ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿರುವ ಬಗ್ಗೆ ಡಿಬಿಟಿ ಚೆಕ್ ಮಾಡಿಕೊಳ್ಳಿ
ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ ಮಾಡುವ ಮೂಲಕ ಜನರ ಗಮನ ಸೆಳೆದಿದೆ ಎನ್ನಬಹುದು
ಕೋಟ್ಯಂತರ ಜನ ಅರ್ಜಿ ಸಲ್ಲಿಸಿದವರ ಪೈಕಿ ಬಹುತೇಕ ಎಲ್ಲರ ಖಾತೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ (Money Deposit) ಆಗಿದೆ. ಆದರೆ ಇನ್ನೂ ಕೆಲವರ ಖಾತೆಗೆ ಹಣ ಬಾರದೆ ಇರುವುದಕ್ಕೆ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯ ಖಾತೆಗೆ (Bank Account) ಜಮಾ ಆಗಬೇಕು ಅಂದರೆ ರೇಷನ್ ಕಾರ್ಡ್ (ration card) ನಲ್ಲಿ ಮೊದಲ ಹೆಸರು ಮನೆಯ ಯಜಮಾನಿಯದ್ದೇ ಇರಬೇಕು ಎಂದು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಕರ್ನಾಟಕದಲ್ಲಿ ಎಲ್ಲಾ ಫಲಾನುಭವಿ ಬಿಪಿಎಲ್ ಕಾರ್ಡ್ (BPL card) ದಾರರ ಪಟ್ಟಿಯಲ್ಲಿ ಮೊದಲ ಹೆಸರು ಮನೆಯ ಯಜಮಾನೀಯದ್ದೆ ಆಗಿರುತ್ತದೆ.
ಮುಂದಿನ ತಿಂಗಳಿನಿಂದ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಸಿಗೋಲ್ಲ!
ಇದೇ ಕಾರಣಕ್ಕೆ ಅನ್ನಭಾಗ್ಯ ಯೋಜನೆಯ ಹಣವು ಕೂಡ ಮನೆಯ ಗೃಹಿಣಿಯ ಹೆಸರಿಗೆ ಜಮಾ ಆಗಿರುವ ಸಾಧ್ಯತೆ ಹೆಚ್ಚು. ನೀವು ನೇರವಾಗಿ ಒಂದೇ ಒಂದು ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಖಾತೆಗೆ ಹಣ ಆಗಿ ವರ್ಗಾವಣೆ ಆಗಿರುವ ಸಂಪೂರ್ಣ ಮಾಹಿತಿ ಪಡೆಯಬಹುದು.
ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹೇಗೆ? (How to check DBT status)
* ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಮೇಲೆ ಕ್ಲಿಕ್ ಮಾಡಿ. ಅಥವಾ ನೀವು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕ್ರೋಮೋ ನಲ್ಲಿ ಆಹಾರ ಎಂದು ಟೈಪ್ ಮಾಡಿದರೆ ಈ ವೆಬ್ಸೈಟ್ ತೆಗೆದು ಕೊಡುತ್ತದೆ.
*ಈಗ ಈ ಸರ್ವಿಸ್ (e service) ವಿಭಾಗದಲ್ಲಿ ಎಡಭಾಗದಲ್ಲಿ ಮೂರು ಡಾಟ್ ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿದರೆ ಇ – ಸ್ಥಿತಿ ಮೇಲೆ ಕ್ಲಿಕ್ ಮಾಡಿ.
*ಈಗ ಡಿಬಿಟಿ ಸ್ಥಿತಿ (DBT status) ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಜಿಲ್ಲಾ ಅವರು ವಿಭಜನೆ ಆಗಿರುವ ಜಿಲ್ಲೆಗಳ ಪಟ್ಟಿ ಕಾಣಿಸುತ್ತಿದೆ. ಇದರಲ್ಲಿ ಮೂರು ವಿಭಾಗಗಳಲ್ಲಿ ಜಿಲ್ಲೆಗಳ ಹೆಸರು ನೀಡಲಾಗಿದೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
*ಈಗ ಸ್ಟೇಟಸ್ ಆಫ್ ಡಿ ಬಿ ಟಿ ಎನ್ನುವ ಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕ್ಯಾಪ್ಚ ನಂಬರ್ ನಮೂದಿಸುವುದರ ಮೂಲಕ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವ ಮಾಹಿತಿ ತಿಳಿಯಬಹುದು. ಯಾವ ತಿಂಗಳಲ್ಲಿ ಹಣ ವರ್ಗಾವಣೆ ಆಗಿದೆ ಎನ್ನುವ ಸ್ಟೇಟಸ್ ಚೆಕ್ ಮಾಡಬಹುದು.
ಇನ್ನು ಮುಂದೆ ಸಿಗುವುದಿಲ್ಲ ಅನ್ನಭಾಗ್ಯ ಯೋಜನೆಯ ಹಣ! ಸರ್ಕಾರದ ಹೊಸ ಅಪ್ಡೇಟ್
ಇದು ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಆಗಿದ್ದು ನಿಮ್ಮ ಖಾತೆಯ ಸಂಪೂರ್ಣ ವಿವರ ಇಲ್ಲಿ ಕಾಣಿಸುತ್ತದೆ. ರೇಷನ್ ಕಾರ್ಡ್ ನಲ್ಲಿ ಯಜಮಾನ ಅಥವಾ ಯಜಮಾನೀಯ ಹೆಸರು ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆ ಹಾಗೂ ಎಷ್ಟು ಹಣ ಜಮಾ ಆಗಿದೆ ಎನ್ನುವ ಮಾಹಿತಿ ಕಾಣಿಸುತ್ತದೆ.
ಇನ್ನು ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆ ಎಂದಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಬಂದಿರುತ್ತದೆ ಎಂದು ಅರ್ಥ, ಯಾಕಂದರೆ ಈ ಎರಡು ಖಾತೆಗಳು ಒಂದೇ ಆಗಿರುವುದರಿಂದ ಸರ್ಕಾರ ಮಿಸ್ ಮಾಡದೆ ನಿಮ್ಮ ಖಾತೆಗೆ ಹಣ ಜಮಾ ಮಾಡಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಾಗ ಎಸ್ಎಂಎಸ್ (SMS) ಕಳುಹಿಸಲಾಗುತ್ತದೆ, ಒಂದು ವೇಳೆ ನಿಮಗೆ ಎಸ್ಎಂಎಸ್ ಬಾರದೆ ಇದ್ದಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಬಿಡುಗಡೆ ಆದಾಗ ನೇರವಾಗಿ ಬ್ಯಾಂಕ್ ಗೆ (check your bank account) ಹೋಗಿ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ.
ಗೃಹಲಕ್ಷ್ಮಿ ಪಟ್ಟಿ ಬಿಡುಗಡೆ! ಇಂತಹ ಮಹಿಳೆಯರಿಗೆ ಡಿಸೆಂಬರ್ 20ರ ಒಳಗೆ ಹಣ ಜಮಾ
ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದಿಯಾ ತಿಳಿದುಕೊಳ್ಳುವುದು ಹೇಗೆ? ( How to check if you were ration card active or not)
ಹಲವು ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಾರೆ, ಅಂದ್ರೆ ಈಕೆ ವೈ ಸಿ (E-KYC) ಮಾಡಿಸುವುದು ಆಧಾರ್ ಸೀಡಿಂಗ್ ಮೊದಲಾದವುಗಳನ್ನು ಮಾಡಿದ್ದಾರೆ.. ಇಷ್ಟಾಗಿಯೂ ಕೂಡ ಕೆಲವರ ರೇಷನ್ ಕಾರ್ಡ್ ಅಥವಾ ಖಾತೆ ಆಕ್ಟಿವ್ ಆಗಿರದೆ ಇರಬಹುದು ಇದನ್ನ ತಿಳಿದುಕೊಳ್ಳಲು ನೀವು ಮಾಹಿತಿ ಕಣಜ (Mahitiknaja) ಎನ್ನುವ ವೆಬ್ಸೈಟ್ ಅನ್ನು ಓಪನ್ ಮಾಡಿ.
ಈ ಪಡಿತರ ಚೀಟಿ ಪ್ರತ್ಯೇಕವಾಗಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.
Make a DBT check about Gruha Lakshmi, Annabhagya Yojana money deposit