Karnataka NewsBangalore News

ಗೃಹಲಕ್ಷ್ಮಿ ಪಟ್ಟಿ ಬಿಡುಗಡೆ! ಇಂತಹ ಮಹಿಳೆಯರಿಗೆ ಡಿಸೆಂಬರ್ 20ರ ಒಳಗೆ ಹಣ ಜಮಾ

ಗೃಹಲಕ್ಷ್ಮಿ ಯೋಜನೆ (Gruha lakshmi scheme) 4ನೇ ಕಂತಿನ ಹಣ ಕೂಡ ಬಿಡುಗಡೆ ಆಗಿದ್ದು ಮೊದಲ ಹದಿನೈದು ಜಿಲ್ಲೆಗಳ ಫಲಾನುಭವಿ ಮಹಿಳೆಯರ ಖಾತೆಗೆ 2000 ಜಮಾ ಆಗಿವೆ. ಇನ್ನು ಸರ್ಕಾರ ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳ 15ರಿಂದ 20ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಯನ್ನು (Bank Account) ಸೇರುತ್ತದೆ.

ಅದೇ ರೀತಿ ನವೆಂಬರ್ 30ರ ಒಳಗೆ ಯಾರಿಗೆ ಹಣ ಜಮಾ ಆಗಿದೆ ಅಂತವರು ತಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಈ ಕೆಳಗಿನ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.

Lakshmi Hebbalkar

ಮಹಿಳೆಯರಿಗೆ ಬಂಪರ್ ಗಿಫ್ಟ್; ಬಡ್ಡಿಯೇ ಇಲ್ಲದೆ ಸಿಗುತ್ತೆ 3 ಲಕ್ಷ ರೂಪಾಯಿ ಸಾಲ!

ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಡೈರೆಕ್ಟ್ ಲಿಂಕ್ ಇದು! (Direct link to check your Gruha Lakshmi Status)

*ಮೊದಲಿಗೆ ಇಲಾಖೆಯ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ.

*ಮೇಲ್ಭಾಗದಲ್ಲಿ ಮೂರು ಡಾಟ್ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ.

*ಈಗ ಈ ಸರ್ವಿಸ್ (E- service) ವಿಭಾಗದಲ್ಲಿ ಇ – ರೇಷನ್ ಕಾರ್ಡ್ (E- ration card) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

*ಹಳ್ಳಿಗಳ ಪಟ್ಟಿ (village list) ಎನ್ನುವ ಆಯ್ಕೆ ಕಾಣಿಸುತ್ತೆ ಅದನ್ನು ಕ್ಲಿಕ್ ಮಾಡಿ.

*ವಿಲೇಜ್ ಲಿಸ್ಟ್ ನಲ್ಲಿ ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಪಂಚಾಯತ್ ಗಳನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.

*ಈಗ ರೇಷನ್ ಕಾರ್ಡ್ ನಾ ಸಂಪೂರ್ಣ ಹೆಸರನ್ನು ಕಾಣಬಹುದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆ ಎಂದು ಅರ್ಥ.

ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಹಿಂಪಡೆದ ಸರ್ಕಾರ; ರಾತ್ರೋರಾತ್ರಿ ಹೊಸ ನಿರ್ಣಯ

ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? (Mobile application to check amount)

ರಾಜ್ಯ ಸರ್ಕಾರ ಮೊಬೈಲ್ ನಲ್ಲಿಯೇ ಗೃಹಲಕ್ಷ್ಮಿ ಯೋಜನೆ ಹಾಗೂ ಇತರ ಡಿಬಿಟಿ ಆಗಿರುವ ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಅದುವೇ ಡಿಬಿಟಿ ಕರ್ನಾಟಕ (DBT Karnataka mobile application) ಮೊಬೈಲ್ ಅಪ್ಲಿಕೇಶನ್. ಇದರಿಂದ ನೀವು ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ಬಂದಿದೆ (Money Deposit) ಎಂಬುದನ್ನು ತಿಳಿಯಬಹುದಾಗಿದೆ.

Gruha Lakshmi Yojana*https://play.google.com/store/apps/details?id=com.dbtkarnataka ನೀವು ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದರೆ ಪ್ಲೇ ಸ್ಟೋರ್ ನಲ್ಲಿ DBT Karnataka ಎಂದು ಸರ್ಚ್ ಮಾಡಿ ಅಥವಾ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ನಿಮಗೆ ಕರ್ನಾಟಕ ಸರ್ಕಾರದ ಮೊಬೈಲ್ ಆಪ್ ಕಾಣಿಸುತ್ತದೆ. ಅದನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.

ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಮೊಬೈಲ್ ಸಂಖ್ಯೆಗೆ ಓಟಿಪಿ ಎನ್ನು ಕಳುಹಿಸಲಾಗುತ್ತದೆ, ಅದನ್ನ ನೀವು ನಮೂದಿಸಿ 4 ಅಂಕೆಗಳ mpin ಸೃಷ್ಟಿಸಬೇಕು ಈ ರೀತಿ ಪಾಸ್ವರ್ಡ್ ಕನ್ಫರ್ಮ್ ಮಾಡಿದ ನಂತರ ನಿಮಗೆ ಡಿಬೆಟಿ ಕರ್ನಾಟಕ ಅಪ್ಲಿಕೇಶನ್ ಸಂಪೂರ್ಣವಾಗಿ ಬಳಕೆಗೆ ಸಿಗುತ್ತದೆ, ಇದರಲ್ಲಿ ಕೆಲವು ಆಯ್ಕೆಗಳನ್ನು ನೀಡಲಾಗಿದ್ದು ನೀವು ನಿಮ್ಮ ಖಾತೆಗೆ ಬಂದಿರುವ ಹಣವನ್ನು ಚೆಕ್ ಮಾಡಬಹುದಾಗಿದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಜನವರಿಯಿಂದ ಹೊಸ ನಿಯಮ

ನಾಲ್ಕನೇ ಕಂತಿನ ಹಣವನ್ನು (4th installment Gruha lakshmi money) ಡಿಸೆಂಬರ್ 20ರ ಒಳಗೆ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಈಗಾಗಲೇ ತಿಳಿಸಿದ್ದಾರೆ.

ಅವರು ಹೇಳಿರುವಂತೆ ಈ ತಿಂಗಳ ಕೊನೆಯ ಒಳಗೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ 6,000 ಜಮಾ ಆಗಲಿದೆ. ಒಂದು ವೇಳೆ ಹಣ ಬಾರದೆ ಇದ್ದ ಮಹಿಳೆಯರು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅವರ ಸಹಾಯ ಪಡೆಯಬಹುದು ಅಥವಾ ಗೃಹಲಕ್ಷ್ಮಿ ಅದಾಲತ್ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ದೂರು ಸಲ್ಲಿಸಿ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು ಎಂದು ಸಚಿವೆ ತಿಳಿಸಿದ್ದಾರೆ

Gruha Lakshmi Scheme list released, money will Deposit such women by December 20

Our Whatsapp Channel is Live Now 👇

Whatsapp Channel

Related Stories