ಮಹಿಳೆಯರಿಗೆ ಬಂಪರ್ ಗಿಫ್ಟ್; ಬಡ್ಡಿಯೇ ಇಲ್ಲದೆ ಸಿಗುತ್ತೆ 3 ಲಕ್ಷ ರೂಪಾಯಿ ಸಾಲ!

Story Highlights

Loan Scheme : ಒಂದು ರೂಪಾಯಿಗಳ ಬಡ್ಡಿ ಪಾವತಿ (without interest loan) ಮಾಡದೆ ಸರ್ಕಾರದಿಂದ ಮೂರು ಲಕ್ಷ ರೂಪಾಯಿಗಳವರೆಗೆ ಹಣ ಪಡೆದುಕೊಂಡು ಸ್ವಂತ ಉದ್ಯಮ (Own Business) ಆರಂಭಿಸಬಹುದಾಗಿದೆ

Loan Scheme : ಮಹಿಳೆಯರಲ್ಲಿ ಉದ್ಯಮಶೀಲತೆ (Entrepreneurship among women) ಯನ್ನು ಹೆಚ್ಚಿಸಲು ಹಾಗೂ ಮಹಿಳೆಯರು ತಮ್ಮ ಸ್ವಂತ ಹಣದಿಂದ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತಹ ಅತ್ಯುತ್ತಮ ಯೋಜನೆ ಒಂದನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಈ ಯೋಜನೆ ಅಡಿಯಲ್ಲಿ ಮಹಿಳೆಯರು ಸುಲಭವಾಗಿ ಒಂದೇ ಒಂದು ರೂಪಾಯಿಗಳ ಬಡ್ಡಿ ಪಾವತಿ (without interest loan) ಮಾಡದೆ ಸರ್ಕಾರದಿಂದ ಮೂರು ಲಕ್ಷ ರೂಪಾಯಿಗಳವರೆಗೆ ಹಣ ಪಡೆದುಕೊಂಡು ಸ್ವಂತ ಉದ್ಯಮ (Own Business) ಆರಂಭಿಸಬಹುದಾಗಿದೆ.

ಗ್ರಾಮೀಣ ಭಾಗದಲ್ಲಿ ವಾಸಿಸುವ ಹಿಂದುಳಿದ ಹಾಗೂ ಬಡ (poor women) ಮಹಿಳೆಯರು ಸ್ವಾವಲಂಬಿಯ ಜೀವನ ಕಟ್ಟಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸರ್ಕಾರ ಇಂತಹ ಒಂದು ಸಬ್ಸಿಡಿ ಯೋಜನೆ ಜಾರಿಗೆ ತಂದಿದೆ.

ಯೋಜನೆಯಲ್ಲಿ ಬಡ್ಡಿ ಪಾವತಿ ಮಾಡದೆ ಮೂರು ಲಕ್ಷ ರೂಪಾಯಿಗಳನ್ನು ಮಹಿಳೆಯರು ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಬಹುದು.

ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಹಿಂಪಡೆದ ಸರ್ಕಾರ; ರಾತ್ರೋರಾತ್ರಿ ಹೊಸ ನಿರ್ಣಯ

ಉದ್ಯೋಗಿನಿ ಯೋಜನೆ! (Udyogiini scheme)

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ದ ವತಿಯಿಂದ ಮಹಿಳೆಯರು ಸ್ವಉದ್ಯೋಗ ಮಾಡಲು ಉದ್ಯೋಗಿನಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಸಣ್ಣ ಉದ್ದಿಮೆ ಮಾಡುವ ಮಹಿಳೆಯರು ಬ್ಯಾಂಕುಗಳ ಮೂಲಕ ಅಥವಾ ಇತರ ಪ್ರೈವೇಟ್ ಹಣಕಾಸು ಸಂಸ್ಥೆಗಳ (private finance banks) ಮೂಲಕ ಸಾಲ ಪಡೆದುಕೊಳ್ಳಲು ಈ ನಿಗಮ ಸಹಾಯ ಮಾಡುತ್ತದೆ.

ಉದ್ಯೋಗಿನಿ ಯೋಜನೆಯ ಬಗ್ಗೆ ಮಾಹಿತಿ!

Loan Schemeಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ (ST) ಹಾಗೂ ಪರಿಶಿಷ್ಟ ಪಂಗಡ (ST) ಕ್ಕೆ ಸೇರಿದ ಮಹಿಳೆಯರು ಸರ್ಕಾರದಿಂದ ಸಿಗುವ ಸಾಲ (Loan) ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಬಹುದು.

2,000 ವಾರ್ಷಿಕ ವರಮಾನ ಹೊಂದಿರುವ SC/ ST ಮಹಿಳೆಯರು ಒಂದರಿಂದ ಮೂರು ಲಕ್ಷ ರೂಪಾಯಿಗಳವರೆಗೆ ಪಡೆದುಕೊಳ್ಳಬಹುದು, ಇದಕ್ಕೆ ಸರ್ಕಾರದಿಂದ ಸಿಗುವ ಸಬ್ಸಿಡಿ ಶೇಕಡ 50% ನಷ್ಟು. ಸಾಮಾನ್ಯ ಮಹಿಳೆಯರಿಗೂ ಕೂಡ ಯೋಜನೆಯ ಪ್ರಯೋಜನ ಸಿಗಲಿದ್ದು ವಾರ್ಷಿಕ ಆದಾಯ (yearly income) 1.50 ಲಕ್ಷ ರೂಪಾಯಿ ಹೊಂದಿರುವ ಮಹಿಳೆಯರು ಮೂರು ಲಕ್ಷ ರೂಪಾಯಿಗಳವರೆಗೆ ಸಾಲ (Loan) ಪಡೆಯಬಹುದು ಇಂತವರಿಗೆ 30% ನಷ್ಟು ಸಬ್ಸಿಡಿಯನ್ನು ಸರ್ಕಾರ ಒದಗಿಸುತ್ತದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಜನವರಿಯಿಂದ ಹೊಸ ನಿಯಮ

18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವವರು, ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಹೊಂದಿರುವ ಹಾಗೂ ಹಣ ಮರುಪಾವತಿ ಮಾಡಲು ಸಾಧ್ಯವಿರುವ ಅಂತಹ ಮಹಿಳೆಯರಿಗೆ ಸಾಲ ನೀಡಲಾಗುತ್ತದೆ.

ಉದ್ಯೋಗಿನಿ ಯೋಜನೆಯ ಸಾಲ ಸೌಲಭ್ಯ ಪಡೆದುಕೊಂಡ ಮಹಿಳೆಯರು, ತಮ್ಮದೇಯಾಗಿರುವ ಸ್ವಂತ ಸಣ್ಣ ಉದ್ಯಮ (own business) ಅಥವಾ ಗುಡಿ ಕೈಗಾರಿಕೆಗಳ (ಅಗರಬತ್ತಿ ತಯಾರಿಕೆ ಚಾಪೆ ಎಳೆಯುವುದು ಬ್ಯೂಟಿ ಪಾರ್ಲರ್, ಆಹಾರ ವಸ್ತು ತಯಾರಿಕೆ, ಹೂವು ಹಣ್ಣು ಮಾರಾಟದ ಅಂಗಡಿ ಮೊದಲಾದವು) ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು.

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (documents)

ಜಾತಿ ಪ್ರಮಾಣ (cast certificate)
ಆದಾಯ ಪ್ರಮಾಣ (income certificate)
ಬ್ಯಾಂಕ್ ಖಾತೆಯ ವಿವರ (bank account details)
ವಿಳಾಸದ ಪ್ರೂಫ್ (address proof)
ಆಧಾರ್ ಕಾರ್ಡ್ (Aadhar card)
ಪಾಸ್ ಪೋರ್ಟ್ ಅಳತೆಯ ಫೋಟೋ

ಸ್ವಂತ ಜಮೀನು ಇಲ್ಲದವರಿಗೆ ಸರ್ಕಾರದಿಂದಲೇ ಸಿಗುತ್ತೆ ಭೂ ಒಡೆತನದ ಹಕ್ಕು; ಅರ್ಜಿ ಸಲ್ಲಿಸಿ

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for udyogini scheme)

ಗ್ರಾಮ ಪಂಚಾಯತ್, ಬಾಪೂಜಿ ಕೇಂದ್ರ ಅಥವಾ ಇತರ ಯಾವುದೇ ಸೇವಾ ಕೇಂದ್ರಗಳಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ಅರ್ಜಿ ಫಾರಂ ಭರ್ತಿ ಮಾಡುವ ಮೂಲಕ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಕಂಪ್ಯೂಟರ್ ಸೆಂಟರ್ ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದು ಅಲ್ಲದೆ, ಜಿಲ್ಲಾ ಸಹಕಾರಿ ಬ್ಯಾಂಕ್ ಗ್ರಾಮೀಣ ಬ್ಯಾಂಕ್ ಗಳಲ್ಲಿಯೂ ಕೂಡ ಸಾಲ ಪಡೆದುಕೊಳ್ಳಬಹುದಾಗಿದೆ.

A bumper gift for women, Get a loan of 3 lakh rupees without interest

Related Stories