಹಳ ಹಿಂದೆಯೇ ಆರಂಭಿಸಿತ್ತು. ಇದೀಗ ಮೊಬೈಲ್ ಅಪ್ಲಿಕೇಶನ್ ಆರಂಭಿಸಿದ್ದು ಇದರ ಅಡಿಯಲ್ಲಿ ಸ್ಯಾಟಲೈಟ್ (satellite image) ಮೂಲಕ ಕೃಷಿ ಸಾಗುವಳಿ ಭೂಮಿಯನ್ನು (Agriculture Land) ಪರಿಶೀಲಿಸಿ ಅರ್ಹ ಫಲಾನುಭವಿ ರೈತರಿಗೆ ಮಾತ್ರ ಹಕ್ಕು ಪತ್ರ ವಿತರಣೆ ಮಾಡಲಾಗುವುದು.

ನಮೂನೆ 50, ನಮೂನೆ 53 ಹಾಗೂ 57 ಅಡಿಯಲ್ಲಿ ಅಕ್ರಮ ಭೂಮಿಯನ್ನು ಸಕ್ರಮವಾಗಿಸಿಕೊಳ್ಳಲು ಸರಕಾರಕ್ಕೆ ಸಾಕಷ್ಟು ಅರ್ಜಿಗಳು ಸಂದಾಯವಾಗಿವೆ.

ಈ ಕೆಲಸ ಮಾಡಿ! ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ

ನಕಲಿ ಅರ್ಜಿಗಳ ಪರಿಶೀಲನೆ!

2004 ಕ್ಕಿಂತ ಮೊದಲೇ ಸರ್ಕಾರಿ ಭೂಮಿಯಲ್ಲಿ ಕೃಷಿ ಆರಂಭಿಸಿದವರು ಅಥವಾ 18 ವರ್ಷಗಳಿಂದ ಸರ್ಕಾರದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿತ್ತು.

ಆದರೆ 18 ವರ್ಷ ಆಗದೆ ಇದ್ದರೂ ಕೂಡ ಕೃಷಿಯೇತರ ಚಟುವಟಿಕೆಗಳಿಗಾಗಿ ಸರ್ಕಾರಿ ಭೂಮಿಯನ್ನು ಬಳಸಿಕೊಂಡಿದ್ದರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಒಬ್ಬ ವ್ಯಕ್ತಿ ಬೇರೆ ಬೇರೆ ಕಡೆ ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಸಲ್ಲಿಸಿದ್ದು ಆಯಾ ಗ್ರಾಮಕ್ಕೆ ಸಂಬಂಧಪಟ್ಟ ಅರ್ಜಿ ಸಲ್ಲಿಸಿದ್ದು ಸರ್ಕಾರದ ಗಮನಕ್ಕೆ ಬಂದಿದೆ, ಹಾಗಾಗಿ ಇಂತಹ ನಕಲಿ ಅರ್ಜಿಗಳನ್ನು ಪರಿಶೀಲಿಸಿ ತಕ್ಷಣ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಇನ್ನು ಸಾವಿರಾರು ಎಕರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರು ನಿಜವಾಗಿ ಸಾಗುವಳಿ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನ ತಿಳಿದುಕೊಳ್ಳಲು ಸ್ವತ: ಅಧಿಕಾರಿಗಳು ಎಲ್ಲಾ ಕಡೆ ಹೋಗಿ ಪರಿಶೀಲನೆ ಮಾಡುವುದು ಕಷ್ಟ ಇದೇ ಕಾರಣಕ್ಕೆ ಬಗೇರ್ ಹುಕುಂ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದ್ದು, ಇದರ ಮೂಲಕವೇ ಯಾವ ಜಾಗದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ತಿಳಿಯಬಹುದಾಗಿದೆ. App ಮೂಲಕ ಯಾವುದೇ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.

ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ ಹೀಗೆ ಚೆಕ್ ಮಾಡಿ

ಈ ಮೊಬೈಲ್ ಅಪ್ಲಿಕೇಶನ್ ಬಳಸಿಕೊಳ್ಳುವುದು ಹೇಗೆ?

ಗ್ರಾಮ ಲೆಕ್ಕಿಗರು ಅರ್ಜಿದಾರರ ಸಾಗುವಳಿ ಜಮೀನಿನ ಬಳಿ ಹೋಗಿ ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಯಾಟಲೈಟ್ ವರದಿ ಪಡೆದುಕೊಳ್ಳಬಹುದು ನಂತರ ಆ ಭೂಮಿಯಲ್ಲಿ ಕೃಷಿ ನಡೆಯುತ್ತಿದೆಯೋ ಅಥವಾ ಕೃಷಿಯೇತರ ಚಟುವಟಿಕೆ ನಡೆಯುತ್ತಿದೆಯೋ ಎಂಬುದನ್ನು ತಿಳಿದುಕೊಳ್ಳಬಹುದು

ಈ ಒಂದು ಮಾಹಿತಿಯ ಮೂಲಕ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಕಂದಾಯ ನಿರೀಕ್ಷಕರು ಹಾಗೂ ಸರ್ವೆ ಅಧಿಕಾರಿಗಳು ಈ ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗುವ ಮೂಲಕ ಗ್ರಾಮಲೆಕ್ಕಿಗರು ನೀಡಿದ ವರದಿಯನ್ನು ನೋಡಬಹುದು

ಅದೇ ರೀತಿ ತಶೀಲ್ದಾರರು ಸ್ಯಾಟಲೈಟ್ ಇಮೇಜ್ ಪರಿಶೀಲನೆ ನಡೆಸಿ ನಂತರ ಅಕ್ರಮ ಸಕ್ರಮ ಅರ್ಜಿಯನ್ನು ವಿಲೇವಾರಿ ಮಾಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ.

ಪ್ರಾಯೋಗಿಕವಾಗಿ ಕೆಲವು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಈ ತಂತ್ರಾಂಶ ಬಳಕೆ ಆರಂಭವಾಗಿದ್ದು ಎಲ್ಲವೂ ಸಕ್ಸಸ್ ಆದರೆ ರಾಜ್ಯಾದ್ಯಂತ ತಂತ್ರಾಂಶ ಅಳವಡಿಕೆ ಮಾಡಿ ನಿಜಕ್ಕೂ ಅಗತ್ಯ ಇರುವ ರೈತರಿಗೆ ಅಕ್ರಮ ಸಕ್ರಮ ಡಿಜಿಟಲ್ ಹಕ್ಕು ಪತ್ರ ನೀಡಲಾಗುವುದು.

ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು! ಸರ್ಕಾರ ಖಡಕ್ ವಾರ್ನಿಂಗ್; ತಕ್ಷಣ ಈ ಕೆಲಸ ಮಾಡಿ

Allotment of government land to such farmers, Agriculture Land survey through app

Our Whatsapp Channel is Live Now 👇

Whatsapp Channel

Related Stories