ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಜನವರಿಯಿಂದ ಹೊಸ ನಿಯಮ
ಜನವರಿ 2024, ಹೊಸ ಹಣಕಾಸಿನ ವರ್ಷ ಇನ್ನೇನು ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವೆಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಆಗಲಿದೆ ನಿಯಮಗಳಲ್ಲಿ ಅಪ್ಡೇಟ್ (rules update) ಮಾಡಲಾಗುವುದು ಎನ್ನುವುದನ್ನು ತಿಳಿದುಕೊಂಡು ಆ ಕೆಲಸವನ್ನು ಮಾಡಿ ಮುಗಿಸುವುದು ಒಳ್ಳೆಯದು
ಈಕೆವೈಸಿ (E-KYC) ಮಾಡಿಸುವುದು ಕಡ್ಡಾಯ ಎಂದು ಈ ಹಿಂದೆಯೇ ಹೇಳಲಾಗಿದೆ, ನೀವು ಇದುವರೆಗೆ ಈ ಕೆಲಸ ಮಾಡದೆ ಇದ್ದರೆ ಇನ್ನು ಮುಂದೆ ಸರ್ಕಾರದ ಯೋಜನೆಯ ಪ್ರಯೋಜನವು ನಿಮ್ಮ ಕೈ ಸೇರುವುದಿಲ್ಲ!

ಸ್ವಂತ ಜಮೀನು ಇಲ್ಲದವರಿಗೆ ಸರ್ಕಾರದಿಂದಲೇ ಸಿಗುತ್ತೆ ಭೂ ಒಡೆತನದ ಹಕ್ಕು; ಅರ್ಜಿ ಸಲ್ಲಿಸಿ
ರೇಷನ್ ಕಾರ್ಡ್ ರದ್ದಾಗುತ್ತಾ? (Ration card cancellation)
ರೇಷನ್ ಕಾರ್ಡ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾದ ಒಂದು ಗುರುತಿನ ಕಾರ್ಡ್ ಆಗಿದೆ, ಕೇವಲ ಪಡಿತರ ಅಂಗಡಿಗೆ ಹೋಗಿ ಸರ್ಕಾರದಿಂದ ಉಚಿತವಾಗಿ ಸಿಗುವ ಧಾನ್ಯಗಳನ್ನ ಪಡೆದುಕೊಳ್ಳುವುದು ಮಾತ್ರವಲ್ಲದೆ, ಸರ್ಕಾರದಿಂದ ಸಿಗುವ ಇತರ ಯಾವುದೇ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವುದಿರಬಹುದು ಹೀಗೆ ಪ್ರತಿಯೊಂದುಕ್ಕೂ ಕೂಡ ಎಂದು ರೇಷನ್ ಕಾರ್ಡ್ ಬಹಳ ಮುಖ್ಯವಾಗಿದೆ. ಅದರಲ್ಲೂ ಯಾರು ಬಿಪಿಎಲ್ ಕಾರ್ಡ್ (BPL card) ಹೊಂದಿರುತ್ತಾರೆ ಅಂತವರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.
ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ವಿಚಾರದಲ್ಲಿ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗಿವೆ, ದಿನದಿಂದ ದಿನಕ್ಕೆ ಸರ್ಕಾರದ ಕಣ್ಣಿಗೆ ಮಣ್ಣೆರೆಚಿ ಬಿಪಿಎಲ್ ಕಾರ್ಡ್ ಬಳಕೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ.
ಬಿಪಿಎಲ್ ಕಾರ್ಡನ್ನು ಸಾಕಷ್ಟು ಜನ ಹೊಂದಿದ್ದು, ಕೇವಲ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಸರ್ಕಾರದಿಂದ ಸಿಗುತ್ತಿರುವ ಧಾನ್ಯಗಳ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ.
ಗೃಹಲಕ್ಷ್ಮಿ ಹಣ ಬಂದಿಲ್ಲ ಅನ್ನೋರಿಗೂ ಈಗ ಹಣ ಬಂದಿದೆ! ಬ್ಯಾಂಕ್ ಖಾತೆ ನೋಡಿಕೊಳ್ಳಿ
ನಿಜಕ್ಕೂ ರೇಷನ್ ಕಾರ್ಡ್ ವಿತರಣೆ ಮಾಡಿರುವುದೇ ಜನರ ಹಸಿವನ್ನು ಹೋಗಲಾಡಿಸಲು. ಆದರೆ ನಿಜಕ್ಕೂ ಅಗತ್ಯ ಇಲ್ಲದವರು ಬಿಪಿಎಲ್ ಕಾರ್ಡ್ ಹೊಂದಿದ್ದು ಸರ್ಕಾರದಿಂದ ಸಿಗುವ ಧಾನ್ಯಗಳನ್ನು ಖರೀದಿ ಮಾಡುತ್ತಿಲ್ಲ
ಹೀಗೆ ಕಳೆದ ಆರು ತಿಂಗಳಿನಿಂದ ಧಾನ್ಯ ಪಡೆದುಕೊಳ್ಳದೆ ಇರುವವರ ರೇಷನ್ ಕಾರ್ಡ್ ಕೂಡ ಅಮಾನತ್ತು ಗೊಳಿಸಲು ಸರ್ಕಾರ ನಿರ್ಧರಿಸಿದೆ. ಅಂದ್ರೆ ಸರಿಯಾದ ಕಾರಣವನ್ನು ನೀಡಿ ಬಿಪಿಎಲ್ ಕಾರ್ಡ್ ಅನ್ನು ಮತ್ತೆ ಆಕ್ಟಿವೇಟ್ (activate) ಮಾಡಿಸಿಕೊಳ್ಳಬಹುದು.
ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
ರೇಷನ್ ಕಾರ್ಡ್ ಈಕೆ ವೈ ಸಿ ಇನ್ನೂ ಮಾಡಿಸಿಲ್ವಾ? (E-KYC mandatory)
ಈ ರೀತಿಯ ಎಲ್ಲಾ ವಂಚನೆಗಳನ್ನು ತಡೆದು, ಅರ್ಹರಿಗೆ ಮಾತ್ರ ಬಿಪಿಎಲ್ ಕಾರ್ಡ್ ಪ್ರಯೋಜನ ಸಿಗಬೇಕು ಎನ್ನುವ ಕಾರಣಕ್ಕೆ ಸರ್ಕಾರ ಇ – ಕೆ ವೈ ಸಿ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ರೇಷನ್ ಕಾರ್ಡ್ ಗೆ ಈಕೆ ವೈ ಸಿ ಮಾಡಿಸದೆ ಇದ್ದರೆ ಬಯೋಮೆಟ್ರಿಕ್ ಮೂಲಕ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ ಹಾಗಾಗಿ ಸಂಪೂರ್ಣ ಡಿಜಿಟಲೀಕರಣ ತಂತ್ರಜ್ಞಾನವನ್ನು (digitalised technology) ಬಳಸಲಾಗುತ್ತಿದ್ದು ಯಾರೂ ಕೂಡ ವಂಚನೆ ಮಾಡಲು ಸಾಧ್ಯವಿಲ್ಲ.
ಕೊನೆಯ ದಿನಾಂಕ ಘೋಷಿಸಿದ ಸರ್ಕಾರ! (Last delete for E-KYC)
ಕರ್ನಾಟಕ ರಾಜ್ಯ ಆಹಾರ ಇಲಾಖೆ (food department) ಈಗಾಗಲೇ ತಿಳಿಸಿರುವಂತೆ ಅಕ್ಟೋಬರ್ 30 ನೇ ತಾರೀಖಿನ ಒಳಗೆ ಯಾರು ರೇಷನ್ ಕಾರ್ಡ್ ಕೆ ವೈ ಸಿ ಮಾಡಿಸಿಕೊಳ್ಳುವುದಿಲ್ಲವೋ ಅಂತವರ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಇದಕ್ಕೆ ಡಿಸೆಂಬರ್ 30 ಕೊನೆಯ ದಿನಾಂಕವಾಗಿದ್ದು ಅಷ್ಟರಲ್ಲಿ ನೀವು ಈ ಕೆವೈಸಿ ಮಾಡಿಸಿಕೊಳ್ಳಿ. ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡಿ ಈ ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಆಗುವ ಮೂಲಕ ರೇಷನ್ ಕಾರ್ಡ್ ಸಂಖ್ಯೆ ನಿಮ್ಮ ಹೆಸರು ಹೋಬಳಿ ಮೊದಲಾದವುಗಳನ್ನು ನಮೂದಿಸಿ ರೇಷನ್ ಕಾರ್ಡ್ ಈಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇನ್ನು ಮುಂದೆಯೂ ಬಿಪಿಎಲ್ ಕಾರ್ಡ್ ಪ್ರಯೋಜನ ಪಡೆದುಕೊಳ್ಳಬೇಕು ಎಂದಿದ್ರೆ ತಕ್ಷಣ ಈ ಕೆಲಸ ಮಾಡಿ.
Big Update for Ration Card Holders, New rule from January