Karnataka NewsBangalore News

ಇನ್ನು ಮುಂದೆ ಸಿಗುವುದಿಲ್ಲ ಅನ್ನಭಾಗ್ಯ ಯೋಜನೆಯ ಹಣ! ಸರ್ಕಾರದ ಹೊಸ ಅಪ್ಡೇಟ್

ಈಗಾಗಲೇ ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆ 2023 (vidhansabha election 2023) ರ ಆರಂಭದಲ್ಲಿ ಹೇಳಿಕೊಂಡಂತೆ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಬಹುತೇಕ ಯಶಸ್ವಿ (success) ಯಾಗಿ ಜಾರಿಗೆ ತಂದಿದೆ.

ನಾಲ್ಕು ಯೋಜನೆಗಳು ಜಾರಿಗೆ ಬಂದಿವೆ. ಇನ್ನು ಕೇವಲ ಒಂದು ಗ್ಯಾರಂಟಿ ಯೋಜನೆ ಮಾತ್ರ ಜನರ ಕೈ ತಲುಪುವುದು ಬಾಕಿ ಇದೆ.

Money of Annabhagya Yojana for the month of May is released, Check status

ಸರ್ಕಾರದ ಎಲ್ಲಾ ಯೋಜನೆಗಳು ಸಕ್ಸಸ್ ಆಗಿದ್ದರೂ ಕೂಡ ಅನ್ನಭಾಗ್ಯ ಯೋಜನೆ (AnnaBhagya scheme) ಯ ಬಗ್ಗೆ ಮಾತ್ರ ಸಾಕಷ್ಟು ಜನರಿಗೆ ಅಸಮಾಧಾನ ಇದೆ, ಯಾಕೆಂದರೆ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಒಟ್ಟು10 ಕೆಜಿಯನ್ನ ಫಲಾನುಭವಿಗಳಿಗೆ ನೀಡಲಾಗುವುದು ಎಂದು.

ಗೃಹಲಕ್ಷ್ಮಿ ಪಟ್ಟಿ ಬಿಡುಗಡೆ! ಇಂತಹ ಮಹಿಳೆಯರಿಗೆ ಡಿಸೆಂಬರ್ 20ರ ಒಳಗೆ ಹಣ ಜಮಾ

ಆದರೆ ರಾಜ್ಯ ಸರ್ಕಾರಕ್ಕೆ ಮಾತ್ರ ಇದುವರೆಗೆ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ಒದಗಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಬದಲು ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ (Bank Account) ಜಮಾ (DBT ) ಮಾಡುತ್ತಿದೆ.

ಈ ರೀತಿ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳುತ್ತಿದ್ದರು ಕೂಡ ತಮಗೆ ಅಕ್ಕಿಯನ್ನು ವಿತರಣೆ ಮಾಡಿದರೆ ಒಳ್ಳೆಯದು ಎನ್ನುವುದು ಹಲವು ಬಿಪಿಎಲ್ ಕಾರ್ಡ್ ಹೊಂದಿರುವವರ (BPL card holders) ಅಭಿಮತ.

ಇದೀಗ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ (Karnataka legislative assembly winter session 2023) ದಲ್ಲಿ ಅಕ್ಕಿಯ ಬಗ್ಗೆ ಪ್ರಸ್ತಾವನೆ ಮಾಡಲಾಗಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿರುವ ಕೆಎಚ್ ಮುನಿಯಪ್ಪ (minister K.H. muniyappa) ಮಹತ್ವದ ಮಾಹಿತಿ ಒಂದನ್ನು ಹಂಚಿಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಹಿಂಪಡೆದ ಸರ್ಕಾರ; ರಾತ್ರೋರಾತ್ರಿ ಹೊಸ ನಿರ್ಣಯ

Annabhagya Schemeಅಕ್ಕಿಯ ಬದಲು ಸಿಗುತ್ತೆ ಈ ಧಾನ್ಯ!

ಐದು ಕೆಜಿ ಅಕ್ಕಿಯ ಬದಲು ಹಣ ವರ್ಗಾವಣೆ (Money Transfer) ಮಾಡುತ್ತಿರುವುದು ಹಲವು ಫಲಾನುಭವಿಗಳಿಗೆ ಒಪ್ಪಿಗೆ ಇಲ್ಲ ಇದಕ್ಕೆ ಕಾರಣ ತಾವು ಅಕ್ಕಿಯನ್ನು ಬಳಸಿಕೊಂಡು ಹಸಿವನ್ನು ನೀಗಿಸಿಕೊಳ್ಳಬಹುದು. ಆದರೆ ಸರ್ಕಾರ ಕೊಡುತ್ತಿರುವ ಹಣದಿಂದ ಪ್ರಯೋಜನ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಇದನ್ನು ಗಮನಿಸಿರುವ ಸರ್ಕಾರ ಬಿಳಿಯ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗದೆ ಇರುವುದಕ್ಕಾಗಿ ಕುಚ್ಚುಲಕ್ಕಿ (brown rice) ವಿತರಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಹೌದು ಇನ್ನು ಮುಂದಿನ ತಿಂಗಳುಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಖಾತೆಗೆ ಹಣ ವರ್ಗಾವಣೆ ಮಾಡುವುದಿಲ್ಲ ಅದರ ಬದಲು ಕುಚ್ಚಲಕ್ಕಿ ಅಥವಾ ಕೆಂಪು ಅಕ್ಕಿಯನ್ನು ವಿತರಣೆ ಮಾಡಲಿದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಜನವರಿಯಿಂದ ಹೊಸ ನಿಯಮ

ನಮ್ಮ ರಾಜ್ಯದಲ್ಲಿಯೇ ಕುಚ್ಚಲಕ್ಕಿ ಬೆಳೆಯುವ ರೈತರ ಸಂಖ್ಯೆಯು ಜಾಸ್ತಿ ಇದ್ದು ಸುಲಭವಾಗಿ ಅಕ್ಕಿ ಹೊಂದಿಸಲು ಸಾಧ್ಯವಾಗುವುದು ಎಂದು ಸರ್ಕಾರ ತಿಳಿಸಿದೆ. ಸದ್ಯದಲ್ಲಿಯೇ ರಾಜ್ಯದ್ಯಂತ 5 ಕೆಜಿ ಬಿಳಿಯ ಅಕ್ಕಿ ಹಾಗೂ ಐದು ಕೆಜಿ ಕೆಂಪು ಅಕ್ಕಿ ಅಥವಾ ಕುಚ್ಚಲಕ್ಕಿ, ಫಲಾನುಭವಿಗಳಿಗೆ ಸಿಗುವ ಸಾಧ್ಯತೆ ಇದೆ.

ಕುಚುಲಕ್ಕಿ ವಿತರಣೆ ಕರಾವಳಿ ಭಾಗದ ಜನರಿಗೆ ಕೃಷಿಯ ವಿಚಾರವಾದರೆ, ಬಯಲು ಸೀಮೆ ಹಾಗೂ ಅರೇ ಬಯಲು ಸೀಮೆ ಭಾಗದಲ್ಲಿ ವಾಸಿಸುವ ಜನರಿಗೆ ಕುಚಲಕ್ಕಿ ಉಪಯೋಗ ಅಷ್ಟಾಗಿ ತಿಳಿದಿಲ್ಲ ಹಾಗಾಗಿ ಈ ಭಾಗದಲ್ಲಿ ವಾಸಿಸುವ ಜನರು ಕುಚಲಕ್ಕಿ ವಿತರಣೆ ಮಾಡುವ ಸರ್ಕಾರದ ನಿರ್ಧಾರದ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

No more Annabhagya Yojana money, New update of Govt

Our Whatsapp Channel is Live Now 👇

Whatsapp Channel

Related Stories