ಗೃಹಲಕ್ಷ್ಮಿ ಹಣ ಏಕೆ ಸರಿಯಾಗಿ ಜಮಾ ಆಗುತ್ತಿಲ್ಲ ಎಂಬುದಕ್ಕೆ ಕೊನೆಗೂ ಸಿಕ್ತು ಉತ್ತರ
ಕೆಲವು ಜಿಲ್ಲೆಗಳಲ್ಲಿ ಮಹಿಳೆಯರಿಗೆ ಒಂದು ಕಂತಿನ ಹಣ ಬಂದಿದೆ, ಇನ್ನೂ ಕೆಲವರ ಖಾತೆಗೆ (Bank Account) ಒಂದೇ ಒಂದು ರೂಪಾಯಿ ಜಮಾ ಮಾಡಿಲ್ಲ
ಸರ್ಕಾರ ಹೆಸರಿಗೆ ಮಾತ್ರ 90 ಪರ್ಸೆಂಟ್ ನಷ್ಟು ಮಹಿಳೆಯರಿಗೆ ಹಣ ವರ್ಗಾವಣೆ (DBT) ಆಗಿದೆ ಎಂದು ಹೇಳಿಕೊಳ್ಳುತ್ತಿದೆ ಆದರೆ ಕೆಲವು ಜಿಲ್ಲೆಗಳಲ್ಲಿ ಮಹಿಳೆಯರಿಗೆ ಮೊದಲ ಎರಡು ಕಂತಿನ (Gruha Lakshmi Scheme) ಹಣವನ್ನು ಬಿಟ್ಟರೆ ಮುಂದಿನ ಕಂತಿನ ಹಣ ಬಂದಿಲ್ಲ.
ಕೋಲಾರ, ಹಾಸನ, ಮಂಡ್ಯ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಒಂದು ಕಂತಿನ ಹಣ ಬಂದಿದೆ, ಅದರಲ್ಲೂ ಬೀದಿ ವ್ಯಾಪಾರಿಗಳು ಹಾಗೂ ಕಡುಬಡವರ ಖಾತೆಗೆ (Bank Account) ಒಂದೇ ಒಂದು ರೂಪಾಯಿ ಜಮಾ ಮಾಡಿಲ್ಲ.
ಗೃಹಲಕ್ಷ್ಮಿ 4ನೇ ಕಂತಿನ ಹಣ ಇಂತಹವರಿಗೆ ಸಿಗೋಲ್ಲ; ಗೃಹಿಣಿಯರಿಗೆ ಶುರುವಾಯ್ತು ಆತಂಕ
ಯಾರನ್ನ ಪ್ರಶ್ನಿಸಿದರು ಉತ್ತರ ಸಿಗುತ್ತಿಲ್ಲ!
ಆಹಾರ ಇಲಾಖೆಗೆ (food department) ಹೋಗಿ ಕೇಳಿದರೆ ಬ್ಯಾಂಕ್ (bank) ಅನ್ನು ಸಂಪರ್ಕಿಸಿ ಎಂದು ಹೇಳುತ್ತಾರೆ, ಬ್ಯಾಂಕ್ ನಲ್ಲಿ ಕೇಳಿದರೆ ಆಹಾರ ಇಲಾಖೆಯಲ್ಲಿ ಹೋಗಿ ಕೇಳಿ ಎನ್ನುತ್ತಾರೆ. ಸೈಬರ್ ಕೇಂದ್ರಗಳಿಗೆ (cyber centre) ಸೇವ ಕೇಂದ್ರಗಳಿಗೆ ಅಲೆದು ಅಲೆದು ಸಾಕಾಗಿದೆ ಮಾತ್ರ ಹಣ ಬಂದಿಲ್ಲ ಎಂದು ಹಲವು ಗೃಹಿಣಿಯರು ಸರ್ಕಾರದ ಗ್ಯಾರಂಟಿ ಯೋಜನೆಯ (guarantee schemes) ವಿರುದ್ಧ ಕಿಡಿ ಕಾರಿದ್ದಾರೆ.
ಸರ್ಕಾರ ಈಗಾಗಲೇ ತಿಳಿಸಿರುವ ಎಲ್ಲಾ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ ಆದರೆ ಹಣ ಮಾತ್ರ ಖಾತೆಗೆ (Bank Account) ಬಂದು ಜಮಾ ಆಗುತ್ತಿಲ್ಲ ಇದಕ್ಕೆ ಸರ್ಕಾರದ ಸಮಸ್ಯೆಯೇ ಕಾರಣ ಹೊರತು ನಮ್ಮ ಖಾತೆಯದ್ದಲ್ಲ ಎಂದು ಮಹಿಳೆಯರು ಹೇಳುತ್ತಿದ್ದಾರೆ.
ಎಪಿಎಲ್, ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ! ಇನ್ಮುಂದೆ ಪ್ರತಿ ತಿಂಗಳು ಹೊಸ ಅರ್ಜಿ ಸ್ವೀಕಾರ
ಕಾದು ಕಾದು ಸೋತು ಹೋಗಿರುವ ಮಹಿಳೆಯರು!
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000ಗಳನ್ನು ಕೊಡುವುದಾಗಿ ಘೋಷಣೆ ಮಾಡಿ ನಾಲ್ಕು ತಿಂಗಳು ಕಳೆದಿವೆ. ಅದರಂತೆ ಮೂರು ಕಂತಿನ ಹಣ ಜಮಾ ಆಗಿ ಒಂದಷ್ಟು ಮಹಿಳೆಯರ ಖಾತೆಗೆ ಹಣ ಬಂದಿರುವುದು ನಿಜ ಆದರೆ ನಿಜವಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ನೋಡುವುದಾದರೆ, ವಂಚಿತರಾಗಿರುವವರೆ ಕಡು ಬಡವರು ಹಾಗೂ ಬೀದಿ ವ್ಯಾಪಾರಿ ಮಹಿಳೆಯರು.
ಯಾವ ಆಫೀಸ್ಗೆ ಹೋಗಿ ಕೇಳಿದರು ಯಾವುದೇ ರೀತಿಯ ಮಾಹಿತಿ ಸಿಗುತ್ತಿಲ್ಲ ಹಣ ಬರುತ್ತೆ ಹೋಗಿ ಎಂದು ಕಳುಹಿಸುತ್ತಿದ್ದಾರೆ ಹೊರತು ಹಣ ಮಾತ್ರ ಬರುತ್ತಿಲ್ಲ ಎಂದು ಮಹಿಳೆಯರು ಮಾಧ್ಯಮದ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ರೈತರ ಕೃಷಿ ಸಾಲದ ಭಾರ ಇಳಿಸಿದ ರಾಜ್ಯ ಸರ್ಕಾರ; ಕೈಗೊಂಡಿದೆ ಹೊಸ ಕ್ರಮ!
ಗೃಹಲಕ್ಷ್ಮಿ ಮಾತ್ರವಲ್ಲ ಅನ್ನಭಾಗ್ಯ ಯೋಜನೆಯ ಹಣವು ಬಂದಿಲ್ಲ!
ಶಾಕಿಂಗ್ ವಿಚಾರ ಅಂದ್ರೆ ಕೆಲವು ಪ್ರದೇಶಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಮಾತ್ರವಲ್ಲ ಅನ್ನಭಾಗ್ಯ ಯೋಜನೆಯ (Anna Bhagya scheme) ಹಣವು ಕೂಡ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ
ಇದಕ್ಕೆ ಸರ್ವರ್ ಸಮಸ್ಯೆ (server problem) ಎಂದು ಸರ್ಕಾರ ಉತ್ತರ ನೀಡುತ್ತಿದ್ದರು ಕೂಡ ಇದನ್ನು ಪರಿಹರಿಸಲು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಹಿನ್ನೆಲೆಯಲ್ಲಿ ಜನರಿಗೆ ನೀಡಬೇಕಾಗಿರುವ ನಿಜವಾದ ಸವಲತ್ತು ನೀಡುವಲ್ಲಿ ಸೋಲುತ್ತಿದೆ. 2023 ಡಿಸೆಂಬರ್ ಅಂತ್ಯದ ಒಳಗಾದರೂ ಈ ಸಮಸ್ಯೆಗಳನ್ನ ಪರಿಹರಿಸಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಪ್ರತಿಯೊಬ್ಬ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಇಲ್ಲವಾದರೆ ಜನರು ಭರವಸೆ ಕಳೆದುಕೊಳ್ಳುತ್ತಾರೆ ಎಂದು ತಜ್ಞರು ಕೂಡ ಅಭಿಪ್ರಾಯಪಡುತ್ತಾರೆ.
ಯುವ ನಿಧಿ ಯೋಜನೆಗೆ ಡಿಸೆಂಬರ್ 21ರಿಂದ ಅರ್ಜಿ ಸಲ್ಲಿಕೆ ಆರಂಭ! ಈ ದಾಖಲೆಗಳು ಕಡ್ಡಾಯ
got an answer as to why Gruha Lakshmi Scheme money is not being deposited properly