ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರವೇ ಕೊಡುತ್ತೆ 2.5 ಲಕ್ಷ ಸಬ್ಸಿಡಿ ಸಾಲ

ಒಟ್ಟು ಸಾಲದ ಮೊತ್ತದಲ್ಲಿ ಅರ್ಧ ಹಣವನ್ನು ನೀವು ಕಂತುಗಳ ರೂಪದಲ್ಲಿ ಪಾವತಿ ಮಾಡಿದ್ರೆ ಸಾಕು, ಇನ್ನು ಉಳಿದ ಅರ್ಧ ಹಣವನ್ನು (Subsidy Loan) ಸರ್ಕಾರವೇ ಭರಿಸುತ್ತದೆ

ಮಹಿಳೆಯರಿಗಾಗಿ (for women) ಅತ್ಯುತ್ತಮ ಸಾಲದ ಯೋಜನೆಯನ್ನು (Loan Scheme) ಜಾರಿಗೆ ತಂದಿದೆ ಸರ್ಕಾರ, ಇದರಿಂದ ಮಹಿಳೆಯರು ತಮ್ಮದೇ ಆಗಿರುವ ಉದ್ಯಮ ಆರಂಭಿಸಲು ಸಹಾಯಕವಾಗುತ್ತದೆ.

ಸಿಗುವ ಒಟ್ಟು ಸಾಲದ ಮೊತ್ತದಲ್ಲಿ ಅರ್ಧ ಹಣವನ್ನು ನೀವು ಕಂತುಗಳ ರೂಪದಲ್ಲಿ ಪಾವತಿ ಮಾಡಿದ್ರೆ ಸಾಕು, ಇನ್ನು ಉಳಿದ ಅರ್ಧ ಹಣವನ್ನು (Subsidy Loan) ಸರ್ಕಾರವೇ ಭರಿಸುತ್ತದೆ.

ಹಾಗಾದ್ರೆ ಯೋಜನೆಯ ಪ್ರಯೋಜನ ಯಾರಿಗೆಲ್ಲ ಸಿಗಲಿದೆ? ಯಾವ ರೀತಿ ಅಪ್ಲೈ ಮಾಡಬೇಕು ? ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸರ್ಕಾರವೇ ಕೊಡುತ್ತೆ 2.5 ಲಕ್ಷ ಸಬ್ಸಿಡಿ ಸಾಲ - Kannada News

ಅಕ್ರಮ ಭೂ ಒತ್ತುವರಿ ತೆರವಿಗೆ ಮಾಸ್ಟರ್ ಪ್ಲಾನ್! ಸರ್ಕಾರಿ ಜಮೀನು ತಂಟೆಗೆ ಹೋದೀರಿ ಹುಷಾರ್

ಮಹಿಳೆಯರಿಗೆ ಸರ್ಕಾರದಿಂದ ಸಬ್ಸಿಡಿ ಸಾಲ (Subsidy Loan by government)

ಸದ್ಯ ಈ ಯೋಜನೆಯ ಪ್ರಯೋಜನ ಪರಿಶಿಷ್ಟ ವರ್ಗದ (scheduled Cast /Tribes) ಮಹಿಳೆಯರಿಗೆ ಮಾತ್ರ ಲಭ್ಯವಿದ್ದು ಈ ಯೋಜನೆಯಡಿಯಲ್ಲಿ 2.50 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದು.

ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಪರಿಶಿಷ್ಟ ವರ್ಗದ ಮಹಿಳೆಯರು ತಮ್ಮದೇ ಆಗಿರುವ 10 ಜನರ ಸದಸ್ಯತ್ವ ಹೊಂದಿರುವ ಸ್ವಸಹಾಯ ಗುಂಪನ್ನು (self help group) ಕಟ್ಟಿಕೊಂಡಿರಬೇಕು.

ಈ ಗುಂಪಿನ ಮೂಲಕ ಯಾವುದಾದರೂ ಸಣ್ಣ ಉದ್ಯಮ ಆರಂಭಿಸುವುದಿದ್ದರೆ ಸರ್ಕಾರದಿಂದ 2.50 ಲಕ್ಷಗಳ ಸಾಲ (Loan) ಸಿಗುತ್ತದೆ. ಇದರಲ್ಲಿ 1.50 ಲಕ್ಷ ರೂಪಾಯಿಗಳ ಸಬ್ಸಿಡಿ ಸಿಗುತ್ತದೆ ಹಾಗೂ ಒಂದು ಲಕ್ಷ ರೂಪಾಯಿಗಳನ್ನು ಮಾತ್ರ ನೀವು ಸಾಲವಾಗಿ ಪಡೆದು ಅದನ್ನು ಕಂತುಗಳ ರೂಪದಲ್ಲಿ ಪಾವತಿ ಮಾಡಬೇಕು.

ನಿಮ್ಮ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ! ಪ್ರಾಂಚೈಸಿ ಪಡೆಯಿರಿ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆ ಮತ್ತು ಅರ್ಹತೆ! (Documents and eligibility)

Subsidy Loan*ಮೊದಲನೆಯದಾಗಿ ಪರಿಶಿಷ್ಟ ವರ್ಗಕ್ಕೆ ಸೇರಿರಬೇಕು.

*ಸ್ವಸಹಾಯ ಗುಂಪಿನಲ್ಲಿ ಕನಿಷ್ಠ 10 ಮಹಿಳೆಯರ ಸದಸ್ಯತ್ವ ಇರಲೇಬೇಕು.

*ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

*ಗ್ರಾಮೀಣ ಭಾಗದಲ್ಲಿ ವಾಸಿಸುವ ಅರ್ಜಿದಾರರ ವಾರ್ಷಿಕ ವರಮಾನ 1.5 ಲಕ್ಷ ಮೀರಬಾರದು ಹಾಗೂ ನಗರ ಭಾಗದಲ್ಲಿ ವಾಸಿಸುವ ಅರ್ಜಿದಾರರ ವರಮಾನ ಎರಡು ಲಕ್ಷ ಮೀರಬಾರದು.

*21ರಿಂದ ಅರವತ್ತು ವರ್ಷ ವಯಸ್ಸಿನ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಸರ್ಕಾರ ನೀಡುತ್ತಿರುವ ಈ ಸಾಲ ಸೌಲಭ್ಯ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು ಯಾವುವು ಎಂಬುದನ್ನು ನೋಡುವುದಾದರೆ, ಸ್ವಸಹಾಯ ಗುಂಪಿನ ವಿವರ, ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಯಾವ ಉದ್ಯಮ ಆರಂಭಿಸುತ್ತೀರಿ ಅಥವಾ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಮಾಹಿತಿ, ಬ್ಯಾಂಕ್ ಖಾತೆಯ ವಿವರ ಇಷ್ಟು ಪ್ರಾಥಮಿಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಲು ಮುಂದಾದ ಸರ್ಕಾರ

ಅರ್ಜಿ ಸಲ್ಲಿಸುವುದು ಹೇಗೆ? (Apply online)

ಆನ್ಲೈನ್ ಮೂಲಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ (seva Sindhu web portal) ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. https://sevasindhuservices.karnataka.gov.in./ ಈ ವೆಬ್ ಸೈಟಿಗೆ ತೆರಳಿ ಸ್ವ ಸಹಾಯ ಗುಂಪಿನ ಸದಸ್ಯರು ಸರಕಾರದ ಸಾಲ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿಯನ್ನು (acknowledgement) ಪ್ರಿಂಟ್ ತೆಗೆದು ಇಟ್ಟುಕೊಳ್ಳಿ. ಹೆಚ್ಚಿನ ವಿವರಗಳಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ https://adcl.karnataka.gov.in/ ಇಲ್ಲಿ ಮಾಹಿತಿ ಪಡೆಯಬಹುದಾಗಿದೆ, ಅರ್ಹ ಮಹಿಳೆಯರು ತಕ್ಷಣವೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಹೆಚ್ಚು ಸಮಯವಿಲ್ಲ.

ಗೃಹಲಕ್ಷ್ಮಿ ಹಣ ಏಕೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬುದಕ್ಕೆ ಕೊನೆಗೂ ಸಿಕ್ತು ಉತ್ತರ

2.5 lakh subsidy loan by the government to women to start their own business

Follow us On

FaceBook Google News

2.5 lakh subsidy loan by the government to women to start their own business