ಸರ್ಕಾರದ ಜಮೀನಿನ (Government Property) ಒತ್ತುವರಿ ಮಾಡಿಕೊಂಡು ಅದನ್ನ ತಮ್ಮ ಮನಸ್ಸಿಗೆ ಬಂದ ಹಾಗೆ ಬಳಸಿಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಅಂದರೆ ಭೂ ಮಾಲೀಕತ್ವ ತಾನೇ ತೆಗೆದುಕೊಂಡು ಅದನ್ನು ಇತರರಿಗೆ ಮಾರುವ ಕೆಲಸವನ್ನು ಸಾಕಷ್ಟು ರಿಯಲ್ ಎಸ್ಟೇಟ್ (real estate) ಉದ್ದಿಮೆದಾರರು ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಭೂ ಮಾಫಿಯಾ (land mafia) ಎನ್ನುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ, ಇದೆಲ್ಲದಕ್ಕೂ ಪರಿಹಾರಾರ್ಥಕವಾಗಿ ಈ ಕೆಲಸ ಮಾಡುತ್ತಿದ್ದೇವೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ನಿಮ್ಮ ಜಿಲ್ಲೆಯಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ! ಪ್ರಾಂಚೈಸಿ ಪಡೆಯಿರಿ
ತಂತ್ರಜ್ಞಾನ ಬಳಸಲು ರಾಜ್ಯ ಸರ್ಕಾರದ ನಿರ್ಧಾರ! (Technology)
ಕರ್ನಾಟಕದ ಒತ್ತುವರಿ ಜಮೀನು ಯಾರ ಬಳಿ ಇದೆ ಎಂಬುದನ್ನು ತಿಳಿದುಕೊಳ್ಳಲು ಹಾಗೂ ಈಗಾಗಲೇ ಇರುವ ರಾಜ್ಯ ಸರ್ಕಾರದ ಅಧೀನದಲ್ಲಿ ಇರುವ ಭೂಮಿ ಯಾವುದು ಎಂಬ ಎಲ್ಲಾ ವಿಚಾರಗಳನ್ನ ತಿಳಿದುಕೊಳ್ಳಲು ಇನ್ನು ಮುಂದೆ ತಂತ್ರಜ್ಞಾನ ಬಳಸಲಾಗುವುದು, ಜಿಪಿಎಸ್ (GPS) ಮೂಲಕ ಜಮೀನುಗಳ ಮಾಲೀಕತ್ವವನ್ನು ಗುರುತಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇದಕ್ಕಾಗಿ ಮೊಬೈಲ್ ಆಪ್ (mobile application) ಒಂದನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಧಾನಪರಿಷತ್ ನಲ್ಲಿ ಸಭೆಯಲ್ಲಿ ಪಾಲ್ಗೊಂಡ ಕಂದಾಯ ಸಚಿವ ಕೃಷ್ಣಭೈರೇಗೌಡ ಅಲ್ಲಿ ಕೇಳಲಾಗಿರುವ ಸಾಕಷ್ಟು ಭೂಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವರು ನೀಡಿರುವ ಅಂಕಿ ಅಂಶಗಳ ಪ್ರಕಾರ ಒಟ್ಟು ಸರ್ಕಾರಿ ಭೂಮಿ (Govt Land) 63,32,486 ಎಕರೆ ಇದ್ದು ಅದರಲ್ಲಿ ಈಗಾಗಲೇ 14,72,493 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ.
ಸುಮಾರು 10,82,752 ಎಕರೆಯಷ್ಟು ಅತಿಕ್ರಮದ ಭೂಮಿಯನ್ನು ಅಕ್ರಮ ಸಕ್ರಮ ಗೊಳಿಸಲು ಸರ್ಕಾರ ನಿರ್ಧರಿಸಿದೆ. ಇನ್ನುಳಿದಂತೆ 3,89,741 ಎಕರೆ ಭೂಮಿಯಲ್ಲಿ 1,15,963 ಎಕರೆ ಒತ್ತುವರಿ ತೆರವುಗೊಳಿಸಲು ಕಾಮಗಾರಿ ಆರಂಭವಾಗಿದೆ ಎಂದಿದ್ದಾರೆ.
ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸಲು ಮುಂದಾದ ಸರ್ಕಾರ
ಮುಂದಿನ ತಿಂಗಳಿನಿಂದಲೇ ಆಪ್ ಬಳಕೆ! (Mobile application initiative)
ಸರ್ಕಾರಿ ಜಮೀನು (Govt Property) ಒತ್ತುವರಿ ಕಂಡು ಹಿಡಿಯುವ ಸಲುವಾಗಿ ‘Beat’ ಅಪ್ಲಿಕೇಶನ್ ಅನ್ನು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಲಿದೆ. ಈ ಅಪ್ಲಿಕೇಶನ್ ಮೂಲಕ ಅತಿಕ್ರಮಣ ಕಂಡುಬಂದಲ್ಲಿ ತಹಶೀಲ್ದಾರರು ಆನ್ಲೈನ ಮೂಲಕವೇ ಸರ್ಕಾರಕ್ಕೆ ವರದಿ ಸಲ್ಲಿಸಬಹುದು.
ಇಲ್ಲಿಯವರಿಗೆ ಯಾರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೋ ಅಂತವರನ್ನು ಪರಿಶೀಲಿಸಿ ಅವರಿಗೆ ಕಠಿಣ ಶಿಕ್ಷೆ (punishment) ವಿಧಿಸಲಾಗುವುದು, ಅದೇ ರೀತಿ ಒತ್ತುವರಿ ಜಮೀನು ಮಾರಾಟಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲು ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹಣ ಏಕೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬುದಕ್ಕೆ ಕೊನೆಗೂ ಸಿಕ್ತು ಉತ್ತರ
Master plan to clear government land encroachment
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.