ಜಮೀನು ಸರ್ವೆ ಮಾಡಿಸೋದೆ ಬೇಡ, ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಿ ನಿಮ್ಮ ಜಮೀನು ಅಳತೆ

ಪ್ರತಿಯೊಬ್ಬ ರೈತರು (farmers) ಕೂಡ ತಮ್ಮ ಬಳಿ ಎಷ್ಟು ಜಮೀನಿದೆ? ತಾವು ಉಳುಮೆ ಮಾಡುತ್ತಿರುವ ಜಮೀನು (Plowing land) ತಮಗೆ ಮಾತ್ರ ಸೇರಿದೆ ಅಥವಾ ತಮಗೆ ಸಿಗಬೇಕಾಗಿರುವ ಜಮೀನು ಬೇರೆಯವರ ಪಾಲಾಗಿದೆಯೇ ಎನ್ನುವ ಹಲವು ಮಾಹಿತಿಗಳನ್ನ ತಿಳಿದುಕೊಳ್ಳಲು ಸರ್ವೇ ನಂಬರ್ (survey number) ಆಧಾರದ ಮೇಲೆ ಸರ್ವೆ ಮಾಡಿಸಿ ತಮ್ಮ ಜಮೀನನ್ನ (Property) ಬಂದೋಬಸ್ತ್ ಮಾಡಿಕೊಳ್ಳಬೇಕು.
ರೈತರು ತಮ್ಮ ಜಮೀನಿನ ವಿಸ್ತೀರ್ಣ ತಿಳಿದುಕೊಳ್ಳಲು ಸರ್ವೆ ಅಧಿಕಾರಿಗಳನ್ನು ಕರೆಸಿ ಸರ್ವೇ ನಂಬರ್ ಆಧಾರದ ಮೇಲೆ ಭೂಮಿಯ ವಿಸ್ತೀರ್ಣದ ಅಳತೆ ಮಾಡಿಸಿಕೊಳ್ಳುತ್ತಾರೆ
15 ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ! ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಖುಷಿಯ ಸುದ್ದಿ
ಆದರೆ ಇದಕ್ಕೆ ಒಂದಷ್ಟು ಹಣವನ್ನು ಖರ್ಚು ಮಾಡಲೇಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಅಡಿಯಲ್ಲಿ ಸಾಕಷ್ಟು ಮೊಬೈಲ್ ಅಪ್ಲಿಕೇಶನ್ (mobile application) ಗಳು ಕೂಡ ಬಿಡುಗಡೆ ಆಗಿದ್ದು ಆ ಮೂಲಕವೇ ನೀವು ನಿಮ್ಮ ಜಮೀನಿನ ವಿಸ್ತೀರ್ಣವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಹಾಗಾದ್ರೆ ಮೊಬೈಲ್ ಮೂಲಕ ಜಮೀನಿನ ವಿಸ್ತೀರ್ಣ (Area of land) ತಿಳಿದುಕೊಳ್ಳುವುದು ಹೇಗೆ ನೋಡೋಣ!
ದಿಶಾಂಕ್ ಮೊಬೈಲ್ ಅಪ್ಲಿಕೇಶನ್ (dishaank mobile application)

*ಈಗ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ.
*ಬಳಿಕ ಅಪ್ಲಿಕೇಶನ್ ತೆರೆದುಕೊಳ್ಳುತ್ತದೆ ಕೆಳಗಡೆ ಎಡ ಭಾಗದಲ್ಲಿ ಮಾಪನ ಸಾಧನಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ಮೇಲ್ಭಾಗದಲ್ಲಿ ಜಮೀನು ಸ್ಥಳ ಜಮೀನು ವಿಸ್ತೀರ್ಣ ಹಾಗೂ ಜಮೀನಿನ ನಕ್ಷೆಯನ್ನು ತೋರಿಸುವ ಮೂರು ಸಿಂಬಲ್ ಗಳನ್ನು ನೋಡುತ್ತೀರಿ.
*ಅವುಗಳಲ್ಲಿ ಜಮೀನು ಹದ್ದುಬಸ್ತು ಮಾಡಲು ಇರುವಂತಹ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಆಗ ಮತ್ತೊಂದಿಷ್ಟು ಆಯ್ಕೆಗಳು ತೆರೆದುಕೊಳ್ಳುತ್ತವೆ.
*GIS ಉಪಗ್ರಹ ನಕ್ಷೆ ಎನ್ನುವ ಹಾಗೆ ಕಾಣಿಸುತ್ತದೆ ಇದು ಕರ್ನಾಟಕ ನಕ್ಷೆಯ ಸಿಂಬಲ್ ಹೊಂದಿರುತ್ತದೆ. ಮೇಲೆ ಕ್ಲಿಕ್ ಮಾಡಿ.
*ಬಳಿಕ ಮತ್ತೊಂದು ಪುಟ ಕರೆದುಕೊಳ್ಳುತ್ತದೆ ಅದರಲ್ಲಿ ಸಾಧನಗಳು ಎಂದು ಹಿಂದೆ ಕ್ಲಿಕ್ ಮಾಡಿರುತ್ತೀರಲ್ಲವೇ? ಪಕ್ಕದಲ್ಲಿ ಸರ್ವೆ ನಂಬರ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
ಎಪಿಎಲ್ ಕಾರ್ಡ್ ಇದ್ದವರಿಗೆ ರಾತ್ರೋರಾತ್ರಿ ಸರ್ಕಾರದ ಹೊಸ ಆದೇಶ! ಹೊಸ ರೂಲ್ಸ್
*ನಿಮ್ಮ ಸರ್ವೆ ನಂಬರ್ ನಮೂದಿಸಿ ನಿಮ್ಮ ಗ್ರಾಮ ಹೋಬಳಿ ನಮೂದಿಸಬೇಕು
*ಬಳಿಕ ಗ್ರಾಮ ನಕ್ಷೆ ವಿವರ ತೆರೆದುಕೊಳ್ಳುತ್ತದೆ. ನಿಮ್ಮ ಸರ್ವೆ ನಂಬರ್ ಆಧಾರದ ಮೇಲೆ ಜಮೀನು ಎಷ್ಟು ವಿಸ್ತೀರ್ಣವಾಗಿದೆ ಹೋಬಳಿಯಿಂದ ಎಷ್ಟು ದೂರದಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಅಷ್ಟೇ ಅಲ್ಲದೆ ಈ ಅಪ್ಲಿಕೇಶನ್ ಗಳಲ್ಲಿ ನಿಮ್ಮ ಜಮೀನಿಗೆ ಸಂಬಂಧಪಟ್ಟ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ, ಸರ್ವೆ ನಂಬರ್ ಹಾಗೂ ಹೊಸ ನಂಬರ್ ನಮೂದಿಸುವುದರ ಮೂಲಕ ಮಾಲೀಕ ಯಾರು ಎನ್ನುವ ಹೆಸರು ಕೂಡ ಕಾಣಿಸುತ್ತದೆ.
ಆರ್ ಟಿ ಸಿ ತೆಗೆದುಕೊಳ್ಳುವ ಆಯ್ಕೆಯೂ ಇದೆ. ಹೀಗಾಗಿ ನೀವು ಮೊಬೈಲ್ ನಲ್ಲಿ ನಿಮ್ಮ ಜಮೀನಿಗೆ ಸಂಬಂಧಪಟ್ಟ ಯಾವುದೇ ವಿವರಗಳನ್ನು ಸುಲಭವಾಗಿ ತಿಳಿಯಬಹುದು.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರುವ ಬಗ್ಗೆ ಡಿಬಿಟಿ ಚೆಕ್ ಮಾಡಿಕೊಳ್ಳಿ
know the size of your land right on your mobile, Measure Property







