ಎಪಿಎಲ್ ಕಾರ್ಡ್ ಇದ್ದವರಿಗೆ ರಾತ್ರೋರಾತ್ರಿ ಸರ್ಕಾರದ ಹೊಸ ಆದೇಶ! ಹೊಸ ರೂಲ್ಸ್

ಯಾರು ಪಡಿತರ ಪಡೆದುಕೊಳ್ಳುತ್ತಿಲ್ಲವೋ ಅಂತವರ ಕಾರ್ಡ್ ರದ್ದಾಗುವ (ration card cancellation) ಅಥವಾ ಅಮಾನತುಗೊಳ್ಳುವ ಸಾಧ್ಯತೆ ಇದೆ

Bengaluru, Karnataka, India
Edited By: Satish Raj Goravigere

ರಾಜ್ಯದಲ್ಲಿ ರೇಷನ್ ಕಾರ್ಡ್ (Ration Card) ಎನ್ನುವುದು ಬಹಳ ಪ್ರಮುಖ ದಾಖಲೆಯಾಗಿದೆ, ಅದು ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಿಂದಾಗಿ ಜನರು ಹೆಚ್ಚು ರೇಷನ್ ಕಾರ್ಡ್ ಪಡೆದುಕೊಳ್ಳುವ ಬಗ್ಗೆ ಗಮನಹರಿಸಿದ್ದಾರೆ

ಎಪಿಎಲ್ ಗ್ರಾಹಕರಿಗೆ ಸರ್ಕಾರದ ವಾರ್ನಿಂಗ್! (Government warning for APL card holders)

ರಾಜ್ಯದಲ್ಲಿರುವ ಸುಮಾರು 24 ಲಕ್ಷ ಎಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಈಗ ಶಾಕ್ ನೀಡಿದೆ. ಹೌದು ರಾಜ್ಯದಲ್ಲಿ 24 ಲಕ್ಷಕ್ಕೂ ಅಧಿಕ ಎಪಿಎಲ್ ಕಾರ್ಡ್ (APL Card) ಹೊಂದಿರುವ ಜನರು ಇದ್ದಾರೆ

Government's new order overnight for APL card holders

ಆದರೆ ಎಪಿಎಲ್ ಕಾರ್ಡ್ ಹೊಂದಿರುವ ಶೇಕಡ 80ರಷ್ಟು ಜನ ಪಡಿತರ ವಸ್ತುಗಳನ್ನ ಪಡೆದುಕೊಳ್ಳುತ್ತಿಲ್ಲ, ಇದಕ್ಕಾಗಿ ಸರ್ಕಾರ ಹೊಸ ಉಪಕ್ರಮ ಕೈಗೊಳ್ಳಲು ಮುಂದಾಗಿದ್ದು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ ನೀಡಿದೆ.

ಯುವನಿಧಿ ಯೋಜನೆಗೆ ಹೊಸ ಹೊಸ ಕಂಡೀಷನ್! ಇಂಥವರಿಗೆ ಮಾತ್ರ ಸಿಗಲಿದೆ ಹಣ

ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಇನ್ನು ಮುಂದೆ ಸಿಗುವುದಿಲ್ಲ ಪಡಿತರ ವಸ್ತು!

ದೇಶದಲ್ಲಿ ಹಸಿವನ್ನು ಹೋಗಲಾಡಿಸಲು ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಪ್ರಯೋಜನವಾಗಲು ಸರ್ಕಾರ ಅಂತವರಿಗೆ ಬಿಪಿಎಲ್ ಕಾರ್ಡ್ (BPL card) ವಿತರಣೆ ಮಾಡಿದೆ

ಈ ಹಿನ್ನೆಲೆಯಲ್ಲಿ ಉಚಿತವಾಗಿ ಪಡಿತರ ವಸ್ತುಗಳನ್ನು ಪಡೆದುಕೊಳ್ಳಬಹುದು. ಅದೇ ರೀತಿ ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಕೂಡ ಪಡಿತರ ಸಿಗುತ್ತದೆ, ಅತಿ ರಿಯಾಯಿತಿ ಬೆಲೆಯಲ್ಲಿ ಪಡಿತರ ಪಡೆದುಕೊಳ್ಳಲು ಸಾಧ್ಯವಿದೆ

ಆದರೆ ಇಲ್ಲಿಯವರೆಗೆ ಸರ್ಕಾರ ನೀಡಿರುವ ವರದಿಯ ಪ್ರಕಾರ ಶೇಕಡ 80ರಷ್ಟು ಜನ ಎಪಿಎಲ್ ಕಾರ್ಡ್ ಹೊಂದಿದ್ದು ಕೇವಲ ಗುರುತಿಗಾಗಿಯೇ ಹೊರತು ಪಡಿತರ ಪಡೆದುಕೊಳ್ಳುವುದಕ್ಕಲ್ಲ.

ಸದ್ಯ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ವಾರ್ನಿಂಗ್ ನೀಡಿದ್ದು ಇನ್ನು ಮುಂದೆ ಹೊಸ ಪಡಿತರ ಚೀಟಿಗಾಗಿ ಅರ್ಜಿ (new application to get APL card) ಸಲ್ಲಿಸುವವರು ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಬಯಸುವವರು ತಾವು ಈ ಕಾರ್ಡ್ ಪಡೆದುಕೊಳ್ಳುತ್ತಿರುವುದು ಕೇವಲ ಗುರುತಿಗಾಗಿಯೇ ಅಥವಾ ಪಡಿತರ ಪಡೆದುಕೊಳ್ಳುವುದಕ್ಕಾಗಿಯೇ ಎಂಬುದನ್ನು ಅರ್ಜಿಯಲ್ಲಿ ನಮೂದಿಸಬೇಕು.

ಇದರ ಆಧಾರದ ಮೇಲೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಖರ್ಚು ಮಾಡುವ ಪಡಿತರ ವೆಚ್ಚವನ್ನು ಉಳಿಸಿ ಅದೇ ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಪಡಿತರ ಪ್ರಯೋಜನ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಇನ್ನು ಮುಂದೆ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಪಡಿತರ ಪಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರುವ ಬಗ್ಗೆ ಡಿಬಿಟಿ ಚೆಕ್ ಮಾಡಿಕೊಳ್ಳಿ

ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಸರ್ಕಾರದ ನಿರ್ಧಾರ!

BPL Ration Cardರಾಜ್ಯದಲ್ಲಿ ಸುಮಾರು 1.27 ಲಕ್ಷ ಜನ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದ್ದು ಸುಮಾರು 4.37 ಕೋಟಿ ಜನ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸುಮಾರು 3.46 ಲಕ್ಷ ಜನ ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳುತ್ತಿಲ್ಲ. ಹಾಗಾಗಿ ಇಂತಹ ಕಾರ್ಡ್ ಅನ್ನು ಅಮಾನತ್ತುಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಹೌದು, ಸರ್ಕಾರ ಈಗಾಗಲೇ ತಿಳಿಸಿರುವಂತೆ ಕಳೆದ ಆರು ತಿಂಗಳಿನಿಂದ ಯಾರು ಪಡಿತರ ಪಡೆದುಕೊಳ್ಳುತ್ತಿಲ್ಲವೋ ಅಂತವರ ಕಾರ್ಡ್ ರದ್ದಾಗುವ (ration card cancellation) ಅಥವಾ ಅಮಾನತುಗೊಳ್ಳುವ ಸಾಧ್ಯತೆ ಇದೆ

ಮುಂದಿನ ತಿಂಗಳಿನಿಂದ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ!

ಆದರೆ ಅಮಾನತುಗೊಳಿಸುವುದಕ್ಕೂ ಮೊದಲು ಆಹಾರ ಇಲಾಖೆಯ (food department officers) ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ, ಒಂದು ವೇಳೆ ಸೂಕ್ತ ಕಾರಣಗಳಿದ್ದು ರೇಷನ್ ಪಡೆದುಕೊಳ್ಳದೆ ಇದ್ದರೆ ಅಂತವರ ರೇಷನ್ ಕಾರ್ಡ್ ರದ್ದಾಗುವುದಿಲ್ಲ ಹಾಗೂ ಮುಂದಿನ ತಿಂಗಳಿನಿಂದ ಮತ್ತೆ ಪಡಿತರ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು

ಆದರೆ ಸರಿಯಾದ ಕಾರಣ ಇಲ್ಲದೆ ಬಿಪಿಎಲ್ ಕಾರ್ಡ್ ಹೊಂದಿದ್ದು, ಪಡಿತರ ಪಡೆದುಕೊಳ್ಳದೆ ಇದ್ದರೆ ಅಂತವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದು.

Government’s new order overnight for APL card holders