Karnataka NewsBangalore News

ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ

ಅನ್ನಭಾಗ್ಯ ಯೋಜನೆಯ (Annabhagya scheme) ಹಣಕ್ಕಾಗಿ ಕಾದು ಕುಳಿತವರಿಗೆ ಗುಡ್ ನ್ಯೂಸ್, ಡಿಸೆಂಬರ್ ತಿಂಗಳ ಹಣವು ಕೂಡ ಬಿಡುಗಡೆ ಆಗಿದ್ದು ಫಲಾನುಭವಿಗಳು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ಹಣ ಸಂದಾಯ (Money Deposit) ಆಗದೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಪ್ರತಿ ತಿಂಗಳು ಫಲಾನುಭವಿ ಜನರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆ, ರಾಜ್ಯಾದ್ಯಂತ ಇಂದು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

Annabhagya Yojana Fund has been deposited, check your DBT status

ಡಿಸೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ನಿಮಗೂ ಜಮಾ ಆಗಿದ್ಯಾ ಚೆಕ್ ಮಾಡಿಕೊಳ್ಳಿ

ಕೇಂದ್ರ ಸರ್ಕಾರ (free rice by central government) ಕೊಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವು 5 ಕೆಜಿ ಉಚಿತವಾಗಿ ಅಕ್ಕಿ ಕೊಡಲು ತೀರ್ಮಾನಿಸಿತ್ತು. ಆದರೆ ಹೆಚ್ಚುವರಿ ಅಕ್ಕಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ತಕ್ಷಣ ನಿರ್ಧಾರ ತೆಗೆದುಕೊಂಡು ಸರ್ಕಾರ ಅಕ್ಕಿಯ ಬದಲು ಹಣವನ್ನು ಜಮಾ ಮಾಡುವುದಕ್ಕೆ ತೀರ್ಮಾನಿಸಿತು

ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಫಲಾನುಭವಿ ವ್ಯಕ್ತಿಯ ಖಾತೆಗೆ (Bank Account) ಹಣ ವರ್ಗಾವಣೆ ಆಗುತ್ತಿದೆ. ಇದೀಗ ಡಿಸೆಂಬರ್ ತಿಂಗಳ ( December month released l ಹಣವು ಕೂಡ ಬಿಡುಗಡೆ ಆಗಿದ್ದು ನೀವು ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದು.

ಖಾತೆಗೆ ಅನ್ನಭಾಗ್ಯ ಯೋಜನೆ ಹಣ ಬಾರದೆ ಇದ್ರೆ ಇದೇ ಕಾರಣ!

ಸಾಕಷ್ಟು ಜನ ರೇಷನ್ ಕಾರ್ಡ್ (ration card) ಹೊಂದಿರುವವರು ಇಂದು ರೇಷನ್ ಕಾರ್ಡ್ ಅನ್ನು ಕಳೆದುಕೊಂಡಿದ್ದಾರೆ, ಇದಕ್ಕೆ ಮುಖ್ಯ ಕಾರಣ.. ಅರ್ಹತೆ ಇಲ್ಲದವರು ಕೂಡ ಬಿಪಿಎಲ್ ಕಾರ್ಡ್ ಹೊಂದಿರುವುದು ಹಾಗೂ ಕಳೆದ ಆರು ತಿಂಗಳಿನಿಂದ ರೇಷನ್ ಪಡೆದುಕೊಳ್ಳದೆ ಇರುವುದರಿಂದ ಈಗಾಗಲೇ ಕೆಲವು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಸಲ್ಲಿಕೆಯಾಗಿರುವ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಅದರ ಜೊತೆಗೆ ಈಗಾಗಲೇ ಇರುವ ಪಡಿತರ ಚೀಟಿ ಅಮಾನತ್ತು ಗೊಳಿಸಲಾಗಿದೆ. ಹಾಗಾದ್ರೆ ಪಡಿತರ ಚೀಟಿ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?

ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರವೇ ಕೊಡುತ್ತೆ 2.5 ಲಕ್ಷ ಸಬ್ಸಿಡಿ ಸಾಲ

Annabhagya Schemeಕರ್ನಾಟಕ ಆಹಾರ ಇಲಾಖೆ (food department) ಯ ಅಧಿಕೃತ ವೆಬ್ಸೈಟ್ ಆಗಿರುವ https://ahara.kar.nic.in/Home/EServices ಭೇಟಿ ನೀಡಿ. ಅಲ್ಲಿ ಈ ಸರ್ವಿಸ್ ಎನ್ನುವ ವಿಭಾಗದಲ್ಲಿ ಎಡ ಭಾಗದಲ್ಲಿ ಹಳ್ಳಿಪಟ್ಟಿ (hallipatti) ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

ಅದರ ಮೇಲೆ ಕ್ಲಿಕ್ ಮಾಡಿ ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ನಂತರ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಹಳ್ಳಿಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು.

ಗೃಹಲಕ್ಷ್ಮಿ ಹಣ ಏಕೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬುದಕ್ಕೆ ಕೊನೆಗೂ ಸಿಕ್ತು ಉತ್ತರ

ಹಣ ಜಮಾ ಆಗಿದ್ದನ್ನು ತಿಳಿದುಕೊಳ್ಳುವುದು ಹೇಗೆ?

ಸಾಮಾನ್ಯವಾಗಿ ನಿಮ್ಮ ಖಾತೆಗೆ ಡಿ ಬಿ ಟಿ (DBT ) ಆಗುತ್ತಿದ್ದಂತೆ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ (SMS) ಕಳುಹಿಸಲಾಗುತ್ತದೆ. ಆದಾಗ್ಯೂ ನಿಮಗೆ ಎಸ್ಎಂಎಸ್ ಬಾರದೆ ಇದ್ದರೆ ಆನ್ಲೈನ್ ಮೂಲಕವೇ DBT ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ https://ahara.kar.nic.in/Home/EServices ಈ ವೆಬ್ಸೈಟ್ ಅನ್ನು ತೆರೆಯಿರಿ. ಅಲ್ಲಿ ಈ ಸರ್ವಿಸ್ ವಿಭಾಗದಲ್ಲಿ ಕ್ಲಿಕ್ ಮಾಡಿದರೆ ಎಡಭಾಗದಲ್ಲಿ ರೇಷನ್ ಕಾರ್ಡ್ ಡಿಬಿಟಿ ಸ್ಟೇಟಸ್ (DBT status) ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲಾವಾರು 3 ವಿಭಾಗಗಳನ್ನು ಮಾಡಲಾಗಿದ್ದು ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ ಮತ್ತೊಂದು ಹೊಸ ಪುಟವನ್ನು ಕಾಣಬಹುದು ಇದರಲ್ಲಿ ನೀವು ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು, ಯಾವ ತಿಂಗಳಿನ ಮಾಹಿತಿ ಪಡೆದುಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಿ ತಿಂಗಳು ಆಯ್ಕೆ ಮಾಡಿದ ನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಬೇಕು

ನಿಮ್ಮ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ! ಪ್ರಾಂಚೈಸಿ ಪಡೆಯಿರಿ

ಈಗ ಗೊ ಎಂದು ಕ್ಲಿಕ್ ಮಾಡಿದರೆ, ತಕ್ಷಣವೇ ನಿಮ್ಮ ಖಾತೆಯ ವಿವರ ಸಿಗುತ್ತದೆ. ಯಾವ ಬ್ಯಾಂಕ್ ಖಾತೆಗೆ ಯಾವ ಹೆಸರಿನಲ್ಲಿ ಇರುವ ಖಾತೆಗೆ ಹಣ ವರ್ಗಾವಣೆ ಆಗಿದೆ? ಎಷ್ಟು ತಿಂಗಳ ಹಣ ವರ್ಗಾವಣೆ ಆಗಿದೆ, ಎಷ್ಟು ಸದಸ್ಯರು ಇದ್ದಾರೆ ಈ ಎಲ್ಲಾ ಮಾಹಿತಿಗಳನ್ನು ಕೂಡ ನೀವು ಕ್ಷಣಮಾತ್ರದಲ್ಲಿ ಪಡೆಯಬಹುದು. ಒಂದು ವೇಳೆ ಇಲ್ಲಿಯೂ ನಿಮ್ಮ ಸ್ಟೇಟಸ್ ತೋರಿಸದೆ ಇದ್ದಲ್ಲಿ ನೀವು ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಬಹುದು.

Annabhagya Scheme money transferred, Check your Bank account

Our Whatsapp Channel is Live Now 👇

Whatsapp Channel

Related Stories