ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೋ ಇಲ್ವೋ ಹೀಗೆ ಚೆಕ್ ಮಾಡಿ
ಅನ್ನಭಾಗ್ಯ ಯೋಜನೆ (Annabhagya scheme) ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎನ್ನುವುದಕ್ಕಿಂತ ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಮಹತ್ವಕಾಂಕ್ಷಿ ಯೋಜನೆ ಎಂದು ಹೇಳಬಹುದು
ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಅನ್ನ ರಾಮಯ್ಯ ಎಂದು ಕೂಡ ಕರೆಯಲಾಗುತ್ತೆ. ಆದರೆ ದುರಾದೃಷ್ಟವಷಾತ್ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಎಂಬ ಮಾತನ್ನು ಸರ್ಕಾರಕ್ಕೆ ಮಾತ್ರ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಅಕ್ಕಿಯ ಬದಲು ಹಣ ಪಡೆದುಕೊಳ್ಳುತ್ತಿರುವುದು ನಿಮಗೆಲ್ಲ ಗೊತ್ತಿದೆ.
ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು! ಸರ್ಕಾರ ಖಡಕ್ ವಾರ್ನಿಂಗ್; ತಕ್ಷಣ ಈ ಕೆಲಸ ಮಾಡಿ
ಅನ್ನಭಾಗ್ಯ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್! (Annabhagya scheme big update)
ಮುಂಗಾರು ಮಳೆ ಬೆಳೆ ಎರಡು ಅಭಾವವಾಗಿದ್ದು, ರೈತರು (farmers) ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಕೂಡ ಘೋಷಿಸಲಾಗಿದೆ
ಹಾಗಾಗಿ ಅಂತಹ ಪ್ರದೇಶಗಳಲ್ಲಿ ವಾಸಿಸುವ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಉಚಿತ ಅಕ್ಕಿಯನ್ನು ಸೇರಿಸಿ 10 ಕೆಜಿ ಅಕ್ಕಿ ನೀಡುವುದಾಗಿ ತಿಳಿಸಿದೆ, ಆದರೆ ಈ ರೀತಿ ಉಚಿತ ಐದು ಕೆಜಿ ಅಕ್ಕಿ (free rice) ಎಲ್ಲರಿಗೂ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ, ಇದಕ್ಕಾಗಿ ಬೇರೆಬೇರೆ ರಾಜ್ಯಗಳ ಬಳಿ ಅಕ್ಕಿಗಾಗಿ ವಿಚಾರಿಸಲಾಗಿದ್ದು ಸದ್ಯದಲ್ಲಿಯೇ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿಯನ್ನೇ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (K.H muniyappa) ತಿಳಿಸಿದ್ದಾರೆ.
ಜಮೀನು ಸರ್ವೆ ಮಾಡಿಸೋದೆ ಬೇಡ, ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಿ ನಿಮ್ಮ ಜಮೀನು ಅಳತೆ
ಭವಿಷ್ಯದಲ್ಲಿ ಅಕ್ಕಿಯ ದರ ಗಗನಕ್ಕೆ!
ಈ ಬಾರಿ ರಾಜ್ಯದಲ್ಲಿ ಬತ್ತದ ಬೆಳೆ ಗಣನೀಯವಾಗಿ ಕುಸಿತ ಕಂಡಿದೆ. 35% ನಷ್ಟು ಭತ್ತದ ಬೆಳೆ ಕಡಿಮೆ ಆಗಿದ್ದು ಮುಂದಿನ ದಿನಗಳಲ್ಲಿ ಅಕ್ಕಿಯ ಬೆಲೆ ಗಗನಕ್ಕೆ ಏರಬಹುದು. ಖಾಸಗಿ ಹಾಗೂ ಸರ್ಕಾರಿ ಯೋಜನೆಗಳಿಗೂ ಇದರಿಂದ ತೊಂದರೆ ಆಗಬಹುದು
ಜನರಿಗೆ ಸರಿಯಾದ ಪ್ರಮಾಣದಲ್ಲಿ ಅಕ್ಕಿ ಸಿಗದೇ ಇರಬಹುದು ಅಥವಾ ಅತಿ ಹೆಚ್ಚು ಬೆಲೆ ತೆತ್ತು ಅಕ್ಕಿ ಖರೀದಿ ಮಾಡಬೇಕಾಗಬಹುದು. ಹೀಗಾಗಿ ಫಲಾನುಭವಿಗಳಿಗೆ ಆದಷ್ಟು ಬೇಗ ಅಕ್ಕಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳ ಹಣ ಬಂದಿದೆಯಾ? ಚೆಕ್ ಮಾಡಿ! (Check your DBT status)
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಜುಲೈ ತಿಂಗಳಿನಿಂದ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ (Bank Account) ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಸಾಕಷ್ಟು ಬಿಪಿಎಲ್ ಕಾರ್ಡ್ ದಾರರು ಅನ್ನಭಾಗ್ಯ ಯೋಜನೆಯ ಅಕ್ಕಿಯ ಬದಲು ಕೊಡುತ್ತಿರುವ ಹಣವನ್ನು ನೇರವಾಗಿ ತಮ್ಮ ಖಾತೆಗೆ ವರ್ಗಾವಣೆ (DBT) ಮಾಡಿಸಿಕೊಳ್ಳುತ್ತಿದ್ದಾರೆ.
ಆಧಾರ್ ಸಿಡಿಂಗ್ (Aadhaar seeding ) ಅಥವಾ ಈಕೆ ವೈ ಸಿ (E-KYC) ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವವರ ಖಾತೆಗೆ (Bank Account) ಅನ್ನ ಭಾಗ್ಯ ಯೋಜನೆಯ ಹಣ ಸಂದಾಯವಾಗಿಲ್ಲ. ಇಂಥವರನ್ನು ಹೊರತುಪಡಿಸಿ ಶೇಕಡ 80ರಷ್ಟು ಜನರಿಗೆ ಅಕ್ಕಿಯ ಬದಲು ಹಣವನ್ನು ಸರ್ಕಾರ ನೇರವಾಗಿ ಖಾತೆಗೆ ಜಮಾ (Money Deposit) ಮಾಡುತ್ತಿದೆ.
ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ. ಈ ಸರ್ವಿಸ್ ವಿಭಾಗದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಸಿಗಲಿದೆ ಗೃಹಲಕ್ಷ್ಮಿ ಡಿಸೆಂಬರ್ ತಿಂಗಳಿನ ಹಣ!
ನಂತರ ಡಿಬಿಟಿ ಸ್ಟೇಟಸ್ (DBT status) ಪುಟ ತೆರೆದುಕೊಳ್ಳುತ್ತದೆ, ನಂತರ ನೀವು ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಆ ಜಿಲ್ಲೆಯ ಮೇಲಭಾಗದಲ್ಲಿ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.
ಬಳಿಕ ಯಾವ ತಿಂಗಳಿಗೆ ಅಕ್ಕಿ ಸಮುದಾಯವಾಗಿದೆ ಎಂಬುದನ್ನ ತಿಳಿದುಕೊಳ್ಳಲು ತಿಂಗಳು ಆಯ್ಕೆ ಮಾಡಿ ಆರ್ ಆರ್ ನಂಬರ್ (ration card number) ಹಾಗೂ ಕ್ಯಾಪ್ಚ ಸಂಖ್ಯೆ ನಮೂದಿಸಿ ಗೋ ಎಂದು ಕೊಟ್ಟರೆ ನಿಮ್ಮ ಬ್ಯಾಂಕ್ ಖಾತೆಯ ವಿವರ ಕಾಣಿಸುತ್ತದೆ
ನಿಮ್ಮ ಮನೆಯಲ್ಲಿ ಎಷ್ಟು ಜನ ಸದಸ್ಯರಿದ್ದೀರಿ ಎಷ್ಟು ಹಣ ವರ್ಗಾವಣೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತದೆ. ಒಂದು ವೇಳೆ ನಿಮಗೆ ತಾಂತ್ರಿಕ ದೋಷದಿಂದ ಸ್ಟೇಟಸ್ ಚೆಕ್ ಮಾಡಲು ಆಗದೆ ಇದ್ದಲ್ಲಿ ಬ್ಯಾಂಕಿಗೆ ಹೋಗಿ ಖಾತೆಯನ್ನು ಚೆಕ್ ಮಾಡಬಹುದು.
Check whether Annabhagya Yojana money Credited to Your Bank Account or not
Our Whatsapp Channel is Live Now 👇